Viral Video: ಈತ ಸ್ಕೂಟರ್ ಓಡಿಸ್ತಿದ್ದಾನೋ, ಅಥವಾ ಸ್ಕೂಟರ್ ಇವನನ್ನ ಓಡಿಸ್ತಿದ್ಯೋ! ಹೀಗೂ ಇರ್ತಾರಪ್ಪ ಜನ

ಯುವಕನೊಬ್ಬ ಹೀಗೆ ತನ್ನ ಸ್ಕೂಟರ್ ಮೇಲೆ ಭಾರಿ ಪ್ರಮಾಣದ ಸರಕುಗಳನ್ನು ತುಂಬಿಕೊಂಡು ತನಗೆ ಆ ಗಾಡಿಯ ಮೇಲೆ ಕುಳಿತುಕೊಳ್ಳಲು ಸ್ಥಳವಿಲ್ಲದೆ ಪೂರ್ತಿ ಹಿಂದಿನ ಸೀಟಿನ ಮೇಲೆ ಕುಳಿತು ಸ್ಕೂಟರ್ ಓಡಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

 ಸ್ಕೂಟರ್ ಸವಾರ

ಸ್ಕೂಟರ್ ಸವಾರ

  • Share this:
ದ್ವಿಚಕ್ರ ವಾಹನದ (Two Wheeler) ಮೇಲೆ ಕೇವಲ ಇಬ್ಬರು ವ್ಯಕ್ತಿಗಳು ಮಾತ್ರ ಸವಾರಿ ಮಾಡಬಹುದು, ಅಬ್ಬಬ್ಬಾ ಎಂದರೆ ಇನ್ನೊಂದು ಚಿಕ್ಕ ಮಗು (Baby) ಅವರ ಮಧ್ಯೆದಲ್ಲಿ ಕುಳಿತು ಸವಾರಿ ಮಾಡಬಹುದು. ಮೂವರು ವ್ಯಕ್ತಿಗಳು ಬೈಕ್ (Bike) ಮೇಲೆ ಕೂತು ಸವಾರಿ ಮಾಡುವುದು ಸರಿಯಲ್ಲ, ಅಪಾಯಕ್ಕೆ ದಾರಿ ಮಾಡಿಕೊಡಬಹುದು ಅಂತ ಪೊಲೀಸರು (Police) ಸಾವಿರ ಸಾರಿ ಹೇಳಿದರೂ ನಮ್ಮ ಜನರು ಅವರಿಗೆ ಅನ್ನಿಸಿದ್ದನ್ನೆ ಮಾಡಲು ಹೆಚ್ಚು ಇಷ್ಟ ಪಡುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದಷ್ಟೇ ಅಲ್ಲದೆ ಯಾವುದಾದರೂ ಅಂಗಡಿ ಇಟ್ಟುಕೊಂಡರಂತೂ ಮುಗಿದೇ ಹೋಯ್ತು, ಮಾರ್ಕೆಟ್ ನಿಂದ (Market) ಅಂಗಡಿಗೆ ಬೇಕಾದ ಎಲ್ಲಾ ಸಾಮಾನುಗಳನ್ನು ದೊಡ್ಡ ದೊಡ್ಡ ಬ್ಯಾಗ್ ಗಳಲ್ಲಿ ತುಂಬಿಸಿಕೊಂಡು ಬೈಕ್ ನ ಎರಡು ಹ್ಯಾಂಡಲ್ ಗಳಿಗೆ ಎರಡೆರಡು ಬ್ಯಾಗ್ (Bag) ಸಿಕ್ಕಿಸಿಕೊಂಡು ಮಧ್ಯದಲ್ಲಿ ಒಂದು ದೊಡ್ಡ ಬ್ಯಾಗ್ ಇರಿಸಿಕೊಂಡು ಹೋಗುವುದು ಸಾಮಾನ್ಯ.

ಇಷ್ಟು ಸಾಕಾಗಲ್ಲ ಅಂತ ಹಿಂದೆ ಬೆನ್ನಿಗೆ ಒಂದು ಬ್ಯಾಗ್ ಹಾಕಿಕೊಂಡು, ಹಿಂದೆ ಸ್ವಲ್ಪ ಖಾಲಿ ಸ್ಥಳ ಮಿಕ್ಕಿದ್ದರೆ, ಅಲ್ಲಿ ಒಂದು ಬ್ಯಾಗ್ ಇರಿಸಿಕೊಂಡು ತಮಗೆ ಆ ಬೈಕ್ ಓಡಿಸಲು ಎಷ್ಟೇ ಕಷ್ಟವಾದರೂ ಇಂತಹ ಕೆಟ್ಟ ಮತ್ತು ಅಪಾಯಕರವಾದ ಸವಾರಿಗೆ ಮುಂದಾಗುವುದನ್ನು ನಾವು ಅನೇಕ ಬಾರಿ ರಸ್ತೆಗಳಲ್ಲಿ ಹೋಗಬೇಕಾದರೆ ನೋಡಿರುತ್ತೇವೆ.

ಸ್ಕೂಟರ್ ನಲ್ಲಿ ಸರಕುಗಳನ್ನು ತುಂಬಿಕೊಂಡು ಹೋಗುತ್ತಿರುವ ವ್ಯಕ್ತಿ
ತಾನು ಎಷ್ಟೇ ಅಪಾಯದಲ್ಲಿದ್ದರೂ ಪರವಾಗಿಲ್ಲ ಅಂತ ತನ್ನ ದ್ವಿಚಕ್ರ ವಾಹನದಲ್ಲಿ ಗರಿಷ್ಠ ಸರಕುಗಳನ್ನು ಸಾಗಿಸಲೇಬೇಕು ಅಂತ ಪಣ ತೊಟ್ಟಂತಿದೆ ಈ ಯುವಕ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಯುವಕನೊಬ್ಬ ಹೀಗೆ ತನ್ನ ಸ್ಕೂಟರ್ ಮೇಲೆ ಭಾರಿ ಪ್ರಮಾಣದ ಸರಕುಗಳನ್ನು ತುಂಬಿಕೊಂಡು ತನಗೆ ಆ ಗಾಡಿಯ ಮೇಲೆ ಕುಳಿತುಕೊಳ್ಳಲು ಸ್ಥಳವಿಲ್ಲದೆ ಪೂರ್ತಿ ಹಿಂದಿನ ಸೀಟಿನ ಮೇಲೆ ಕುಳಿತು ಸ್ಕೂಟರ್ ಓಡಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Expensive Buildings: ವಿಶ್ವದ 5 ಅತ್ಯಂತ ದುಬಾರಿ ಕಟ್ಟಡಗಳಿವು! ಇದನ್ನು ನಿರ್ಮಿಸಲು ಖರ್ಚು ಮಾಡಿದ ವೆಚ್ಚ ಕೇಳಿದ್ರೆ ತಲೆ ತಿರುಗುತ್ತೆ

ಟ್ವಿಟ್ಟರ್ ಅಲ್ಲಿ ವೈರಲ್ ಆದ ವಿಡಿಯೋಗೆ ಪೊಲೀಸರು ಹೇಳಿದ್ದೇನು?
ತೆಲಂಗಾಣ ಪೊಲೀಸರ ಗಮನಕ್ಕೆ ಈ ವೀಡಿಯೋ ಬಿದ್ದಿದೆ. ಈ ಕ್ಲಿಪ್ ಅನ್ನು ಆರಂಭದಲ್ಲಿ ಟ್ವಿಟರ್ ಬಳಕೆದಾರ ಸಾಗರ್ ಎಂಬಾತ ಹಂಚಿಕೊಂಡಿದ್ದು "ನನ್ನ 32 ಜಿಬಿ ಫೋನ್ 31.9 ಜಿಬಿ ಡೇಟಾವನ್ನು ಹೊಂದಿದೆ" ಎಂದು ವ್ಯಂಗ್ಯವಾಗಿ ಶೀರ್ಷಿಕೆಯನ್ನು ಬರೆದುಕೊಂಡಿದ್ದಾನೆ. ನಂತರ ಇದಕ್ಕೆ ತೆಲಂಗಾಣ ಪೊಲೀಸರು ವೀಡಿಯೋವನ್ನು ಮರುಹಂಚಿಕೊಂಡು ‘ಮೊಬೈಲ್ ಫೋನ್ ಹಾನಿಗೊಳಗಾದರೂ ಸಹ ಅದರಲ್ಲಿರುವ ಡೇಟಾವನ್ನು ಹಿಂಪಡೆಯಬಹುದು, ಆದರೆ ಜೀವನವು ಹಾಗಲ್ಲ’ ಅಂತ ಎಚ್ಚರಿಕೆ ನೀಡುವಂತಹ ಒಂದು ಸಂದೇಶವನ್ನು ಬರೆದಿದ್ದಾರೆ.ವಿಡಿಯೋದಲ್ಲಿರುವುದೇನು?
ಈ ಸಣ್ಣ ಕ್ಲಿಪ್ ನಲ್ಲಿ ಒಬ್ಬ ಯುವಕ ತನ್ನ ಸ್ಕೂಟರ್ ನಲ್ಲಿ ಒಂದು ಟನ್ ವಸ್ತುಗಳನ್ನು ಇರಿಸಿಕೊಂಡು ಹೋಗುತ್ತಿರುವುದನ್ನು ನೀವು ಕಾಣಬಹುದು. ತುಂಬಾನೇ ಕುತೂಹಲ ಮೂಡಿಸುವ ಸಂಗತಿಯೆಂದರೆ, ಈ ವ್ಯಕ್ತಿ ಸ್ಕೂಟರ್ ಓಡಿಸುವಾಗ ಹೆಲ್ಮೆಟ್ ಧರಿಸಿದ್ದನು, ಆದರೆ ಅವನ ಪಾದಗಳು ಮಾತ್ರ ರಸ್ತೆಯನ್ನು ಸ್ಪರ್ಶಿಸುತ್ತಿದ್ದವು.

ವಿಡಿಯೋ ನೋಡಿ ವ್ಯಂಗ್ಯವಾಡಿದ ನೆಟ್ಟಿಗರು
ಈ ವೀಡಿಯೋ ಇದುವರೆಗೆ 7,91,900 ವೀಕ್ಷಣೆಗಳನ್ನು, 25,000ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ವೀಡಿಯೋ ನೋಡಿದ ಕೆಲವರು ಈ ವ್ಯಕ್ತಿಯನ್ನು ಗೇಲಿ ಮಾಡಿದರು ಮತ್ತು ಉಲ್ಲಾಸಭರಿತ ಪ್ರತಿಕ್ರಿಯೆಗಳನ್ನು ನೀಡಿದರು. ಇತರರು ಇದು ತುಂಬಾನೇ ಅಪಾಯಕಾರಿ ಕೃತ್ಯ ಎಂದು ಹೇಳಿದರು. ಕೆಲ ನೆಟ್ಟಿಗರು ಈ ವ್ಯಕ್ತಿಯ ಜೀವನ ಹೋರಾಟದ ಬಗ್ಗೆ ಸಹಾನುಭೂತಿ ಸಹ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಬಬಲ್ ಜೊತೆಗೆ ಈ ರಕೂನ್​ಗಳು ಹೇಗೆ ಆಡಿವೆ ಗೊತ್ತಾ! ಈ ವಿಡಿಯೋ ಒಮ್ಮೆ ನೋಡಿ

"ಹೆಲ್ಮೆಟ್ ಧರಿಸುವ ಮೂಲಕ ಸಂಚಾರ ನಿಯಮಗಳನ್ನು ಅನುಸರಿಸುವ ಒಳ್ಳೆಯ ವ್ಯಕ್ತಿ" ಎಂದು ಒಬ್ಬ ಬಳಕೆದಾರ ವ್ಯಂಗ್ಯವಾಗಿ ಬರೆದಿದ್ದಾರೆ. ಇನ್ನೊಬ್ಬರು "ಈ ಸವಾರಿಯ ಹಿಂದಿನ ಹೋರಾಟವು ಹೃದಯ ವಿದ್ರಾವಕವಾಗಿದೆ... ಸುರಕ್ಷಿತ ಸ್ನೇಹಿತನೇ" ಅಂತ ಕಾಮೆಂಟ್ ಮಾಡಿದ್ದಾರೆ. ಮೂರನೆಯವರು "ದಯವಿಟ್ಟು ಅವನಿಗೆ ದೊಡ್ಡ ದಂಡವನ್ನು ವಿಧಿಸಿ. ಭಾರಿ ದಂಡ ವಿಧಿಸಿದರೆ ಮಾತ್ರ ಇಂತಹ ತಪ್ಪನ್ನು ಅವನು ತನ್ನ ಜೀವನದಲ್ಲಿ ಮತ್ತೊಮ್ಮೆ ಮಾಡುವುದಿಲ್ಲ ಜೋಕರ್ ಗಳು ಕಾನೂನನ್ನು ಲಘುವಾಗಿ ಪರಿಗಣಿಸುತ್ತಾರೆ" ಎಂದು ಬರೆದಿದ್ದಾರೆ.
Published by:Ashwini Prabhu
First published: