• Home
  • »
  • News
  • »
  • trend
  • »
  • Viral Video: ಕಿಸ್​ ಕೊಟ್ಟಿದ್ದಕ್ಕೆ ಮಾಲೀಕನಿಗೇ ಕ್ಯಾಕರಿಸಿ ಉಗಿದ ಬೆಕ್ಕು, ಹ್ಹಹ್ಹ.. ವಿಡಿಯೋ ನೋಡಿ ಸಖತ್​ ಫನ್ನಿ ಇದೆ

Viral Video: ಕಿಸ್​ ಕೊಟ್ಟಿದ್ದಕ್ಕೆ ಮಾಲೀಕನಿಗೇ ಕ್ಯಾಕರಿಸಿ ಉಗಿದ ಬೆಕ್ಕು, ಹ್ಹಹ್ಹ.. ವಿಡಿಯೋ ನೋಡಿ ಸಖತ್​ ಫನ್ನಿ ಇದೆ

ವೈರಲ್​ ಆದ ವಿಡಿಯೋ

ವೈರಲ್​ ಆದ ವಿಡಿಯೋ

ಈ ಸಾಕುಪ್ರಾಣಿಗಳ ಪೋಷಕರು ಮರಿಗಳ ಬಗ್ಗೆ ತಮ್ಮ ಪ್ರೀತಿಯನ್ನು ತೋರಿಸುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಆದರೆ ನೀವು ತೋರಿಸುವ ಅತಿಯಾದ ಪ್ರೀತಿ ಅವುಗಳಿಗೆ ಇಷ್ಟವಾಗಬಹುದೇ? ಸಾಕುಪ್ರಾಣಿಗಳು, ವಿಶೇಷವಾಗಿ ಬೆಕ್ಕುಗಳು ಇದನ್ನು ಇಷ್ಟಪಡುತ್ತವೆಯೇ?

  • Share this:

    ಸಾಮಾನ್ಯವಾಗಿ ನಾವು ಸಾಮಾಜಿಕ ಮಾಧ್ಯಮ(Social Media)ಗಳಲ್ಲಿ ಪುಟ್ಟ ನಾಯಿಮರಿಗಳು(Dog Puppies) ಮತ್ತು ಬೆಕ್ಕಿನ ಮರಿಗಳ(Cat Puppies) ತುಂಟಾಟದ ವಿಡಿಯೋ(Video) ತುಣುಕುಗಳನ್ನು ನೋಡುತ್ತಿರುತ್ತೇವೆ ಮತ್ತು ಅವುಗಳನ್ನು ತುಂಬಾನೇ ಇಷ್ಟಪಟ್ಟಿರುತ್ತೇವೆ. ಸಾಕುಪ್ರಾಣಿಗಳ(Per Animals) ಪುಟ್ಟ ಮರಿಗಳು ಎಂದರೆ ಯಾರಿಗೆ ತಾನೇ ಅವುಗಳನ್ನು ಮುದ್ದು ಮಾಡಬೇಕು ಎಂದೆನಿಸುವುದಿಲ್ಲ ಹೇಳಿ..? ಕೆಲವೊಬ್ಬರಂತೂ ಅವುಗಳನ್ನು ತಮ್ಮ ಮಕ್ಕಳಂತೆ ತಮ್ಮ ಮಡಿಲಲ್ಲಿ ಎತ್ತಿಕೊಂಡು ಮುತ್ತು ಇಡುವುದನ್ನು ಸಹ ನಾವು ನೋಡಿರುತ್ತೇವೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ನಾವು ಒಂದು ವಿಡಿಯೋವನ್ನು ನೋಡಿದ್ದೆವು, ಅದರಲ್ಲಿ ಒಂದು ನಾಯಿಮರಿ ತನ್ನ ಮನೆಯ ಒಡೆಯನ ಪುಟ್ಟ ಮಗುವನ್ನು ಮೊದಲ ಬಾರಿಗೆ ನೋಡಲು ಎಷ್ಟು ಉತ್ಸುಕವಾಗಿದೆ ಎಂದರೆ ಅದು ತನ್ನ ಹಿಂಗಾಲುಗಳ ಮೇಲೆ ಎದ್ದು ನಿಂತಿರುವುದನ್ನು ಕಾಣಬಹುದಾಗಿತ್ತು. ಅಲ್ಲದೆ, ನಾಯಿಮರಿ ಮಗುವಿನೊಂದಿಗೆ ಒಟ್ಟಿಗೆ ಮಲಗಿರುವುದನ್ನು ಸಹ ಆ ವಿಡಿಯೋದಲ್ಲಿ ನೋಡಿದ್ದೆವು.


    ಸಾಮಾಜಿಕ ಜಾಲತಾಣದಲ್ಲಿ ಬೆಕ್ಕಿನ ವಿಡಿಯೋ ಸಖತ್​ ವೈರಲ್​!


    ಇನ್ನೂ ಒಂದು ವಿಡಿಯೋದಲ್ಲಿ ಮುದ್ದಾದ ಪುಟ್ಟ ಕರು ಮತ್ತು ಮುದ್ದಾದ ನಾಯಿ ನಡುವೆ ಇರುವ ಸ್ನೇಹದ ಬಗ್ಗೆ ನೋಡಿದ್ದೆವು. ಈ ಪ್ರಾಣಿಯ ವಿಡಿಯೋದಲ್ಲಿ ಅತ್ಯಂತ ಆಸಕ್ತಿದಾಯಕ ಸಂಗತಿಯೆಂದರೆ, ಪುಟ್ಟ ಕರು ಮತ್ತು ನಾಯಿ ಎರಡೂ ಒಂದೇ ಗಾತ್ರದ್ದಾಗಿದ್ದು, ವಿಡಿಯೋ ತುಂಬಾನೇ ಮುದ್ದಾಗಿತ್ತು. ಇವೆರಡೂ ವಿಡಿಯೋ ತುಣುಕುಗಳನ್ನು ಮರೆಯುವ ಮುಂಚೆಯೇ ಇನ್ನೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ನೋಡಿ.


    ಸಖತ್​ ಕ್ಯೂಟ್​ ಆಗಿದೆ ಈ ಬೆಕ್ಕಿನ ವಿಡಿಯೋ!


    ಈ ಸಾಕುಪ್ರಾಣಿಗಳ ಪೋಷಕರು ಮರಿಗಳ ಬಗ್ಗೆ ತಮ್ಮ ಪ್ರೀತಿಯನ್ನು ತೋರಿಸುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಆದರೆ ನೀವು ತೋರಿಸುವ ಅತಿಯಾದ ಪ್ರೀತಿ ಅವುಗಳಿಗೆ ಇಷ್ಟವಾಗಬಹುದೇ? ಸಾಕುಪ್ರಾಣಿಗಳು, ವಿಶೇಷವಾಗಿ ಬೆಕ್ಕುಗಳು ಇದನ್ನು ಇಷ್ಟಪಡುತ್ತವೆಯೇ? ನಾವು ಈ ವಿಡಿಯೋವನ್ನು ನೋಡಿದರೆ ಈ ಮೇಲಿನ ಪ್ರಶ್ನೆಗಳಿಗೆ ನಮಗೆ ಉತ್ತರ ಸಿಗುವುದು ಗ್ಯಾರಂಟಿ.


    ಇದನ್ನೂ ಓದಿ: 3 ದಿನ ರೆಸ್ಟೋರೆಂಟ್ ನಲ್ಲಿ ಸಿಲುಕಿದ ಮಹಿಳೆ: ಎಲ್ಲವೂ ಫ್ರೀ ಫ್ರೀ..!


    ಬೆಕ್ಕಿನ ಮರಿಗೆ ಮುತ್ತಿನ ಮಳೆಗೈದ ಮಾಲೀಕ!


    ಈ ವಿಡಿಯೋದಲ್ಲಿ ಮನೆಯ ಒಡೆಯನಾದವನು ಅವನು ಸಾಕಿದ ಮುದ್ದಾದ ಬೆಕ್ಕಿನ ಮರಿಯ ಮೇಲೆ ಮುತ್ತಿನ ಮಳೆಯನ್ನೇ ಸುರಿದಿದ್ದಾನೆ. ಎಂದರೆ ಆ ಬೆಕ್ಕಿನ ಮರಿಗೆ ಸ್ವಲ್ಪವೂ ಅಲುಗಾಡಲು ಅವಕಾಶ ಮಾಡಿಕೊಡದೆ ಕಿಸ್ ಮಾಡಿದ್ದಾನೆ. ಅದು ಆ ಬೆಕ್ಕಿನ ಮರಿಗೆ ತುಂಬಾನೇ ಕಿರಿಕಿರಿ ಅನ್ನಿಸಿ. ಸ್ವತಃ ಆ ಬೆಕ್ಕಿನ ಮರಿಯೇ ತನ್ನ ಕೈಯನ್ನು ಒಡೆಯನತ್ತ ತೋರಿಸಿ ಸಾಕಪ್ಪ..ಸಾಕು ಎಂಬಂತೆ ಪ್ರತಿಕ್ರಿಯೆ ನೀಡಿದೆ. ರೆಡ್ಡಿಟ್‌ನಲ್ಲಿ ಹಂಚಿ ಕೊಳ್ಳಲಾದ, ವಿಡಿಯೋವನ್ನು ನೋಡಲು ಪ್ರಶಂಸನೀಯವಾಗಿ ತಮಾಷೆಯಾಗಿದೆ.


    ಸಾಕು ಬಿಟ್ಬಿಡಪ್ಪಾ ಅಂತ ಹೇಳ್ತಂತೆ ಬೆಕ್ಕು!


    "ಎಷ್ಟೊಂದು ಚುಂಬನಗಳು" ಎಂಬ ಶೀರ್ಷಿಕೆಯನ್ನು ಇದಕ್ಕೆ ನೀಡಿದ್ದಾರೆ ಮತ್ತು ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಒಬ್ಬ ವ್ಯಕ್ತಿಯು ತನ್ನ ತೋಳುಗಳಲ್ಲಿ ಬೆಕ್ಕಿನ ಮರಿಯನ್ನು ಹಿಡಿದುಕೊಂಡು ಅದನ್ನು ಮುತ್ತುಗಳನ್ನು ನೀಡುತ್ತಾ ಕ್ಲಿಪ್ ಪ್ರಾರಂಭವಾಗುತ್ತದೆ. ಆ ಬೆಕ್ಕಿನ ಮರಿ ಸ್ವಲ್ಪ ಸಮಯದವರೆಗೆ ಸುಮ್ಮನಿದ್ದು, ನಂತರ ಸಾಕು ಅಂತ ಪ್ರತಿಕ್ರಿಯೆ ನೀಡಿದೆ.


    ಇದನ್ನೂ ಓದಿ: ಕೆಂಪಿರುವೆಯ ಚಟ್ನಿ ಮಾತ್ರವಲ್ಲ, ಈ ಡಾಬಾದಲ್ಲಿ ಅದರ ಸೂಪ್, ಉಪ್ಪಿನಕಾಯಿಯೂ ಸಿಗುತ್ತೆ!


    ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದಲೂ ಈ ವಿಡಿಯೋ ಪೋಸ್ಟ್ 61,000 ಕ್ಕೂ ಹೆಚ್ಚು ಅಪ್‌ವೋಟ್‌ಗಳನ್ನು ಸಂಗ್ರಹಿಸಿದೆ ಮತ್ತು ಈ ಕ್ಲಿಪ್‌ಗೆ ಸುಮಾರು 500ಕ್ಕೂ ಹೆಚ್ಚು ಜನರು ತಮ್ಮ ಕಾಮೆಂಟ್‌ಗಳನ್ನು ಬರೆದಿದ್ದಾರೆ. ಕೆಲವು ಸಾಕು ಪೋಷಕರು ತಮ್ಮ ಬೆಕ್ಕುಗಳು ಸಹ ಅದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತವೆ ಎಂದು ಹಂಚಿಕೊಂಡರು.

    Published by:ವಾಸುದೇವ್ ಎಂ
    First published: