8 ಸಾವಿರ ಅಡಿ ಎತ್ತರದಿಂದ ಪ್ಯಾರಾಗ್ಲೈಡಿಂಗ್ ಮಾಡುವಾಗ ಗಿಟಾರ್‌ ನುಡಿಸುತ್ತಾ 'ಮಾ ತುಜೆ ಸಲಾಂ' ಹಾಡಿದ ವ್ಯಕ್ತಿ

''ಓ ಮೈ ಗಾಡ್‌..!! ನೀವು ಲೆಜೆಂಡ್‌ ಬ್ರದರ್‌. ಪ್ಯಾರಾಗ್ಲೈಡಿಂಗ್ ಮಾಡುವಾಗಲೂ ನೀವು ನಿಜವಾಗಿಯೂ ಚೆನ್ನಾಗಿ ಹಾಡಿದ್ದೀರಿ. ಕ್ಯಾಪ್ಟಿವೇಟಿಂಗ್'' ಎಂದು ಬಳಕೆದಾರರೊಬ್ಬರು ವಿಡಿಯೋದಲ್ಲಿ ಕಾಮೆಂಟ್ ಮಾಡಿದ್ದಾರೆ.

ಪ್ಯಾರಾಗ್ಲೈಡಿಂಗ್ ಮಾಡುತ್ತಿರುವ ವ್ಯಕ್ತಿ

ಪ್ಯಾರಾಗ್ಲೈಡಿಂಗ್ ಮಾಡುತ್ತಿರುವ ವ್ಯಕ್ತಿ

 • Share this:
  ಪ್ಯಾರಾಗ್ಲೈಡಿಂಗ್‌ ಮಾಡಲು ಬಹುತೇಕರಿಗೆ ಆಸೆ ಇದ್ದರೂ, ಮನಸ್ಸಿನ ಎಲ್ಲೋ ಒಂದು ಮೂಲೆಯಲ್ಲಾದರೂ ಹಲವರಿಗೆ ಸಾವಿರಾರು ಅಡಿ ಎತ್ತರದಿಂದ ಹಾರುವುದು ಎಂದರೆ ಭಯ ಇದ್ದೇ ಇರುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ ಹಿಮಾಚಲ ಪ್ರದೇಶದ ಬಿರ್-ಬಿಲ್ಲಿಂಗ್ ಗ್ರಾಮದಲ್ಲಿ ಸಮುದ್ರ ಮಟ್ಟದಿಂದ 8,000 ಅಡಿ ಎತ್ತರದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವಾಗ ಯುಕುಲೇಲೆ (ನಾಲ್ಕು ತಂತಿಯುಳ್ಳ ಒಂದು ಸಣ್ಣ ಗಿಟಾರ್‌)ಯನ್ನು ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್‌ ಅವರ ಅತ್ಯಂತ ಜನಪ್ರಿಯ ಗೀತೆ ಮಾ ತುಜೆ ಸಲಾಂ ಹಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಧೈರ್ಯಶಾಲಿ ಪ್ಯಾರಾಗ್ಲೈಡರ್ ಮತ್ತು ಹವ್ಯಾಸಿ ಗಾಯಕನ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಅಷ್ಟು ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದರೂ, ಲಯ ಮತ್ತು ಉಸಿರಾಟದ ಮಾದರಿಯನ್ನು ಕಾಪಾಡಿಕೊಳ್ಳುವುದು ಕಷ್ಟಕರವಾದರೂ, ರೂಪೇಶ್ ಮೈಟಿ ಯುಕುಲೇಲೆಯ ಬೀಟ್ಸ್‌ಗಳಿಗೆ ಮತ್ತು ಗಿರಿಧಾಮದ ಸುಂದರ ಸೌಂದರ್ಯಕ್ಕೆ ಅಂಟಿಕೊಂಡು ಉತ್ತಮವಾಗಿ ನಿರ್ವಹಿಸಿದ್ದಾನೆ. ಈ ವಿಡಿಯೋ ಖಂಡಿತವಾಗಿಯೂ ವೀಕ್ಷಿಸಲು ಒಂದು ಟ್ರೀಟ್‌ ಆಗಿದೆ. ಇನ್ನು, ಆತನ ಪೈಲಟ್ ಕೂಡ ಆಕಾಶದಲ್ಲಿ ಎಂಜಾಯ್‌ ಮಾಡುತ್ತಾ ವಿಷಣ್ಣತೆಯನ್ನು ಅನುಭವಿಸುತ್ತಿದ್ದಾನೆ.

  ರೂಪೇಶ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಿಕೊಂಡಿದ್ದಾರೆ. "ಪ್ಯಾರಾಗ್ಲೈಡಿಂಗ್ ಮಾಡುವಾಗ ಮಾ ತುಜೆ ಸಲಾಮ್ ಹಾಡನ್ನು 8000 ಅಡಿ ಎತ್ತರದಲ್ಲಿ ಹಾಡುತ್ತಿದ್ದೇನೆ'' ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಮಾರ್ಚ್ 31 ರಂದು ಪೋಸ್ಟ್ ಮಾಡಿದ ಈ ವಿಡಿಯೋಗೆ ಸುಮಾರು 3,000 ಲೈಕ್‌ಗಳು ಸಿಕ್ಕಿದೆ.

  ''ಓ ಮೈ ಗಾಡ್‌..!! ನೀವು ಲೆಜೆಂಡ್‌ ಬ್ರದರ್‌. ಪ್ಯಾರಾಗ್ಲೈಡಿಂಗ್ ಮಾಡುವಾಗಲೂ ನೀವು ನಿಜವಾಗಿಯೂ ಚೆನ್ನಾಗಿ ಹಾಡಿದ್ದೀರಿ. ಕ್ಯಾಪ್ಟಿವೇಟಿಂಗ್'' ಎಂದು ಬಳಕೆದಾರರೊಬ್ಬರು ವಿಡಿಯೋದಲ್ಲಿ ಕಾಮೆಂಟ್ ಮಾಡಿದ್ದಾರೆ.

  ರಷ್ಯಾದ ಮೃಗಾಲಯದಲ್ಲಿ ಹೃದಯ ವಿದ್ರಾವಕ ಘಟನೆ; ಸಂದರ್ಶಕ ಎಸೆದ ರಬ್ಬರ್ ಚೆಂಡನ್ನು ನುಂಗಿದ ಹಿಮ ಕರಡಿ ಸಾವು

  ರೂಪೇಶ್ ಮತ್ತೊಂದು ಸಂಬಂಧಿತ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ರೆಹಮಾನ್‌ ತಮ್ಮ ಹಾಡನ್ನು ತಾನು ಹಾಡಿರುವುದನ್ನು ಅವರು ಗಮನಿಸಿದ್ದಾರೆ. ಅವರು ಅದರ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದರು ಎಂದೂ ಬರೆದುಕೊಂಡಿದ್ದಾರೆ.

  ಇದಕ್ಕೆ ''“ಅಭಿನಂದನೆಗಳು ಬ್ರೋ !!! ನೀವು ಈಗ ಸೆಲೆಬ್ರಿಟಿ” ಎಂದು ಪೋಸ್ಟ್‌ನಲ್ಲಿ ಬಳಕೆದಾರರು ಹೇಳಿದ್ದಾರೆ.

  ಆಗಸ್ಟ್ 1997 ರಲ್ಲಿ, ಭಾರತದ ಸ್ವಾತಂತ್ರ್ಯದ 50 ವರ್ಷಗಳ ನೆನಪಿಗಾಗಿ, ರೆಹಮಾನ್‌ ಕೇವಲ 30 ವರ್ಷ ವಯಸ್ಸಿನವರಾಗಿದ್ದಾಗ ಈ ಹಾಡು ಬಿಡುಗಡೆಯಾಗಿತ್ತು. ಆ ವೇಳೆ ಉತ್ತಮ ಕೇಶವಿನ್ಯಾಸವನ್ನು ಪ್ರದರ್ಶಿಸಿದ್ದರು ಎ.ಆರ್‌. ರೆಹಮಾನ್‌. ದೇಶಭಕ್ತಿಯ ಆಲ್ಬಮ್ ಅನ್ನು ಬಿಡುಗಡೆ ಮಾಡುವ ಆಲೋಚನೆ ಅವರ ಶಾಲಾ ಸ್ನೇಹಿತ ಮತ್ತು ಜಾಹೀರಾತು ಚಲನಚಿತ್ರ ನಿರ್ಮಾಪಕ ಭಾರತ್ ಬಾಲಾ ಅವರಿಂದ ಬಂದಿದೆ ಎಂದು ವರದಿಯಾಗಿದೆ. ಹಾಡು ಎಂದಿನಂತೆ ಈಗಲೂ ಕೂಡ ರಿಫ್ರೆಶ್ ಆಗಿ ಉಳಿದಿದೆ.

  ಜೋಗಿಂದರ್ ನಗರ ಕಣಿವೆಯ ಪಶ್ಚಿಮಕ್ಕೆ ಹಿಮಾಚಲದ ಕಾಂಗ್ರಾ ಜಿಲ್ಲೆಯಲ್ಲಿರುವ ಬಿರ್-ಬಿಲ್ಲಿಂಗ್, ವಿಶ್ವದ ಅತ್ಯುತ್ತಮ ಪ್ಯಾರಾಗ್ಲೈಡಿಂಗ್ ತಾಣಗಳಲ್ಲಿ ಒಂದಾಗಿದೆ ಮತ್ತು ಕ್ರೀಡೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಲು ಇದನ್ನು ಆಯ್ಕೆ ಮಾಡಲಾಗುತ್ತದೆ. ಬೇಸಿಗೆ ರಜಾದಿನಗಳಲ್ಲಿ ಚಾರಣ ಮತ್ತು ಕ್ಯಾಂಪಿಂಗ್‌ಗಾಗಿ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಾರೆ.
  Published by:Latha CG
  First published: