Viral News: ಜೀವದ ಹಂಗು ತೊರೆದು ರೈಲಿನಡಿಗೆ ಸಿಲುಕಿದ ನಾಯಿಯ ರಕ್ಷಿಸಿದ ವ್ಯಕ್ತಿ

Dog Rescue: ನಾಯಿಯೊಂದು ತನಗೆ ಅರಿವಿಲ್ಲದಂತೆ ರೈಲ್ವೆ ಹಳಿಯ ಮೇಲೆ ಸಿಲುಕಿ ಹಾಕಿಕೊಂಡಿದೆ.. ಇದೇ ಸಮಯಕ್ಕೆ ಎದುರುಗಡೆಯಿಂದ ರೈಲು ಬರುತ್ತಿದೆ.. ಇನ್ನೇನು ಕೆಲವೇ ಕ್ಷಣಗಳಲ್ಲಿ ರೈಲು ನಾಯಿ ಸಮೀಪ ಸಮೀಪಿಸುತ್ತಿದೆ ಎನ್ನುವ ಹಂತದಲ್ಲಿ ಇಂದಿನಿಂದ ಓಡಿ ಬಂದ ವ್ಯಕ್ತಿಯೊಬ್ಬ ತನ್ನ ಜೀವದ ಹಂಗು ತೊರೆದು ನಾಯಿಯನ್ನು ರಕ್ಷಣೆ ಮಾಡಿದ್ದಾನೆ

ನಾಯಿಯ ರಕ್ಷಣೆ

ನಾಯಿಯ ರಕ್ಷಣೆ

 • Share this:
  ಇತ್ತೀಚಿನ ದಿನಗಳಲ್ಲಿಯ ಮಾನವೀಯತೆ(Humanity) ಎಂಬುದು ಮರೆಯಾಗಿ ಹೋಗಿಬಿಟ್ಟಿದೆ . ಯಾರಾದರೂ ರಸ್ತೆಬದಿಯಲ್ಲಿ(Road side) ಸಿಲುಕಿ ನರಳಾಡುತ್ತಿದ್ದಾರೆ ಎಂದರೂ ಸಹ ಅವರಿಗೆ ತೊಟ್ಟು ನೀರು ಕೊಟ್ಟು ಅವರ ಜೀವ ಉಳಿಸಲು ಮುಂದಾಗದೇ ಕಂಬಗಳಂತೆ ನಿಂತು ನೋಡುವ ಜನರು ಇದ್ದಾರೆ. ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ಕೆಲವರು ಮಾತ್ರ ತಮ್ಮ ಪ್ರಾಣ ಅಪಾಯದಲ್ಲಿ(Danger) ಸಿಲುಕಿದ್ದರು ಸಹ ಜನರ ಪ್ರಾಣ ಉಳಿಸಲು ಮುಂದಾಗುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಅನೇಕ ಬಾರಿ ಸಂಕಷ್ಟದಲ್ಲಿ ಸಿಲುಕಿ ಇನ್ನೇನು ಪ್ರಾಣ ಹೋಯಿತು ಎನ್ನುವವರ ಜೀವನವನ್ನು ದೇವದೂತರ(God) ಬರುವ ಅನೇಕರು ಉಳಿಸಿ ಮಾದರಿಯಾಗಿದ್ದಾರೆ.. ಅದರಲ್ಲೂ ರೈಲ್ವೆ(Train) ಹಳಿಗಳ ಮೇಲೆ ಬಿದ್ದವರ ಪ್ರಾಣ ಇನ್ನೇನು ಕ್ಷಣಮಾತ್ರದಲ್ಲಿ ಹೋಗಿಬಿಡ್ತು ಎನ್ನುವಾಗ ಅದೆಲ್ಲಿಂದಲೋ ಬಂದ ಆಪತ್ಬಾಂಧವರು ಅವರನ್ನು ಜೀವದ ಹಂಗುತೊರೆದು ರಕ್ಷಣೆ ಮಾಡುತ್ತಾರೆ.. ಇದಕ್ಕೆ ಸಾಕ್ಷಿ ಎನ್ನುವಂತೆ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ಅದೇ ರೀತಿ ಈಗ ವ್ಯಕ್ತಿಯೊಬ್ಬ ಮಾತು ಬಾರದ ಮೂಕ ಪ್ರಾಣಿ ಶ್ವಾನದ ಪ್ರಾಣವನ್ನು ಜೀವದ ಹಂಗು ತೊರೆದು ಉಳಿಸಿ ಮನವಿಯತೆ ಮೆರೆದಿದ್ದಾನೆ

  ರೈಲ್ವೆ ಹಳಿ ಮೇಲೆ ಸಿಲುಕಿದ ನಾಯಿಯ ರಕ್ಷಣೆ

  ನಾಯಿಯೊಂದು ತನಗೆ ಅರಿವಿಲ್ಲದಂತೆ ರೈಲ್ವೆ ಹಳಿಯ ಮೇಲೆ ಸಿಲುಕಿ ಹಾಕಿಕೊಂಡಿದೆ.. ಇದೇ ಸಮಯಕ್ಕೆ ಎದುರುಗಡೆಯಿಂದ ರೈಲು ಬರುತ್ತಿದೆ.. ಇನ್ನೇನು ಕೆಲವೇ ಕ್ಷಣಗಳಲ್ಲಿ ರೈಲು ನಾಯಿ ಸಮೀಪ ಸಮೀಪಿಸುತ್ತಿದೆ ಎನ್ನುವ ಹಂತದಲ್ಲಿ ಇಂದಿನಿಂದ ಓಡಿ ಬಂದ ವ್ಯಕ್ತಿಯೊಬ್ಬ ತನ್ನ ಜೀವದ ಹಂಗು ತೊರೆದು ನಾಯಿಯನ್ನು ರಕ್ಷಣೆ ಮಾಡಿದ್ದಾನೆ. ನಾಯಿಯ ಜೀವ ಉಳಿಸಲು ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿರುವುದು ಮಾನವೀಯತೆಗೆ ನಿಜವಾದ ನಿದರ್ಶನ. ಈ ಆಘಾತಕಾರಿ ವೀಡಿಯೊವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ, ನಾಯಿಯನ್ನು ಉಳಿಸಲು ವ್ಯಕ್ತಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ ಎಂಬ ಶೀರ್ಷಿಕೆಯಡಿ ಹಂಚಿಕೊಂಡಿದ್ದಾರೆ ಮತ್ತು ಮಾನವೀಯತೆಯ ನಿಜವಾದ ನಾಯಕ ಎಂದು ಹೇಳಿದ್ದಾರೆ.

  ಇದನ್ನೂ ಓದಿ: ಹೆಲಿಕಾಪ್ಟರ್​ ಪತನ! ಸತತ 12 ಗಂಟೆಗಳ ಕಾಲ ಸಮುದ್ರದ ಮಧ್ಯದಲ್ಲಿ ಈಜಿ ದಡ ಸೇರಿ ಬದುಕುಳಿದ ಸಚಿವ!

  ಕೊಂಚ ಯಾಮಾರಿದ್ರೆ ನಾಯಿಯ ಜೊತೆಗೆ ವ್ಯಕ್ತಿ ಪ್ರಾಣವೇ ಹೋಗುತ್ತಿತ್ತು

  ಇನ್ನು ರೈಲು ಹಿಂದಿನಿಂದ ಅತಿವೇಗವಾಗಿ ಬರುತ್ತಿರುವುದನ್ನು ನೋಡಿದರೂ ಸಹ ರೈಲ್ವೆ ಹಳಿಯ ಮೇಲೆ ಸಿಲುಕಿದ್ದ ಶ್ವಾನದ ರಕ್ಷಣೆ ಮಾಡಲು ವ್ಯಕ್ತಿ, bತನ್ನ ಜೀವವನ್ನು ಲೆಕ್ಕಿಸದೆ ರೈಲ್ವೆ ಟ್ರ್ಯಾಕ್ ಮೇಲೆ ಓಡಿ ನಾಯಿಯ ರಕ್ಷಣೆ ಮಾಡಿದ್ದಾನೆ.. ಆದರೆ ಕೊಂಚ ತಡವಾಗಿ ಇದ್ದರೂ ಸಹ ನಾಯಿ ಮತ್ತು ವ್ಯಕ್ತಿ ಇಬ್ಬರ ಪ್ರಾಣ ಹೋಗುವ ಸಾಧ್ಯತೆ ಇತ್ತು.. ಆದರೆ ನಾಯಿ ಹಾಗೂ ವ್ಯಕ್ತಿಯ ಆಯುಷ್ಯ ಗಟ್ಟಿ ಇದ್ದಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.. ವಿದ್ಯಾ ಈ ವಿಡಿಯೋ ಸೋಶಿಯಲ್ ಮೀಡಿಯಾ ತುಂಬಾ ವೈರಲ್ ಆಗುತ್ತಿದೆ ಜೀವದ ಹಂಗು ತೊರೆದು ಮೂಕಪ್ರಾಣಿಯ ರಕ್ಷಣೆ ಮಾಡಿದ ವ್ಯಕ್ತಿಯ ಸಾಹಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  ಇದನ್ನೂ ಓದಿ: ಒಂದು ಮೀನಿಗಾಗಿ 5,600ಕ್ಕೂ ಹೆಚ್ಚು ಬಾರಿ ಸಮುದ್ರದಾಳದಲ್ಲಿ ಹುಡುಕಾಟ ನಡೆಸಿದ್ರು, ಅಂತೂ ಸಿಕ್ತು!

  ಇನ್ನು ಹೃದಯಸ್ಪರ್ಶಿ ವಿಡಿಯೋ ಇಲ್ಲಿಯವರೆಗೆ 9 ಸಾವಿರಕ್ಕೂ ಹೆಚ್ಚು ವ್ಯೂವ್ಸ್​ ಪಡೆದಿದೆ. ಕಮೆಂಟ್​ ಮೂಲಕ ಅನೇಕರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ಮನುಷ್ಯನಿಗೆ ಹೆಚ್ಚಿನ ಗೌರವ ಸಲ್ಲಬೇಕು ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಮನುಷ್ಯ ಮತ್ತೊಬ್ಬ ಮನುಷ್ಯನ ಬಗ್ಗೆ ತಲೆಕೆಡಿಸಿಕೊಳ್ಳದ ಇಂದಿನ ಕಾಲದಲ್ಲಿ ನಾಯಿಯ ಜೀವ ಉಳಿಸಲು ತನ್ನ ಪ್ರಾಣದ ಬಗ್ಗೆ ತಲೆಕೆಡಿಸಿಕೊಂಡ ಆತನಿಗೆ ಸಲಾಂ ಎಂದು ಕಮೆಂಟ್​ ಮಾಡಿದ್ದಾರೆ.
  Published by:ranjumbkgowda1 ranjumbkgowda1
  First published: