• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ರೈಲ್ವೆ ನಿಲ್ದಾಣದಲ್ಲಿ ಬ್ಯಾಕ್‌ಫ್ಲಿಪ್ ಮಾಡಿದ ಯುವಕ! ಮುಂದೇನಾಯ್ತು ಗೊತ್ತಾ?

Viral Video: ರೈಲ್ವೆ ನಿಲ್ದಾಣದಲ್ಲಿ ಬ್ಯಾಕ್‌ಫ್ಲಿಪ್ ಮಾಡಿದ ಯುವಕ! ಮುಂದೇನಾಯ್ತು ಗೊತ್ತಾ?

ರೈಲ್ವೆ ನಿಲ್ದಾಣದಲ್ಲಿ ಬ್ಯಾಕ್‌ಫ್ಲಿಪ್ ಮಾಡಿದ ಯುವಕ

ರೈಲ್ವೆ ನಿಲ್ದಾಣದಲ್ಲಿ ಬ್ಯಾಕ್‌ಫ್ಲಿಪ್ ಮಾಡಿದ ಯುವಕ

ಯುವ ಜನತೆಯು ಮಾಡುವಂತಹ ಜಿಮ್ನಾಸ್ಟಿಕ್ಸ್ ನ ಕಠಿಣ ವಿಧಗಳಲ್ಲಿ ಒಂದನ್ನು ಇಲ್ಲೊಬ್ಬ ಹುಡುಗನು ರೈಲ್ವೆ ನಿಲ್ದಾಣದಲ್ಲಿ ಪ್ರದರ್ಶಿಸುತ್ತಿರುವ ವಿಡಿಯೋ ಈಗ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಸೂರಜ್ ಸಿಂಗ್ ಎಂಬ ಹುಡುಗ ಒಂದು ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರ ಮುಂದೆಯೇ ಸರಣಿ ಬ್ಯಾಕ್‌ಫ್ಲಿಪ್ ಗಳನ್ನು ಪ್ರದರ್ಶಿಸುವುದನ್ನು ನಾವು ನೋಡಬಹುದು.

ಮುಂದೆ ಓದಿ ...
  • Share this:

ಕೆಲವೊಮ್ಮೆ ಈ ರೈಲ್ವೆ ನಿಲ್ದಾಣಗಳಲ್ಲಿ (Railway Station), ಬಸ್ ನಿಲ್ದಾಣಗಳಲ್ಲಿ (Bus Stand) ಕೆಲವರು ರೈಲು ಮತ್ತು ಬಸ್ ಗಳಿಗಾಗಿ ಕಾಯ್ದು ಕುಳಿತಂತಹ ಜನರ ಮನವನ್ನು ರಂಜಿಸಲು ಏನಾದರೊಂದು ವಿಭಿನ್ನವಾದದ್ದನ್ನು ಮಾಡುತ್ತಾ ಇರುವುದನ್ನು ನಾವು ನೋಡುತ್ತೇವೆ. ಉದಾಹರಣೆಗೆ (Example) ಕೆಲವರು ತಮ್ಮ ಹೊಟ್ಟೆ ಪಾಡಿಗಾಗಿ ನಾಲ್ಕು ಕಾಸು ಸಂಪಾದಿಸಲು ಯಾವುದಾದರೂ ಸಿನೆಮಾ ಗೀತೆಯನ್ನು ತುಂಬಾನೇ ಚೆನ್ನಾಗಿ ಸಂಗೀತವನ್ನು ಕಲಿತವರಂತೆ ಇಂಪಾದ ಧ್ವನಿಯಲ್ಲಿ ಹಾಡು ಹಾಡುವುದನ್ನು (Song) ನಾವು ನೋಡುತ್ತೇವೆ. ಇನ್ನೂ ಕೆಲವು ಜನರು ಸುಮ್ಮನೆ ಜನರಿಗೆ ಮನೋರಂಜನೆ ಒದಗಿಸಬೇಕೆಂದು ಏನೆಲ್ಲಾ ಸಾಹಸಗಳನ್ನು ಮಾಡುವುದನ್ನು ನಾವು ನೋಡುತ್ತೇವೆ.


ಇತ್ತೀಚೆಗೆ ಈ ಯುವ ಜನರಲ್ಲಿ ಈ ಫ್ಲಿಫ್ ಗಳ ಜಿಮ್ನಾಸ್ಟಿಕ್ ಸ್ಟಂಟ್ ಗಳ ಬಗ್ಗೆ ತುಂಬಾನೇ ಆಸಕ್ತಿ ಬೆಳೆದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಯುವಜನತೆ ಈ ಫ್ಲಿಫ್ ಗಳನ್ನು ಮಾಡುತ್ತಾ ಇದ್ದರೆ ಅದನ್ನು ನೋಡಲು ತುಂಬಾನೇ ಮಜಾ ಅನ್ನಿಸುತ್ತದೆ, ಆದರೆ ಇಂತಹ ಸ್ಟಂಟ್ ಗಳನ್ನು ಮಾಡುವಾಗ ಅವರು ಎಂತಹ ನಿಪುಣರೇ ಆದರೂ ಸಹ ಕೆಲವು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ಇದನ್ನು ಮಾಡುವುದು ಸೂಕ್ತ.


ರೈಲ್ವೆ ನಿಲ್ದಾಣದಲ್ಲಿ ಬ್ಯಾಕ್‌ಫ್ಲಿಪ್ ಮಾಡಿದ ಯುವಕ
ಯುವ ಜನತೆಯು ಮಾಡುವಂತಹ ಜಿಮ್ನಾಸ್ಟಿಕ್ಸ್ ನ ಕಠಿಣ ವಿಧಗಳಲ್ಲಿ ಒಂದನ್ನು ಇಲ್ಲೊಬ್ಬ ಹುಡುಗನು ರೈಲ್ವೆ ನಿಲ್ದಾಣದಲ್ಲಿ ಪ್ರದರ್ಶಿಸುತ್ತಿರುವ ವಿಡಿಯೋ ಈಗ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಸೂರಜ್ ಸಿಂಗ್ ಎಂಬ ಹುಡುಗ ಒಂದು ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರ ಮುಂದೆಯೇ ಸರಣಿ ಬ್ಯಾಕ್‌ಫ್ಲಿಪ್ ಗಳನ್ನು ಪ್ರದರ್ಶಿಸುವುದನ್ನು ನಾವು ನೋಡಬಹುದು.


ಇದನ್ನೂ ಓದಿ: Love Relationship: ಮಗನ ಗರ್ಲ್​ಫ್ರೆಂಡ್​ನನ್ನು ಮದುವೆಯಾದ ತಂದೆ! ಜೋಡಿ ಈಗ ಖುಷ್


ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬ್ಯಾಕ್‌ಫ್ಲಿಪ್ ವಿಡಿಯೋ
ಈ ಕ್ಲಿಪ್ ನಲ್ಲಿ ತಮ್ಮ ಸಾಮಾಜಿಕ ಮಾಧ್ಯಮ ಐಡಿ ಪ್ರಕಾರ "ಕ್ರೇಜಿ ಫ್ಲಿಪ್ಪರ್" ಎಂದು ಜನಪ್ರಿಯವಾಗಿರುವ ಸಿಂಗ್ ಅವರು ರೈಲು ಹಿಂದೆ ಹಳಿಗಳ ಮೇಲೆ ಹೊರಡುತ್ತಿದೆ, ಇವರು ಮುಂದೆ ಪ್ಲಾಟ್‌ಫಾರ್ಮ್ ಮೇಲೆ ನಯವಾದ ಸರಣಿ ಬ್ಯಾಕ್‌ಫ್ಲಿಪ್ ಗಳನ್ನು ಮಾಡುತ್ತಿರುವುದನ್ನು ನೋಡಬಹುದು. ಸಿಂಗ್ ಅವರು ಕ್ಲಿಪ್ ನ ಕೊನೆಯ ಭಾಗವನ್ನು ಸ್ಲೋ ಮೋಷನ್ ನಲ್ಲಿ ಎಡಿಟ್ ಮಾಡಿದ್ದಾರೆ, ಇದು ಪ್ರೇಕ್ಷಕರಿಗೆ ಫ್ಲಿಪ್ ಅನ್ನು ಸ್ಪಷ್ಟವಾಗಿ ನೋಡಲು ಅನುವು ಮಾಡಿಕೊಡುತ್ತದೆ ಎಂದು ಹೇಳಬಹುದು.ವಿಡಿಯೋದಲ್ಲಿ, ರೈಲಿನ ಪ್ರಯಾಣಿಕರು ಆ ಯುವಕ ಫ್ಲಾಟ್‌ಫಾರ್ಮ್ ಮೇಲೆ ಮಾಡುತ್ತಿರುವ ಈ ಸ್ಟಂಟ್ ಅನ್ನು ನೋಡಲು ತುಂಬಾನೇ ಉತ್ಸುಕರಾಗಿರುವುದನ್ನು ನಾವು ನೋಡಬಹುದು. ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಕೂಡ ಸಿಂಗ್ ಅವರ ಈ ಸ್ಟಂಟ್ ನಿಂದಾಗಿ ತುಂಬಾನೇ ಪ್ರಭಾವಿತರಾಗಿರುವುದನ್ನು ನಾವು ನೋಡಬಹುದು. ಆದಾಗ್ಯೂ, ಇನ್‌ಸ್ಟಾಗ್ರಾಮ್ ರೀಲ್ ನ ಕೊನೆಯಲ್ಲಿ, ಭಾರತದ ಹಲವಾರು ರೈಲ್ವೆ ಆವರಣಗಳಲ್ಲಿ ಫೋಟೋಗಳು ಮತ್ತು ವಿಡಿಯೋಗಳನ್ನು ಸೆರೆ ಹಿಡಿಯಲು ಅನುಮತಿಸದ ಕಾರಣ ಅಧಿಕಾರಿಯು ರೆಕಾರ್ಡಿಂಗ್ ಸಾಧನವನ್ನು ಕೇಳುವುದನ್ನು ಕಾಣಬಹುದು.


ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡ ಮೊಬೈಲ್ ಫೋನ್ ಪೊಲೀಸ್ ವಶಕ್ಕೆ
ಪೋಸ್ಟ್ ನ ಶೀರ್ಷಿಕೆಯಲ್ಲಿ ಪೊಲೀಸ್ ಅಧಿಕಾರಿಯವರು ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಸಹ ಬರೆಯಲಾಗಿದೆ. ಇದುವರೆಗೆ ಈ ವಿಡಿಯೋ 7,60,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 3,45,000ಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ. ಕೆಲವು ಇಂಟರ್ನೆಟ್ ಬಳಕೆದಾರರು ಎಮೋಜಿಗಳನ್ನು ಹಂಚಿಕೊಳ್ಳುವುದರೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇತರರು ಬಾಲಕನ ಸುರಕ್ಷತೆಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಒಬ್ಬ ಬಳಕೆದಾರರು "ಅತ್ಯುತ್ತಮ ಬ್ರೋ, ಆದರೆ ದಯವಿಟ್ಟು ಜಾಗರೂಕರಾಗಿರಿ" ಎಂದು ಕಾಮೆಂಟ್ ಮಾಡಿದ್ದಾರೆ.


ಇದನ್ನೂ ಓದಿ: Van Life: ಒಳ್ಳೆಯ ಕೆಲಸ ಬಿಟ್ಟು ಅಲೆದಾಡುತ್ತಿರುವ ಸುಂದರಿ ಈಗ ಫೇಮಸ್, ಈಕೆಯ ವ್ಯಾನ್ ಮನೆ ಹೇಗಿದೆ ನೋಡಿ


ಅಪಾಯಕಾರಿ ಸ್ಟಂಟ್ ಗಳ ಬಗ್ಗೆ ಹೇಳುವುದಾದರೆ, ಕೆಲವು ಸಮಯದ ಹಿಂದೆ ನೋಯ್ಡಾದಲ್ಲಿ ವ್ಯಕ್ತಿಯೊಬ್ಬ 'ಶಕ್ತಿಮಾನ್' ನಂತಹ ಸ್ಟಂಟ್ ನಲ್ಲಿ ಚಲಿಸುತ್ತಿರುವ ಬೈಕ್ ನ ಕೆಳಗೆ ಮಲಗಿರುವುದನ್ನು ಚಿತ್ರೀಕರಿಸಲಾಗಿತ್ತು. ಈ ಕೃತ್ಯವು ಅವರನ್ನು ಜೈಲಿಗೆ ಹೋಗುವಂತೆ ಮಾಡಿತು. ಅದನ್ನು ವಿಡಿಯೋ ಮಾಡಿದ ಅವನ ಇಬ್ಬರು ಸ್ನೇಹಿತರು ಸಹ ಅವನೊಂದಿಗೆ ಜೈಲಿಗೆ ಹೋದರು.

Published by:Ashwini Prabhu
First published: