Viral News: 'ನಾನು ದೇವರು, ಏನು ಬೇಕಿದ್ರೂ ಮಾಡ್ಬಹುದು' ಎಂದು ಹೇಳಿ ಚಲಿಸುತ್ತಿದ್ದ ರೈಲಿನಡಿ ಮಹಿಳೆಯನ್ನು ತಳ್ಳಿದ ವ್ಯಕ್ತಿ!

ಈ ಹುಚ್ಚ ವ್ಯಕ್ತಿ ಆಕೆಯ ಹಿಂದಿದ್ದ. ಹಾಗಾಗಿ ಆಕೆಗೆ ಏನನ್ನೂ ನೋಡಲು ಸಾಧ್ಯವಾಗಲಿಲ್ಲ. ವೇಗದಲ್ಲಿ ಈ ಘಟನೆ ನಡೆದುಹೋಯಿತು. ಏನಾಯಿತು ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳುವುದರ ಮೊದಲೇ ಆತ ಆಕೆಯನ್ನು ತಳ್ಳಿದ್ದ ಎಂಬುದಾಗಿ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ಸಬ್​ವೇ ರೈಲು

ಸಬ್​ವೇ ರೈಲು

  • Share this:
ಒಮ್ಮೊಮ್ಮೆ ಜೀವನದಲ್ಲಿ ಸಂಭವಿಸುವ ಕೆಲವೊಂದು ಘಟನೆಗಳು (Instances) ನಮಗೆ ಗೊತ್ತಿಲ್ಲದಂತೆಯೇ ಸಂಭವಿಸುತ್ತವೆ. ವಿಧಿಯಾಟ (Fate) ಹೇಗೆ ಇರುತ್ತದೆ ಎಂಬುದನ್ನು ನಮಗೆ ಊಹಿಸಿಕೊಳ್ಳಲೂ ಸಾಧ್ಯವಿರುವುದಿಲ್ಲ ಎಂಬುದಕ್ಕೆ ಹಲವಾರು ನಿದರ್ಶನಗಳೇ (Examples) ಸಾಕ್ಷಿಯಾಗಿರುತ್ತವೆ. ಈ ಲೇಖನದಲ್ಲಿ ನಾವು ಹೇಳಹೊರಟಿರುವ ಘಟನೆ ಕೂಡ ಇಂತಹುದ್ದು ಸಂಭವಿಸುತ್ತದೆಯೇ ಎಂಬ ಯೋಚನೆಯನ್ನು ನಮ್ಮಲ್ಲಿ ಹುಟ್ಟುಹಾಕುತ್ತದೆ. ಇದು ಅಚಾತುರ್ಯವೋ ಅಥವಾ ಬೇಕಾಗಿಯೇ ಮಾಡಿದ್ದೇ ಎಂಬ ಜಿಜ್ಞಾಸೆಗೆ ನಮ್ಮನ್ನು ತಳ್ಳಿಬಿಡುತ್ತದೆ. ಈ ಘಟನೆ ನಡೆದಿದ್ದು ಅಮೆರಿಕದ ನ್ಯೂಯಾರ್ಕ್‌ನ ಸಬ್‌ವೇ ರೈಲು (Subway Train) ನಿಲ್ದಾಣದಲ್ಲಿ. 40ರ ಹರೆಯದ ಏಷ್ಯನ್ ಮಹಿಳೆಯನ್ನು ಹಳಿಯಲ್ಲಿ ಆಗಮಿಸುತ್ತಿರುವ ರೈಲಿನ ಮುಂದಕ್ಕೆ ವ್ಯಕ್ತಿಯೊಬ್ಬ ತಳ್ಳಿದ ಕಾರಣ ಆಕೆ ಮೃತಪಟ್ಟಿದ್ದು, ತಳ್ಳಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮ್ಯಾನ್‌ಹಟ್ಟನ್‌ನ ಅಪ್ಪರ್ ವೆಸ್ಟ್ ಸೈಡ್ ನಿವಾಸಿಯಾಗಿರುವ ಮಿಚೆಲ್ ಅಲಿಸ್ಸಾ ಗೊ ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದ ಸಮಯದಲ್ಲಿ ಹಿಂದಿನಿಂದ ಆಕೆಯನ್ನು ವ್ಯಕ್ತಿಯೊಬ್ಬ ತಳ್ಳಿದ ಪರಿಣಾಮ ಹಳಿಗಳ ಮೇಲೆ ಬಿದ್ದು ನಿಲ್ದಾಣಕ್ಕೆ ಆಗಮಿಸುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದಿದ್ದಾರೆ. ಸಬ್‌ವೇ ಟ್ರ್ಯಾಕ್‌ನಲ್ಲಿ ಮಹಿಳೆ ಪ್ರಜ್ಞಾಶೂನ್ಯರಾಗಿ ಬಿದ್ದಿರುವುದನ್ನು ಪೊಲೀಸರು ನೋಡಿದ್ದು, ಆಕೆಗೆ ಗಂಭೀರ ಗಾಯವಾಗಿತ್ತು ಹಾಗೂ ದೇಹಕ್ಕೆ ಆಂತರಿಕ ಆಘಾತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಸೆಕೆಂಡ್ ಡಿಗ್ರಿ ಕೊಲೆ

ಮಹಿಳೆಯನ್ನು ತಳ್ಳಿದ ಆಪಾದಿತ ವ್ಯಕ್ತಿಯನ್ನು 61ರ ಹರೆಯದ ಸೈಮನ್ ಮಾರ್ಷಲ್ ಎಂದು ಗುರುತಿಸಲಾಗಿದ್ದು 2ನೇ ಹಂತದ ಕೊಲೆ ಯಾ ಸೆಕೆಂಡ್ ಡಿಗ್ರಿ ಕೊಲೆ ಎಂಬುದಾಗಿ ಪರಿಗಣಿಸಲಾಗಿದೆ (ಇದು ಯಾವುದೇ ರೀತಿಯ ಪೂರ್ವ ಯೋಜನೆಯನ್ನು ಹೊಂದಿರದ ಹಾಗೂ ಸಾವಿಗೆ ಬದಲಾಗಿ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ಮಾತ್ರವೇ ನಡೆಸಿದ ಕೃತ್ಯ). ಕೃತ್ಯವೆಸಗಿದ ನಂತರ ಅಲ್ಲಿಂದ ಪರಾರಿಯಾಗಿದ್ದ ಆಪಾದಿತ ಒಂದು ಗಂಟೆಯ ನಂತರ ಪೊಲೀಸರಿಗೆ ಶರಣಾಗಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.

ಮಾಧ್ಯಮ ವರದಿಗಳು ತಿಳಿಸಿರುವಂತೆ ಆಪಾದಿತ ಸೈಮನ್ ಮಾರ್ಷಲ್ ಮಾನಸಿಕ ಅಸ್ವಸ್ಥತೆ ಹೊಂದಿದವರಾಗಿದ್ದು ಮೃತ ದುರ್ದೈವಿ ಸೈಮನ್ ಮಾರ್ಷಲ್‌ನ ಜಾಕೆಟ್ ಅನ್ನು ಕದ್ದಿದ್ದಕ್ಕಾಗಿ ಆತ ಆಕೆಯನ್ನು ತಳ್ಳಿದ್ದಾನೆ ಎಂಬ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಶತಾಬ್ದಿ ರೈಲನ್ನು ಹಿಂದಿಕ್ಕಿದ ‘ಟ್ರೈನ್ 18’; ಇದು ಭಾರತದ ಅತಿ ವೇಗದ ರೈಲು!

ಸೈಮನ್ ಕ್ರಿಮಿನಲ್ ದಾಖಲೆ ಹೊಂದಿದವನಾಗಿದ್ದು ಆಗಸ್ಟ್ 2021ರಲ್ಲಿ ಬಿಡುಗಡೆಯಾಗುವುದಕ್ಕೂ ಮುನ್ನ ದರೋಡೆ ಪ್ರಕರಣದಲ್ಲಿ 2 ವರ್ಷಗಳ ಸೆರೆಮನೆವಾಸವನ್ನು ಅನುಭವಿಸಿದ್ದಾನೆ ಎಂಬುದು ವರದಿಯಾಗಿದೆ. ಸೈಮನ್ ಮಿಚೆಲ್ ಅಲಿಸ್ಸಾ ಗೋವನ್ನು ಕೊಂದಿದ್ದು ಹೌದು ಎಂಬುದಾಗಿ ಅಂಗೀಕರಿಸಿದ್ದು, ನಾನು ದೇವರು. ನಾನು ಅದನ್ನು ಮಾಡಬಹುದು ಎಂಬ ಉತ್ತರ ನೀಡಿದ್ದಾನೆ.

ಪ್ರಚೋದನಾ ರಹಿತ ಕೃತ್ಯ:

ಪತ್ರಿಕಾಗೋಷ್ಠಿಯಲ್ಲಿ, NYPD ಕಮಿಷನರ್ ಕೀಚಂಟ್ ಸೆವೆಲ್ ಘಟನೆಯ ಕುರಿತು ತಿಳಿಸಿದ್ದು, ಮಾರಣಾಂತಿಕ ಹಲ್ಲೆಯು ಪ್ರಚೋದನಾ ರಹಿತ ಕೃತ್ಯವಾಗಿದ್ದು ಮೃತ ವ್ಯಕ್ತಿಯು ಆಪಾದಿತನೊಂದಿಗೆ ಯಾವುದೇ ರೀತಿಯ ಸಂವಹನ ನಡೆಸಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಸೈಮನ್ ಈ ದಾಳಿಯನ್ನು ನಡೆಸುವ ಮುನ್ನ ಇನ್ನೊಬ್ಬ ಮಹಿಳೆಯನ್ನು ಉದ್ದೇಶಪೂರ್ವಕವಾಗಿ ಸಮೀಪಿಸಿದ್ದು, ಟ್ರ್ಯಾಕ್‌ಗಳ ಮೇಲೆ ಆತ ತಳ್ಳಬಹುದು ಎಂಬುದನ್ನು ಆ ಮಹಿಳೆ ಊಹಿಸಿ ಭಯಗೊಂಡಿದ್ದರು ಎಂದು ಕೀಚಂಟ್ ತಿಳಿಸಿದ್ದಾರೆ.

ಆಪಾದಿತ ತನ್ನ ಸ್ಥಳದಲ್ಲಿಯೇ ನಿಂತಿದ್ದ ಎಂಬುದಾಗಿ ಮಹಿಳೆ ತಿಳಿಸಿದ್ದು, ಇದು ಅಪಾಯದ ಸೂಚನೆಯನ್ನು ಆಕೆಗೆ ನೀಡಿತ್ತು. ಹಾಗಾಗಿ ಆಕೆ ಆತನಿಂದ ಕೊಂಚ ಅಂತರ ಕಾಯ್ದುಕೊಂಡಳು ಹಾಗೂ ರೈಲಿನ ಮುಂದಕ್ಕೆ ಆತ ಹೋಗುತ್ತಿರುವುದನ್ನು ಆಕೆ ನೋಡಿದ್ದಳು ಎಂಬ ಮಹಿಳೆಯ ಹೇಳಿಕೆಯನ್ನು ಕೀಚಂಟ್, ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಆತ ಬರುತ್ತಿರುವುದನ್ನು ಗಮನಿಸಲಿಲ್ಲ:

ಘಟನೆಯ ಕುರಿತು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ್ದು ಮೃತ ಮಹಿಳೆಗೆ ಏನಾಗಲಿದೆ ಎಂಬ ಮಾಹಿತಿಯೇ ಇರಲಿಲ್ಲ. ಅದೇ ರೀತಿ ಆಪಾದಿತ ತಳ್ಳಬಹುದೆಂಬ ಯೋಚನೆ ಕೂಡ ಇರಲಿಲ್ಲ. ಹೀಗಾಗಿ ಆಕೆಗೆ ಅವನನ್ನು ಎದುರಿಸುವ ಅವಕಾಶ ಕೂಡ ದೊರೆಯಲಿಲ್ಲ ಎಂದಾಗಿದೆ.

ಘಟನೆಗೆ ಸಾಕ್ಷಿಯಾಗಿದ್ದ ಇನ್ನೊಬ್ಬ ಪ್ರತ್ಯಕ್ಷದರ್ಶಿ ಮಾರಿಯಾ ಕಾಸ್ಟ್-ವೆಬರ್ ತಿಳಿಸಿರುವ ಮಾಹಿತಿಯಂತೆ, ಕೈಯನ್ನು ಮುಂದಕ್ಕೆ ಚಾಚಿರುವ ವ್ಯಕ್ತಿಯೊಬ್ಬ ಟ್ರ್ಯಾಕ್‌ನತ್ತ ಓಡುತ್ತಾ ಬರುತ್ತಿರುವುದನ್ನು ತಾನು ನೋಡಿದ್ದು ಎಲ್ಲವೂ ವೇಗವಾಗಿ ನಡೆದಿದ್ದರಿಂದ ಮೃತ ಮಹಿಳೆಗೆ ಪ್ರತಿಕ್ರಿಯಿಸಲು ಆಗಲಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದೇಶದ ಅತಿವೇಗದ ರೈಲು ಟ್ರೈನ್​18 ವಿಶೇಷತೆಗಳೇನು?

ಈ ಹುಚ್ಚ ವ್ಯಕ್ತಿ ಆಕೆಯ ಹಿಂದಿದ್ದ. ಹಾಗಾಗಿ ಆಕೆಗೆ ಏನನ್ನೂ ನೋಡಲು ಸಾಧ್ಯವಾಗಲಿಲ್ಲ. ವೇಗದಲ್ಲಿ ಈ ಘಟನೆ ನಡೆದುಹೋಯಿತು. ಏನಾಯಿತು ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳುವುದರ ಮೊದಲೇ ಆತ ಆಕೆಯನ್ನು ತಳ್ಳಿದ್ದ ಎಂಬುದಾಗಿ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
Published by:Soumya KN
First published: