ಸ್ಕೂಟರ್​ ಬೆಲೆ 50 ಸಾವಿರ; ಫ್ಯಾನ್ಸಿ ನಂಬರ್​ಗಾಗಿ ಆತ ಖರ್ಚು ಮಾಡಿದ್ದು ಕೇಳಿದ್ರೆ ಶಾಕ್​ ಆಗ್ತೀರಾ!

ಕೆಲವರಿಗೆ ಒಂದು ವಸ್ತು ಇಷ್ಟವಾದರೆ ಆ ವಸ್ತುಗಳುನ್ನು ಸಿಗುವವರೆಗೆ ಬಿಡುವುದಿಲ್ಲ. ಎಷ್ಟೇ ಕಷ್ಟವಾದರು ಕೊಂಡುಕೊಳ್ಳುತ್ತಾರೆ. ಅದರಂತೆ ಈ ವ್ಯಕ್ತಿ ಕೂಡ 50 ಸಾವಿರ ಬೆಲೆ ಸ್ಕೂಟರ್​ಗೆ ಫ್ಯಾನ್ಸಿ ನಂಬರ್​ ಪ್ಲೇಟ್​ ಹಾಕಿಸಲು ಲಕ್ಷಗಟ್ಟಲೇ ಖರ್ಚು ಮಾಡಿದ್ದಾನೆ. ಅಂದಹಾಗೆ ಈ ಘಟನೆ ನದಿದಿದ್ದು ಬೇರೆ ಎಲ್ಲೂ ಅಲ್ಲ. ಭಾರತದಲ್ಲಿ.

news18-kannada
Updated:July 1, 2020, 7:33 AM IST
ಸ್ಕೂಟರ್​ ಬೆಲೆ 50 ಸಾವಿರ; ಫ್ಯಾನ್ಸಿ ನಂಬರ್​ಗಾಗಿ ಆತ ಖರ್ಚು ಮಾಡಿದ್ದು ಕೇಳಿದ್ರೆ ಶಾಕ್​ ಆಗ್ತೀರಾ!
ಸಾಂದರ್ಭಿಕ ಚಿತ್ರ
  • Share this:
ಅನೇಕರಿಗೆ ತಮ್ಮ ವಾಹನಗಳಿಗೆ ವಿಐಪಿ ನಂಬರ್​​​ ಬಳಸಬೇಕೆಂಬ ಆಸೆಯಿರುತ್ತದೆ. ಹಾಗಾಗಿ ಎಷ್ಟು ಖರ್ಚಾದರೂ ಪರವಾಗಿಲ್ಲ ಫ್ಯಾನ್ಸಿ ನಂಬರ್​​ ಹಾಕಿಸಿಕೊಳ್ಳಬೇಕೆಂದು ಖರ್ಚು ಮಾಡುತ್ತಾರೆ. ಸಾಮಾನ್ಯವಾಗಿ ರಾಜಕಾರಣಿಗಳು, ಸೆಲೆಬ್ರಿಟಿಗಳು ವಿಐಪಿ ನಂಬರ್​ಗಳ ಮೊರೆ ಹೋಗುತ್ತಾರೆ. ಆದರೆ ಇಲ್ಲೋಬ್ಬ ವ್ಯಕ್ತಿ ತನ್ನ 50 ಸಾವಿರ ಬೆಲೆಯ ಸ್ಕೂಟರ್​ಗೆ ಫ್ಯಾನ್ಸಿ ನಂಬರ್​​ ಹಾಕಿಸಲು ಬರೋಬ್ಬರಿ 8.1 ಲಕ್ಷ ಖರ್ಚು​ ಮಾಡಿದ್ದಾನೆ ಎಂದರೆ ನಂಬುತ್ತೀರಾ. ಆತ ಖರ್ಚು ಮಾಡಿದ್ದ ಹಣದಲ್ಲಿ ಡುಕಾಟಿ ಸ್ಕ್ರಾಂಬ್ಲೆರ್​​, ಬೆನೆಲ್ಲಿ ಟಿಎನ್​ಟಿ ಬೈಕ್​ಗಳನ್ನೇ ಖರಿದಿಸಬಹುದಾಗಿತ್ತು!.

ಕೆಲವರಿಗೆ ಒಂದು ವಸ್ತು ಇಷ್ಟವಾದರೆ ಆ ವಸ್ತುಗಳುನ್ನು ಸಿಗುವವರೆಗೆ ಬಿಡುವುದಿಲ್ಲ. ಎಷ್ಟೇ ಕಷ್ಟವಾದರು ಕೊಂಡುಕೊಳ್ಳುತ್ತಾರೆ. ಅದರಂತೆ ಈ ವ್ಯಕ್ತಿ ಕೂಡ 50 ಸಾವಿರ ಬೆಲೆ ಸ್ಕೂಟರ್​ಗೆ ಫ್ಯಾನ್ಸಿ ನಂಬರ್​ ಪ್ಲೇಟ್​ ಹಾಕಿಸಲು ಲಕ್ಷಗಟ್ಟಲೇ ಖರ್ಚು ಮಾಡಿದ್ದಾನೆ. ಅಂದಹಾಗೆ, ಈ ಘಟನೆ ನದಿದಿದ್ದು ಬೇರೆ ಎಲ್ಲೂ ಅಲ್ಲ ಭಾರತದಲ್ಲಿ.

ಹಿಮಾಚದ ಪ್ರದೇಶದ ವ್ಯಕ್ತಿಯೊಬ್ಬ ತನ್ನ ಸ್ಕೂಟರ್​ಗೆ ಫ್ಯಾನ್ಸಿ ನಂಬರ್​ ಹಾಕಿಸಬೇಕೆಂದು 8.1 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಹೆಚ್​ಪಿ90-0009 ನಂಬರ್​ ಪಡೆಯಲು ಕಾಂಗಡಾದ ರಾಹುಲ್​​ ಪ್ರೈಮ್​​ ಪ್ರೈವೇಟ್​ ಲಿಮಿಡೆಟ್​​ ಕಂಪನಿಯ ಮೂಲಕ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿದ್ದಾನೆ. ಕೆಲವರಿಗೆ ಐಷಾರಾಮಿ ವಸ್ತುಗಳನ್ನು ಖರೀದಿಸಬೇಕೆಂಬ ಶೋಕಿ ಇದ್ದರೆ. ಈ ವ್ಯಕ್ತಿಗೆ ವಾಹನ ಯಾವುದಾದರೇನು ಫ್ಯಾನ್ಸಿ ನಂಬರ್​ ಮಾತ್ರ ಚೆನ್ನಾಗಿರಬೇಕೆಂದು ಈ ರೀತಿ ಮಾಡಿದ್ದಾನೆ.

ಮಾಹಿ ಬರ್ತ್​ ಡೇಗೆ ಸ್ಪೆಷಲ್​ ಸಾಂಗ್​!; ​​​ವಿಂಡೀಸ್​​ ಆಟಗಾರನಿಂದ ಧೋನಿಗೆ ‘ನಂಬರ್​ 7‘ ಗಿಫ್ಟ್​​
First published:July 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading