ಅವಶೇಷಗಳ ಅಡಿಯಿಂದ 72 ಗಂಟೆಗಳ ಬಳಿಕ ಬದುಕಿ ಬಂದವ ಮೊದಲು ವಿಚಾರಿಸಿದ್ದು ತನ್ನ ಚಪ್ಪಲಿಗಳನ್ನು!

ಸಾಮಾಜಿಕ ಮಾಧ್ಯಮಗಳು ಕೇವಲ ಮಾಹಿತಿಗಳನ್ನು ಮಾತ್ರವಲ್ಲ, ಬಹಳಷ್ಟು ಮನರಂಜನೆಯನ್ನು ಕೂಡ ನೀಡುತ್ತವೆ. ಸಾಮಾಜಿಕ ಜಾಲತಾಣದ ಕೆಲವೊಂದು ಸುದ್ದಿಗಳಲ್ಲಿ ಕೇವಲ ಮಾಹಿತಿ ಮಾತ್ರ ಇದ್ದರೆ, ಇನ್ನು ಕೆಲವು ಸುದ್ದಿಗಳಲ್ಲಿ ಮನರಂಜನೆ ಮಾತ್ರ ಇರುತ್ತದೆ.

 ಚಪ್ಪಳಿ (ಫೋಟೋ: ಗೂಗಲ್ )

ಚಪ್ಪಳಿ (ಫೋಟೋ: ಗೂಗಲ್ )

 • Share this:

  ನಗು ತರಿಸುವ ಸುದ್ದಿಯೊಂದು ಇತ್ತೀಚೆಗೆ ಫೇಸ್‍ಬುಕ್ (Facebook) ಮತ್ತು ಇನ್‍ಸ್ಟಾಗ್ರಾಂ (Instagram) ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿ, ರಕ್ಷಿಸಲ್ಪಟ್ಟವನ ಸುದ್ದಿಯದು.


  ಸಾಮಾಜಿಕ ಮಾಧ್ಯಮಗಳು ಕೇವಲ ಮಾಹಿತಿಗಳನ್ನು ಮಾತ್ರವಲ್ಲ, ಬಹಳಷ್ಟು ಮನರಂಜನೆಯನ್ನು ಕೂಡ ನೀಡುತ್ತವೆ. ಸಾಮಾಜಿಕ ಜಾಲತಾಣದ ಕೆಲವೊಂದು ಸುದ್ದಿಗಳಲ್ಲಿ ಕೇವಲ ಮಾಹಿತಿ ಮಾತ್ರ ಇದ್ದರೆ, ಇನ್ನು ಕೆಲವು ಸುದ್ದಿಗಳಲ್ಲಿ ಮನರಂಜನೆ ಮಾತ್ರ ಇರುತ್ತದೆ. ಆದರೆ ಮಾಹಿತಿ ಮತ್ತು ಮನರಂಜನೆ ಎರಡೂ ಇರುವ ಸುದ್ದಿಗಳು ಕಂಡು ಬಂದಾಗ ನೆಟ್ಟಿಗರಿಗೆ ಖುಷಿಯೋ ಖುಷಿ. ಅಂತದ್ದೇ ನಗು ತರಿಸುವ ಸುದ್ದಿಯೊಂದು ಇತ್ತೀಚೆಗೆ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿ, ರಕ್ಷಿಸಲ್ಪಟ್ಟವನ ಸುದ್ದಿಯದು. ಇದರಲ್ಲಿ ನಗುವಂತದ್ದು ಏನಿದೆ , ಸದ್ಯ ಅವನ ಜೀವ ಉಳಿಯಿತಲ್ಲ ಎಂದು ಸಮಾಧಾನ ಪಡುವ ಸಂಗತಿ ಇದು ಎನ್ನುತ್ತೀರಾ? ಅದೇನೋ ಸರಿ, ಆದರೆ ಅಸಲಿಗೆ ಈ ಸಂಗತಿ ವೈರಲ್ ಆಗುವುದಕ್ಕೆ ಇರುವ ಕಾರಣ, ಆತ ರಕ್ಷಿಸ್ಪಟ್ಟ ಕೂಡಲೇ ಕೇಳಿದ ಮೊದಲ ಪ್ರಶ್ನೆ ! ಆ ಪ್ರಶ್ನೆ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.


  ದೇಹದ ಆ ಭಾಗದ ಸೌಂದರ್ಯ ಹೆಚ್ಚಿಸಲು 14 ಲಕ್ಷ ಖರ್ಚು ಮಾಡಿದ ಮಾಡೆಲ್…ಈಗ ಕೋಟಿ ಎಣಿಸುತ್ತಿದ್ದಾಳೆ!

  ಹಾಗಂತ ಇದು ಇತ್ತೀಚಿಗಿನ ಸುದ್ದಿ ಅಲ್ಲ, 2014 ರಲ್ಲಿ ನಡೆದದ್ದು. ಆಗ ಚೆನ್ನೈನಲ್ಲಿ 12 ಮಹಡಿಯ ಕಟ್ಟಡವೊಂದು ಧರೆಗುರುಳಿತ್ತು. ವಿಕಾಸ್ ಎಂಬ ವ್ಯಕ್ತಿ ಅದರ ಅವಶೇಷಗಳ ಅಡಿಯಲ್ಲಿ 72 ಗಂಟೆಗಳ ಕಾಲ ಸಿಲುಕಿ ಹಾಕಿಕೊಂಡಿದ್ದ. ಮೂರು ದಿನಗಳ ನಂತರ ವಿಕಾಸ್‍ನನ್ನು ಅವಶೇಷಗಳ ಅಡಿಯಿಂದ ಹೊರಗೆ ತೆಗೆಯಲಾಯಿತು. ಹೊರ ಬಂದ ಕೂಡಲೇ ಆತ ಕೇಳಿದ ಮೊದಲ ಪ್ರಶ್ನೆ ಏನಿರಬಹುದು ಎಂದು ಊಹಿಸಬಲ್ಲಿರಾ? ಅಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಯಾರೇ ಆದರೂ ವಿಚಾರಿಸುವುದು ತನ್ನ ಕುಟುಂಬದವರ ಬಗ್ಗೆ. ಆದರೆ ವಿಕಾಸ್ ಕೇಳಿದ್ದು ಕುಟುಂಬದ ಬಗ್ಗೆ ಅಲ್ಲ, ತನ್ನ ಚಪ್ಪಲಿಗಳ ಬಗ್ಗೆ!


  Cristiano Ronaldo: 12 ವರ್ಷದ ಬಳಿಕ ಮ್ಯಾಂಚೆಸ್ಟರ್​​ ಯುನೈಟೆಡ್​ಗೆ ಮರಳಿದ ಕ್ರಿಸ್ಟಿಯಾನೊ ರೊನಾಲ್ಡೊ

  ವಿಕಾಸ್ ಅಷ್ಟು ದೊಡ್ಡ ಕಟ್ಟದ ಅಡಿಯಲ್ಲಿ ಸುದೀರ್ಘ ಅವಧಿಯ ವರೆಗೆ ಸಿಕ್ಕಿ ಹಾಕಿಕೊಂಡು, ಜೀವಂತವಾಗಿ ಹೊರ ಬಂದಿದ್ದು ಒಂದು ಪವಾಡವೇ ಸರಿ. ಈ ಸಂಗತಿ ನಡೆದು ಆರು ವರ್ಷಗಳಾಗಿವೆ, ಆದರೆ ಅದು ವೈರಲ್ ಆಗುತ್ತಿರುವುದು ಈಗ. ಈ ಸುದ್ದಿಯನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು, ಅದರಲ್ಲಿರುವ ಫೋಟೋದಲ್ಲಿ ವಿಕಾಸ್‍ನನ್ನು ರಕ್ಷಿಸಿದ ನಂತರದ ದೃಶ್ಯವಿದೆ. ಅದಕ್ಕೆ ನೀಡಿರುವ ಶೀರ್ಷಿಕೆ ಹೀಗಿದೆ: “ ಮಹಿಳೆ: ಪುರುಷರು ತಮ್ಮ ವಸ್ತುಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ.
  ಪುರುಷ: “ಅವಶೇಷಗಳ ಅಡಿಯಿಂದ 72 ಗಂಟೆಗಳ ಬಳಿಕ ಬಂದ ವ್ಯಕ್ತಿ ತನ್ನ ಚಪ್ಪಲಿಗಳೆಲ್ಲಿ?” ಎಂದು ಕೇಳಿದ್ದು ಪುರುಷರೂ ತಮ್ಮ ವಸ್ತುಗಳ ಬಗ್ಗೆ ಕಾಳಜಿ ತೋರಿಸುತ್ತಾರೆ ಎಂಬುದಕ್ಕೆ ನಿದರ್ಶನವಾಗಿದೆ ಎಂದು ಪತ್ರಿಕೆ ವರದಿ ಹೇಳುತ್ತಿದೆ”. ಒಟ್ಟಿನಲ್ಲಿ ಆತ ತನ್ನ ಪ್ರಾಣಕ್ಕಿಂತಲೂ ತನ್ನ ಚಪ್ಪಲಿಗಳನ್ನು ಪ್ರೀತಿಸುತ್ತಿದ್ದ ಎಂಬುದು ಇದರಿಂದ ಬಹಿರಂಗಗೊಂಡಿದೆ.


  ಈ ಪೋಸ್ಟನ್ನು ಓದಿ , ಸಾಮಾಜಿಕ ಮಾಧ್ಯಮ (Social Media) ಬಳಕೆದಾರರು ನಕ್ಕು ನಕ್ಕು ಸುಸ್ತಾಗುತ್ತಿದ್ದಾರೆ. ಹೆಂಗಸರಂತೆ, ಗಂಡಸರಿಗೂ ತಮ್ಮ ವಸ್ತುಗಳ ಬಗ್ಗೆ ಕಾಳಜಿ ಇರುತ್ತದೆ ಎಂದು ಕೆಲವು ನೆಟ್ಟಿಗರು ಹೇಳಿದರೆ, ಮನುಷ್ಯರು ತಮ್ಮ ವಸ್ತುಗ ಬಗೆಗಿನ ಕಾಳಜಿಯನ್ನು ವಿಭಿನ್ನ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಎಂದು ಈ ಘಟನೆ ತಿಳಿಸುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.


  First published: