Viral Video: ಆರ್ಡರ್ ಮಾಡಿದ್ದು ‘ಆನಿಯನ್ ರಿಂಗ್ಸ್’; ಪಾರ್ಸಲ್ ನಲ್ಲಿ ಬಂದಿದ್ದನ್ನು ನೋಡಿ ನೆಟ್ಟಿಗರಿಗೆ ನಗುವೋ ನಗು

ಕೆಲವೊಮ್ಮೆ ನಾವು ಆರ್ಡರ್ ಮಾಡಿದಂತಹ ಆಹಾರ ಪದಾರ್ಥಗಳ ಬದಲಿಗೆ ಬೇರೆ ಆಹಾರ ಪದಾರ್ಥಗಳನ್ನು ನಮಗೆ ಇವರು ತಂದು ಕೊಡಬಹುದು ಮತ್ತು ಕೆಲವೊಮ್ಮೆ ಚಿತ್ರದಲ್ಲಿ ತೋರಿಸಿದ ಆಕಾರಕ್ಕಿಂತ ಚಿಕ್ಕ ಆಕಾರವನ್ನು ಈ ಆಹಾರ ಪದಾರ್ಥ ಹೊಂದಿರಬಹುದು. ಇಲ್ಲೂ ಸಹ ಇದೇ ರೀತಿಯ ಒಂದು ಘಟನೆ ನಡೆದಿದೆ ನೋಡಿ.

ಆನ್ಲೈನ್ ನಲ್ಲಿ ಫುಡ್ ಆರ್ಡರ್ ಮಾಡಿದ ಯುವಕ

ಆನ್ಲೈನ್ ನಲ್ಲಿ ಫುಡ್ ಆರ್ಡರ್ ಮಾಡಿದ ಯುವಕ

  • Share this:
ಈಗಂತೂ ಮೊದಲಿನ ತರಹ ಹಸಿವಾಗಿದೆ ಅಂತ ನಿಮ್ಮ ಮನೆಯಿಂದ (Home) ಮೈಲಿ ದೂರದಲ್ಲಿರುವ ಹೊಟೇಲ್ ಗೆ (Hotel) ಹೋಗಿ ಹೊಟ್ಟೆ ತುಂಬಿಸಿಕೊಳ್ಳುವ ಅಗತ್ಯತೆ ಇಲ್ಲ, ಏಕೆಂದರೆ ಈಗ ಅನೇಕ ರೀತಿಯ ಕಂಪನಿಗಳು (Company) ಈ ಆಹಾರವನ್ನು ಮನೆಗಳಿಗೆ ತಲುಪಿಸುವ ವ್ಯವಹಾರವನ್ನು ಶುರು ಮಾಡಿದ್ದು, ನಿಮಗೆ ಹಸಿವಾಗುವ ಮುಂಚೆಯೇ ನಿಮ್ಮ ಮನೆಯಲ್ಲಿಯೇ ಕುಳಿತುಕೊಂಡು ನಿಮಗೆ ತಿನ್ನಬೇಕೆನಿಸುವ ತಿಂಡಿ ತಿನಿಸುಗಳನ್ನು ಮತ್ತು ಆಹಾರವನ್ನು (Food) ಕ್ಷಣ ಮಾತ್ರದಲ್ಲಿ ಮೊಬೈಲ್ ಫೋನ್ ನಲ್ಲಿ ಆಪ್ ತೆರೆದು ಆರ್ಡರ್ (Order) ಮಾಡಬಹುದು. ಆ ಆಹಾರವನ್ನು ನಿಮ್ಮ ಮನೆಗೆ ತಗೆದುಕೊಂಡು ಬಂದು ತಲುಪಿಸುವ ಜವಾಬ್ದಾರಿ ಮಾತ್ರ ಆ ಫುಡ್ ಡೇಲಿವರಿ ಬಾಯ್ಸ್ ಮೇಲೆ ಇರುತ್ತದೆ.

ಇದು ಎಷ್ಟು ಅನುಕೂಲತೆ ಮಾಡಿಕೊಟ್ಟಿದೆ ಎಂದರೆ ಇಂದು ಅನೇಕರು ಕೆಲಸ ಮಾಡುವ ದಂಪತಿಗಳು ಕೆಲಸ ಮುಗಿಯುವ ವೇಳೆಗೆ ಒಂದು ಆಹಾರವನ್ನು ಆರ್ಡರ್ ಮಾಡಿದರೆ ಸಾಕು ಅವರು ಕೆಲಸ ಮಾಡಿ ಮುಗಿಸುವಷ್ಟರಲ್ಲಿ ಅವರ ಮನೆಯ ಬಾಗಿಲಿಗೆ ಬಂದಿರುತ್ತದೆ. ಆದರೆ ಇದರಿಂದ ಕೆಲವು ಅನಾನುಕೂಲತೆಗಳು ಸಹ ಇವೆ. ಅವುಗಳು ಏನೆಂದು ನೀವು ಕೇಳಬಹುದು.ಕೆಲವೊಮ್ಮೆ ನಾವು ಆರ್ಡರ್ ಮಾಡಿದಂತಹ ಆಹಾರ ಪದಾರ್ಥಗಳ ಬದಲಿಗೆ ಬೇರೆ ಆಹಾರ ಪದಾರ್ಥಗಳನ್ನು ನಮಗೆ ಇವರು ತಂದು ಕೊಡಬಹುದು ಮತ್ತು ಕೆಲವೊಮ್ಮೆ ಚಿತ್ರದಲ್ಲಿ ತೋರಿಸಿದ ಆಕಾರಕ್ಕಿಂತ ಚಿಕ್ಕ ಆಕಾರವನ್ನು ಈ ಆಹಾರ ಪದಾರ್ಥ ಹೊಂದಿರಬಹುದು. ಇಲ್ಲೂ ಸಹ ಇದೇ ರೀತಿಯ ಒಂದು ಘಟನೆ ನಡೆದಿದೆ ನೋಡಿ.

ಅನಿಯನ್ ರಿಂಗ್ಸ್ ಆರ್ಡರ್ ಮಾಡಿದ ಯುವಕನಿಗೆ ಬಂದಿದ್ದೇನು ನೋಡಿ
ಇಲ್ಲೊಬ್ಬ ವ್ಯಕ್ತಿ ತನಗೆ ಏನಾದರೂ ತಿನ್ನಬೇಕು ಎಂದೆನಿಸಿ ಅನಿಯನ್ ಎಂದರೆ ಈರುಳ್ಳಿಯ ರಿಂಗ್ಸ್ ಗಳನ್ನು ಆರ್ಡರ್ ಮಾಡಿದ್ದಾರೆ. ಆದರೆ ಆ ವ್ಯಕ್ತಿ ಪಡೆದದ್ದು ಮಾತ್ರ ತುಂಬಾನೇ ಹಾಸ್ಯಾಸ್ಪದವಾಗಿದೆ ಎಂದು ಹೇಳಬಹುದು.

ಇದನ್ನೂ ಓದಿ: The Hemp Cafe: ಸೆಣಬಿನಿಂದ ತಯಾರಾದ ಆರೋಗ್ಯಕರ ಖಾದ್ಯಗಳನ್ನು ನೀವೂ ಸವಿಯಬೇಕಾ? ಹಾಗಿದ್ರೆ ಈ ಕೆಫೆಗೆ ಭೇಟಿ ಕೊಡಿ

ದೆಹಲಿಯ ಇನ್‌ಸ್ಟಾಗ್ರಾಮ್ ಬಳಕೆದಾರ ಉಬೈದು ಆನ್‌ಲೈನ್ ನಲ್ಲಿ ಗರಿಗರಿಯಾದ ಹುರಿದ ಅನಿಯನ್ ರಿಂಗ್ಸ್ ಗಳ ಒಂದು ಪ್ಲೇಟ್ ಅನ್ನು ಆರ್ಡರ್ ಮಾಡಿದರು. ಆದಾಗ್ಯೂ, ಅವನ ಡೆಲಿವರಿ ಬಂದಾಗ, ಅವನು ಆ ಬಂದಿರುವಂತಹ ಭಕ್ಷ್ಯವನ್ನು ನೋಡಿ ದಿಗ್ಭ್ರಮೆಗೊಂಡನು. ಅವು ಆನಿಯನ್ ರಿಂಗ್ಸ್ ಬದಲಾಗಿ ಇದ್ದದ್ದು ಬರಿ ಈರುಳ್ಳಿ ಅಂತ ಹೇಳಬಹುದು.

ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್
ಈ ಆರ್ಡರ್ ನಿಂದ ಅಸಮಾಧಾನಗೊಂಡ ವ್ಯಕ್ತಿ ತನ್ನ ಭಾವನೆಗಳನ್ನು ರೀಲ್ ರೂಪದಲ್ಲಿ ಒಟ್ಟುಗೂಡಿಸಲು ನಿರ್ಧರಿಸಿ ತಾನು ಏನು ಆರ್ಡರ್ ಮಾಡಿದ್ದೇನೆಂದು ನೆಟ್ಟಿಗರಿಗೆ ತೋರಿಸಿ, ಆ ಯುವಕ ರೆಸ್ಟೋರೆಂಟ್ ನಿಂದ ಪಡೆದ ಹಸಿ ಈರುಳ್ಳಿಯ ಆರು ತುಂಡುಗಳನ್ನು ಸಣ್ಣ ಪಾರದರ್ಶಕ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ತೋರಿಸಿದ್ದಾನೆ.

ವ್ಯಂಗ್ಯದ ಟಿಪ್ಪಣಿಯಲ್ಲಿ, ನಗುತ್ತಾ ಆ ಹಸಿ ಈರುಳ್ಳಿಗಳನ್ನು ತಮ್ಮ ಬೆರಳುಗಳಲ್ಲಿ ಸಂತೋಷದಿಂದ ಧರಿಸಿ 'ವಿಜಯದ ಸಂಕೇತ'ವನ್ನು ತೋರಿಸಿದರು. ಈ ಅಸಂಬದ್ಧ ಘಟನೆಯ ಬಗ್ಗೆ ತಮಾಷೆಯ ಟೇಕ್ ಅನ್ನು ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ ಈಗಾಗಲೇ 3,500ಕ್ಕೂ ಹೆಚ್ಚು ಲೈಕ್ ಗಳು ಸಹ ಲಭಿಸಿವೆ ಎಂದು ಹೇಳಬಹುದು.

ವಿಡಿಯೋ ನೋಡಿ ವ್ಯಂಗ್ಯವಾಡಿದ ಜನ
ಈ ಪೋಸ್ಟ್ ಶೀಘ್ರದಲ್ಲಿಯೇ ಅಪ್ಲಿಕೇಶನ್ ನಲ್ಲಿ ಸಾಕಷ್ಟು ಜನರ ಗಮನ ಸೆಳೆಯಿತು. ಜೊಮ್ಯಾಟೋದ 10 ನಿಮಿಷಗಳ ಡೆಲಿವರಿಯ ವಾಸ್ತವತೆ ಇದು ಎಂದು ಕೆಲವರು ತಮಾಷೆ ಮಾಡಿದರೆ, ಇತರರು ತಾಂತ್ರಿಕವಾಗಿ ನೋಡುವುದಾದರೆ ಈ ಆರ್ಡರ್ ಕಳಿಸಿರುವುದು ತಪ್ಪಲ್ಲ ಎಂದು ವ್ಯಂಗ್ಯವಾಡಿದರು. ರೆಸ್ಟೋರೆಂಟ್ ಬೇಸನ್ ಮತ್ತು ಎಣ್ಣೆಯನ್ನು ಡಿಐವೈ ಕಿಟ್ ಆಗಿ ಕಳುಹಿಸುತ್ತದೆಯೇ? ಎಂದು ಒಬ್ಬರು ತಮಾಷೆಯಾಗಿ ಕೇಳಿದರು.


View this post on Instagram


A post shared by UbaidU (@ubaidu_15)
ಇನ್ನೊಬ್ಬರು ಈ ಘಟನೆಯ ವೀಡಿಯೋ ಪೋಸ್ಟ್ ನೋಡಿ ವ್ಯಕ್ತಿಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿ "ಅವನ ನಗುವಿನ ಹಿಂದೆ ಇರುವಂತಹ ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ” ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Watermelon art: ಇದು ಅಂತಿಂತ ಕಲಾಕೃತಿ ಅಲ್ಲ! ಕಲ್ಲಂಗಡಿ ಹಣ್ಣಿನಲ್ಲಿ ಮೂಡಿಬಂದ ಕಲಾತ್ಮಕ ಚಿತ್ತಾರ

ಆ ವ್ಯಕ್ತಿ ಮರುಪಾವತಿಯನ್ನು ಕೇಳಿದ್ದಾರೆಯೇ ಅಥವಾ ಅವರ ಆರ್ಡರ್ ಅನ್ನು ಗೊಂದಲಗೊಳಿಸಿದ್ದಕ್ಕಾಗಿ ರೆಸ್ಟೋರೆಂಟ್ ಹೇಗೆ ಕ್ಷಮೆಯಾಚಿಸಿದೆ ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಇದು ಆ ವ್ಯಕ್ತಿಯ ಹಸಿವನ್ನು ದೂರ ಮಾಡದೆ ಇದ್ದರೂ ಸಹ ನೆಟ್ಟಿಗರನ್ನು ಮಾತ್ರ ಜೋರಾಗಿ ನಗುವಂತೆ ಮಾಡಿದೆ ಈ ಪೋಸ್ಟ್ ಅಂತ ಹೇಳಿದರೆ ತಪ್ಪಾಗುವುದಿಲ್ಲ.
Published by:Ashwini Prabhu
First published: