Viral News: 6 ಇಂಚು ಉದ್ದ ಆಗೋಕೆ ಈತ ಖರ್ಚು ಮಾಡಿದ್ದು ಬರೋಬ್ಬರಿ 1 ಕೋಟಿಗೂ ಹೆಚ್ಚು ಹಣ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಲ್ಲೊಬ್ಬ ವ್ಯಕ್ತಿ ನನ್ನ ಜೊತೆ ಹುಡುಗಿಯರು ಡೇಟಿಂಗ್ ಮಾಡಲು ಹಿಂಜರಿಯುತ್ತಾರೆ ಎಂಬ ಕಾರಣಕ್ಕೆ ಎತ್ತರವಾಗಬೇಕೆಂದು ನಿರ್ಧರಿಸಿ ಶಸ್ತ್ರಚಿಕಿತ್ಸೆಯನ್ನೇ ಮಾಡಿಸಿಕೊಂಡಿದ್ದಾರೆ. 41 ವರ್ಷದ ಅಮೆರಿಕಾದ ಮಿನ್ನೆಸೊಟದ ಮೊಸಸ್ ಗಿಬ್ಸನ್ ಎಂಬ ಈ ವ್ಯಕ್ತಿ ಐದು ಇಂಚಿನಷ್ಟು ಎತ್ತರವಾಗಲು ಬರೋಬರಿ 1 ಕೋಟಿ 35 ಲಕ್ಷ ರೂ ಖರ್ಚುಮಾಡಿದ್ದಾರೆ.

ಮುಂದೆ ಓದಿ ...
  • Share this:

ಸಾಮಾನ್ಯವಾಗಿ ಎತ್ತರದ ವ್ಯಕ್ತಿ ಎಂದರೆ ಎಲ್ಲರೂ ಇಷ್ಟಪಡುತ್ತಾರೆ. ಹಾಗೇ ಕುಳ್ಳಗಿರುವ ವ್ಯಕ್ತಿಯನ್ನು ಕಂಡರೆ ಆಡಿಕೊಳ್ಳುವವರೇ ಹೆಚ್ಚು. ಜೀವನದಲ್ಲಿ ಎತ್ತರ ಎನ್ನುವುದು ವಿದ್ಯಾಭ್ಯಾಸಕ್ಕಾಗಿ (Study), ಬದುಕನ್ನು (Life) ರೂಪಿಸಿಕೊಳ್ಳುವುದಕ್ಕಾಗಲಿ ಅಡ್ಡಿಪಡಿಸಲ್ಲ ಎಂದು ಹೇಳುತ್ತಾರೆ. ಆದರೆ ಮದುವೆ, ಡೇಟಿಂಗ್ ಎಂದಾಕ್ಷಣ ಎತ್ತರ ಎನ್ನುವುದು ಕಾಡುವುದಕ್ಕೆ ಶುರುವಾಗುತ್ತದೆ. ವ್ಯಕ್ತಿ ಎತ್ತರಕ್ಕಿರಲಿ, ಕುಳ್ಳಕ್ಕಿರಲಿ ಮದುವೆ, ಡೇಟಿಂಗ್, ಲವ್ (Love) ಎಂಬ ವಿಚಾರದಲ್ಲಿ ಮುನ್ನೆಲೆಗೆ ಬಂದು ಬಿಡುತ್ತದೆ.


ಎಷ್ಟು ಖರ್ಚು ಮಾಡಿದರು?


ಕೆಲವರು ಎತ್ತರದ ಬಗ್ಗೆ ತಲೆಕೆಡಿಸಿಕೊಳ್ಳದೇ ಮುಂದೆ ಸಾಗುತ್ತಾರೆ. ಆದರೆ ಇನ್ನು ಕೆಲವರು ಇದನ್ನು ಗಂಭೀರವಾಗಿ ತೆಗೆದುಕೊಂಡು ಖಿನ್ನತೆಗೂ ಒಳಗಾಗುತ್ತಾರೆ.


ಆದರೆ ಇಲ್ಲೊಬ್ಬ ವ್ಯಕ್ತಿ ನನ್ನ ಜೊತೆ ಹುಡುಗಿಯರು ಡೇಟಿಂಗ್ ಮಾಡಲು ಹಿಂಜರಿಯುತ್ತಾರೆ ಎಂಬ ಕಾರಣಕ್ಕೆ ಎತ್ತರವಾಗಬೇಕೆಂದು ನಿರ್ಧರಿಸಿ ಶಸ್ತ್ರಚಿಕಿತ್ಸೆಯನ್ನೇ ಮಾಡಿಸಿಕೊಂಡಿದ್ದಾರೆ. 41 ವರ್ಷದ ಅಮೆರಿಕಾದ ಮಿನ್ನೆಸೊಟದ ಮೊಸಸ್ ಗಿಬ್ಸನ್ ಎಂಬ ಈ ವ್ಯಕ್ತಿ ಐದು ಇಂಚಿನಷ್ಟು ಎತ್ತರವಾಗಲು ಬರೋಬರಿ 1 ಕೋಟಿ 35 ಲಕ್ಷ ರೂ ಖರ್ಚುಮಾಡಿದ್ದಾರೆ.


ಎತ್ತರವಾಗಲು ಹರಸಾಹಸ


ಗಿಬ್ಸನ್ ಅವರು ಮೊದಲು ಐದು ಅಡಿ ಐದು ಇಂಚು ಇದ್ದರು. ಇದು ಅವರ ಡೇಟಿಂಗ್ ಜೀವನದ ಮೇಲೆ ಪರಿಣಾಮ ಬೀರಿತು. ಎತ್ತರವಾಗಲು ಮಾತ್ರೆ, ಔಷಧಿಗಳಿಂದ ಹಿಡಿದು ಎಲ್ಲ ರೀತಿಯ ಪ್ರಯೋಗಗಳನ್ನು ಕೈಗೊಂಡರು. ಆದರೆ ಯಾವುದು ಸಹ ಅವರು ಎತ್ತರವಾಗಲು ಸಹಕಾರಿಯಾಗಲಿಲ್ಲ. ಕೊನೆಗೆ ಶಸ್ತ್ರಚಿಕಿತ್ಸೆ ಎಂಬ ಮಾರ್ಗ ಆಯ್ದುಕೊಂಡರು.


ಇದನ್ನೂ ಓದಿ: Indian Culture: ದೇಶದ ಈ ಹಳ್ಳಿಯಲ್ಲಿ ಮಹಿಳೆಯರು ಬಟ್ಟೆನೇ ಧರಿಸಲ್ವಂತೆ!


ಈ ಎತ್ತರದ ಕಾರಣಕ್ಕಾಗಿ ನನ್ನ ಮೇಲೆ ನನಗೆ ವಿಶ್ವಾಸವಿರಲಿಲ್ಲ ಎಂದು ಹೇಳಿರುವ ಗಿಬ್ಸನ್ ಇದರ ಅನುಭವವನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಮೇಲೆಯೇ ನನಗಿದ್ದ ಅಪನಂಬಿಕೆ ಹಾಗೂ ಮಹಿಳೆಯರ ಕಾರಣಕ್ಕಾಗಿ ಬಹಳಷ್ಟು ಸಮಯ ನಾನು ಸಂತೋಷವಾಗಿ ಇರುತ್ತಿರಲಿಲ್ಲ.




ಇದು ನನ್ನ ಡೇಟಿಂಗ್ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ನಾನು ಎತ್ತರವಾಗಿ ಕಾಣಬೇಕೆಂಬ ಉದ್ದೇಶದಿಂದ ಧರಿಸುತ್ತಿದ್ದ ಶೂ ಒಳಗೆ ಕೆಲವು ವಸ್ತುಗಳನ್ನು ಇರಿಸಿಕೊಳ್ಳುತ್ತಿದ್ದೆ. ಆದರೂ ಇದು ಹೆಚ್ಚು ಉಪಯೋಗಕ್ಕೆ ಬಂದಿಲ್ಲ ಎಂದು ಹೇಳಿದರು.


ಬಳಿಕ ಸಾಕಷ್ಟು ಮಾತ್ರೆಗಳನ್ನು ಸೇವಿಸಿದೆನು. ವೈದ್ಯರನ್ನು ಭೇಟಿ ಮಾಡಿದೆನು. ಅವರು ಸರಿಯಾಗಿ ಮನಸ್ಸು ಮಾಡಿದರೆ ಎತ್ತರವನ್ನು ಹೆಚ್ಚಿಸಬಹುದು ಎಂದು ಹೇಳಿದರು. ಆದರೆ ಎರಡೂ ವಿಫಲವಾದಾಗ, ಕಾಲುಗಳನ್ನು ಉದ್ದಗೊಳಿಸುವ ನೋವು ಭರಿತ ಶಸ್ತ್ರಚಿಕಿತ್ಸೆಗೆ ನಿರ್ಧರಿಸಿದರು.


ಹಣ ಹೊಂದಿಸಲು ಏನು ಮಾಡಿದರು?


ಇವರು ವೃತ್ತಿಯಲ್ಲಿ ಇಂಜಿನಿಯರ್. ಜೊತೆಗೆ ಮೂರು ವರ್ಷಗಳ ನಿರಂತರ ಶಸ್ತ್ರಚಿಕಿತ್ಸೆಗೆ ಹಣ ಹೊಂದಿಸಲು ಉಬರ್ ಡ್ರೈವರ್ ಆಗಿ ಕಾರ್ಯನಿರ್ವಹಿಸಿದರು. ಇದರಿಂದಾಗ 60,77,290 ಹಣವನ್ನು ಉಳಿತಾಯ ಮಾಡುವಲ್ಲಿ ಯಶಸ್ವಿಯಾದರು. ಬಳಿಕ 2016 ರಲ್ಲಿ ಚಿಕಿತ್ಸೆಗೆ ಒಳಗಾಗಿ ಮೂರು ಇಂಚು ಎತ್ತರ ಹೆಚ್ಚಿಸಿಕೊಂಡರು.


ಶಸ್ತ್ರಚಿಕಿತ್ಸೆ ಮೊತ್ತ?


ಮೊದಲ ಶಸ್ತ್ರಚಿಕಿತ್ಸೆ ನಂತರ, ನಾನು ಸ್ವಲ್ಪ ಮಟ್ಟಿಗೆ ಸಂತೋಷಗೊಂಡಿದ್ದೇನೆ. ಆದರೆ ನಾನು ನನ್ನ ಎತ್ತರವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಸಲುವಾಗಿ ಎರಡನೇ ಬಾರಿಯು ಶಸ್ತ್ರಚಿಕಿತ್ಸೆ ಮಾಡಬೇಕೆಂದು ನನ್ನ ಮನಸ್ಸಿನಲ್ಲಿದೆ. ನನ್ನ ಬಳಿ ಹಣವಿದೆ ಮತ್ತು ನನ್ನ ಪ್ರಯಾಣವನ್ನು ನಾನು ಮುಂದುವರೆಸುತ್ತೇನೆ ಎಂದು ಹೇಳಿದರು. ಮಾರ್ಚ್‍ನಲ್ಲಿ, 2 ಇಂಚುಗಳಷ್ಟು ಎತ್ತರಗೊಳ್ಳಲು ಎರಡನೇ ಶಸ್ತ್ರಚಿಕಿತ್ಸೆಗಾಗಿ 80,20,932 ರೂ. ಖರ್ಚು ಮಾಡಿದರು. ಕತ್ತರಿಸಿದ ಮೂಳೆಯನ್ನು ಒಂದು ಮಿಲಿಮೀಟರ್ ಎತ್ತರಿಸುವ ಸಲುವಾಗಿ ಎತ್ತರವನ್ನು ಹೆಚ್ಚಿಸುವ ಸಾಧನವನ್ನು ದಿನಕ್ಕೆ ಮೂರು ಬಾರಿ ಬಳಸುತ್ತಾರೆ.


ಇದೀಗ ಎಷ್ಟು ಎತ್ತರ?


ಸಂಪೂರ್ಣ ಶಸ್ತ್ರಚಿಕಿತ್ಸೆ ಬಳಿಕ ನಾನು 5 ಅಡಿ 10 ಇಂಚು ಎತ್ತರ ಪಡೆದಿರುವುದಕ್ಕೆ ಸಂತೋಷವಾಗಿದೆ ಎಂದು ಅವರು ಘೋಷಿಸಿದರು. ಆದರೆ ನನ್ನ ದೇಹವು 5 ಅಡಿ 11 ಇಂಚು ಎತ್ತರ ಹೋಗಲು ನನಗೆ ಅವಕಾಶ ಸಿಕ್ಕರೆ, ಇನ್ನೂ ಸಂತೋಷವಾಗುತ್ತದೆ ಎಂದ ಅವರು, ಶಸ್ತ್ರಚಿಕಿತ್ಸೆಗಳು ಮಹಿಳೆಯರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಲು ನನಗೆ ಅವಕಾಶ ಮಾಡಿಕೊಟ್ಟಿವೆ ಎಂದು ನುಡಿದರು.


ಗಿಬ್ಸನ್ ಹೇಳುವುದೇನು?

top videos


    ಮೊದಲ ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯರೊಂದಿಗೆ ಮಾತನಾಡುವಾಗ ನನಗೆ ಸ್ವಲ್ಪ ಹಿಂಜರಿಕೆ ಮತ್ತು ಫಲಿತಾಂಶದ ಬಗ್ಗೆ ಚಿಂತೆ ಕಡಿಮೆಯಾಯಿತು, ನನಗೆ ಈಗ ಗೆಳತಿ ಇದ್ದಾರೆ. ನಾನು ಶಾರ್ಟ್ಸ್ ಧರಿಸಲು ಮತ್ತು ಪೂರ್ಣ ದೇಹದ ಚಿತ್ರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು. ನಾನು ಇನ್ನು ಮುಂದೆ ನನ್ನ ಎತ್ತರದ ಬಗ್ಗೆ ಕಾಳಜಿ ವಹಿಸುವುದಿಲ್ಲ, ನಾನು ಈಗ ಹೊಂದಿರುವ ಎತ್ತರದ ಬಗ್ಗೆ ಬಹಳ ತೃಪ್ತಿ ಇದೆ ಎಂದರು.

    First published: