Dirty Girlfriend- ನನ್ನ ಗೆಳತಿ ಸ್ನಾನ ಮಾಡಲ್ಲ, ಆಕೆಯೊಂದಿಗೆ ಮಲಗೋಕೆ ಆಗ್ತಿಲ್ಲ: ಹುಡುಗನೊಬ್ಬನ ಅಳಲು

Girlfriend Bathroom Secrets- ನನ್ನ ಗರ್ಲ್ ಫ್ರೆಂಡ್ ತಿಂಗಳಿಗೆ ಎರಡು ಬಾರಿ ಮಾತ್ರ ಸ್ನಾನ ಮಾಡುತ್ತಾಳೆ. ದುರ್ನಾತದಿಂದಾಗಿ ಆಕೆಯ ಜೊತೆ ಒಂದೇ ಬೆಡ್​ನಲ್ಲಿ ಮಲಗಲು ಆಗುತ್ತಿಲ್ಲ ಎಂದು ಯುವಕನೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಅಳಲು ತೋಡಿಕೊಂಡಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
    ಸಿಡ್ನಿ: ಯುವಕನೋರ್ವ ತನ್ನ ಗೆಳತಿ 15 ದಿನಕ್ಕೊಮ್ಮೆ ಸ್ನಾನ (Bath)ಕ್ಕೊಮ್ಮೆ ಮಾಡುತ್ತಾಳೆ ಎಂದು ಸೋಶಿಯಲ್ ಮೀಡಿಯಾ(Social Media)ದಲ್ಲಿ ಹಂಚಿಕೊಂಡಿದ್ದಾನೆ. ತಿಂಗಳಿಗೆ ಎರಡು ಬಾರಿ ಸ್ನಾನ ಮಾಡೋದರಿಂದ ಆಕೆಯ ದೇಹದಿಂದ ದುರ್ನಾತ ಬರುತ್ತದೆ. ಅನಿವಾರ್ಯವಾಗಿ ಹೊರಗಿನ ಸೋಫಾದಲ್ಲಿ ಮಲಗುವಂತಾಗಿದೆ ಎಂದು ಯುವಕ (boyfriend) ನೋವು ತೋಡಿಕೊಂಡಿದ್ದಾನೆ. ಇದರ ಜೊತೆಗೆ ಗೆಳತಿಯ ಹಲವು ವಿಷಯಗಳನ್ನು ಹಂಚಿಕೊಂಡಿ ರುವ ಯುವಕ ಇಬ್ಬರ ಗುರುತು ಬಿಟ್ಟುಕೊಟ್ಟಿಲ್ಲ.

    ಮಿರರ್ ಯುಕೆ ವರದಿ ಪ್ರಕಾರ, ಸೋಶಿಯಲ್ ಮೀಡಿಯಾ ರೆಡಿಟ್ (Reddit)ನಲ್ಲಿ ಯುವಕ ತನ್ನ ಗೆಳತಿ (Girl Friend)ಯ ಗುಟ್ಟು ರಟ್ಟು ಮಾಡಿದ್ದಾನೆ. ಆಕೆಯ ದೇಹದಿಂದ ಬರುವ ದುರ್ನಾತ ತಾಳಲಾರದೇ ನಾನು ಪ್ರತ್ಯೇಕವಾಗಿ ಮಲಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. 15 ದಿನಕ್ಕೊಮ್ಮೆ ಅಂದ್ರೆ ತಿಂಗಳಿಗೆ ಎರಡು ಬಾರಿ ಸ್ನಾನ ಮಾಡೋದರಿಂದ ಕೆಟ್ಟ ವಾಸನೆ ಬರುತ್ತಾಳೆ ಎಂದು ಹೇಳಿಕೊಂಡಿದ್ದಾನೆ.

    ನಾವು ಮೂರು ವರ್ಷಗಳಿಂದ ರಿಲೇಶನ್‍ಶಿಪ್ ನಲ್ಲಿದ್ದೇವೆ. ಆದ್ರೆ ಮೊದಲು ಇಬ್ಬರೂ ಪ್ರತ್ಯೇಕ ಇದ್ದರಿಂದ ಆಕೆ ಸ್ನಾನದ ಗುಟ್ಟು ತಿಳಿದಿರಲಿಲ್ಲ. ಇಬ್ಬರು ಜೊತೆಯಾಗಿರುವ ಕುರಿತು ನಿರ್ಧಾರ ತೆಗೆದುಕೊಂಡ ಬಳಿಕ ಆಕೆಯ ಸ್ನಾನದ ರಹಸ್ಯ ಬಯಲಾಗಿದೆ. ವಿಶೇಷ ದಿನಗಳಿದ್ರೆ ಅಪರೂಪ ಎಂಬಂತೆ ವಾರಕ್ಕೊಮ್ಮೆ ಸ್ನಾನ ಮಾಡುತ್ತಾಳೆ. ನಾನು ಆಕೆಯನ್ನು ಮನಸಾರೆ ಪ್ರೀತಿಸುತ್ತೇನೆ. ಏನ್ ಮಾಡೋದು ಆಕೆ ಸ್ನಾನ ಮಾಡಲ್ಲ ಅಂತ ಈ ಹುಡುಗ ನೋವು ತೋಡಿಕೊಂಡಿದ್ದಾನೆ.

    ಇದನ್ನೂ ಓದಿ: Facebook Cheating: ಫೇಸ್​ಬುಕ್​ನಲ್ಲಿ ನಗ್ನ ಕರೆ ಮಾಡಿದ ಮಾಯಾಂಗನೆ, ವಿಡಿಯೋ ಕಾಲ್​ ರೆಕಾರ್ಡ್ ಮಾಡಿ ಬ್ಲ್ಯಾಕ್​ಮೇಲ್

    ಸ್ನಾನದ ಬಗ್ಗೆ ಆಕೆಯ ಜೊತೆ ಮಾತನಾಡಿದ ದಿನದಿಂದ ನಮ್ಮಿಬ್ಬರ ಮಧ್ಯೆ ಮಾತು ಸಹ ನಿಂತಿದೆ. ಒಬ್ಬರು ಮತೊಬ್ಬರಿಗೆ ಮುಖಕೊಟ್ಟು ಮಾತಾಡೋದು ಕಡಿಮೆಯಾಗಿದೆ. ಸ್ನಾನದ ವಿಷಯಕ್ಕೆ ಆಕೆ ನನ್ನ ಮೇಲೆ ಮುನಿಸಿಕೊಂಡಿದ್ದಾಳೆ. ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ತೋಚುತ್ತಿಲ್ಲ ಎಂದು ಸಲಹೆ ಕೇಳಿದ್ದಾನೆ.

    ಯುವಕನ ಪೋಸ್ಟ್ ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಬ್ರೇಕಪ್ ಮಾಡಿಕೊಂಡು ಭವಿಷ್ಯದತ್ತ ಗಮನ ನೀಡು ಎಂದು ಹೇಳಿದ್ದಾರೆ. ಕೆಲವರು ಗೆಳತಿಗೆ ಸ್ನಾನ ಮಾಡೋದರ ಲಾಭ ತಿಳಿಸಿ ಮನವೊಲಿಸು. ಎಲ್ಲವೂ ಒಂದೇ ದಿನದಲ್ಲಿ ಬದಲಾಗಲ್ಲ. ಇಂತಹ ವಿಷಯಗಳು ಬಂದಾಗ ತಜ್ಞ ಮನೋವೈದ್ಯರ ಸಲಹೆ ಪಡೆದುಕೊಳ್ಳಿ ಎಂದು ಮಾರ್ಗದರ್ಶನ ನೀಡಿದ್ದಾರೆ.

    ಇದನ್ನೂ ಓದಿ: ಹೇಗಿದ್ದವರು ಹೇಗಾಗಿದ್ದಾರೆ ಗೊತ್ತಾ ಹಾಲಿವುಡ್​ ನಟ Tom Cruise: ಪ್ಲಾಸ್ಟಿಕ್​ ಸರ್ಜರಿ ಎಫೆಕ್ಟಾ ಇದು ಎಂದ ನೆಟ್ಟಿಗರು..!

    65 ವರ್ಷಗಳಿಂದ ಸ್ನಾನ ಮಾಡದ ವ್ಯಕ್ತಿ:

    ಇರಾನಿನ (Iran) 83 ವರ್ಷದ ಅಮೌ ಹಾಜಿ (Amou Haji) ವಿಶ್ವದ ಕೊಳಕು ವ್ಯಕ್ತಿ(World Dirtiest Man)ಯಾಗಿದ್ದಾನೆ. ಅಮೌ ಹಾಜಿ ಕಳೆದ 65 ವರ್ಷಗಳಿಂದ ಸ್ನಾನ ಮಾಡಿಲ್ಲ. ನನಗೆ ನೀರು ಅಂದ್ರೆ ಭಯ. ಆದ್ದರಿಂದ ನಾನು ಸ್ನಾನ ಮಾಡಲ್ಲ. ಕಳೆದ ಆರು ದಶಕಗಳಿಂದ ಸ್ನಾನ ಮಾಡಿಲ್ಲ. ಒಂದು ವೇಳೆ ಸ್ನಾನ ಮಾಡಿದ್ರೆ, ನಾನು ಕಾಯಿಲೆಗೆ ತುತ್ತಾಗಬಹುದು ಎಂದು ಅಮೌ ಹಾಜಿ ಆತಂಕ ವ್ಯಕ್ತಪಡಿಸುತ್ತಾನೆ.

    - ಮಹಮ್ಮದ್ ರಫೀಕ್ ಕೆ.
    Published by:Vijayasarthy SN
    First published: