Viral Photo: ಪದವಿ ಪ್ರದಾನ ಸಂಭ್ರಮದ ಹೃದಯ ಸ್ಪರ್ಶಿ ಫೋಟೋ ಹಂಚಿಕೊಂಡ ಯುವಕ

ತಮ್ಮ ಪದವಿಗಳನ್ನು ಪಡೆಯಲು ಅವರು ಮಾಡಿದ ದೃಢ ನಿಶ್ಚಯ ಮತ್ತು ಕಠಿಣ ಪರಿಶ್ರಮಕ್ಕಾಗಿ ವಿದ್ಯಾರ್ಥಿಗಳನ್ನು ಕುಟುಂಬ ಮತ್ತು ಸ್ನೇಹಿತರ ಮುಂದೆ ಶ್ಲಾಘಿಸುವ ದಿನವದು. ಅನೇಕರು ತಮ್ಮ ಹೆತ್ತವರು ಮಾಡಿದ ತ್ಯಾಗವನ್ನು ವೇದಿಕೆಯ ಮೇಲೆ ಆ ಪದವಿಯನ್ನು ಪಡೆದುಕೊಳ್ಳುವಾಗ ನೆನಪಿಸಿಕೊಳ್ಳುತ್ತಾರೆ ಮತ್ತು ಅವರಿಗೆ ತಮ್ಮ ಕೃತಜ್ಞತೆಯನ್ನು ಸಹ ಎಲ್ಲರ ಮುಂದೆಯೇ ಹೇಳುತ್ತಾರೆ.

ಬೆನ್ಜಾಮಿನ್ ಇಡಿನಿ

ಬೆನ್ಜಾಮಿನ್ ಇಡಿನಿ

  • Share this:
ಈ ಪದವಿ ಪ್ರದಾನ ಸಮಾರಂಭಗಳೆಂದರೆ (graduation day) ಹೀಗೆ ಅನ್ಸುತ್ತೆ! ಕೆಲವರಿಗೆ ಪದವಿಯನ್ನು ಮುಗಿಸುವುದು ತುಂಬಾನೇ ಸುಲಭದ ಹಾದಿಯಾಗಿರಬಹುದು, ಆದರೆ ಎಷ್ಟೋ ಜನರು (People) ತುಂಬಾನೇ ಕಷ್ಟಪಟ್ಟು, ಊಟ ತಿಂಡಿಯನ್ನು ತ್ಯಾಗ ಮಾಡಿ, ರಾತ್ರಿ ಹಗಲು ಎನ್ನದೆ ಓದಿ ತಮ್ಮ ಪದವಿಯನ್ನು ಉತ್ತಮ ಅಂಕಗಳೊಂದಿಗೆ ಮುಗಿಸಿರುತ್ತಾರೆ ಮತ್ತು ಅಲ್ಲದೆ ಕೆಲವರು ರ್‍ಯಾಂಕ್ (Rank) ಪಡೆದು ಅನೇಕ ರೀತಿಯ ಪದಕಗಳನ್ನು ಸಹ ಪಡೆದಿರುತ್ತಾರೆ. ಈ ಪದವಿ ಪ್ರದಾನ ಸಮಾರಂಭಗಳು ಎಂದರೆ ಒಂದು ರೀತಿಯಲ್ಲಿ ಸಂತೋಷ  ನೀಡುವ ಕ್ಷಣ (Moment of happiness) ಎಂದು ಹೇಳಿದರೆ ತಪ್ಪಾಗುವುದಿಲ್ಲ, ಕೆಲವರಿಗಂತೂ ಇದು ತುಂಬಾನೇ ಭಾವುಕದ ಕ್ಷಣ, ಆನಂದ ಬಾಷ್ಪ ತರಿಸುವ ಕ್ಷಣ ಅಂತಲೂ ಸಹ ಹೇಳಬಹುದು.

ಪದವಿ ಪ್ರದಾನ ಸಮಾರಂಭದ ದಿನ ವಿದ್ಯಾರ್ಥಿಗಳ ಜೀವನದ ಮಹತ್ವದ ದಿನ

ಪದವಿ ಪ್ರದಾನ ಸಮಾರಂಭದ ದಿನವು ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಮಹತ್ವದ ಸಂದರ್ಭವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ತಮ್ಮ ಪದವಿಗಳನ್ನು ಪಡೆಯಲು ಅವರು ಮಾಡಿದ ದೃಢ ನಿಶ್ಚಯ ಮತ್ತು ಕಠಿಣ ಪರಿಶ್ರಮಕ್ಕಾಗಿ ವಿದ್ಯಾರ್ಥಿಗಳನ್ನು ಕುಟುಂಬ ಮತ್ತು ಸ್ನೇಹಿತರ ಮುಂದೆ ಶ್ಲಾಘಿಸುವ ದಿನವದು.

ಅನೇಕರು ತಮ್ಮ ಹೆತ್ತವರು ಮಾಡಿದ ತ್ಯಾಗವನ್ನು ವೇದಿಕೆಯ ಮೇಲೆ ಆ ಪದವಿಯನ್ನು ಪಡೆದುಕೊಳ್ಳುವಾಗ ನೆನಪಿಸಿಕೊಳ್ಳುತ್ತಾರೆ ಮತ್ತು ಅವರಿಗೆ ತಮ್ಮ ಕೃತಜ್ಞತೆಯನ್ನು ಸಹ ಎಲ್ಲರ ಮುಂದೆಯೇ ಹೇಳುತ್ತಾರೆ.

ಇದನ್ನೂ ಓದಿ: 20 ವರ್ಷದವಳಿದ್ದಾಗ ಮಾರಾಟ ಮಾಡಿದ್ದ Roller Skates 60ರ ಪ್ರಾಯದಲ್ಲಿ ವಾಪಸ್ ಖರೀದಿಸಿ; ಅದು ಹೇಗೆ ಗೊತ್ತಾ?

ಇಲ್ಲಿಯೂ ಸಹ ಒಬ್ಬ ವಿದ್ಯಾರ್ಥಿ ಪದವಿ ಪಡೆದ ನಂತರ ತನ್ನನ್ನು ಈ ಜಗತ್ತಿಗೆ ಕರೆ ತಂದಿದ್ದಕ್ಕಾಗಿ ಮತ್ತು ಅವನನ್ನು ವಿಜ್ಞಾನಿಯಾಗಲು ಸರಿಯಾದ ಹಾದಿಯಲ್ಲಿ ಇರಿಸಿದ್ದಕ್ಕಾಗಿ ತನ್ನ ತಾಯಿಗೆ ಧನ್ಯವಾದ ಅರ್ಪಿಸಿದ್ದಾನೆ.

ಇಷ್ಟಕ್ಕೆ ಸುಮ್ಮನಾಗಲಿಲ್ಲ ಈ ವಿದ್ಯಾರ್ಥಿ, ತನ್ನ ಪದವಿ ಪ್ರದಾನ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಅದರ ಜೊತೆಯಲ್ಲಿ ಒಂದು ಹೃದಯಸ್ಪರ್ಶಿ ಟಿಪ್ಪಣಿಯೊಂದನ್ನು ಸಹ ಬರೆದಿದ್ದಾನೆ.

ತಾಯಿಯ ಬಗ್ಗೆ ಬರೆದುಕೊಂಡಿದ್ದೇನು?

"ಇಕೆ ನನ್ನ ತಾಯಿ. ಚಿಲಿಯ ಪಟಗೋನಿಯಾದ ಕರಾವಳಿಯಲ್ಲಿರುವ ದ್ವೀಪವಾದ ಗ್ರಾಮೀಣ ಚಿಲೋಯೆಯಲ್ಲಿ ಅವಳು ತನ್ನ ಜೀವನವನ್ನು ನಡೆಸುತ್ತಿದ್ದಾಳೆ. ನಾನು ನಿನ್ನೆ ನನ್ನ ಪಿಎಚ್‌ಡಿ ಪಡೆಯುವುದನ್ನು ನೋಡಲು ಅವರು ಖುದ್ದು ಅಮೆರಿಕಾಗೆ ಬಂದಿದ್ದರು. ಅವಳು ನನ್ನನ್ನು ಈ ಜಗತ್ತಿಗೆ ಕರೆ ತಂದಳು ಮತ್ತು ನಾನು ವಿಜ್ಞಾನಿಯಾಗಬೇಕಂಬ ಕನಸನ್ನು ನನಸು ಮಾಡುವಲ್ಲಿ ಸಹಾಯ ಮಾಡಿದಳು. ಧನ್ಯವಾದಗಳು, ಅಮ್ಮ" ಎಂದು ಬೆನ್ಜಾಮಿನ್ ಇಡಿನಿ ಎಂಬ ವಿದ್ಯಾರ್ಥಿ ಸಮಾರಂಭದ ಫೋಟೋಗಳನ್ನು ಪೋಸ್ಟ್ ಮಾಡುವಾಗ ಟ್ವೀಟ್ ಮಾಡಿದ್ದಾರೆ. ಪದವಿ ಪ್ರದಾನ ಸಮಾರಂಭದ ದಿನದಂದು ತೆಗೆಸಿಕೊಂಡ ಒಂದು ಫೋಟೋದಲ್ಲಿ ಇಡಿನಿ ತನ್ನ ತಾಯಿಯೊಂದಿಗೆ ನಿಂತಿರುವುದನ್ನು ನೋಡಬಹುದಾಗಿದೆ.

ಇದನ್ನೂ ಓದಿ: Viral Video: ಶಾಲಾ ಸಮಾರಂಭದಲ್ಲಿ ಮಗನಿಗೆ ಸರ್ಪ್ರೈಸ್ ಕೊಟ್ಟ ತಂದೆ; ಇವರಿಬ್ಬರ ಬಾಂಧವ್ಯಕ್ಕೆ ಭಾವುಕರಾದ ನೆಟ್ಟಿಗರು

ಈ ಫೋಟೋವನ್ನು ಕೆಲವು ಗಂಟೆಗಳ ಹಿಂದೆ ಹಂಚಿಕೊಳ್ಳಲಾಗಿದೆ ಮತ್ತು ಇದುವರೆಗೂ 6000 ಕ್ಕೂ ಹೆಚ್ಚು ಲೈಕ್ ಗಳು ಬಂದಿದ್ದು, ಇದನ್ನು 20,000ಕ್ಕೂ ಹೆಚ್ಚು ಬಾರಿ ಮರು ಟ್ವೀಟ್ ಸಹ ಮಾಡಿದ್ದಾರೆ. ವೈರಲ್ ಪೋಸ್ಟ್ ನಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಜನರು ಕಾಮೆಂಟ್ ವಿಭಾಗದಲ್ಲಿ ಮುಗಿಬಿದ್ದಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಪೋಸ್ಟ್ ನೋಡಿ ನೆಟ್ಟಿಗರು ಹೇಳಿದ್ದೇನು?

"ನಿಮ್ಮ ಟ್ವೀಟ್ ನನ್ನ ಟೈಮ್ಲೈನ್ ಅನ್ನು ದಾಟಿದೆ, ನಿಮಗೆ ತುಂಬಾ ಸಂತೋಷವಾಗಿದೆ. ಮುದ್ದಾದ ಅಮ್ಮನೊಂದಿಗೆ ನಿಮ್ಮ ಕ್ಷಣವನ್ನು ಆನಂದಿಸಿ" ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ನಿಮಗೆ ಅಭಿನಂದನೆಗಳು ಬೆನ್! ನಿಮ್ಮ ಕಥೆ ತುಂಬಾನೇ ಮುಗ್ದತೆಯಿಂದ ಕೂಡಿದೆ ಮತ್ತು ಶಾಲೆಗೆ ಹೋಗಲು ಅವಕಾಶವಿಲ್ಲದ ಕಾರಣ 'ಅನಕ್ಷರಸ್ಥ' ಎಂದು ಅಪಹಾಸ್ಯಕ್ಕೊಳಗಾದ ನನ್ನ ತಾಯಿ, 2018 ರಲ್ಲಿ ಹೊವಾರ್ಡ್ ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ನನ್ನ ಪಿಎಚ್‌ಡಿ ಪ್ರದಾನ ಸಮಾರಂಭದಲ್ಲಿ ವಾಷಿಂಗ್ಟನ್ ಡಿಸಿಗೆ ಹೇಗೆ ಪ್ರಯಾಣಿಸಿದರು ಎಂಬುದನ್ನು ಇದು ನೆನಪಿಸುತ್ತದೆ" ಎಂದು ಇನ್ನೊಬ್ಬರು ಫೋಟೋದೊಂದಿಗೆ ಪೋಸ್ಟ್ ಮಾಡಿದ್ದಾರೆ."ಅವಳು ನಿನ್ನ ಬಗ್ಗೆ ತುಂಬಾ ಹೆಮ್ಮೆ ಪಡಬೇಕು! ನಿಮ್ಮಿಬ್ಬರಿಗೂ ಅಭಿನಂದನೆಗಳು" ಎಂದು ಮೂರನೆಯ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.
Published by:Ashwini Prabhu
First published: