Viral Video: ಟೇರೆಸ್ನಿಂದ ಬೀಳುತ್ತಿದ್ದ ತಮ್ಮನನ್ನು ಕಾಪಾಡಿದ ಅಣ್ಣ! ವೈರಲ್ ವೀಡಿಯೋ ಇಲ್ಲಿದೆ ನೋಡಿ..

ಟೇರೆಸ್ ಮೇಲಿಂದ ಬೀಳುತ್ತಿದ್ದ ತಮ್ಮನನ್ನು ಅಣ್ಣ ತಕ್ಷಣವೇ ಹಿಡಿದುಕೊಂಡು ಅಪಾಯದಿಂದ ಪಾರು ಮಾಡಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

  • Share this:
ಅಣ್ಣ ತಮ್ಮನ (Brothers) ನಡುವಿನ ಪ್ರೀತಿಯ (Love) ಬಗ್ಗೆ ಪುರಾಣದಿದಲೂ ಕೇಳಿಕೊಂಡು ಬರುತ್ತಿದ್ದೇವೆ. ಅಣ್ಣ ತಮ್ಮ ಅಂದಾಗ ಮೊದಲು ನೆನಪಿಗೆ ಬರುವುದೇ ರಾಮ (Rama) ಲಕ್ಷಣ (Lakshmana). ಅವರಿಬ್ಬರ ನಡುವಿನ ಪ್ರೀತಿ ಈ ಜಗತ್ತಿನಲ್ಲಿ ಸಹೋದರರ ಪ್ರೀತಿಗೆ ಎಂದೆಂದಿಗೂ ಉತ್ತಮ ನಿದರ್ಶನ. ಇದರ ಜೊತೆ ಇನ್ನೊಂದು ಮಾತನ್ನು ಕೇಳುತ್ತೇವೆ ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳಿತಾ ಬೆಳಿತಾ ದಾಯದಿಗಳು ಅಂತ, ಅಂದರೆ ಸಣ್ಣ ವಯಸ್ಸಿನಲ್ಲಿ ಅವರ ನಡುವೆ ಇರುವ ಪ್ರೀತಿಯನ್ನು ಅವರು ದೊಡ್ಡವರಾದ ನಂತರ ನೋಡ ಸಿಗುವುದಿಲ್ಲ. ಆದರೆ ಇದೀಗ ಇದಕ್ಕೆ ವಿರುದ್ಧ ಎಂಬಂತೆ ಅಣ್ಣ ಆಪತ್ಬಾಂದವನಂತೆ ಬಂದು ಟೇರೆಸ್ನಿಂದ (Terrace) ಕೆಳಗೆ ಬೀಳುತ್ತಿದ್ದ (Fell Down) ತಮ್ಮನನ್ನು (Younger Brother) ಕಾಪಾಡಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗುತ್ತಿದೆ.

ಟೇರೆಸ್ ನಿಂದ ಕೆಳಗೆ ಬೀಳುತ್ತಿರುವಾಗ ತಮ್ಮನನ್ನು ಅಣ್ಣ ಹಿಡಿದು ಕಾಪಾಡಿದ್ದಾನೆ. ಈ ದೃಶ್ಯ ನೋಡುಗರನ್ನು ಒಮ್ಮೆ ಬೆಚ್ಚಿ ಬೀಳಿಸಿದೆ ಮತ್ತು ಅಣ್ಣ ತಕ್ಷಣವೆ ಬಂದು ತಮ್ಮನನ್ನು ಹಿಡಿದ ಬಗೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಕೇರಳದ ಮಲಪ್ಪುರಂನ್ನಲ್ಲಿ ನಡೆದ ಘಟನೆ
ಕೇರಳದ ಮಲ್ಲಪ್ಪುರಂ ಜಿಲ್ಲೆಯ ಚಂಗರಂಕುಲಂನಲ್ಲಿ ಈ ಘಟನೆ ನಡೆದಿದೆ. ಚಂಗರಂಕುಲಂನ ಒಥಲೂರಿನಲ್ಲಿ ಶಫೀಕ್ ಎಂಬಾತ ಮನೆಯ ಮಹಡಿಯಿದ್ದ ಜಾರಿ ಬಿದ್ದಿದ್ದಾನೆ. ಮಹಡಿಯಿಂದ ತಮ್ಮ ಬೀಳುತ್ತಿರುವುದನ್ನು ಕಂಡು ಅಣ್ಣ ಸಾದಿಕ್ ಅವನನ್ನು ತಕ್ಷಣವೇ ಹಿಡಿದು ರಕ್ಷಿಸಿದ್ದಾನೆ.

ಟೇರೆಸ್ ಕ್ಲೀನ್ ಮಾಡುತ್ತಿದ್ದ ಶಫೀಕ್
ಮನೆಯ ಟೇರೆಸ್ ನನ್ನು ಶಫೀಕ್ ಕ್ಲೀನ್ ಮಾಡುತ್ತಿದ್ದ ವೇಳೆ ಅವನು ಜಾರಿ ಕೆಳಗೆ ಬಿದ್ದಿದ್ದಾನೆ. ಆದರೆ ಅವನು ನೆಲಕ್ಕೆ ಬೀಳುವ ಮೊದಲೆ ಅವನ ಅಣ್ಣ ಬಂದು ಹಿಡಿದುಕೊಂಡಿದ್ದಾನೆ ಮತ್ತು ಅಪಾಯದಿಂದ ಪಾರು ಮಾಡಿದ್ದಾನೆ.

ಇದನ್ನೂ ಓದಿ: Shocking News: ಬಳಸಿದ ಸಿರಿಂಜ್ ಹಾಗೂ ಪಾಪಸು ಕಳ್ಳಿಯಿಂದ ರೆಡಿ ಆಯ್ತು ಲಿಪ್​ಸ್ಟಿಕ್! ಸಖತ್ ಕಲರ್

ಸಿಸಿ ಕ್ಯಾಮಾರದಲ್ಲಿ ದೃಶ್ಯದ ಸೆರೆ
ಮನೆಯ ಸಿಸಿ ಕ್ಯಾಮಾರದಲ್ಲಿ ಈ ದೃಶ್ಯವು ಸೆರೆಯಾಗಿದೆ. ಈ ದೃಶ್ಯದಲ್ಲಿ ತಮ್ಮನು ಟರೇಸಿನಿಂದ ಬೀಳುತ್ತಿದ್ದಂತೆ ಕೆಳಗೆ ಅಂಗಳದಲ್ಲಿ ನಡೆದುಕೊಂಡು ಬರುತ್ತಿದ್ದ ಅಣ್ಣ ಸಾದಿಕ್,  ತಕ್ಷಣವೇ ಅವನನ್ನು ಹಿಡಿಕೊಂಡಿದ್ದಾನೆ. ಈ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ವೀಡಿಯೋ ಇಲ್ಲಿದೆ ನೋಡಿ;

https://youtu.be/vxe0-78ixnE

ಅಪಘಾತಕ್ಕೀಡಾದ ಶಫಿಕ್ ಪ್ರಕಾರ, ಸನ್ ಶೇಡ್ ಒದ್ದೆಯಾಗಿದ್ದು ಅದನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ನಾನು ಜಾರಿ ಕೆಳಗೆ ಬಿದ್ದಿದ್ದೇನೆ. ಕೆಳಗಿದ್ದ ಅಣ್ಣ ನನನ್ನು ಹಿಡಿದ್ದರಿಂದ ನಾನು ಅಪಾಯದಿಂದ ಪಾರಾಗಿದ್ದೇನೆ ಎಂದರು.

ಕೆಳಗೆ ಬಿದ್ದಿದ್ದರೆ ಪ್ರಾಣಕ್ಕೆ ಅಪಾಯವಿತ್ತು
ಶಫಿಕ್ ಹೇಳುವ ಪ್ರಕಾರ, ಮನೆಯ ಅಂಗಳಕ್ಕೆ ಇಂಟರ್ ಲಾಕ್ ಹಾಕಿದ್ದರಿಂದ ಒಂದು ವೇಳೆ ನಾನು ಕೆಳಗೆ ಬಿದ್ದಿದ್ದರೆ ಪರಿಸ್ಥಿತಿ ತುಂಬಾನೇ ಹಾಳಾಗುತ್ತಿತ್ತು ಆದರೆ, ದೇವರಂತೆ ಅಣ್ಣ ಬಂದು ಕಾಪಾಡಿದ್ದೇನೆ ಎಂದು ಹೇಳುತ್ತಾ ನಿಟ್ಟುಸಿರು ಬಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್
ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಇದನ್ನು ಗಮನಿಸಿದ ನೆಟ್ಟಿಗರು ಸಾದಿಕ್ ಅವರು ಸಮಯಕ್ಕೆ ಸರಿಯಾಗಿ ಬಂದಿದ್ದರಿಂದ ಜೀವ ಉಳಿದಿದೆ ಎಂದಿದ್ದಾರೆ.

ಇದನ್ನೂ ಓದಿ: Viral Video: ಪಾರಿವಾಳದ ಬ್ಯಾಕ್ ಫ್ಲಿಪ್ ವೀಡಿಯೋ ಸಖತ್ ವೈರಲ್; ನೋಡಿ ಬೆರಗಾದ ನೆಟ್ಟಿಗರು

ಇನ್ನೂ ಕೆಲವರು ಶಫಿಕ್ ನನ್ನು ಹಿಡಿದುಕೊಂಡಾಗ ಒಮ್ಮೆಲೆ ಭಾರ ಮೈ ಮೇಲೆ ಬಿದ್ದ ಕಾರಣದಿಂದ ಸಾದಿಕ್ ನ ಸೊಂಟ, ಬೆನ್ನಿಗೆ ಏನಾದರೂ ಪೆಟ್ಟು ಬಿದ್ದಿರಬಹುದು ತಕ್ಷಣವೇ ಚಿಕಿತ್ಸೆ ಕೊಡಿಸಿ ಎಂದು ಕಮೆಂಟ್ ಮಾಡಿದ್ದಾರೆ.
Published by:Nalini Suvarna
First published: