HOME » NEWS » Trend » MAN PASSES OUT WHILE TAKING COVID VACCINE VIDEO GOES VIRAL KVD

ಕಣ್ಣೋಟದ ಫೋಟೋ ಬಳಿಕ ಮತ್ತೊಂದು ವ್ಯಾಕ್ಸಿನ್ ಪ್ರಹಸನ ವೈರಲ್: ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರ!

ನರ್ಸ್​​ ಕೈಗೆ ಇಂಜೆಕ್ಷನ್​ ನೀಡಲು ಮುಂದಾಗುತ್ತಿದ್ದಂತೆ ಅವರ ಮೇಲೆಯೇ ಕುಸಿತಂತೆ ವಾಲಿದರು ಪೌಲ್​. ಕಣ್ಣು ಮುಚ್ಚಿಕೊಂಡು ಲಸಿಕೆ ಪಡೆದೊಡನೆ ಕೂಗಿಕೊಂಡು ಪೌಲ್​​ ಧುತ್​ ಎಂದು ಕೆಳಗೆ ಬಿದ್ದೇ ಬಿಟ್ಟರು.

Kavya V | news18-kannada
Updated:June 9, 2021, 4:32 PM IST
ಕಣ್ಣೋಟದ ಫೋಟೋ ಬಳಿಕ ಮತ್ತೊಂದು ವ್ಯಾಕ್ಸಿನ್ ಪ್ರಹಸನ ವೈರಲ್: ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರ!
ವೈರಲ್​​ ಫೋಟೋಗಳು
  • Share this:
ಎಲ್ಲೆಲ್ಲೂ ವ್ಯಾಕ್ಸಿನೇಷನ್​​ ಭರದಿಂದ ಸಾಗಿದೆ. ವಿಶ್ವಾದ್ಯಂತ ಜನ ಕೊರೊನಾ ಲಸಿಕೆ ಪಡೆಯುವಲ್ಲಿ ನಿರತರಾಗಿದ್ದಾರೆ. ಲಸಿಕೆ ಪಡೆದವರ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅದರಲ್ಲೂ ಲಸಿಕೆ ಪಡೆಯುವಾಗ ನಡೆದ ತಮಾಷೆಯ ಘಟನೆಗಳು ವೈರಲ್​ ಆಗುತ್ತಿವೆ. ಇತ್ತೀಚೆಗಷ್ಟೇ ಯುವಕನೊಬ್ಬ ಲಸಿಕೆ ಪಡೆಯುವಾಗ ನರ್ಸ್​ನ ನೋಡುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಲವ್​​ ವ್ಯಾಕ್ಸಿನ್​​ ಅಂತ ತರಹೇವಾರಿ ಕ್ಯಾಪ್ಷನ್​ಗಳನ್ನು ನೀಡಿ ಟ್ರೋಮ್​, ಮಿಮ್ಸ್​ಗಳು ಸೃಷ್ಟಿಸಿ ಹರಿ ಬಿಡಲಾಗಿತ್ತು. ಅದೇ ಸಾಲಿಗೆ ಸೇರುವ ಮತ್ತೊಂದು ವಿಡಿಯೋ ಈಗ ವೈರಲ್​ ಆಗಿದೆ.

ಅತಿ ಶೀಘ್ರವಾಗಿ ಲಸಿಕೆ ಪಡೆಯುವುದು ಮುಖ್ಯ. ಲಸಿಕೆಗಾಗಿ ರಿಜಿಸ್ಟರ್​ ಮಾಡಿಕೊಂಡು ನಿಗದಿತ ಸಮಯದಲ್ಲಿ ಲಸಿಕಾ ಕೇಂದ್ರಗಳಿಗೆ ಹೋಗಿ ಲಸಿಕೆ ಪಡೆಯಬೇಕು. ಇಂಜೆಕ್ಷನ್​ ಪಡೆಯಲು ಭಯ ಇರುವವರಿಗಂತೂ ವ್ಯಾಕ್ಸಿನೇಷನ್​ ದೊಡ್ಡ ಸವಾಲಾಗಿದೆ. ಸೂಜಿಯನ್ನು ನೋಡುತ್ತಿದ್ದಂತೆ ಅದೆಷ್ಟೋ ಜನ ಹೌಹಾರುತ್ತಾರೆ. ಇಲ್ಲೂ ಅದೇ ಆಗಿದೆ. ಅಮೆರಿಕಾದಲ್ಲಿ ಸಾವ್​​ ಪೌಲ್​ ಎಂಬಾತ ಅಸ್ಟ್ರಜೆನಿಕಾ ಕೊರೊನಾ ಲಸಿಕೆ ಪಡೆಯಲು ಮುಂದಾಗಿದ್ದಾರೆ. ಪೌಲ್​ಗೆ ಇಂಜೆಕ್ಷನ್​ ಅಂದರೆ ಭಯ. ಸೂಜಿಯನ್ನು ನೋಡುತ್ತಿದಂತೆ ಪ್ರಜ್ಞೆ ಹೋಗುವಷ್ಟು ದಿಗಿಲು.

ಇದನ್ನೂ ಓದಿ: Viral Video: ಏನ್​ ಗುರು! 28 ಪತ್ನಿ, 135 ಮಕ್ಕಳು, 126 ಮೊಮ್ಮಕ್ಕಳಿದ್ದರು 37ನೇ ವಿವಾಹವಾದ ಮುದುಕ!

ಎಷ್ಟೇ ಭಯ ಇದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಲಸಿಕೆ ಪಡೆಯಲೇಬೇಕು. ಇದಕ್ಕಾಗಿ ಪೌಲ್​ ಗಟ್ಟಿ ಮನಸ್ಸು ಮಾಡಿಕೊಂಡು ಲಸಿಕಾ ಕೇಂದ್ರಕ್ಕೆ ಬಂದಿದ್ದರು. ವಿಡಿಯೋದಲ್ಲಿ ಲಸಿಕೆಗೂ ಮುನ್ನ ದೀರ್ಘ ಉಸಿರಾಟ ನಡೆಸುತ್ತಿರುವ ಪೌಲ್​ ಅವರನ್ನು ನೋಡಬಹುದು. ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಪೌಲ್​ ಬೆವರಲಾರಂಭಿಸಿದ್ದರು. ನಿಂತಲ್ಲಿಯೇ ಚಟಪಡಿಸುತ್ತಿದ್ದ ಪೌಲ್​ ಅವರ ಸರತಿ ಬಂದೇ ಬಿಟ್ಟಿತ್ತು. ಮನಸ್ಸಿನಲ್ಲೇ ದೇವರಿಗೆ ಬೇಡಿಕೊಂಡ ಪೌಲ್​​ ಗಾಬರಿಯಿಂದಲೇ ಲಸಿಕೆ ಪಡೆಯಲು ಮುಂದಾಗಿದ್ದರು.

ಲಸಿಕೆ ನೀಡುವ ನರ್ಸ್​​ ಪೌಲ್​ ಅವರನ್ನು ಮಾತನಾಡಿಸಿ ಏನು ಆಗಲ್ಲ ಎಂದು ಧೈರ್ಯ ತುಂಬಿದ್ದರು. ಸಿರಂಜಿಯಲ್ಲಿ ಲಸಿಕೆಯನ್ನು ತುಂಬುತ್ತಿದಂತೆ ಪೌಲ್​​ ಗಾಬರಿಯಿಂದ ನಿಂತಲೇ ಜಿಗಿಯಲು ಆರಂಭಿಸಿದರು. ನರ್ಸ್​​ ಕೈಗೆ ಇಂಜೆಕ್ಷನ್​ ನೀಡಲು ಮುಂದಾಗುತ್ತಿದ್ದಂತೆ ಅವರ ಮೇಲೆಯೇ ಕುಸಿತಂತೆ ವಾಲಿದರು ಪೌಲ್​. ಕಣ್ಣು ಮುಚ್ಚಿಕೊಂಡು ಲಸಿಕೆ ಪಡೆದೊಡನೆ ಕೂಗಿಕೊಂಡು ಪೌಲ್​​ ಧುತ್​ ಎಂದು ಕೆಳಗೆ ಬಿದ್ದೇ ಬಿಟ್ಟರು. ಅಂಗಾತ ಮಲಗಿದ ಪೌಲ್​​ರನ್ನು ಸಿಬ್ಬಂದಿ ಶೂಶ್ರಷೆ ಮಾಡುವ ದೃಶ್ಯ ಸದ್ಯ ಎಂಥವರಲ್ಲೂ ನಗು ಹುಕ್ಕಿಸುತ್ತಿದೆ. ಗಟ್ಟಿಮುಟ್ಟಾದ ವ್ಯಕ್ತಿ ಸಣ್ಣ ಸೂಜಿಗೆ ಈ ಪರಿ ಹೆದರಿದನ್ನು ಕಂಡು ನೆಟ್ಟಿಗರು ನಗೆಗಡಲಲ್ಲಿ ತೇಲುತ್ತಿದ್ದಾರೆ.ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 92 ಸಾವಿರದ,596 ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ದೇಶದ ಸಕ್ರಿಯ ಕೇಸ್‌ಲೋಡ್ ಸಂಖ್ಯೆ 12 ಲಕ್ಷ, 31 ಸಾವಿರದ, 415ಕ್ಕೆ ಬಂದು ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 1 ಲಕ್ಷ, 62 ಸಾವಿರದ, 664 ಜನರು ದೇಶದ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,219 ಜನರು ಈ ಮಾರಕ ವೈರಾಣುವಿಗೆ ಬಲಿಯಾಗಿದ್ದು, ದೇಶದ ಒಟ್ಟು ಸಾವಿನ ಸಂಖ್ಯೆ 3 ಲಕ್ಷ, 53 ಸಾವಿರದ, 528 ಕ್ಕೆ ಲುಪಿದೆ. ಇದೇ ವೇಳೆ ದೇಶಾದ್ಯಂತ ಒಟ್ಟು 23 ಕೋಟಿ, 90 ಲಕ್ಷ, 58 ಸಾವಿರದ 360 ಕೊರೊನಾ ಲಸಿಕೆ ನೀಡಲಾಗಿದೆ.
Youtube Videoನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 9, 2021, 4:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories