news18-kannada Updated:February 25, 2021, 12:49 PM IST
ರಜನಿಕಾಂತ್ ಸ್ಟೈಲ್ ದೋಸೆ
ಸಿನಿಮಾ ತಾರೆಯರ ಸ್ಟೈಲನ್ನು ಅನುಕರಿಸುವವರು ಹಲವರು. ಅದರಲ್ಲೂ ನೆಚ್ಚಿನ ಸ್ಟಾರ್ಗಳ ಹೇರ್ ಸ್ಟೈಲ್, ಮಾತನಾಡುವ ಸ್ಟೈಲ್, ಧರಿಸುವ ಬಟ್ಟೆಯನ್ನು ಕೂಡ ಅನುಕರಿಸುವ ಅನೇಕ ಅಭಿಮಾನಿಗಳಿದ್ದಾರೆ. ಆದರಂತೆ ಇಲ್ಲೊಬ್ಬರು ರಜನಿಕಾಂತ್ ಸ್ಟೈಲ್ ಅನ್ನು ಅನುಕರಿಸಿಕೊಂಡು ದೋಸೆ ನೀಡುತ್ತಾರೆ. ಹಾಗಾಗಿ ಈ ದೋಸೆ ‘ರಜನಿಕಾಂತ್ ಸ್ಟೈಲ್ ದೋಸೆ’ ಎಂದು ಜನಪ್ರಿಯವಾಗಿದೆ.
ತಮಿಳಿನ ಸೂಪರ್ ಸ್ಟಾರ್ ನಟ ರಜನಿಕಾಂತ್ ಬಹುಸಂಖ್ಯಾ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮಿಳಿನಾಡಿನಲ್ಲಂತೂ ರಜನಿಗೆ ಅನೇಕ ಅಭಿಮಾನಿಗಳಿದ್ದಾರೆ. ಅವರ ಸಿನಿಮಾ ನೋಡಿ ಸಾಕಷ್ಟು ಜನರು ರಜನಿ ಸ್ಟೈಲ್ ಅನ್ನು ಅನುಸರಿಸಿದವರಿದ್ದಾರೆ. ಅದರಂತೆ ಮುಂಬೈನ ಫುಡ್ಸ್ಟಾಲ್ನಲ್ಲಿ ರಜನಿಕಾಂತ್ರಂತೆ ವೇಗವಾಗಿ ದೋಸೆ ನೀಡುವ ವ್ಯ ಕ್ತಿಯೊಬ್ಬರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದಹಾಗೆಯೇ ಈ ಸ್ಟಾಲ್ ವೆಂಡೂರ್ ಮುತ್ತು ಎಂಬವರಿಗೆ ಸೇರಿದ್ದು, ಇದನ್ನು ತೆರೆದು 30 ವರ್ಷಗಳಾಗಿವೆ. ಮುತ್ತು ಅಣ್ಣ ದೋಸೆ ಸೆಂಟರ್ ಎಂದು ಸ್ಟಾಲ್ಗೆ ಹೆಸರಿಟ್ಟಿದ್ದಾರೆ. ಮುಂಬೈನ ದಾದರ್ ಬಳಿ ಇದೆ.
ವೆಂಡೂರ್ ಮುತ್ತು ರಜನಿಕಾಂತ್ ಅವರ ಬಹುದೊಡ್ಡ ಅಭಿಮಾನಿ. ಅವರ ಸಿನಿಮಾ ನೋಡಿ ವೇಗವಾಗಿ ಸಹಿ ಮಾಡುವ, ಕಟ್ಟಿಂಗ್ ಮಾಡುವ, ಅಂತೆಯೇ ದೋಸೆ ಒಯ್ದು ಕಳುಹಿಸುವುದನ್ನು ವೇಗವಾಗಿ ಮಾಡುತ್ತಾರೆ. ಮುತ್ತು ಅವರು ಮೈಸೂರ್ ದೋಸೆ, ಮಸಾಲೆ ದೋಸೆ ಹೀಗೆ ನಾನಾ ತರಹದ ದೋಸೆ ಮಾಡುತ್ತಾರಂತೆ.
ಸದ್ಯ ವೆಂಡೂರ್ ಮುತ್ತು ಅವರ ರಜನಿಕಾಂತ್ ಸ್ಟೈಲ್ ದೋಸೆ ಒಯ್ಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು 77 ಮಿಲಿಯನ್ ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ. ಸಾವಿರಕ್ಕೂ ಅಧಿಕ ಜನರು ಲೈಕ್ ಮತ್ತು ಕಾಮೆಂಟ್ ಬರೆದಿದ್ದಾರೆ.
Published by:
Harshith AS
First published:
February 25, 2021, 12:49 PM IST