Toilet Theft: ಸಾರ್ವಜನಿಕರೇ ಗಮನಿಸಿ, ಯಾವುದು ಸೇಫ್ ಅಲ್ಲ: ಶೌಚಾಲಯವನ್ನೇ ಕದ್ದು ನೀರು ಕುಡಿದ ಕಳ್ಳರು

ಎಂ.ಜೋಗಯ್ಯ ಬಂಧಿತ ಆರೋಪಿ. ಪೊಲೀಸ್ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ತನಗೆ ನೆರವಾದ ಅರುಣ್ ಕುಮಾರ್ ಮತ್ತು ಭಿಕ್ಷಾಪತಿ ಎಂಬ ಇಬ್ಬರ ಹೆಸರನ್ನು ಬಾಯಿ ಬಿಟ್ಟಿದ್ದಾನೆ.

ಬಂಧಿತ ಆರೋಪಿ

ಬಂಧಿತ ಆರೋಪಿ

  • Share this:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (Central And State Government) ಸ್ವಚ್ಛತೆಗಾಗಿ (Clean) ಕೋಟಿ ಕೋಟಿ ಹಣವನ್ನು ಖರ್ಚು ಮಾಡುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಅಭಿಯಾನ(Swachch Bharat Campaign)ವನ್ನೇ ಆರಂಭಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಹಿನ್ನೆಲೆ ಮೊಬೈಲ್ ಶೌಚಾಲಯಗಳ (Mobile Toilet) ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ. ಈ ಶೌಚಾಲಯಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸ್ಥಳಾಂತರಿಸ(Shifting)ಬಹುದಾಗಿದೆ. ಪ್ರತಿಭಟನೆ, ಜಾತ್ರೆ, ಕಾರ್ಯಕ್ರಮಗಳಲ್ಲಿ ಮೊಬೈಲ್ ಟಾಯ್ಲೆಟ್ ಗೆ ಹೆಚ್ಚು ಬೇಡಿಕೆ (Demand) ಇದೆ. ಓರ್ವ ಕಳ್ಳ ತನ್ನ ಸಹಚರ ಜೊತೆ ಸೇರಿ ಮೊಬೈಲ್ ಟಾಯ್ಲೆಟ್ ಕಳ್ಳತನ (Theft) ಮಾಡಿದ್ದಾನೆ. ನಂತರ ಶೌಚಾಲಯವನ್ನು ಮಾರಾಟ ಸಹ ಮಾಡಿದ್ದಾನೆ. ಈ ವಿಚಿತ್ರ ಘಟನೆ ತೆಲಂಗಾಣದ ಸಿಕಂದಾರಾಬಾದ್​​ ನ (Sikandarabad, Telangana) ಮಲ್ಕಜ್​ಗಿರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೀವು ಬಾಲಿವುಡ್ ಟಾಯ್ಲೆಟ್: ಏಕ್ ಪ್ರೇಮ್ ಕಥಾ ಸಿನಿಮಾ ನೋಡಿದ್ರೆ, ಶೌಚಾಲಯ ಕಳ್ಳತನ ದೃಶ್ಯಗಳು ಕಣ್ಮುಂದೆ ಬರುತ್ತದೆ. ಅಲ್ಲಿ ನಾಯಕ ನಟ ಪತ್ನಿಗಾಗಿ ಮೊಬೈಲ್ ಟಾಯ್ಲೆಟ್ ಕಳ್ಳತನ ಮಾಡಿ ಜೈಲು ಸೇರಿರುತ್ತಾನೆ. ಇದೀಗ ಅದೇ ರೀತಿ ಮಲ್ಕಜ್ ಗಿರಿಯಲ್ಲಿ ನಡೆದಿದೆ.

ಮಾರ್ಚ್ 16ರಿಂದ ಕಾಣೆಯಾದ ಶೌಚಾಲಯ

ಸಫೀಲ್​ಗೂಡ ಚೌರಸ್ತಾ ಸಮೀಪ ಕಬ್ಬಿಣದಿಂದ ಕೂಡಿದ್ದ ಸ್ವಚ್ಛ ಶೌಚಾಲಯವನ್ನು ನಿರ್ಮಿಸಲಾಗಿತ್ತು.  ಆದ್ರೆ ಈ ಶೌಚಾಲಯ ಮಾರ್ಚ್ 16 ರಿಂದ ಕಾಣೆಯಾಗಿದೆ. ಇಲ್ಲಿಯ ಪೌರ ಕಾರ್ಮಿಕರು ಶೌಚಾಲಯ ದಿಢೀರ್ ಮಾಯವಾಗಿರುವ ವಿಷಯಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಇದನ್ನೂ ಓದಿ: Viral Photo: ಶ್ರೀ ಶರಣಬಸವೇಶ್ವರ ಜಾತ್ರೆಗೆ ಸನ್ನಿ ಲಿಯೋನ್ ಅಭಿಮಾನಿಗಳಿಂದ ಸ್ವಾಗತ: ಫೋಟೋ ವೈರಲ್

ಕೂಡಲೇ ಹಿರಿಯ ಅಧಿಕಾರಿಗಳು ಶೌಚಾಲಯ ಕಳ್ಳತನ ಆಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಳೀಸರು, ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಿ ಓರ್ವನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ಓರ್ವನ ಬಂಧನ, ಇಬ್ಬರು ಎಸ್ಕೇಪ್

ಎಂ.ಜೋಗಯ್ಯ ಬಂಧಿತ ಆರೋಪಿ. ಪೊಲೀಸ್ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ತನಗೆ ನೆರವಾದ ಅರುಣ್ ಕುಮಾರ್ ಮತ್ತು ಭಿಕ್ಷಾಪತಿ ಎಂಬ ಇಬ್ಬರ ಹೆಸರನ್ನು ಬಾಯಿ ಬಿಟ್ಟಿದ್ದಾನೆ. ಸದ್ಯ ಇಬ್ಬರು ನಾಪತ್ತೆಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತ ಕದ್ದ ಶೌಚಾಲಯವನ್ನು 45 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದಾನೆ.

ಆರೋಪಿ ಅರುಣ್ ಕುಮಾರ್ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆಯ ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಮತ್ತೊಬ್ಬ ಆರೋಪಿ ಭಿಕ್ಷಾಪತಿ ಜೈನ್ ಕನ್‌ ಸ್ಟ್ರಕ್ಷನ್‌ ಕಂಪನಿಯಲ್ಲಿ ಸೂಪರ್ ​ವೈಸರ್ ಆಗಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿಗಳ ಬಂಧನಕ್ಕೆ ಬಲೆ

ಶೌಚಾಲಯ ಕಳ್ಳತನಕ್ಕೆ ಸಂಬಂಧಿಸಿದಂತೆ ಎಂ.ಜೋಗಯ್ಯ ಎಂಬಾತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ಇನ್ನಿಬ್ಬರ ಹೆಸರು ಹೇಳಿದ್ದಾನೆ. ಇಬ್ಬರು ಆರೋಪಿಗಳು ಘಟನೆ ಬಳಿಕ ತಲೆಮರೆಸಿಕೊಂಡಿದ್ದು, ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:  Viral Video: ಈ ಭಿಕ್ಷುಕನ ಶ್ರೀಮಂತ ಕಂಠಕ್ಕೆ ಜನರು ಫಿದಾ: ಇದು ದೈವಿಕ ಧ್ವನಿ ಅಂದ್ರು ನೆಟ್ಟಿಗರು

ಸರಗಳ್ಳತನ ಪ್ರಕರಣದಲ್ಲಿ Mr.India-2019ರ ವಿಜೇತ ಅರೆಸ್ಟ್

ಸರಗಳ್ಳತನ ಪ್ರಕರಣದಲ್ಲಿ ಮಾಜಿ ಮಿಸ್ಟರ್ ಇಂಡಿಯಾ (Mr India Title Winner), ಬಿ.ಟೆಕ್ ಪದವೀಧರನನ್ನು ತಮಿಳುನಾಡಿನ ಮನ್ನಾಡಿ ಪೊಲೀಸರು (Manndai Police) ಬಂಧಿಸಿದ್ದಾರೆ. 22 ವರ್ಷದ ಮೊಹಮ್ಮದ್ ಫೈಝಲ್ (Mohmmad Faizal) ಬಂಧಿತ ಮಾಜಿ ಮಿಸ್ಟರ್ ಇಂಡಿಯಾ.

ಮಾರ್ಚ್ 17ರಂದು 58 ವರ್ಷದ ರತ್ನಾದೇವಿ ಎಂಬವರು ಸರಗಳ್ಳತನದ (Chain Snatching) ಬಗ್ಗೆ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಸಿಸಿಟಿವಿ ದೃಶ್ಯಗಳನ್ನು (CCTV Footage) ಅಧರಿಸಿ ಪೊಲೀಸರು ಫೈಝಲ್ ನನ್ನು ಬಂಧಿಸಿದ್ದಾರೆ. ಬಂಧಿತ ಫೈಝಲ್ 2019ರ ಮಿಸ್ಟರ್ ಇಂಡಿಯಾ ಸ್ಪರ್ಧೆಯ ವಿಜೇತನಾಗಿದ್ದನು.
Published by:Mahmadrafik K
First published: