Baby Selling: ಜೂಜಾಡಿ ಮೈ ತುಂಬಾ ಸಾಲ ಮಾಡಿಕೊಂಡ, ಸಾಲ ತೀರಿಸಲು ಹೆತ್ತ ಮಗುವನ್ನೇ ಮಾರಿದ ಈ ಭೂಪ!

ವ್ಯಕ್ತಿ ತಾನು ಜೂಜಾಟದಲ್ಲಿ ಸೋತು ಸುಣ್ಣವಾಗಿ ಮೈತುಂಬಾ ಸಾಲ ಮಾಡಿಕೊಂಡು ಅದನ್ನು ತೀರಿಸಲು ಆಗದೆ ಕೊನೆಗೆ ಅವನ ಸ್ವಂತ ಎರಡು ತಿಂಗಳ ಮಗುವನ್ನೇ 80 000 ರೂಪಾಯಿಗಳಿಗೆ ಮಾರಾಟ ಮಾಡಿದ್ದಾನೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಸಾಮಾನ್ಯವಾಗಿ ಜೂಜಾಟಕ್ಕೆ(Gambling) ದಾಸರಾದವರು (Addiction) ಯಾರು ದುಡ್ಡು ಮಾಡಿರೋ ಉದಾಹರಣೆಗಳೇ ಇಲ್ಲ, ಬದಲಾಗಿ ಈ ಜೂಜಾಟದ ಚಟಕ್ಕೆ ಬಲಿಯಾಗಿ(Victim) ತಮ್ಮ ಮನೆ, ಜಮೀನು ಮತ್ತು ಚಿನ್ನಾಭರಣಗಳನ್ನು(jewellery) ಕಳೆದುಕೊಂಡಿರುವುದನ್ನು ನಾವು ಅನೇಕ ಘಟನೆಗಳಲ್ಲಿ ನೋಡಿರುತ್ತೇವೆ. ಕೆಲವೊಬ್ಬರಂತೂ ಎಲ್ಲವನ್ನೂ ಕಳೆದುಕೊಂಡು ಕೊನೆಗೆ ತಮ್ಮ ಮಡದಿ ಮಕ್ಕಳು ಸಹ ಅವರನ್ನು ಬಿಟ್ಟು ಹೋಗಿರುವುದನ್ನು ನಾವು ನೋಡುತ್ತೇವೆ. ಹೀಗೆ ಈ ಜೂಜಾಟದಲ್ಲಿ ಸೋತು ವಿಪರೀತ ಸಾಲ ಮಾಡಿಕೊಂಡಿರುವ ವ್ಯಕ್ತಿಯೊಬ್ಬ ತನ್ನ ಸಾಲವನ್ನು ತೀರಿಸಲು ಯಾವ ದುಷ್ಕೃತ್ಯಕ್ಕೆ ಕೈ ಹಾಕಿ ನಂತರ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ ನೀವೇ ನೋಡಿ.

ಮಗು ಮಾರಾಟ
ಇಲ್ಲೊಬ್ಬ ವ್ಯಕ್ತಿ ತಾನು ಜೂಜಾಟದಲ್ಲಿ ಸೋತು ಸುಣ್ಣವಾಗಿ ಮೈತುಂಬಾ ಸಾಲ ಮಾಡಿಕೊಂಡು ಅದನ್ನು ತೀರಿಸಲು ಆಗದೆ, ಕೊನೆಗೆ ಅವನ ಸ್ವಂತ ಎರಡು ತಿಂಗಳ ಮಗುವನ್ನೇ 80,000 ರೂಪಾಯಿಗಳಿಗೆ ಮಾರಾಟ ಮಾಡಿದ್ದಕ್ಕಾಗಿ ವೊರೈಯೂರ್ ಪೊಲೀಸರು ಈ ತಂದೆಯನ್ನು ಮತ್ತು ಅವನ ಜೊತೆ ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಇನ್ನಿಬ್ಬರನ್ನು ಬಂಧಿಸಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಮಗುವಿನ ತಾಯಿ 30 ವರ್ಷದ ಕೈರುನಿಶಾ ಅವರು ಇತ್ತೀಚೆಗೆ ತನ್ನ ಪತಿ ಮತ್ತು ಇನ್ನಿಬ್ಬರ ವಿರುದ್ಧ ಪೊಲೀಸರ ಬಳಿ ಹೋಗಿ ದೂರು ನೀಡಿದ ನಂತರ ಈ ಪ್ರಕರಣವು ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಕೈರುನಿಶಾ ಅವರು 38 ವರ್ಷ ವಯಸ್ಸಿನ ಅಬ್ದುಲ್ ಸಲಾಮ್ ಅವರನ್ನು ಮದುವೆಯಾಗಿದ್ದಾರೆ ಮತ್ತು ಅವರು ವೊರೈಯೂರ್‌ನ ಪೂರ್ವ ಪಾಂಡಮಂಗಲಂನಲ್ಲಿ ವಾಸಿಸುತ್ತಿದ್ದರು.

ಇದನ್ನೂ ಓದಿ: Mahesh Babu: ಮಗುವಿನ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾದ ಮಹೇಶ್ ಬಾಬು... ನೀವು ನಿಜವಾಗಲೂ ಹೀರೋ ಸರ್​..!

ದಂಪತಿಗಳಿಗೆ ಐದು ಮಕ್ಕಳು
ಸಲಾಮ್‌ಗೆ ತನ್ನ ಕುಟುಂಬವನ್ನು ನಡೆಸಲು ಬೇರೆ ಯಾವುದೇ ಕೆಲಸವಿರಲಿಲ್ಲ ಮತ್ತು ಆಗಾಗ್ಗೆ ಮದ್ಯ ಸೇವಿಸುತ್ತಿದ್ದನು ಮತ್ತು ಹಾಗೆಯೇ ಜೂಜಾಟಕ್ಕೆ ಇಳಿದನು ಎಂದು ಆರೋಪಿಸಲಾಗಿದೆ. ಈ ದಂಪತಿಗಳಿಗೆ ಐದು ಮಕ್ಕಳಿದ್ದಾರೆ, ಹಿರಿಯವನಿಗೆ 15 ವರ್ಷ ಮತ್ತು ಕಿರಿಯವನು ಎರಡು ತಿಂಗಳ ಮಗು ಎಂದು ಹೇಳಲಾಗುತ್ತಿದೆ.
ಸಲಾಮ್ ಅವರು 46 ವರ್ಷ ವಯಸ್ಸಿನ ಸಂತಾನ ಕುಮಾರ್ ಅವರಿಂದ ಜೂಜಾಟ ಆಡುವುದಕ್ಕೆ ಹಲವಾರು ಕಂತುಗಳಲ್ಲಿ ಹಣವನ್ನು ಎರವಲು ಪಡೆದಿದ್ದರು ಎಂದು ಆರೋಪಿಸಲಾಗಿದೆ. ಅದು ಈಗ ಬೆಳೆದು 80,000 ರೂಪಾಯಿಗೆ ಹೋಗಿ ತಲುಪಿದೆ.

ಸಂತಾನ ಕುಮಾರ್ ತಮ್ಮ ಕಿರಿಯ ಮಗುವನ್ನು 44 ವರ್ಷ ವಯಸ್ಸಿನ ಅರೋಕಿಯಾರಾಜ್ ಎಂಬ ಸಂಬಂಧಿಕರಿಗೆ 80,0000 ರೂಪಾಯಿಗಳಿಗೆ ಮಾರಾಟ ಮಾಡಲು ಮತ್ತು ಅವನ ಸಾಲವನ್ನು ತೀರಿಸಲು ಹೇಳಿದ್ದಾನೆ ಎಂದು ಕೈರುನಿಶಾ ಅವರು ಪೊಲೀಸರಿಗೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಜೂಜಾಟದ ಸಾಲ
ಈ ವಿಚಾರವನ್ನು ಅಬ್ದುಲ್ ತನ್ನ ಹೆಂಡತಿಗೆ ಹೇಳಿದಾಗ, ಕೈರುನಿಶಾ ಮಗುವನ್ನು ಅವನ ಗಂಡನಿಗೆ ಮಾರಾಟ ಮಾಡಲು ಕೊಡಲು ನಿರಾಕರಿಸಿದ್ದಾಳೆ. ಆದ್ದರಿಂದ ತನ್ನ ಹೆಂಡತಿಗೆ ಮತ್ತು ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಒಂದು ದಿನ ಅಬ್ದುಲ್ ಅವನ ಎರಡು ತಿಂಗಳ ಮಗುವನ್ನು ಎತ್ತಿಕೊಂಡು ಹೋಗಿ ಜನವರಿ 19 ರಂದು ಮಾರಾಟ ಮಾಡಿದ್ದಾನೆ. ಇದರಿಂದ ಬಂದ ಹಣವನ್ನು ಸಂತಾನ ಕುಮಾರ್ ಅವರ ಬಳಿ ಹೋಗಿ ಅವನ ಜೂಜಾಟದ ಸಾಲವನ್ನು ತೀರಿಸಿದ್ದಾನೆ.

ಇದನ್ನೂ ಓದಿ: Corona ಮೊದಲ ಅಲೆ ಸಮಯದಲ್ಲಿ ಜನಿಸಿದ ಶಿಶುಗಳಲ್ಲಿ ಬೆಳವಣಿಗೆಯ ಕೊರತೆ: ಅಧ್ಯಯನದಲ್ಲಿ ಬಹಿರಂಗ

ಇದನ್ನು ನಂತರ ಅರಿತುಕೊಂಡ ಕೈರುನಿಶಾ ಜನವರಿ 23 ರಂದು ಪೊಲೀಸರಿಗೆ ದೂರು ನೀಡಿದ್ದರು. ದೂರನ್ನು ದಾಖಲಿಸಿದ ಪೊಲೀಸರು ಸಮಗ್ರವಾದ ತನಿಖೆಯ ನಂತರ, ಅಬ್ದುಲ್ ಸಲಾಮ್, ಸಂತಾನ ಕುಮಾರ್ ಮತ್ತು ಅರೋಕಿಯಾರಾಜ್ ಈ ಮೂವರನ್ನು ಕೂಡಲೇ ಬಂಧಿಸಿ ಸೋಮವಾರ ಮಗುವನ್ನು ತಾಯಿಗೆ ಮರಳಿ ಒಪ್ಪಿಸಿದ್ದಾರೆ. ಈ ಮೂವರು ಆರೋಪಿಗಳ ವಿರುದ್ಧ ಬಾಲಾಪರಾಧಿ ನ್ಯಾಯ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.
Published by:vanithasanjevani vanithasanjevani
First published: