• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Menstruation: ಋತುಚಕ್ರದ ಸಮಯದಲ್ಲಿ ತಾಯಿಯನ್ನು ರಾಣಿಯಂತೆ ನೋಡಿಕೊಳ್ಳುತ್ತೇವೆ; ವೈರಲ್ ಆಗ್ತಿದೆ ಮಗನ ವೀಡಿಯೋ​

Menstruation: ಋತುಚಕ್ರದ ಸಮಯದಲ್ಲಿ ತಾಯಿಯನ್ನು ರಾಣಿಯಂತೆ ನೋಡಿಕೊಳ್ಳುತ್ತೇವೆ; ವೈರಲ್ ಆಗ್ತಿದೆ ಮಗನ ವೀಡಿಯೋ​

ಅನೀಶ್‌ ಭಗತ್‌

ಅನೀಶ್‌ ಭಗತ್‌

ಇಲ್ಲೊಂದು ಮನೆಯಲ್ಲಿ ತಾಯಿಯ ಪಿರಿಯಡ್ಸ್‌ ದಿನಗಳಲ್ಲಿ ಮಕ್ಕಳು ವಿಶೇಷ ಆರೈಕೆ ಮಾಡುತ್ತಾರೆ. ಅದನ್ನು ಮಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಹೌದು, ಅನೀಶ್‌ ಭಗತ್‌ ಎಂಬ ಬಳಕೆದಾರರು ಪಿರಿಯಡ್ಸ್‌ ಸಮಯದಲ್ಲಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ಧನಾತ್ಮಕ ಪುರುಷತ್ವ ಎಂದು ಹೇಳಿದ್ದಾರೆ.

ಮುಂದೆ ಓದಿ ...
  • Share this:

ನಮ್ಮ ಸಮಾಜದಲ್ಲಿ ಋತುಚಕ್ರ (Menstruation) ಎಂದರೆ, ಅದು ಎಲ್ಲರೆದುರು ಮಾತನಾಡಲು ಸಂಕೋಚ ಪಡುವಂಥ ವಿಷಯ. ಈ ನೈಸರ್ಗಿಕ ಪ್ರಕ್ರಿಯೆಯನ್ನು (Natural Process) ಇಂದಿಗೂ ಎಲ್ಲರೂ “ಸಹಜ” ಅಂತ ಒಪ್ಪಿಕೊಂಡಿಲ್ಲ. ಹೆಸರು ಕೇಳಿದೊಡನೆಯೇ ಮಡಿವಂತರಂತೆ ಮುಖಮಾಡುತ್ತಾರೆ. ಆದರೆ ಅನೇಕ ಕುಟುಂಬಗಳಲ್ಲಿ (Family) ಈ ಪರಿಸ್ಥಿತಿ ಬದಲಾಗಿದೆ. ಮನೆಯಲ್ಲಿನ ಪತ್ನಿಯೋ.. ತಾಯಿಯೋ (Mother) ಅಥವಾ ತಂಗಿಯೋ (Sister) ಮುಟ್ಟಾದಾಗ ಅವರ ನೋವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಪಿರಿಯಡ್ಸ್‌ ಗಿಂತ (Period) ಮೊದಲು ಹಾಗೂ ನಂತರದ ಹಾರ್ಮೋನ್‌ ಬದಲಾವಣೆಯಿಂದಾಗುವಂಥ ಮೂಡ್‌ಸ್ವಿಂಗ್ಸ್ ಗಳನ್ನು ಅರಿತುಕೊಳ್ಳುತ್ತಿದ್ದಾರೆ. ಆ ನಾಲ್ಕು ದಿನಗಳಲ್ಲಿ ಎಂದಿನಂತೆ ಈಕೆ ಇರುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಿದ್ದಾರೆ.


ಇಲ್ಲೊಂದು ಮನೆಯಲ್ಲಿ ತಾಯಿಯ ಪಿರಿಯಡ್ಸ್‌ ದಿನಗಳಲ್ಲಿ ಮಕ್ಕಳು ವಿಶೇಷ ಆರೈಕೆ ಮಾಡುತ್ತಾರೆ. ಅದನ್ನು ಮಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಹೌದು, ಅನೀಶ್‌ ಭಗತ್‌ ಎಂಬ ಬಳಕೆದಾರರು ಪಿರಿಯಡ್ಸ್‌ ಸಮಯದಲ್ಲಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ಧನಾತ್ಮಕ ಪುರುಷತ್ವ ಎಂದು ಹೇಳಿದ್ದಾರೆ. ಈ ಕುರಿತು ವಿಡಿಯೋವೊಂದನ್ನು ಮಾಡಿರುವ ಅನೀಶ್‌, ಆ ಸಮಯದಲ್ಲಿ ನಾನು ಮತ್ತು ಸಹೋದರ ಹೇಗೆ ತಾಯಿಯನ್ನು ನೋಡಿಕೊಳ್ಳುತ್ತೇವೆ ಎಂದು ವಿವರಿಸಿದ್ದಾರೆ.









View this post on Instagram






A post shared by Anish Bhagat (@anishbhagatt)





ತಾಯಿಯನ್ನು ರಾಣಿಯಂತೆ ನೋಡಿಕೊಳ್ಳುತ್ತೇವೆ ಎಂದ ಮಗ!


ಋತುಚಕ್ರದ ಸಮಯದಲ್ಲಿ ಮಹಿಳೆಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದನ್ನು ತಿಳಿಸಿ ಹೇಳಲು ಅನೀಶ್‌ ಭಗತ್‌ ಪ್ರಯತ್ನಿಸಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಅನೀಶ್‌ ಭಗತ್‌, ಋತುಚಕ್ರದ ಸಮಯದಲ್ಲಿ ತಮ್ಮ ತಂದೆ ಹಾಗೂ ಸಹೋದರನೊಂದಿಗೆ ನಾವು ತಾಯಿಯನ್ನು ರಾಣಿಯಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ಅನೀಶ್, ತಮ್ಮ ಕುಟುಂಬವು ಮುಟ್ಟನ್ನು ಸಾಮಾನ್ಯಗೊಳಿಸಲು ಅಳವಡಿಸಿಕೊಂಡಿರುವ ರೂಢಿಗಳನ್ನು ಹೇಳಿಕೊಂಡಿದ್ದಾರೆ.


ವೈರಲ್ ಆಗಿರುವ ಈ ವೀಡಿಯೊದಲ್ಲಿ “ನನ್ನ ತಂದೆ ನನ್ನ ಹದಿಮೂರನೇ ವಯಸ್ಸಿನಲ್ಲಿ ನನಗೆ ಮತ್ತು ನನ್ನ ಸಹೋದರನಿಗೆ ಪಿರಿಯಡ್ಸ್ ಬಗ್ಗೆ ಹೇಳಿದ್ದಾರೆ. ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದಾಗಿ ಅವರು ಬಯಸಿದ್ದರು. ಅಂದಹಾಗೆ ತಮ್ಮ ಕುಟುಂಬದ ಪುರುಷರು "ಭಗತ್ ಮೆನ್" ಎಂಬ ವಾಟ್ಸಾಪ್ ಗುಂಪನ್ನು ಹೊಂದಿದ್ದಾರೆ. ಈ ಗುಂಪು ತನ್ನ ತಾಯಿಗೆ ಮುಟ್ಟಿನ ಸಮಯದಲ್ಲಿ ಮಾತ್ರವಲ್ಲದೇ  ಅವರು ಅನಾರೋಗ್ಯದಿಂದ ಬಳಲುತ್ತಿರುವಾಗ ಅವರನ್ನು ನೋಡಿಕೊಳ್ಳಲು ಸೀಮಿತವಾಗಿದೆ” ಎಂದು ಅನೀಶ್ ಹೇಳಿದ್ದಾರೆ.


Health care First period signs and self care tips she what doctor says
ಸಾಂದರ್ಭಿಕ ಚಿತ್ರ


ಇದೇ ವೇಳೆ ವಿಡಿಯೋದಲ್ಲಿ ವಾಟ್ಸಾಪ್ ಗ್ರೂಪ್‌ನ ಸ್ಕ್ರೀನ್‌ಶಾಟ್ ಅನ್ನು ಅನೀಶ್‌ ಹಂಚಿಕೊಂಡಿದ್ದಾರೆ. “ನಾವು ಅನೇಕ ವರ್ಷಗಳಿಂದ ಭಗತ್ ಮೆನ್ ಎಂಬ ಗುಂಪನ್ನು ಹೊಂದಿದ್ದೇವೆ. ಅದು ಅಮ್ಮ ಅನಾರೋಗ್ಯದಿಂದ ಬಳಲುತ್ತಿರುವಾಗ ಅಥವಾ ಆಕೆಗೆ ಪಿರಿಯಡ್ಸ್‌ ಸಮಯದಲ್ಲಿ ಆರೈಕೆ ಮಾಡುವ ಉದ್ದೇಶವನ್ನು ಹೊಂದಿದೆ. ನಾವು ಮೂವರೂ ಹೀಗೆ ಮಾಡುತ್ತೇವೆ. ಪ್ರತಿ ಎರಡು ತಿಂಗಳಿಗೊಮ್ಮೆ ಆಕೆಗೆ ತಾಜಾ ಪ್ಯಾಡ್‌ಗಳನ್ನು ತೆಗೆದುಕೊಳ್ಳಲು ಹೋಗುತ್ತೇವೆ. ಈ ಬಾರಿ ನನ್ನ ಸರದಿ ಎಂದು ಅನೀಶ್‌ ಹೇಳಿದ್ದಾರೆ.


“ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ನಾವೇ ಖರೀದಿಸುತ್ತೇವೆ”


ಇನ್ನು, ಸ್ಯಾನಿಟರಿ ನ್ಯಾಪ್ಕಿನ್ ಖರೀದಿಸಿ, ಅವುಗಳೊಂದಿಗೆ ಕೆಲವು ಚಾಕೊಲೇಟ್‌ಗಳು, ತ್ವಚೆ ಉತ್ಪನ್ನಗಳು ಮತ್ತು ಕೆಲವು ವಿಶೇಷ ಚಹಾವನ್ನು ಸೇರಿಸಿ, ಅದನ್ನು ಅವರ ತಾಯಿಗೆ ನೀಡುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.




ಇದನ್ನೂ ಓದಿ: Early Puberty: ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಋತುಮತಿಯಾಗಲು ಕಾರಣವೇನು? ತಜ್ಞರು ಏನ್ ಹೇಳ್ತಾರೆ?


ಅಂದಹಾಗೆ ಕಳೆದ ಆರು ವರ್ಷಗಳಲ್ಲಿ, ಅವರ ತಾಯಿ ಪ್ಯಾಡ್‌ಗಳನ್ನು ಖರೀದಿಸಲು ಹೋಗಿಲ್ಲ. ತಮ್ಮ ಮನೆಯಲ್ಲಿ ಅದನ್ನು ಹುಡುಗರೇ ಮಾಡುತ್ತಾರೆ ಎಂದು ಅನೀಶ್ ಹೇಳುತ್ತಾರೆ. ಇನ್ನು ಅನೀಶ್‌ ಪೋಸ್ಟ್‌ ಮಾಡಿರುವ ವಿಡಿಯೋಕ್ಕೆ ಸಾಕಷ್ಟು ಪಾಸಿಟಿವ್​  ಕಾಮೆಂಟ್‌ಗಳು ಬಂದಿವೆ. ಬಹಳಷ್ಟು ಜನರು "ನಾವು ಸಕಾರಾತ್ಮಕ ಪುರುಷತ್ವವನ್ನು ಪ್ರೀತಿಸುತ್ತೇವೆ" ಎಂದು ಬರೆದಿದ್ದಾರೆ. ಹಲವರು ತಂದೆ ಮತ್ತು ಅವರ ಶೈಲಿಯನ್ನು ಶ್ಲಾಘಿಸಿದ್ದಾರೆ. ಅಂದಹಾಗೆ ಈ ವೀಡಿಯೊವನ್ನು 18 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದ್ದು, ಎರಡು ಮಿಲಿಯನ್‌ಗೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.

top videos
    First published: