ಚಲಿಸುತ್ತಿದ್ದ ರೋಲ್ಸ್​ ರಾಯ್ಸ್​ನಲ್ಲಿ ಲೈಂಗಿಕ ಕ್ರಿಯೆ ನಡೆಸಿದ ಉದ್ಯಮಿ; ಪೊಲೀಸರಿಗೆ ಸಿಕ್ಕಿಬಿದ್ದಾಗ ಪ್ರಕರಣಕ್ಕೆ ಸಿಕ್ತು ಟ್ವಿಸ್ಟ್​

ಮೌರಿಸ್ ಕಾರು ಚಾಲನೆ ಮಾಡುವ ವೇಳೆ 50 ಕಿ.ಮೀ ವೇಗದಲ್ಲಿ ಸಾಗಬೇಕು ಎಂದಿದ್ದ ರಸ್ತೆಯಲ್ಲಿ 100 ಕಿ.ಮೀ ವೇಗದಲ್ಲಿ ಸಾಗಿದ್ದ. ಅಷ್ಟೇ ಅಲ್ಲ ವಾಹನವೊಂದಕ್ಕೆ ಗುದ್ದಿ ಪರಾರಿಯಾಗಿದ್ದ. ಇದನ್ನು ಪೊಲೀಸರು ನೋಡಿ ಕಾರನ್ನು ಚೇಸ್​ ಮಾಡಿದ್ದಾರೆ.

ಮೌರಿಸ್​

ಮೌರಿಸ್​

  • Share this:
    ಪ್ರಭಾವಿ ವ್ಯಕ್ತ ಕಾರು ಅಪಘಾತ ಮಾಡಿದ ನಂತರ ಅಥವಾ ವೇಗವಾಗಿ ಕಾರು ಚಾಲನೆ ಮಾಡಿ ಸಿಕ್ಕಿ ಬಿದ್ದ ವೇಳೆ ತಪ್ಪಿಸಿಕೊಳ್ಳಲು ಅವರು ಸಾಕಷ್ಟು ಸುಳ್ಳುಗಳನ್ನು ಹೇಳುತ್ತಾರೆ. ಪ್ರಕರಣ ಮುಚ್ಚಿ ಹಾಕಲು ಅನೇಕ ನಕಲಿ ದಾಖಲೆ ಸೃಷ್ಟಿಸುತ್ತಾರೆ. ಇಂಗ್ಲೆಂಡ್​ ಪ್ರಭಾವಿ ಉದ್ಯಮಿ ಕೂಡ ವೇಗವಾಗಿ ಕಾರು ಚಲಾಯಿಸಿ ಸಿಕ್ಕಿ ಬಿದ್ದಿದ್ದಾನೆ. ಚಲಿಸುತ್ತಿದ್ದ ಕಾರಿನಲ್ಲಿ ಸೆಕ್ಸ್​ ಮಾಡುತ್ತಿರುವುದಾಗಿ ಹೇಳಿದ್ದ. ಪೊಲೀಸರು ತನಿಖೆ ನಡೆಸಿದಾಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. 

    ಮೌರಿಸ್​ ಫ್ರೆಡ್​ ಹೆಸರಿನ ಉದ್ಯಮಿ ಸಾಕಷ್ಟು ಐಷಾರಾಮಿ ಕಾರುಗಳನ್ನು ಹೊಂದಿದ್ದ. ವೀಕೆಂಡ್​ ಬಂತೆಂದರೆ ದೂರದ ಊರುಗಳಿಗೆ ಕಾರುಗಳನ್ನು ಚಾಲನೆ ಮಾಡಿಕೊಂಡು ಹೋಗುವುದು ಈತನ ಹವ್ಯಾಸ. ಅಂತೆಯೇ ಒಂದು ದಿನ ಮೌರಿಸ್​ ಐಷಾರಾಮಿ ರೋಲ್ಸ್​ ರಾಯ್ಸ್ ​ತೆಗೆದುಕೊಂಡು ತೆರಳಿದ್ದ. ಈ ವೇಳೆ ಮೌರಿಸ್​ ಎಡವಟ್ಟೊಂದನ್ನು ಮಾಡಿಕೊಂಡಿದ್ದ.

    ಮೌರಿಸ್ ಕಾರು ಚಾಲನೆ ಮಾಡುವ ವೇಳೆ 50 ಕಿ.ಮೀ ವೇಗದಲ್ಲಿ ಸಾಗಬೇಕು ಎಂದಿದ್ದ ರಸ್ತೆಯಲ್ಲಿ 100 ಕಿ.ಮೀ ವೇಗದಲ್ಲಿ ಸಾಗಿದ್ದ. ಅಷ್ಟೇ ಅಲ್ಲ ವಾಹನವೊಂದಕ್ಕೆ ಗುದ್ದಿ ಪರಾರಿಯಾಗಿದ್ದ. ಇದನ್ನು ಪೊಲೀಸರು ನೋಡಿದ್ದಾರೆ.

    ಪೊಲೀಸರು ಈ ಕಾರನ್ನು ಬೆನ್ನತ್ತಿ ಹೋದಾಗ ಮೋರಿಸ್​ ಕಾರು ಮತ್ತಷ್ಟು ವೇಗವಾಗಿ ಚಲಿಸಿದ್ದ. ಪೊಲೀಸರ ವಾಹನ ಎಷ್ಟೇ ವೇಗವಾಗಿ ತೆರಳಿದ್ದರೂ ಈ ಕಾರನ್ನು ಚೇಸ್​ ಮಾಡಲು ಸಾಧ್ಯವಾಗಿರಲಿಲ್ಲ. ನಂತರ ನಿರ್ಜನ ಪ್ರದೇಶದಲ್ಲಿ ಈ ಕಾರು ಸಿಕ್ಕಿತ್ತು. ಕಾರಿನ ಮಾಲೀಕರ ಹೆಸರನ್ನು ಹುಡುಕಿದಾಗ ಅದರಲ್ಲಿ ಮೌರಿಸ್​ ಹೆಸರಿತ್ತು.

    ಇದನ್ನೂ ಓದಿ: ಪ್ರಪಂಚದಲ್ಲಿ ಮನುಷ್ಯ ಬಿಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಾಣಿ ಯಾವುದು ಗೊತ್ತಾ?

    ಮೌರಿಸ್​ ಬಂಧಿಸಿ ಈ ಬಗ್ಗೆ ಕೇಳಿದಾಗ, “ನಾನು ಕಾರಿನಲ್ಲಿ ಇದ್ದಿದ್ದು ಹೌದು. ಆದರೆ, ಕಾರು ಚಾಲನೆ ಮಾಡುತ್ತಿರಲಿಲ್ಲ, ಹಿಂದಿನ ಸೀಟ್​ನಲ್ಲಿದೆ. ನನ್ನ ಗರ್ಲ್​​ಫ್ರೆಂಡ್​ ಜೊತೆ ಸೆಕ್ಸ್​ ಮಾಡುತ್ತಿದೆ. ಹೀಗಾಗಿ ಸಿಕ್ಕಿ ಬೀಳುವುದು ಬೇಡ ಎನ್ನುವ ಕಾರಣಕ್ಕೆ ಚಾಲಕನ ಬಳಿ ಕಾರು ವೇಗವಾಗಿ ಓಡಿಸುವಂತೆ ಹೇಳಿದ್ದೆ,” ಎಂದು ಸುಳ್ಳು ಹೇಳಿದ್ದ.

    ಇದನ್ನು ಪೊಲೀಸರು ಕೂಡ ನಂಬಿದ್ದರು. ಆದರೆ, ಸಿಸಿಟಿವಿ ಪರಿಶೀಲಿಸಿದಾಗ ಕಾರಿನಲ್ಲಿ ಮೌರಿಸ್ ಒಬ್ಬನೇ ಇರುವ ವಿಚಾರ ಬೆಳಕಿಗೆ ಬಂದಿದೆ. ಈತನಿಗೆ 8 ತಿಂಗಳು ಜೈಲು ಶಿಕ್ಷೆ ಹಾಗೂ ಎರಡು ವರ್ಷ ಚಾಲನಾ ಪರವಾನಗಿಯನ್ನು ರದ್ದುಮಾಡಿ ಕೋರ್ಟ್​ ತೀರ್ಪು ನೀಡಿದೆ.
    First published: