• Home
  • »
  • News
  • »
  • trend
  • »
  • Man v/s Donkey: ಕತ್ತೆಗೆ ಪದೇ ಪದೇ ಥಳಿಸಿ, ತನ್ನ ಕರ್ಮದ ಫಲ ಅಲ್ಲೇ ಪಡೆದ ವ್ಯಕ್ತಿ! ವೈರಲ್ ವಿಡಿಯೋ ನೀವೂ ನೋಡಿ

Man v/s Donkey: ಕತ್ತೆಗೆ ಪದೇ ಪದೇ ಥಳಿಸಿ, ತನ್ನ ಕರ್ಮದ ಫಲ ಅಲ್ಲೇ ಪಡೆದ ವ್ಯಕ್ತಿ! ವೈರಲ್ ವಿಡಿಯೋ ನೀವೂ ನೋಡಿ

ಕತ್ತೆಗೆ ಪದೇ ಪದೇ ಥಳಿಸಿದ ವ್ಯಕ್ತಿ

ಕತ್ತೆಗೆ ಪದೇ ಪದೇ ಥಳಿಸಿದ ವ್ಯಕ್ತಿ

ಓರ್ವ ವ್ಯಕ್ತಿಯೊಬ್ಬ ಪದೇ ಪದೇ ಕತ್ತೆಗೆ ಕಪಾಳ ಮೋಕ್ಷ ಮಾಡುತ್ತಾನೆ. ಅಲ್ಲದೇ ಅದಕ್ಕೆ ಮನಬಂದಂತೆ ಒದೆಯುತ್ತಾನೆ . ನಂತರ ಅದರ ಮೇಲೆ ಹತ್ತಿ ಕೂರಲು ಹೋಗುತ್ತಾನೆ. ಆಗ ಕತ್ತೆ ಏನು ಮಾಡುತ್ತದೆ ಗೊತ್ತಾ? ಎಲ್ಲೆಡೆ ವೈರಲ್ ಆಗಿರುವ ವಿಡಿಯೋ ಇಲ್ಲಿದೆ ನೋಡಿ...

  • Share this:

ಮನುಷ್ಯರು ಈ ಜನ್ಮದಲ್ಲಿ ಮಾಡಿದ ಪಾಪಗಳನ್ನು, ಮುಂದಿನ ಜನ್ಮದಲ್ಲಿಯಾದರೂ ತೀರಿಸಲೇಬೇಕಂತೆ. ದೇವರು ಅವರ ಪಾಪಗಳಿಗೆ ಶಿಕ್ಷೆ ಕೊಡುತ್ತಾನೆ ಎಂದು ಹೇಳಲಾಗುತ್ತದೆ. ಆದ್ರೆ ಈ ಮಾರ್ಡನ್ ಯುಗದಲ್ಲಿ, ಈ ಜನ್ಮದಲ್ಲಿ ಮಾಡಿದ ಪಾಪಗಳನ್ನು, ಈ ಜನ್ಮದಲ್ಲೇ ತೀರಿಸಬೇಕು. ಹೌದು ನೀವು ಒಬ್ಬರಿಗೆ ಕೆಟ್ಟದ್ದು ಬಯಸಿದ್ರೆ, ನಿಮಗೂ ಸಹ ಕಷ್ಟ ಕಟ್ಟಿಟ್ಟ ಬುತ್ತಿ. ಅದೇ ಹೇಳ್ತಾರಲ್ಲ, ನಾವು ಏನನ್ನು ಬಿತ್ತುತ್ತೇವೂ, ಅದನ್ನೇ ಪಡೆಯುತ್ತೇವೆ ಎಂದು. ಓರ್ವ ವ್ಯಕ್ತಿಯೊಬ್ಬ ಪದೇ ಪದೇ ಕತ್ತೆ (Donkey)ಗೆ ಕಪಾಳ ಮೋಕ್ಷ (Slaps) ಮಾಡುತ್ತಾನೆ. ಅಲ್ಲದೇ ಅದಕ್ಕೆ ಮನಬಂದಂತೆ ಒದೆಯುತ್ತಾನೆ (kicks). ನಂತರ ಅದರ ಮೇಲೆ ಹತ್ತಿ ಕೂರಲು ಹೋಗುತ್ತಾನೆ. ಆಗ ಕತ್ತೆ ಆತನನ್ನು ಬೀಳಿಸಿ, ವ್ಯಕ್ತಿ ಕಾಲನ್ನು ಹಿಡಿದು (Caught hold of his leg) ಎಳೆದಾಡುತ್ತದೆ. ಕೆಸರಿನಲ್ಲಿ ಆತನನ್ನು ಬಿಡುತ್ತದೆ. ಈ ವಿಡಿಯೋ ಎಲ್ಲೆಡೆ ವೈರಲ್ (Viral) ಆಗಿದೆ.


'ನೀವು ಬಿತ್ತಿದಂತೆ ಕೊಯ್ಯುತ್ತೀರಿ'
ನಿಮ್ಮಲ್ಲಿ ಬಹುಪಾಲು ಜನರು "ನೀವು ಬಿತ್ತಿದಂತೆ ಕೊಯ್ಯುತ್ತೀರಿ" ಎಂಬ ಭಾಷಾ ವೈಶಿಷ್ಟ್ಯವನ್ನು ಕೇಳಿರಬಹುದು. ಸಾಮಾಜಿಕ ಜಾಲತಾಣದಲ್ಲಿ ಕತ್ತೆಯ ವೈರಲ್ ಆಗಿರುವ ಈ ವೀಡಿಯೊದಲ್ಲಿ ಅದು ಸಂಪೂರ್ಣವಾಗಿ ಸಾಬೀತಾಗಿದೆ. ಮನುಷ್ಯ ಕತ್ತೆಗ ಹೊಡೆದು, ಒದೆಯುತ್ತಾನೆ. ಕತ್ತೆ ಮನುಷ್ಯನ ಕಾಲು ಹಿಡಿದು ಎಳೆದಾಡುತ್ತದೆ. ಆತನ ಕರ್ಮ ಪಲ ಅವನಿಗೆ ಅಲ್ಲೇ ಲಭಿಸುತ್ತದೆ.
ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋ ಶೇರ್ ಮಾಡಿದ ಶಕ್ತಿ ಕಪೂರ್
ಶಕ್ತಿ ಕಪೂರ್ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ವ್ಯಕ್ತಿಯೊಬ್ಬ ಕತ್ತೆಯನ್ನು ಕ್ರೂರವಾಗಿ ಥಳಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅವನು ಅದರ ಸರಂಜಾಮು ಹಿಡಿದು ಒದ್ದನು. ಮನುಷ್ಯನ ದುರದೃಷ್ಟಕರ ಪ್ರಾಣಿಯನ್ನು ಹಲವಾರು ಬಾರಿ ಕಪಾಳಮೋಕ್ಷ ಮಾಡಿದನು ಮತ್ತು ಅದರ ಮುಖಕ್ಕೆ ಒದೆಯುತ್ತಾನೆ. ಆದಾಗ್ಯೂ, ತ್ವರಿತ ಕರ್ಮ ಸಂಭವಿಸಿದೆ. ಮನುಷ್ಯನು ಹತ್ತಲು ಪ್ರಯತ್ನಿಸುತ್ತಿರುವಾಗ, ಕತ್ತೆಯು ಅವನ ಕಾಲನ್ನು ಹಿಡಿದು ಬಿಡಲಿಲ್ಲ. ಅದು ಮನುಷ್ಯನನ್ನು ಸುತ್ತಿಕೊಂಡು ಕೆಸರಿನಲ್ಲಿ ಎಳೆದೊಯ್ದಿತು. ಎಂದು ಹಾಕಿಕೊಂಡಿದ್ದಾರೆ.


"ಜೈಸಿ ಕರ್ನಿ ವೈಸಿ ಭರ್ನಿ (ನೀವು ಬಿತ್ತಿದಂತೆ, ನೀವು ಕೊಯ್ಯುತ್ತೀರಿ)"
ಶಕ್ತಿ ಕಪೂರ್ ಅವರು ವಿಡಿಯೋ ಶೇರ್ ಮಾಡಿ ಅದಕ್ಕೆ, ಜೈಸಿ ಕರ್ನಿ ವೈಸಿ ಭರ್ನಿ ಎಂದು ಶಿರ್ಷಿಕೆ ನೀಡಿದ್ದಾರೆ. ಅಲ್ಲದೇ ವಿಡಿಯೋವನ್ನು ಒಂದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ.


ಇದನ್ನೂ ಓದಿ: Viral Video: ಯಾವುದೇ ಸಪೋರ್ಟ್ ಇಲ್ಲದೆ ಕಲ್ಲಿನ ಬೆಟ್ಟ ಹತ್ತಿದ ಭಿಕ್ಕು! ಅಬ್ಬಾ ಎನರ್ಜಿಯೇ, ನೆಟ್ಟಿಗರು ಫಿದಾ


ಸೇಡು ತೀರಿಸಿಕೊಂಡ ಕತ್ತೆ ಎಂದು ಕಾಮೆಂಟ್
ವಿಡಿಯೋ ನೋಡಿದ ನೆಟ್ಟಿಗರು, ಕತ್ತೆಯು ತನ್ನ ಸೇಡು ತೀರಿಸಿಕೊಂಡಿದೆ. "ವೀಡಿಯೊದ ದ್ವಿತೀಯಾರ್ಧವು ಅತ್ಯುತ್ತಮವಾಗಿದೆ, ಆದ್ದರಿಂದ ತೃಪ್ತಿಕರವಾಗಿದೆ". "ಒಳ್ಳೆಯದು, ನೀವು ಇದಕ್ಕೆ ಅರ್ಹರು" ಎಂದು ಕಾಮೆಂಟ್ ಮಾಡಿದ್ದಾರೆ.


ಕತ್ತೆಯ ಉಪಯೋಗಗಳು
4,000 ವರ್ಷಗಳ ಹಿಂದೆ ಈಜಿಪ್ಟಿನವರು ಕಾಡು ಕತ್ತೆಗಳನ್ನು ಹಿಡಿದು ಪಳಗಿಸಿದರೆಂದು ನಂಬಲಾಗಿದೆ. ಸಾಕಿದ ಕತ್ತೆಗಳೆಂಬ ಒಂದು ನಿರ್ದಿಷ್ಟ ಬಗೆಯ ತಳಿ ಅಂದಿನಿಂದ ಅಸ್ತಿತ್ವಕ್ಕೆ ಬಂದಿದೆ. ಸಾಕಿದ ಕತ್ತೆಗಳು ಕಾಡು ಕತ್ತೆಗಳಿಗಿಂತ ಗಾತ್ರದಲ್ಲಿ ಚಿಕ್ಕವು ಮತ್ತು ಸ್ವಲ್ಪ ಮಾಸಲು ಬಣ್ಣದವು. ಕತ್ತೆಗಳನ್ನು ಸಾಕುವುದು ಬಹು ಸುಲಭ.


ಸರಳ ರೀತಿ ಆಹಾರ 


ಕತ್ತೆಗಳ ಆಹಾರ ಬಹಳ ಸರಳ ರೀತಿಯದು. ಎಂಥ ಆಹಾರವನ್ನಾದರೂ ತಿಂದು, ಹೆಚ್ಚುಕಾಲ ನೀರು ಕುಡಿಯದೇ ಇರಬಲ್ಲವು. ಆದರೆ ದುಡಿಮೆಯಲ್ಲಿ ಮಾತ್ರ ಬೇರಾವ ಪ್ರಾಣಿಗೂ ಕಡಿಮೆಯಿಲ್ಲ. ಬಿಸಿಲಿನ ತಾಪದಲ್ಲಿ, ಬಹಳ ಕಷ್ಟಕರವಾದ ಸ್ಥಿತಿಯಲ್ಲಿ, ಅತಿ ಕಡಿದಾದ ಪರ್ವತ ಪ್ರದೇಶದಲ್ಲಿ ಹೆಜ್ಜೆ ತಪ್ಪದೆ ಬಹಳ ಜಾಗರೂಕತೆಯಿಂದ ನಡೆಯುವ ಸಾಮಥ್ಯವನ್ನು ಹೊಂದಿರುತ್ತವೆ.


ಭಾರವಾದ ಸಾಮಾನು ಸಾಗಿಸಲು ಬಳಸುತ್ತಾರೆ


ಇವನ್ನು ಬೆಟ್ಟಗುಡ್ಡಗಳಲ್ಲಿ ಭಾರವಾದ ಸಾಮಾನು ಸಾಗಿಸಲು ಬಳಸುತ್ತಾರೆ. ಭಾರತದಲ್ಲಿ ಗುಜರಾತ್ ರಾಜ್ಯದ ಕಚ್ ಪ್ರದೇಶ ಮತ್ತು ಲಡಾಖಿನಲ್ಲಿರುವ ಕಾಡು ಕತ್ತೆಗಳನ್ನು ಬಿಟ್ಟರೆ ಉಳಿದವೆಲ್ಲ ಕತ್ತೆಗಳೆ. ಕಾಡುಕತ್ತೆ ಕತ್ತೆಗಿಂತ ಗಾತ್ರದಲ್ಲಿ ದೊಡ್ಡದು ಹಾಗೂ ಹೆಚ್ಚು ಮಾಟವಾದುದು. ಮೈಬಣ್ಣ ಹಳದಿ ಮರಳಿನಂತೆ. ಕಿವಿಗಳೂ ಕೊಂಚ ಚಿಕ್ಕವು. ಕೂಗು ಹೆಚ್ಚು ತೀವ್ರವಾದುದು.


ಇದನ್ನೂ ಓದಿ: No Rain: ಗೋರಿಯಲ್ಲಿದ್ದ ಶವದ ಬಾಯಿಗೆ ನೀರು ಬಿಟ್ಟರು! ಮಳೆ ಬರುತ್ತೆ ಅಂತ ಕಾದವರಿಗೆ ಆಗಿದ್ದೇನು?


ಕಾಡುಕತ್ತೆ ಇತರ ಕತ್ತೆಗಳೊಂದಿಗಾಗಲಿ ಬೇರಾವ ಸಾಕು ಪ್ರಾಣಿಗಳಿಗೊಂದಿಗಾಗಲಿ ಸೇರುವುದೇ ಇಲ್ಲ. ಭಾರತದ ಕತ್ತೆಗಳಲ್ಲೂ ಎರಡು ಬಗೆಗಳಿವೆ. ಒಂದು ಬಗೆಯದು ಕೊಂಚ ಕುಳ್ಳು ಮತ್ತು ಬೂದು ಬಣ್ಣದ್ದು. ಇದು ದೇಶದ ಎಲ್ಲ ಭಾಗಗಳಲ್ಲಿಯೂ ಸಾಮಾನ್ಯ. ಎರಡನೆಯ ಬಗೆಯದು ಬಣ್ಣ ಬಿಳಿ ಅಥವಾ ತಿಳಿಬೂದಿ. ಇದು ಕಚ್ ಪ್ರದೇಶದಲ್ಲಿ ಕಾಣಬರುತ್ತದೆ.

Published by:Savitha Savitha
First published: