• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Mumbai Taj Hotel: ತಾಜ್​ ಹೋಟೆಲ್​​ನಲ್ಲಿ ತಿಂದು ಬಿಲ್​ ಕೇಳಿದ್ರೆ ಚಿಲ್ಲರೆ ಕೊಟ್ಟ ಯುವಕ, ಆಮೇಲೆ ನಡೆದಿದ್ದು ಸಖತ್​ ಫನ್ನಿ!

Mumbai Taj Hotel: ತಾಜ್​ ಹೋಟೆಲ್​​ನಲ್ಲಿ ತಿಂದು ಬಿಲ್​ ಕೇಳಿದ್ರೆ ಚಿಲ್ಲರೆ ಕೊಟ್ಟ ಯುವಕ, ಆಮೇಲೆ ನಡೆದಿದ್ದು ಸಖತ್​ ಫನ್ನಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆ ಎಲ್ಲಾ ನಾಣ್ಯಗಳನ್ನು ತನ್ನ ಮುಂದಿರುವ ಟೇಬಲ್ ಮೇಲೆ ಹಾಕಿಕೊಂಡು ಒಂದೊಂದಾಗಿ ಎಣಿಸಲು ಯುವಕ ಪ್ರಾರಂಭಿಸಿದರು. ಇದನ್ನು ನೋಡಿದ ರೆಸ್ಟೋರೆಂಟ್ ನಲ್ಲಿರುವ ಜನರು ಒಂದು ಕ್ಷಣ ಬೆಕ್ಕಸ ಬೆರಗಾಗಿ ನೋಡುತ್ತಲೇ ಇದ್ದರು.

  • Trending Desk
  • 2-MIN READ
  • Last Updated :
  • Mumbai, India
  • Share this:

ಸಾಮಾನ್ಯವಾಗಿ ನಾವು ದೊಡ್ಡ ದೊಡ್ಡ ಹೊಟೇಲ್‌ಗಳಿಗೆ (Star Hotels) ಹೋದರೆ ಊಟ ಮಾಡಿ ಮುಗಿಸಿದ ನಂತರ ನಾವು ಕುಳಿತಿರುವ ಟೇಬಲ್‌ (Table) ಗೆ ಹೊಟೇಲ್ ಸಿಬ್ಬಂದಿ ಬಿಲ್ (Food Bill) ಅನ್ನು ತಂದಿಟ್ಟಾಗ, ನಾವು ನಮ್ಮ ಪರ್ಸ್ ಗಳಲ್ಲಿರುವ ಡೆಬಿಟ್ ಕಾರ್ಡ್ (Debit Card) ಗಳಿಂದ ಆ ಬಿಲ್‌ ಅನ್ನು ಪಾವತಿಸುತ್ತೇವೆ. ಆದರೆ ಇತ್ತೀಚೆಗೆ ಈ ಗೂಗಲ್ ಪೇ (Google Pay) ಮತ್ತು ಫೋನ್ ಪೇ (Phone Pay) ಅಂತಹ ಇಂಟರ್ನೆಟ್ ಹಣದ ವಹಿವಾಟು ಅಪ್ಲಿಕೇಷನ್‌ಗಳು ಬಂದಿರುವುದರಿಂದ ಅವುಗಳನ್ನು ಬಳಸಿ ಸಹ ಬಿಲ್ ಅನ್ನು ಪಾವತಿಸುತ್ತೇವೆ. ಆದರೆ ಇಲ್ಲೊಂದು ಘಟನೆ ನಡೆದಿದ್ದು, ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಒಬ್ಬರು ಮುಂಬೈನ ಪ್ರತಿಷ್ಠಿತ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ ಊಟ ಮಾಡಿದ್ದಾರೆ.


ನಂತರ ತಮ್ಮ ಬಿಲ್ ಅನ್ನು ಯಾವುದೇ ಡೆಬಿಟ್ ಕಾರ್ಡ್ ಅಥವಾ ಮೊಬೈಲ್ ಅಪ್ಲಿಕೇಷನ್ ಗಳಿಂದ ಬಿಲ್ ಅನ್ನು ಪಾವತಿಸದೇ, ಜೇಬಿನಿಂದ ನಾಣ್ಯಗಳನ್ನು ಹೊರ ತೆಗೆದು ಅವುಗಳನ್ನು ಎಣಿಸಿ ಆ ಬಿಲ್ ಅನ್ನು ಪಾವತಿಸಿದ್ದಾರೆ ನೋಡಿ.


ಈ ವ್ಯಕ್ತಿ ಬಿಲ್ ಅನ್ನ ನಾಣ್ಯಗಳಿಂದ ಪಾವತಿಸಿದ್ದೇಕೆ ಗೊತ್ತೇ?


ಸಾಮಾನ್ಯವಾಗಿ ಜನರು ಇಂತಹ ಹೊಟೇಲ್‌ಗೆ ಬಂದರೆ ಅವರು ಕಾರ್ಡ್ ಅಥವಾ ಮೊಬೈಲ್ ಆಪ್ ನಿಂದ ಬಿಲ್ ಪಾವತಿಸುತ್ತಾರೆ. ಕೆಲವೊಮ್ಮೆ ಜನರು ತಮ್ಮಲ್ಲಿ ನಾಣ್ಯಗಳಿದ್ದರೂ ಸಹ ಅದನ್ನು ಕೊಟ್ಟರೆ ಏನಂತ ಅಂದುಕೊಳ್ಳುತ್ತಾರೆ ಜನರು ಅಂತ ಭಾವಿಸಿ ಹೊರಗೆ ತೆಗೆಯುವುದಿಲ್ಲ.


ಆದ್ದರಿಂದ ಜನರು ತಾವು ಹೇಗಿದ್ದಾರೋ ಹಾಗೆ ಇರಲು ಮತ್ತು ಅವರ ವ್ಯಕ್ತಿತ್ವಕ್ಕೆ ಇಂತಹ ವಿಷಯಗಳಿಂದ ನಕಲಿ ಮೆರುಗು ನೀಡಬಾರದು ಎಂದು ತಿಳಿಸಲು ಅವರು ಸಾಮಾಜಿಕ ಪ್ರಯೋಗವನ್ನು ಮಾಡಿದ್ದಾರೆ ಎಂದು ಸಿದ್ದೇಶ್ ಲೋಕರೆ ಅವರು ಹೇಳಿದರು. ಅವರ ಪ್ರಯೋಗದ ಈ ವೀಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಸುಮಾರು 1.4 ಲಕ್ಷ ಲೈಕ್ ಗಳನ್ನು ಗಳಿಸಿದೆ.


ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?


ಹೋಟೆಲ್ ನ ಆನ್-ಸೈಟ್ ರೆಸ್ಟೋರೆಂಟ್ ಗೆ ಪ್ರವೇಶಿಸುವುದರೊಂದಿಗೆ ಈ ವೀಡಿಯೋ ಪ್ರಾರಂಭವಾಗುತ್ತದೆ. ಬ್ಯಾಕ್ಪ್ಯಾಕ್ ಹಿಡಿದು ಒಳಗೆ ಬಂದು ಒಂದು ಟೇಬಲ್ ನ ಮುಂದೆ ಇರುವ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾರೆ. ನಂತರ ಅಲ್ಲೇ ಇರುವಂತಹ ಮೆನುವನ್ನು ಕೈಗೆತ್ತಿಕೊಂಡು ನೋಡಲು ಶುರು ಮಾಡುತ್ತಾನೆ. ಆ ಮೆನುವಿನಲ್ಲಿ ಹೆಚ್ಚು ಬೆಲೆ ಇರುವಂತಹ ಆಹಾರ ಪದಾರ್ಥಗಳ ಬಗ್ಗೆ ಕಾಮೆಂಟ್ ಮಾಡಲು ಪ್ರಾರಂಭಿಸಿದರು.


ಲೋಕರೆ ಹೋಟೆಲ್‌ನಲ್ಲಿ ಪಿಜ್ಜಾ ಮತ್ತು ಮಾಕ್ಟೇಲ್ ಅನ್ನು ಆರ್ಡರ್ ಮಾಡಿಕೊಳ್ಳುತ್ತಾರೆ. ಇದೆಲ್ಲವನ್ನು ತಿಂದು ಮುಗಿಸಿದ ನಂತರ, ಬಿಲ್ ಪಾವತಿಸುವ ವೇಳೆಯಲ್ಲಿ ಅವರು ನಾಣ್ಯಗಳಿಂದ ತುಂಬಿದ ಪ್ಲಾಸ್ಟಿಕ್ ಚೀಲಗಳನ್ನು ಮೆಲ್ಲಗೆ ಹೊರತೆಗೆದರು.


ಇದನ್ನೂ ಓದಿ: ಈ ದೇಶಗಳಲ್ಲಿ ವಿಮಾನ ನಿಲ್ದಾಣಗಳೇ ಇಲ್ವಂತೆ! ಅವು ಯಾವ ದೇಶಗಳು ಅನ್ನೋದನ್ನು ತಿಳಿದುಕೊಳ್ಳಿ




ಚಿಲ್ಲರೆ ಕೊಟ್ಟವನ ಮುಖ ಮುಖ ನೋಡಿದ ಜನ!


ನಂತರ, ಆ ಎಲ್ಲಾ ನಾಣ್ಯಗಳನ್ನು ತನ್ನ ಮುಂದಿರುವ ಟೇಬಲ್ ಮೇಲೆ ಹಾಕಿಕೊಂಡು ಒಂದೊಂದಾಗಿ ಎಣಿಸಲು ಪ್ರಾರಂಭಿಸಿದರು. ಇದನ್ನು ನೋಡಿದ ರೆಸ್ಟೋರೆಂಟ್ ನಲ್ಲಿರುವ ಜನರು ಒಂದು ಕ್ಷಣ ಬೆಕ್ಕಸ ಬೆರಗಾಗಿ ನೋಡುತ್ತಲೇ ಇದ್ದರು.


ಸಿಬ್ಬಂದಿ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ?


ಒಬ್ಬ ಸಿಬ್ಬಂದಿ ಅವನ ಬಿಲ್ ತೆಗೆದುಕೊಳ್ಳಲು ಬಂದರು. ಅವರು ಆ ನಾಣ್ಯಗಳನ್ನು ಎಣಿಸುತ್ತಿರುವುದನ್ನು ನೋಡಿ ಒಂದು ನಿಮಿಷ ಆಶ್ಚರ್ಯಚಕಿತರಾದರು ಆದರೆ ನಾಣ್ಯಗಳನ್ನು ಮತ್ತು ಕೆಲವು ನೋಟುಗಳನ್ನು ಸ್ವೀಕರಿಸಿ ನಗುತ್ತಾ ಅಲ್ಲಿಂದ ಹೋದರು. ನಂತರ ಲೋಕರೆ ತನ್ನ ಪಿಜ್ಜಾ ಬಾಕ್ಸ್ ನಲ್ಲಿ ಉಳಿದ ಪಿಜ್ಜಾವನ್ನು ಹಿಡಿದುಕೊಂಡು ರೆಸ್ಟೋರೆಂಟ್ ನಿಂದ ಹೊರ ಬರುತ್ತಿರುವುದರೊಂದಿಗೆ ವೀಡಿಯೋ ಮುಕ್ತಾಯವಾಯಿತು.


"ನೀವು ಯಾರೆಂದು ನೀವೇ ನಿರ್ಧರಿಸಿಕೊಳ್ಳಿ ಮತ್ತು ಪರಿಸ್ಥಿತಿ ಅಥವಾ ಜನರು ನೀವು ಹೇಗಿರಬೇಕೆಂದು ನಿರೀಕ್ಷಿಸುವುದಿಲ್ಲ" ಎಂದು ವೀಡಿಯೋದ ಕೊನೆಯಲ್ಲಿ ಹೇಳಿದ್ದಾರೆ. "ನೀವು ವ್ಯವಹಾರವನ್ನು ಡಾಲರ್ ಗಳಲ್ಲಿ ಅಥವಾ ನಾಣ್ಯಗಳಲ್ಲಿ ಮಾಡುತ್ತಿರೋ ಅದು ಮುಖ್ಯವಾಗುವುದಿಲ್ಲ. ಇಲ್ಲಿ ವ್ಯವಹಾರ ಮಾತ್ರ ಮುಖ್ಯವಾಗುತ್ತದೆ ಎಂದಿದ್ದಾರೆ.




ಇಂಟರ್‌ನೆಟ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದ ವೀಡಿಯೋ


"ಚಿಲ್ಲರೆ ನಾಣ್ಯಗಳನ್ನು ನೀಡುವ ಮೂಲಕ ನೀವು ನಿಜವಾಗಿಯೂ ಅವರಿಗೆ ಸಹಾಯ ಮಾಡಿದ್ದೀರಿ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಬರೆದಿದ್ದಾರೆ. "ಗ್ರಾಹಕರು ಹೇಗೆ ಪಾವತಿಸುತ್ತಾರೆ ಎಂಬುದರ ಬಗ್ಗೆ ಹೊಟೇಲ್ ನವರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ತಮ್ಮ ಗ್ರಾಹಕರು ತೃಪ್ತರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಅಷ್ಟೇ ಕಾಳಜಿ ವಹಿಸುತ್ತಾರೆ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

Published by:ವಾಸುದೇವ್ ಎಂ
First published: