VIDEO VIRAL: ಸಿಂಹವನ್ನು ಮುದ್ದಿಸಲುಹೋಗಿ ಕೈ ಕಚ್ಚಿಸಿಕೊಂಡ..!

ಸಿಂಹ ಪೀಟರ್​ ಅವರ ಕೈಯನ್ನು ಕಚ್ಚಿ ಎಳೆಯುತ್ತಿದ್ದಂತೆ ಕಿರುಚಾಡಿದ್ದಾರೆ. ಗಾಬರಿಗೊಂಡ ಸಿಂಹ ಕೂಡಲೇ ಕೈ ಬಿಟ್ಟಿದೆ. ಸಿಂಹವನ್ನು ಮುದ್ದಿಸಲು ಹೋಗಿ ಬಲವಾದ ಗಾಯ ಮಾಡಿಕೊಂಡಿರುವ ಪೀಟರ್​ರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ.

news18
Updated:April 19, 2019, 11:25 PM IST
VIDEO VIRAL: ಸಿಂಹವನ್ನು ಮುದ್ದಿಸಲುಹೋಗಿ ಕೈ ಕಚ್ಚಿಸಿಕೊಂಡ..!
ಕೈಗೆ ಕಚ್ಚುತ್ತಿರುವ ಸಿಂಹ
news18
Updated: April 19, 2019, 11:25 PM IST
ಪ್ರವಾಸಿಗನೊಬ್ಬ ಮೃಗಾಲಯದಲ್ಲಿ ಸಿಂಹವನ್ನು ಮುದ್ದಿಸಲು ಹೋಗಿ ಕೈಗೆ ಕಚ್ಚಿಸಿಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ.

ಪ್ರವಾಸಿಗ ಪೀಟರ್ ನಾರ್ಟ್ಜೆ ಎಂಬಾತ ತನ್ನ ಹೆಂಡತಿಯ ಜೊತೆಯಲ್ಲಿ 10ನೇ ವರ್ಷದ ವೆಡ್ಡಿಂಗ್​ ಆ್ಯನಿವರ್ಸರಿಯನ್ನು ಆಚರಿಸಲು ಸೌತ್​ ಆಫ್ರಿಕಾದ ಮೃಗಾಲಯಕ್ಕೆ ಹೋಗಿದ್ದಾರೆ. ಮೃಗಾಲಯಕ್ಕೆ ಭೇಟಿ ನೀಡಿದ ಪೀಟರ್​ ಬೇಲಿ ಆಚೆಗಿನ ಸಿಂಹಗಳನ್ನು ನೋಡಿ ಮುದ್ದಿಸಲು ಮುಂದಾಗಿದ್ದಾರೆ. ಒಂದು ಸಿಂಹದ ಬೆನ್ನನ್ನು ಕೈಯಿಂದ ಸವರಿದ್ದಾರೆ. ಅಲ್ಲೇ ಪಕ್ಕದಲ್ಲಿದ್ದ ಇನ್ನೊಂದು ಸಿಂಹದ ಮೈ ಸವರಲು ಮುಂದಾದಾಗ ರೊಚ್ಚಿಗೆದ್ದ ಸಿಂಹ ಪೀಟರ್​ ಅವರ ಕೈಯನ್ನು ಬಲವಾಗಿ ಕಚ್ಚಿದೆ.

ಇದನ್ನೂ ಓದಿ: ಮಂಡ್ಯ ಚುನಾವಣೆಗೆ 150 ಕೋಟಿ ರೂ ಖರ್ಚು ಮಾಡಿರುವುದಕ್ಕೆ ದಾಖಲೆ ತೋರಿಸಲಿ: ಕುಮಾರಸ್ವಾಮಿ ಸವಾಲುಸಿಂಹ ಪೀಟರ್​ ಅವರ ಕೈಯನ್ನು ಕಚ್ಚಿ ಎಳೆಯುತ್ತಿದ್ದಂತೆ ನೋವಿನಿಂದ ಕಿರುಚಾಡಿದ್ದಾರೆ. ಗಾಬರಿಗೊಂಡ ಸಿಂಹ ಕೂಡಲೇ ಕೈ ಬಿಟ್ಟಿದೆ. ಸಿಂಹವನ್ನು ಮುದ್ದಿಸಲು ಹೋಗಿ ಬಲವಾದ ಗಾಯ ಮಾಡಿಕೊಂಡಿರುವ ಪೀಟರ್​ರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ.
First published:April 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ