Dog Teeth: ಅಬ್ಬಬ್ಬಾ! ನಾಯಿಯ ಹಲ್ಲು ಕ್ಲೀನ್ ಮಾಡಿಸಲು 5 ಲಕ್ಷ ಪಾವತಿಸಿದ್ರು!

ಇಲ್ಲೊಬ್ಬ ವ್ಯಕ್ತಿಗೆ ತನ್ನಸಾಕುನಾಯಿಯ ಆರೈಕೆ ತುಂಬಾನೇ ದುಬಾರಿಯಾಗಿದೆ. ನಾಯಿಯ ಹಲ್ಲುಗಳನ್ನು ಸ್ವಚ್ಛಗೊಳಿಸಲು ಹೋಗಿ 5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿಕೊಂಡಿದ್ದಾನೆ ನೋಡಿ.

ಸಾಕುನಾಯಿ

ಸಾಕುನಾಯಿ

  • Share this:
ನಾಯಿಯನ್ನು (Dogs) ಮನೆಯಲ್ಲಿ ಸಾಕಿಕೊಳ್ಳುವುದು ಅನೇಕರಿಗೆ ತುಂಬಾನೇ ಖುಷಿ ನೀಡುವ ವಿಚಾರವಾಗಿರುತ್ತದೆ. ಆದರೆ ಅದರ ಆಹಾರ (Food), ಆಟಿಕೆಗಳು (Toys) ಮತ್ತು ಅದರ ಲಸಿಕೆಗಳನ್ನು (Vaccine) ನೋಡಿಕೊಳ್ಳುವ ವಿಷಯಕ್ಕೆ ಬಂದಾಗ ಮಾತ್ರ ತುಂಬಾನೇ ದುಬಾರಿಯಾಗಬಹುದು. ಇಲ್ಲೊಬ್ಬ ವ್ಯಕ್ತಿಗೂ ಸಹ ಸಾಕುನಾಯಿಯ ಆರೈಕೆ ತುಂಬಾನೇ ದುಬಾರಿಯಾಗಿದೆ. ತನ್ನ ನಾಯಿಯ ಹಲ್ಲುಗಳನ್ನು (Teeth) ಸ್ವಚ್ಛಗೊಳಿಸಲು ಹೋಗಿ 5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿಕೊಂಡಿದ್ದಾನೆ ನೋಡಿ. ಆದರೆ ಈ ವಿಷಯವನ್ನು ಅವರ ಅತ್ತೆ ಮಾವನಿಗೆ ಹೇಳಿದರೆ ಅಳಿಯ ಎಲ್ಲೋ ಮೋಸ (Scammed) ಹೋಗಿದ್ದಾನೆ ಎಂದು ಭಾವಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ನಾಯಿಯ ಹಲ್ಲುಗಳನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ
ವ್ಯಕ್ತಿಯು ತಾನು ಸಾಕಿದ್ದ 12 ವರ್ಷದ ನಾಯಿಯ ಹಲ್ಲುಗಳನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಗೆ ಕರೆದೊಯ್ದನು. "ಈ ಕಾರ್ಯವಿಧಾನಕ್ಕಾಗಿ ಅದಕ್ಕೆ ಚಿಕಿತ್ಸೆ ಪ್ರಾರಂಭಿಸಿದಾಗ ನಾಯಿಯು ತನ್ನ ಬಣ್ಣವನ್ನು ಕಳೆದುಕೊಂಡಿತು. ಆದ್ದರಿಂದ ಆ ಚಿಕಿತ್ಸೆಯನ್ನು ಮಧ್ಯೆದಲ್ಲಿಯೇ ನಿಲ್ಲಿಸಬೇಕಾಯಿತು. ತದ ನಂತರ ಮತ್ತೆ ನಾಯಿಯನ್ನು ಚಿಕಿತ್ಸೆಗೊಳಪಡಿಸಲು ಮುಂದಾದಾಗ ಅದು ಸಾಕಷ್ಟು ಆರೋಗ್ಯವಾಗಿದೆಯೇ ಅಂತ ನೋಡಲು ಹಲವಾರು ಪರೀಕ್ಷೆಗಳನ್ನು ಮತ್ತೊಮ್ಮೆ ನಡೆಸಬೇಕಾಯಿತು" ಎಂದು ವ್ಯಕ್ತಿಯು ರೆಡ್ಡಿಟ್ ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಪೋಸ್ಟಿನಲ್ಲಿ ವ್ಯಕ್ತಿಯು, "ಈ ನಾಯಿಯ ಹಲ್ಲುಗಳನ್ನು ಸ್ವಚ್ಛ ಮಾಡಿಸುವ ಮುಂಚೆ ಅದರ ಹೃದಯ ತಪಾಸಣೆ ಮತ್ತು ರಕ್ತದ ಹರಿವು ಹೇಗಿದೆ ಅಂತ ಪರೀಕ್ಷೆ ಮಾಡಿದರು. ಅವೆಲ್ಲಾ ತಪಾಸಣೆಗಳು ನಮಗೆ ಹಸಿರು ನಿಶಾನೆ ತೋರಿಸಿಕದೆವು. ಅಲ್ಲಿಂದ ಸ್ಥಳೀಯ ತಜ್ಞರಿಗೆ ನಮ್ಮನ್ನು ನಿರ್ದೇಶಿಸಿದರು.

ಬಾಯಿಯ ಎಕ್ಸ್-ರೇ ತೆಗಿಸಲು 5 ಸಾವಿರ ಪೌಂಡ್ ಹಣ ಖರ್ಚು
ಈ ಹೊತ್ತಿಗೆ, ನಾಯಿಯ ಹಲವಾರು ಹಲ್ಲುಗಳನ್ನು ಹೊರತೆಗೆಯಬೇಕು ಎಂದು ನಿರ್ಧರಿಸಲಾಯಿತು, ಮಾಂಸ ಬೆಳವಣಿಗೆಯನ್ನು ತೆಗೆದು ಹಾಕಬೇಕು ಮತ್ತು ಅದು ಕ್ಯಾನ್ಸರ್ ಅಲ್ಲ ಎಂದು ಖಚಿತಪಡಿಸಿಕೊಳ್ಳಲು ಬಯಾಪ್ಸಿಗಾಗಿ ಕಳುಹಿಸಲಾಗುತ್ತದೆ, ಮತ್ತು ಅವರು ಹೊರ ತೆಗೆಯುವಿಕೆಯನ್ನು ಪ್ರಾರಂಭಿಸುವ ಮೊದಲು ಅದರ ಬಾಯಿಯ ಎಕ್ಸ್-ರೇ ಸಹ ಮಾಡಿದರು. ಆದ್ದರಿಂದ ಈ ಹಂತದಲ್ಲಿ 5 ಸಾವಿರಕ್ಕೂ ಹೆಚ್ಚು ಪೌಂಡ್ ಹಣ ಖರ್ಚಾಗಿತ್ತು" ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Viral Resume: ಲಿಂಕ್ಡ್‌ಇನ್‌ನಲ್ಲಿ ಮೋಜಿನ ರೆಸ್ಯೂಮೆ ಹಂಚಿಕೊಂಡ ಮಾರ್ಕೆಟಿಂಗ್ ಅಧಿಕಾರಿ; ರೆಸ್ಯೂಮೆ ಅಂದ್ರೆ ಇದಪ್ಪಾ ಅಂದ್ರು ನೆಟ್ಟಿಗರು

"ನನ್ನ ಪೋಷಕರು ನಮ್ಮ ನಾಯಿಯನ್ನು ಪಶುವೈದ್ಯರ ಬಳಿಗೆ ಕರೆದೊಯ್ಯಲಿಲ್ಲ, ಏಕೆಂದರೆ ಅವರ ಬಳಿ ಅಷ್ಟೊಂದು ಹಣವಿರಲಿಲ್ಲ, ಮತ್ತು ನನ್ನ ಹೆಂಡತಿಯ ಪೋಷಕರು ಕುಟುಂಬದಲ್ಲಿ ಪಶುವೈದ್ಯರನ್ನು ಹೊಂದಿದ್ದರಿಂದ ಹಾಗೆ ಮಾಡಲಿಲ್ಲ. ಈ ಪಶುವೈದ್ಯರು ಕೃಷಿ ಪಶುವೈದ್ಯರಾಗಿದ್ದರು ಎಂದು ನಾನು ಊಹಿಸುತ್ತೇನೆ, ಆದ್ದರಿಂದ ಇದು ಸ್ವಲ್ಪ ಭಿನ್ನವಾಗಿದೆ ಎಂದು ನಾನು ಭಾವಿಸುತ್ತೇನೆ. ನಮ್ಮ ಸಾಕುಪ್ರಾಣಿಗಳಿಗಾಗಿ ನಾವು ಮಾಡಲು ಬಯಸುವಂತಹ ಕೆಲಸಗಳನ್ನು ಅವರು ಮಾಡಲಿಲ್ಲ" ಎಂದು ಹೇಳಿಕೊಂಡಿದ್ದಾರೆ.

"ನಾವು ನಮ್ಮ ನಾಯಿಗೆ ಉತ್ತಮವಾದ ಚಿಕಿತ್ಸೆ ನೀಡಲು ಪ್ರಯತ್ನಿಸುತ್ತಿದ್ದೇವೆ ಮತ್ತು ಅದೃಷ್ಟವಶಾತ್ ನಾವು ಈ ರೀತಿಯ ಕೆಲಸವನ್ನು ಭರಿಸಲು ಸಾಧನಗಳನ್ನು ಹೊಂದಿದ್ದೇವೆ. ಆದಾಗ್ಯೂ, ನಾವು 5 ಸಾವಿರ ಪೌಂಡ್ ಖರ್ಚು ಮಾಡಿದ್ದೇವೆ ಮತ್ತು ಮುಂದೆ ನಾಯಿಗಳನ್ನು ಪಶುವೈದ್ಯರ ಬಳಿಗೆ ಎಂದಿಗೂ ಕರೆದೊಯ್ಯುವುದಿಲ್ಲ ಎಂದು ಹೇಳಿದರು.

ವಿಷಯ ತಿಳಿದ ನೆಟ್ಟಿಗರು ಏನಂದ್ರು 
ನಾಯಿಯ ಹಲ್ಲುಗಳನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಯಿಂದ ಉಂಟಾಗುವ ಈ ಭಾರಿ ವೆಚ್ಚದ ಬಗ್ಗೆ ತಿಳಿದುಕೊಂಡ ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ.

ಇದನ್ನೂ ಓದಿ:  Sourav Ganguly: ಸೌರವ್ ಗಂಗೂಲಿ ಮಾಡಿದ ಅದೊಂದು ಪೋಸ್ಟ್ ಈಗ ಇಷ್ಟೆಲ್ಲಾ ಸದ್ದು ಮಾಡ್ತಿದೆ! ನೀವು ನೋಡಿದ್ರಾ?

ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ನಿಮ್ಮ ನಾಯಿಯ ಬಗ್ಗೆ ತುಂಬಾ ಕಾಳಜಿ ವಹಿಸಿದ್ದೀರಿ, ಅದರ ಆರೈಕೆಗೆ ತುಂಬಾ ಹಣ ಖರ್ಚು ಮಾಡಿದ್ದೀರಿ, ನಿಮ್ಮ ನಾಯಿ ಅದೃಷ್ಟ ಮಾಡಿದೆ. ನೀವು ಇದನ್ನು ಯಾರಿಗೂ ಹೇಳಬೇಡಿ, ಹೇಳಿದರೆ ಸಹಾನುಭೂತಿಯಿಲ್ಲದ ಕಾಮೆಂಟ್ ಗಳು ನಿಮಗೆ ಕೇಳಲು ಸಿಗಬಹುದು ಮತ್ತು ಅವರು ಎಂದಿಗೂ ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: