• Home
  • »
  • News
  • »
  • trend
  • »
  • Success Story: ಮೈಕ್ರೋಸಾಫ್ಟ್‌ ಉದ್ಯೋಗ ಬಿಟ್ಟು ಸ್ವಂತ ಉದ್ಯಮ ಆರಂಭಿಸಿ ಯಶಸ್ಸುಗಳಿಸಿದ ಸಾಧಕನ ಕಥೆ

Success Story: ಮೈಕ್ರೋಸಾಫ್ಟ್‌ ಉದ್ಯೋಗ ಬಿಟ್ಟು ಸ್ವಂತ ಉದ್ಯಮ ಆರಂಭಿಸಿ ಯಶಸ್ಸುಗಳಿಸಿದ ಸಾಧಕನ ಕಥೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Success Story: ನಿವೃತ್ತಿ ಜೀವನವನ್ನು ಹಾಯಾಗಿ ಕಳೆಯಲು ಜನ ಎಷ್ಟು ಕಷ್ಟಪಟ್ಟು ದುಡಿಯುತ್ತಾರೆ ಎಂದು ಅರಿತ ಷ್ನೇಯ್ಡರ್ ಮೊದಲೇ ಹಣ ಕೂಡಿಟ್ಟು ಬೇಗನೇ ಏಕೆ ನಿವೃತ್ತಿ ತೆಗೆದುಕೊಳ್ಳಬಾರದು ಎಂದು ಆಲೋಚಿಸಿ ಸ್ವಂತ ಉದ್ಯಮ ಆರಂಭಿಸಲು ಪಣ ತೊಟ್ಟರು. ಹೀಗಾಗಿ ಮೈಕ್ರೋಸಾಫ್ಟ್‌ನಲ್ಲಿರುವ ತಮ್ಮ ಕೆಲಸ ತೊರೆದು ತಮ್ಮದೇ ಆದ ಸಂಸ್ಥೆಯನ್ನು ಪ್ರಾರಂಭಿಸಿದರು.

ಮುಂದೆ ಓದಿ ...
  • Share this:

ಈಗಿನ ಯುವಕರು (Youth) ತಮ್ಮದೇ ಆದ ಏನನ್ನಾದರೂ ಸಾಧಿಸಬೇಕು, ಉದ್ಯೋಗ ಸೃಷ್ಟಿಸುವವರಾಗಬೇಕು, ಸಂಬಳಕ್ಕೆ ಕಾಯುವ ಬದಲು ಸ್ವಂತ ಉದ್ಯಮ 9Own Business) ಕಟ್ಟಬೇಕು ಎಂಬ ಮಹದಾಸೆ ಹೊಂದಿದ್ದಾರೆ. ಕೆಲವರು ಇದಕ್ಕೆ ಅಂತಾನೇ ಲಕ್ಷ-ಲಕ್ಷ ಸಿಗವ ವೇತನವನ್ನೇ ಬಿಟ್ಟು ತಮ್ಮ ಕನಸು ನನಸು ಮಾಡಿಕೊಳ್ಳುವತ್ತ ಸಾಗುತ್ತಾರೆ. ನಾವಿಲ್ಲಿ ಹೇಳುವ ವ್ಯಕ್ತಿಯದ್ದೂ ಇದೇ ಕಥೆ. ಮೈಕ್ರೋಸಾಫ್ಟ್‌ನಲ್ಲಿ (Microsoft)  ವರ್ಷಕ್ಕೆ $74,000 (ರೂ.6,137,745) ವೇತನದ ಉದ್ಯೋಗವನ್ನು ತ್ಯಜಿಸಿ ಸ್ವಂತ ಉದ್ಯೋಗ ಆರಂಭಿಸಿದ ಈ ವ್ಯಕ್ತಿ ಈಗ $3 ಮಿಲಿಯನ್‌ ಒಡೆಯರಾಗಿದ್ದಾರೆ.


ಹೌದು, ಜೆರೆಮಿ ಷ್ನೇಯ್ಡರ್ ನಿವೃತ್ತಿ ಜೀವನವನ್ನು ಹಾಯಾಗಿ ಕಳೆಯಲು ಜನ ಎಷ್ಟು ಕಷ್ಟಪಟ್ಟು ದುಡಿಯುತ್ತಾರೆ ಎಂದು ಅರಿತ ಷ್ನೇಯ್ಡರ್ ಮೊದಲೇ ಹಣ ಕೂಡಿಟ್ಟು ಬೇಗನೇ ಏಕೆ ನಿವೃತ್ತಿ ತೆಗೆದುಕೊಳ್ಳಬಾರದು ಎಂದು ಆಲೋಚಿಸಿ ಸ್ವಂತ ಉದ್ಯಮ ಆರಂಭಿಸಲು ಪಣ ತೊಟ್ಟರು. ಹೀಗಾಗಿ ಮೈಕ್ರೋಸಾಫ್ಟ್‌ನಲ್ಲಿರುವ ತಮ್ಮ ಕೆಲಸ ತೊರೆದು ತಮ್ಮದೇ ಆದ ಸಂಸ್ಥೆಯನ್ನು ಪ್ರಾರಂಭಿಸಿದರು.


$ 3 ಮಿಲಿಯನ್‌ ಒಡೆಯ
ಜೆರೆಮಿ ಷ್ನೇಯ್ಡರ್‌ ಈಗ 41ನೇ ವಯಸ್ಸಿನಲ್ಲಿಯೇ ಅವರು $ 3 ಮಿಲಿಯನ್‌ ಒಡೆಯರಾಗಿದ್ದು, ಮತ್ತು $ 4.4 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ ತಮ್ಮ ಕಿರಿ ವಯಸ್ಸಿಗೆ ನಿವೃತ್ತಿ ಸಹ ಪಡೆದುಕೊಂಡಿದ್ದಾರೆ.


ತಮ್ಮ ಪರಿಶ್ರಮದ ಬಗ್ಗೆ ಮಾತನಾಡಿದ ಜೆರೆಮಿ ಷ್ನೇಯ್ಡರ್‌ "ನಾನು ನನ್ನ ಸ್ವಂತ ಕಂಪನಿಯನ್ನು ಪ್ರಾರಂಭಿಸಲು ಆದ್ಯತೆ ನೀಡಿದೆ. ಇಲ್ಲಿ ನಾನು 10 ಪಟ್ಟು ಹೆಚ್ಚು ಕೆಲಸ ಮಾಡಿದರೆ, ಹೆಚ್ಚು ಹಣವನ್ನು ಸಂಪಾದಿಸಬಹುದು ಎಂದು ಭಾವಿಸಿದೆ" ಎಂದು ಅವರು ತಿಳಿಸಿದರು.


ರೆಂಟ್ಲಿಂಕ್ಸ್ ಎಂಬ ಸ್ವಂತ ಕಂಪನಿ ಸ್ಥಾಪನೆ


ಷ್ನೇಯ್ಡರ್ 2004ರಲ್ಲಿ ಅವರು ಬಾಡಿಗೆ ಆಸ್ತಿಗಳಿಗಾಗಿ ಜಾಹೀರಾತು ಜಾಲವಾದ ರೆಂಟ್ಲಿಂಕ್ಸ್ (RentLinx) ಅನ್ನು ಸ್ಥಾಪಿಸಿದರು.‌ ಅಲ್ಲಿಂದ ಮುಂದಿನ ಎಂಟು ವರ್ಷಗಳವರೆಗೆ, ಷ್ನೇಯ್ಡರ್ ತನ್ನ ಸಂಬಳವನ್ನು ವರ್ಷಕ್ಕೆ $36,000 ನಂತೆ ಮಾಡಿಕೊಂಡರು. ಷ್ನೇಯ್ಡರ್ ತನ್ನ ನಿವೃತ್ತಿ ಖಾತೆಗೆ ವರ್ಷಕ್ಕೆ $5,000 ರಿಂದ $6,000 ವರೆಗೆ ಮೀಸಲಿಡಲು ನಿರ್ಧರಿಸಿದರು. ಷ್ನೇಯ್ಡರ್‌ಗೆ 32 ವರ್ಷವಾದಾಗ, ಅವರು ತಮ್ಮ ಖಾತೆಯಲ್ಲಿ ಸುಮಾರು $120,000 ಹಣವನ್ನು ಹೊಂದಿದ್ದಾಗಿ ತಿಳಿಸಿದರು.


ಇದನ್ನೂ ಓದಿ: 32 ವರ್ಷಗಳಲ್ಲಿ ಈ ದಂಪತಿ ಒಮ್ಮೆಯೂ ಜಗಳವಾಡಿಲ್ವಂತೆ, ಹೆತ್ತವರ ದಾಂಪತ್ಯದ ಗುಟ್ಟು ಬಿಚ್ಚಿಟ್ಟ ಮಗಳು

2015ರಲ್ಲಿ, ಷ್ನೇಯ್ಡರ್ ಪ್ರತಿಸ್ಪರ್ಧಿ ಸಂಸ್ಥೆಯು ಅವರ ಸಂಸ್ಥೆಯನ್ನು $5 ಮಿಲಿಯನ್‌ಗೆ ಖರೀದಿಸಲು ಮುಂದಾದಾಗ ಷ್ನೇಯ್ಡರ್ ಕಂಪನಿಯನ್ನು ಮಾರಾಟ ಮಾಡಿದರು. ಆ ಸಮಯದಲ್ಲಿ ಅವರು ಸಂಸ್ಥೆಯ ಶೇಕಡಾ 70 ರಷ್ಟು ಪಾಲು ಹೊಂದಿದ್ದರಿಂದ, ತೆರಿಗೆಗಳನ್ನು ಕಡಿತಗೊಳಿಸಿದ ನಂತರ ಅವರ ಆಸ್ತಿ ಸುಮಾರು $2 ಮಿಲಿಯನ್ ಆಗಿತ್ತು.


2017ರಲ್ಲಿ ನಿವೃತ್ತಿ ತೆಗೆದುಕೊಂಡ ಷ್ನೇಯ್ಡರ್


ಮುಂದಿನ ಎರಡು ವರ್ಷಗಳ ಕಾಲ, ಷ್ನೇಯ್ಡರ್ ಸ್ವಾಧೀನಪಡಿಸಿಕೊಂಡ ಕಂಪನಿಯಲ್ಲಿ ಕೆಲಸ ಮಾಡಿದರು ಮತ್ತು ಆರು-ಅಂಕಿಗಳ ಸಂಬಳವನ್ನು ಗಳಿಸಿದರು. ಕಂಪನಿ ಚೆನ್ನಾಗಿ ಅಭಿವೃದ್ದಿ ಹೊಂದುತ್ತಲೇ ಇತ್ತು. ಹಾಗೆ ಜೊತೆಜೊತೆಗೆ ಷ್ನೇಯ್ಡರ್ ಆಸ್ತಿ ಮೌಲು $2 ಮಿಲಿಯನ್‌ನಿಂದ $3 ಮಿಲಿಯನ್‌ಗೆ ಬೆಳೆಯಿತು. ಈ ಸಂದರ್ಭದಲ್ಲಿ ಷ್ನೇಯ್ಡರ್ ನಾನು ಇನ್ನು ಮುಂದೆ ಕೆಲಸ ಮಾಡುವ ಅಗತ್ಯವಿಲ್ಲ ಎಂದು ಭಾವಿಸಿ ಚಿಕ್ಕ ವಯಸ್ಸಿನಲ್ಲಿಯೇ ನಿವೃತ್ತಿ ಪಡೆದುಕೊಂಡರು.


ಅಂತಿಮವಾಗಿ ಜೀವನಕ್ಕೆ ಬೇಕಾದಷ್ಟು ಸಂಪಾದಿಸಿದ ಷ್ನೇಯ್ಡರ್ 2017ರಲ್ಲಿ ನಿವೃತ್ತರಾದರು.


ಈಗ ಇನ್‌ಸ್ಟಾಗ್ರಾಮ್‌ ಮೂಲಕ ಹಣ ಗಳಿಸುತ್ತಿರುವ ಷ್ನೇಯ್ಡರ್


ನಿವೃತ್ತಿ ಸಮಯದಲ್ಲಿ ಪ್ರವಾಸ, ವಿಶ್ರಾಂತಿ ಪಡೆದುಕೊಂಡು ಮತ್ತೆ ಇನ್‌ಸ್ಟಾಗ್ರಾಮ್‌ನಲ್ಲಿ ಆರ್ಥಿಕ ಸಲಹೆಯನ್ನು ನೀಡುವ ಮೂಲಕ ತಮ್ಮದೇ ಬ್ಲಾಗ್‌ ತೆರೆದರು. ಇಲ್ಲೂ ಕೂಡ ಕ್ಲಿಕ್‌ ಆದ ಷ್ನೇಯ್ಡರ್ ಅವರ ವಿಡಿಯೋವನ್ನು $79 ಗೆ ಮಾರಾಟ ಮಾಡುವ ಮೂಲಕ ಒಂದು ವಾರದೊಳಗೆ $110,000 ಗಳಿಸಿದರು.


ಇದನ್ನೂ ಓದಿ: ಈ ಕಾಲೇಜಿನಲ್ಲಿ ಓದಿದ ಹುಡ್ಗನನ್ನೇ ಈಕೆ ಮದ್ವೆಯಾಗೋದಂತೆ! ಬೇಡಿಕೆ ಪಟ್ಟಿ ದೊಡ್ಡದಿದೆ ಓದಿ

"ನನ್ನ ಮೊದಲ ಕಂಪನಿಯಲ್ಲಿ $110,000 ಗಳಿಸಲು ನಾನು ನಾಲ್ಕು ವರ್ಷ ತೆಗೆದುಕೊಂಡೆ, ಆದರೆ ಇಲ್ಲಿ ವ್ಯವಹಾರ ನಿಜಕ್ಕೂ ಉತ್ತಮವಾಗಿದೆ" ಎಂದು ತಿಳಿಸಿದರು. ನಾನು ನಿಜವಾಗಿಯೂ ನಿವೃತ್ತಿಯನ್ನು ಗುರಿಯಾಗಿ ನೋಡುವುದಿಲ್ಲ. ಆರ್ಥಿಕ ಸ್ವಾತಂತ್ರ್ಯವೇ ಗುರಿ ಎಂದು ನಾನು ಭಾವಿಸುತ್ತೇನೆ. ನಾನು ಸೂಕ್ತವೆಂದು ತೋರುವ ನನ್ನ ಸಮಯವನ್ನು ನಿರ್ದೇಶಿಸಲು ಬಯಸುತ್ತೇನೆ, ” ಎಂದು ತಿಳಿಸಿದರು.

Published by:Sandhya M
First published: