• Home
 • »
 • News
 • »
 • trend
 • »
 • Viral Video: ಸ್ನೇಹಿತರೊಂದಿಗೆ ಮಾತನಾಡುವಾಗಲೇ ಹೃದಯಾಘಾತ, ಕುಸಿದು ಬಿದ್ದು ಯುವಕ ಸ್ಥಳದಲ್ಲೇ ಸಾವು!

Viral Video: ಸ್ನೇಹಿತರೊಂದಿಗೆ ಮಾತನಾಡುವಾಗಲೇ ಹೃದಯಾಘಾತ, ಕುಸಿದು ಬಿದ್ದು ಯುವಕ ಸ್ಥಳದಲ್ಲೇ ಸಾವು!

ಹೃದಯಾಘಾತವಾಗಿ ಯುವಕ ಸಾವು

ಹೃದಯಾಘಾತವಾಗಿ ಯುವಕ ಸಾವು

ಸ್ನೇಹಿತರೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆ ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಈ ಶಾಕಿಂಗ್ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 • News18 Kannada
 • 5-MIN READ
 • Last Updated :
 • Uttar Pradesh, India
 • Share this:

  'ಹೃದಯಾಘಾತ', ಇತ್ತೀಚಿಗೆ ಹೃದಯಾಘಾತ (Heart attack) ಪ್ರಕರಣದ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಎಳೆ ವಯಸ್ಸಿನ ಯುವಕ - ಯುವತಿಯರಲ್ಲಿ ಹೆಚ್ಚಾಗಿ ಹೃದಯಾಘಾತವಾಗುತ್ತಿದೆ. ಹೆಚ್ಚುತ್ತಿರುವ ಒತ್ತಡ, ವಾಯುಮಾಲಿನ್ಯದ ಕೊರತೆ, ಆಹಾರಕ್ರಮದಲ್ಲಿ ಬದಲಾವಣೆ, ದೈಹಿಕ ವ್ಯಾಯಾಮ ಮುಂತಾದ ಕಾರಣಗಳಿಂದ ಹೃದಯಾಘಾತವಾಗುವುದು ಸರ್ವೇ ಸಾಮಾನ್ಯವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಸಾಯಿಬಾಬಾ ದೇವರ ದರ್ಶನ ಪಡೆಯುತ್ತಿದ್ದ ವೇಳೆ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ (Madhya Pradesh) ಕಟ್ನಿಯಲ್ಲಿ ನಡೆದಿದೆ. ಬಸ್ ಚಾಲಕ (Bus driver) ಬಸ್ ಓಡಿಸುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪಿದ್ದ ಘಟನೆ ಜಬಲ್ಪುರದಲ್ಲಿ ನಡೆದಿದೆ. ಇದೀಗ ಇಂಥತಹದೇ ಘಟನೆಯೊಂದು ಬೆಳಕಿಗೆ ಬಂದಿದೆ. ಸ್ನೇಹಿತರೊಂದಿಗೆ (Friends) ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆ ಉತ್ತರಪ್ರದೇಶದ (Uttar Pradesh) ಮೀರತ್‌ನಲ್ಲಿ (Mirath ) ನಡೆದಿದೆ. ಈ ಶಾಕಿಂಗ್ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


  ರಸ್ತೆಯಲ್ಲೇ ಕುಸಿದು ಬಿದ್ದ ಯುವಕ
  ಉತ್ತರಪ್ರದೇಶದ ಮೀರತ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವಿಡಿಯೋದಲ್ಲಿ ಇರುವಂತೆ ಯುವಕನೋರ್ವ ತನ್ನ ಸ್ನೇಹಿತನ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಹಠಾತ್ ಆಗಿ ಕುಸಿದು ಬೀಳುತ್ತಾನೆ. ಪ್ರಜ್ಞೆ ತಪ್ಪಿ ಬಿದ್ದ ಆತನನ್ನು ಕೂಡಲೇ ಆತನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲೇ ಆತನ ಪ್ರಾಣಪಕ್ಷಿ ಹಾರಿಹೋಗಿದೆ. ದಾರಿಮಧ್ಯೆ ಪ್ರಾಣ ಬಿಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.


  ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ವ್ಯಕ್ತಿ ಮೇಲೇಳಲಿಲ್ಲ
  ಸಾಯಿಬಾಬಾ ದೇವಸ್ಥಾನದಲ್ಲಿ ವ್ಯಕ್ತಿಯೊಬ್ಬ ಪ್ರಾಥನೆ ಸಲ್ಲಿಸುತ್ತಿದ್ದು ಹಠಾತ್ ಹೃದಯಾಘಾತವಾಗಿ ಸಾವನ್ನಪಿದ ಘಟನೆ
  ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದಿದೆ. ಮೃತಪಟ್ಟವರನ್ನು ರಾಜೇಶ್‌ ಮೆಹಾನಿ ಎಂದು ಗುರುತಿಸಲಾಗಿದ್ದು, ಈತ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದು, ಪ್ರತಿ ಗುರುವಾರ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ವಿಗ್ರಹದ ಬಳಿ ಪ್ರಾರ್ಥನೆಗೆಂದು ಕೂತ ವ್ಯಕ್ತಿ ಹದಿನೈದು ನಿಮಿಷವಾದರೂ ಅಲ್ಲಿಂದ ಏಳದ್ದರಿಂದ ಅನುಮಾನಗೊಂಡ ದೇವಸ್ಥಾನ ಅರ್ಚಕರು ಹೋದಾಗ ವ್ಯಕ್ತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆ ತಲುಪುವಾಗಲೇ ರಾಜೇಶ್‌ ಪ್ರಾಣ ಪಕ್ಷಿ ಹಾರಿ ಹೋಗಿದೆ.  ಬಸ್ ಓಡಿಸುತ್ತಲೇ  ಚಾಲಕ ಸಾವು
  ಬಸ್ ಚಾಲಕನಿಗೆ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಜಬಲ್ಪುರದ ದಾಮೋಹ್ ನಾಕಾ ಚೌಕದಲ್ಲಿ ನಡೆದಿದೆ. ಟ್ರಾಫಿಕ್ ಸಿಗ್ನಲ್ ಗೆ ಏಕಾಏಕಿ ನುಗ್ಗಿ ರಸ್ತೆಯಲ್ಲಿ ಎದುರಾದ ವಾಹನಗಳಿಗೆ ಡಿಕ್ಕಿ ಹೊಡೆದುಕೊಂಡು ಮುಂದೆ ಸಾಗಿದ ಬಸ್, ನಿಲ್ಲುವುದಕ್ಕೂ ಮುನ್ನ ಹತ್ತಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಕುಳಿತಲ್ಲಿಯೇ ಸ್ಟೀರಿಂಗ್ ವೀಲ್ ಮೇಲೆ ಕುಸಿದು ಬಿದ್ದಿದ್ದ ಬಸ್ ಚಾಲಕ ಹರ್ದೇವ್ ಪಾಲ್ ಸಿಂಗ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.


  ಹಠಾತ್ ಹೃದಯಾಘಾತ ಎಂದರೇನು ?


  ಹೃದಯಾಘಾತ ಎಂದರೆ ಹೃದಯಕ್ಕೆ ರಕ್ತ ಸಂಪರ್ಕ ನಿಂತು ಹೋದಾಗ ನೋವು ಕಾಣಿಸಿಕೊಳ್ಳುತ್ತದೆ ಇದನ್ನ ಹೃದಯಾಘಾತ ಎನ್ನಬಹುದು. ಆದರೆ ಹೃದಯಾಘಾತವಾದ ಎಲ್ಲ ವ್ಯಕ್ತಿಗಳು ಸಾವನ್ನಪ್ಪುವುದಿಲ್ಲ. ನಿರ್ಲಕ್ಷ್ಯ ಮಾಡದೆ ಸರಿಯಾದ ಸಮಯದಲ್ಲಿ ಅದಕ್ಕೆ ಚಿಕಿತ್ಸೆಯನ್ನು ತೆಗೆದುಕೊಂಡರೆ ಡಯಗ್ನೋಸಿಸ್ ಸರಿಯಾಗಿ ಆದರೆ ಮನುಷ್ಯ ಉಳಿದುಕೊಳ್ಳುತ್ತಾನೆ. ಆದರೆ ಮ್ಯಾಸಿವ್ ಹಾರ್ಟ್ ಅಟ್ಯಾಕ್ ಆದಾಗ ಮನುಷ್ಯ ಉಳಿದುಕೊಳ್ಳುವುದು ಕಷ್ಟ. ಆಧುನಿಕ ಜೀವನಶೈಲಿ ಮೈಗೂಡುತ್ತಿದ್ದಂತೆ ಜನರ ಆರೋಗ್ಯ ತನ್ನ ಇತಿಮಿತಿಯನ್ನು ಕಳೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು ಅದನ್ನು ನಿರ್ಲಕ್ಷ್ಯ ಮಾಡಿದರೆ ನಮಗೆ ಅಪಾಯ ತಪ್ಪಿದ್ದಲ್ಲ. ಸಣ್ಣ ಗ್ಯಾಸ್ಟಿಕ್ ಆದರೂ ಕೂಡ ಅದನ್ನು ನಿರ್ಲಕ್ಷಿಸಿದರೆ ಹೃದಯಕ್ಕೆ ಹಾನಿಯಾಗುತ್ತದೆ.

  Published by:Usha P
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು