HOME » NEWS » Trend » MAN ROTATES HIS HEAD 180 DEGREES IN VIRAL VIDEO STG KVD

ತಲೆಯನ್ನು ಸಲೀಸಾಗಿ ಹಿಂದಕ್ಕೆ ತಿರುಗಿಸುವ ಭೂಪ.. ಈತನ ಚಾಲೆಂಜ್ ಸ್ವೀಕರಿಸಿ ನೀವು ಮಾಡಿದಿರಿ ಜೋಕೆ!

ಈ ವಿಡಿಯೋದಲ್ಲಿರುವ ಚಟುವಟಿಕೆಯ ನಿರ್ವಹಣೆಯನ್ನು ವೃತ್ತಿಪರರು ಮಾತ್ರ ಮಾಡಲಾಗಿದೆ, ಇಲ್ಲವೇ ವೃತ್ತಿಪರರ ನಿಗಾದಲ್ಲಿ ಈ ವಿಡಿಯೋ ಮಾಡಲಾಗಿದೆ. ಹೀಗಾಗಿ ನೀವು ಇದನ್ನು ಮಾಡಲು ಪ್ರಯತ್ನಿಸಬೇಡಿ.

Trending Desk
Updated:June 10, 2021, 7:22 PM IST
ತಲೆಯನ್ನು ಸಲೀಸಾಗಿ ಹಿಂದಕ್ಕೆ ತಿರುಗಿಸುವ ಭೂಪ.. ಈತನ ಚಾಲೆಂಜ್ ಸ್ವೀಕರಿಸಿ ನೀವು ಮಾಡಿದಿರಿ ಜೋಕೆ!
ಸಾಹಸ ಮಾಡುತ್ತಿರುವ ಯುವಕ
  • Share this:
ಯೋಗ ಮಾಡುವಾಗಲೋ ವ್ಯಾಯಾಮ ಮಾಡುವಾಗಲೋ ಸ್ವಲ್ಪ ತಲೆ ತಿರುಗಿಸಿದರೂ ಉಳುಕಿಸಿಕೊಳ್ಳುವವರೇ ಎಚ್ಚರ! ಬೆನ್ನ ಹಿಂದೆ ನಡೆಯುವುದನ್ನೂ ನೋಡುವ ಹಾಗಿದ್ದರೆ ಎಷ್ಟು ಚಂದ ಇರುತ್ತಿತ್ತು ಎಂದು ನೀವು ಅನೇಕ ಬಾರಿ ಅಂದುಕೊಂಡಿರಬಹುದು. ಅದು ಸಾಧ‍್ಯವಾಗದ ಮಾತು ಎಂದು ಬಿಟ್ಟಿರಲೂಬಹುದು. ಆದರೆ ಈ ಮಹಾಶಯ ಮಾತ್ರ 180 ಡಿಗ್ರಿ ಆಯಾಚಿತವಾಗಿ ತಿರುಗಿಸಬಲ್ಲ!ಈ ಸ್ಟಂಟ್ ನಿಮಗೆ ಹೇಳಿಸಿದ್ದಲ್ಲ. ಈತನಂತೆ ತಲೆ ತಿರುಗಿಸಲು ಹೋದರೆ ಕುತ್ತಿಗೆಯೇ ತುಂಡಾದೀತು!

ಜಗತ್ತಿನಲ್ಲಿ ಎಂತೆಂಥ ವಿಚಿತ್ರ ಪ್ರತಿಭೆ ಇರುವ ಮನುಷ್ಯರಿದ್ದಾರೆ ನೋಡಿ. ಹೀಗೆ ಎರಡೂ ಕೈಗಳಿಂದ ಕೆನ್ನೆಗಳನ್ನು ಹಿಡಿದುಕೊಂಡು, ತನ್ನ ತಲೆಯನ್ನು ಸಾಮಾನ್ಯ ಸ್ಥಿತಿಯಿಂದ ಸಂಪೂರ್ಣವಾಗಿ ಬೆನ್ನಿನ ಕಡೆ ತಿರುಗಿಸಿ, ಬಳಿಕ ಅದೇ ರೀತಿ ತನ್ನ ಸ್ವಸ್ಥಾನದಲ್ಲಿಡುವ ದೃಶ್ಯವನ್ನು ಚಿತ್ರೀಕರಿಸಿ, ‘’ನೀವೂ ಧಂ ಇದ್ರೆ ಮಾಡ್ರಪ್ಪಾ’’ ಅಂತ ಬರೆದು ಟಿಕ್ ಟಾಕ್ ನಲ್ಲಿ ಆ ವಿಡಿಯೋವನ್ನು ಶೇರ್ ಮಾಡಿದ್ದಾನೆ. @sheaabutt00 ಎಂಬ ಹೆಸರಿನಲ್ಲಿ ಟಿಕ್ ಟಾಕ್‍ನಲ್ಲಿ ಬಳಕೆದಾರನಾಗಿರುವ ಈತ ವಿಡಿಯೋ ಪೋಸ್ಟ್ ಮಾಡಿದ್ದು, ನೋಡುವುದಕ್ಕೆ ಈ ಸ್ಟಂಟ್ ಭಯಾನಕವಾಗಿ ಕಾಣಿಸುತ್ತಿದೆ. ಅದೀಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಶೇರ್ ಕೂಡ ಆಗುತ್ತಿದೆ. ಈಗಾಗಲೇ 30 ಲಕ್ಷ ವೀಕ್ಷಣೆ ಹಾಗೂ 53 ಸಾವಿರ ಲೈಕ್‍ಗಳು ಇದಕ್ಕೆ ಸಿಕ್ಕಿದೆ.

“ಈ ವಿಡಿಯೋದಲ್ಲಿರುವ ಚಟುವಟಿಕೆಯ ನಿರ್ವಹಣೆಯನ್ನು ವೃತ್ತಿಪರರು ಮಾತ್ರ ಮಾಡಲಾಗಿದೆ, ಇಲ್ಲವೇ ವೃತ್ತಿಪರರ ನಿಗಾದಲ್ಲಿ ಈ ವಿಡಿಯೋ ಮಾಡಲಾಗಿದೆ. ಹೀಗಾಗಿ ನೀವು ಇದನ್ನು ಮಾಡಲು ಪ್ರಯತ್ನಿಸಬೇಡಿ” ಎಂದು ಟಿಕ್‍ ಟಾಕ್ ಕೂಡ ಈ ವಿಡಿಯೋದ ಕೆಳಗೆ ಷರಾ ಬರೆದಿದೆ.

ಸಾಮಾನ್ಯ ಜನರು ಹೀಗೆ ಮಾಡಬಹುದೇ?

ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಬಳಕೆದಾರರು ಈ ಸ್ಟಂಟ್ ಬಗ್ಗೆ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಈತನಿಗೆ ಪ್ರತಿಭೆ ಇದ್ದಿದ್ದು ಗೊತ್ತಾಗಿದ್ದು ಹೇಗೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಏನು ಮಾಡಲು ಹೋದಾಗ ಈ ಪ್ರತಿಭೆ ಅನಾವರಣಗೊಂಡಿದೆ ಎಂದು ಇನ್ನು ಕೆಲವರು ಪ್ರಶ್ನಿಸಿದ್ದಾರೆ.

ಇಂಥ ಸ್ಟಂಟ್‌ಗಳು ಸಾಮಾನ್ಯವಾಗಿ ಎಲ್ಲರೂ ಮಾಡುವಂಥದ್ದಲ್ಲ. ಸಾಮಾನ್ಯರಿಗಿಂತ ಭಿನ್ನ ಆರೋಗ್ಯ ಸ್ಥಿತಿ ಇರುವವರು ತಮ್ಮ ದೌರ್ಬಲ್ಯವನ್ನೇ ಸಾಮರ್ಥ್ಯವಾಗಿ ಪರಿವರ್ತಿಸಿಕೊಳ್ಳುತ್ತಾರೆ.

ಡಾ. ಸಿಮ್ರಾನ್ ಡಿಯೋ ಎಂಬುವರು ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿ, “ಈ ರೀತಿ ಬಹಳ ಕಡಿಮೆ ಮಂದಿ ಮಾತ್ರ ಮಾಡಬಲ್ಲರು. ಹೈಪರ್ ಮೊಬೈಲ್ ಕೀಲುಗಳನ್ನು ಹೊಂದಿರುವವರು ಅಥವಾ ಸಂಯೋಜಕ ಅಂಗಾಂಶದ ಸಮಸ್ಯೆಯಿರುವವರು ಮಾತ್ರ ಇದನ್ನು ಮಾಡಬಲ್ಲರು” ಎಂದಿದ್ದಾರೆ.
Youtube Video


“ಸ್ನಾಯುಗಳು, ಅಸ್ಥಿರಜ್ಜುಗಳು ಹಾಗೂ ಸ್ನಾಯು ರಜ್ಜುಗಳು ಅಗತ್ಯಕ್ಕಿಂತ ಹೆಚ್ಚು ವಿಶಾಲವಾದವರಲ್ಲಿ ಕೀಲುಗಳು ಉಳಿದವರಿಗಿಂತ ಹೆಚ್ಚು ಬಾಗಬಲ್ಲವು. ಹಾಗಂತ ಇಂಥ ಸ್ಟಂಟ್ ಅನ್ನು ಪ್ರಯತ್ನಿಸುವುದು ಬಹಳ ಅಪಾಯಕಾರಿಯಾಗಿದೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ದೇಹದ ಒಂದು ಭಾಗ ಚಲನಾಶೀಲತೆ ಕಳೆದುಕೊಂಡು ಪಾರ್ಶ್ವವಾಯು ಉಂಟಾದ ಸ್ಥಿತಿ ಆಗಬಹುದು. ತಲೆಯನ್ನು ಬೇಕಾಬಿಟ್ಟಿ ತಿರುಗಿಸುವಾಗ ತಲೆ ಮತ್ತು ಕುತ್ತಿಗೆ ಭಾಗದ ನರಗಳಲ್ಲಿ ರಕ್ತ ಪೂರೈಕೆ ವ್ಯತ್ಯಯವಾಗಿ ಪಕ್ಷವಾತದ ಸಮಸ್ಯೆಯೂ ಉಂಟಾಗಬಹುದು” ಎಂದು ಡಾ.ಸಿಮ್ರಾನ್ ಡಿಯೋ ಎಚ್ಚರಿಸಿದ್ದಾರೆ.

ವಿಡಿಯೋ ಸುಮ್ಮನೆ ನೋಡಿ ಆನಂದಿಸಿ. ಮತ್ತೆ ಅದನ್ನು ರಿಪೀಟ್ ಮಾಡಲು ಹೋಗದಿರಿ. ಜೀವಕ್ಕೇ ಆಪತ್ತು ಬಂದೀತು, ಜೋಕೆ!
Published by: Kavya V
First published: June 10, 2021, 7:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories