ಪ್ರಿಯತಮೆಗೆ ಮೋಸ ಮಾಡಿ 18 ಲಕ್ಷ ರೂಪಾಯಿ ದೋಚಿದ ಪ್ರೇಮಿ..!

ಆರೋಪಿಯು ತನ್ನ ಪ್ರಿಯತಮೆ ಮಲಗಿದ್ದಾಗ ಆಕೆಯ ಫೋನ್ ನ ಮುಖ ಗುರುತಿಸುವಿಕೆಯ ಮೂಲಕ ಹುಡುಗಿಯ ಬ್ಯಾಂಕ್ ಖಾತೆಗೆ ಪ್ರವೇಶಿಸಿದ್ದಾನೆ. ಇದಕ್ಕಾಗಿ ಅವನು ಆಕೆಯ ಕಣ್ಣು ರೆಪ್ಪೆಗಳನ್ನು ತನ್ನ ಕೈಯಿಂದ ಎಳೆದಿದ್ದಾನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿಮ್ಮ ಬಳಿ ಸ್ಮಾರ್ಟ್‌ಫೋನ್ (Smartphone) ಇದ್ದರೆ, ನೀವು ಅದಕ್ಕೆ ಅನೇಕ ವಿಧಗಳಲ್ಲಿ ಲಾಕ್ ಮಾಡಿಕೊಳ್ಳಬಹುದು. ಈ ಅನೇಕ ವಿಧಗಳಲ್ಲಿ ಬಳಕೆದಾರರು ತುಂಬಾ ಸುರಕ್ಷಿತವಾದ ಲಾಕ್ ಮಾಡುವ (Secure locking ) ವಿಧಾನ ಎಂದು ‘ಮುಖ ಗುರುತಿಸುವಿಕೆ' ('Face Recognition) ಯನ್ನು ಹೆಚ್ಚಿನ ಜನರು ಬಳಸುವುದನ್ನು ನಾವು ನೋಡಬಹುದು.ಎಷ್ಟೋ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಮೊಬೈಲ್ ಫೋನ್ (Mobile phone) ಸಂಖ್ಯೆ ಬಳಸಿಕೊಂಡು ಲಾಕ್ ಮಾಡಿಕೊಳ್ಳುವುದರಿಂದ ಆ ಸಂಖ್ಯೆಯನ್ನು (Phone numbers) ಬೇರೆಯವರು ಕಂಡು ಹಿಡಿಯಬಹುದು ಎಂದು ಈ ‘ಮುಖ ಗುರುತಿಸುವಿಕೆ’ ಯನ್ನು ಬಳಸಿ ಲಾಕ್ ಮಾಡುತ್ತಾರೆ. ಆದರೆ ಇದು ಸಹ ಅಷ್ಟೊಂದು ಸುರಕ್ಷಿತವಲ್ಲ ಎಂದು ಒಂದು ಘಟನೆ (Incident) ಸಾರಿ ಸಾರಿ ಹೇಳುತ್ತದೆ.

ಲಕ್ಷಾಂತರ ರೂಪಾಯಿ ಕೊಳ್ಳೆ
ಚೀನಾದಲ್ಲಿ ನಡೆದಂತಹ ಒಂದು ಪ್ರಕರಣದಲ್ಲಿ ಒಬ್ಬ ವ್ಯಕ್ತಿಯು ಫೇಸ್ ಐಡಿ ಬಳಸಿ ತನ್ನ ಗೆಳತಿಯ ಖಾತೆಯಿಂದ ಲಕ್ಷಾಂತರ ರೂಪಾಯಿಗಳನ್ನು ಕೊಳ್ಳೆ ಹೊಡೆದಿದ್ದಾನೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ: Onlineನಲ್ಲಿ ಹೋಮ ಮಾಡ್ಸಿದ್ರೆ ನಿಂಗೆ ದೊಡ್ಡ ಕೆಲಸ ಸಿಗುತ್ತೆ: ಹೀಗೆ ಹೇಳಿ 38 ಲಕ್ಷ ಪಂಗನಾಮ ಹಾಕಿದ ದೇವಮಾನವ!

ಒಂದು ವರದಿಯ ಪ್ರಕಾರ, ಚೀನಾದ ವ್ಯಕ್ತಿಯೊಬ್ಬ ತನ್ನ ಗೆಳತಿಗೆ ಸುಮಾರು 18 ಲಕ್ಷ ರೂಪಾಯಿ ವಂಚಿಸಿದ್ದಕ್ಕಾಗಿ ಮೂರೂವರೆ ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ‘ಮುಖ ಗುರುತಿಸುವಿಕೆ’ ಬಳಸಿಕೊಂಡು ಲಾಕ್ ಮಾಡಿರುವ ಫೋನ್ ಅನ್ನು ಈ ಪ್ರೇಮಿ ಹೇಗೆ ತೆರೆದನು ಮತ್ತು ಅದರಿಂದ ಆಕೆಯ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಹೇಗೆ ದೋಚಿದ್ದಾನೆ ನೀವೇ ನೋಡಿ.

ಮುಖ ಗುರುತಿಸುವಿಕೆ
ತನ್ನ ಪ್ರಿಯತಮೆ ಗಾಢ ನಿದ್ರೆಯಲ್ಲಿದ್ದಾಗ ಆ ಪ್ರಿಯಕರ ಆಕೆಯ ಮುಖವನ್ನು ಅವಳ ಫೋನ್‌ನಲ್ಲಿ ‘ಮುಖ ಗುರುತಿಸುವ’ ಮೂಲಕ ಫೋನಿನ ಲಾಕ್ ಅನ್ನು ತೆರೆದನು.
ಆರೋಪಿಯು ತನ್ನ ಪ್ರಿಯತಮೆ ಮಲಗಿದ್ದಾಗ ಆಕೆಯ ಫೋನ್ ನ ‘ಮುಖ ಗುರುತಿಸುವಿಕೆ’ ಯ ಮೂಲಕ ಹುಡುಗಿಯ ಬ್ಯಾಂಕ್ ಖಾತೆಗೆ ಪ್ರವೇಶಿಸಿದ್ದಾನೆ. ಇದಕ್ಕಾಗಿ ಅವನು ಆಕೆಯ ಕಣ್ಣು ರೆಪ್ಪೆಗಳನ್ನು ತನ್ನ ಕೈಯಿಂದ ಎಳೆದನು ಎಂದು ನ್ಯಾಯಾಲಯದ ದಾಖಲೆಗಳನ್ನು ಉಲ್ಲೇಖಿಸಿ, ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಬೆರಳಚ್ಚು ಕೂಡ ಪ್ರಯತ್ನ
ನ್ಯಾನಿಂಗ್‌ನ ಜಿಲ್ಲಾ ಪೀಪಲ್ಸ್ ನ್ಯಾಯಾಲಯವು ಆರೋಪಿಗೆ ಶಿಕ್ಷೆಯನ್ನು ನೀಡಿದೆ. 28 ವರ್ಷ ವಯಸ್ಸಿನ ವ್ಯಕ್ತಿಯು ತನ್ನ ಪ್ರಿಯತಮೆಯ ಅಲಿಪೇ ಖಾತೆಗೆ ಪ್ರವೇಶ ಪಡೆಯಲು ತನ್ನ ಗೆಳತಿಯ ಫೋನ್‌ನಲ್ಲಿ ಮುಖ ಗುರುತಿಸುವಿಕೆ ಬಳಸಿದ ತಪ್ಪಿತಸ್ಥನೆಂದು ಕಂಡು ಬಂದಿದೆ. ಈ ವ್ಯಕ್ತಿ ಮೊದಲು ತನ್ನ ಮೊಬೈಲ್ ಫೋನ್ ಅನ್ನು ಅನ್‌ಲಾಕ್ ಮಾಡಲು ಅನೇಕರ ಬೆರಳಚ್ಚುಗಳನ್ನು ಬಳಸಿದ್ದನು ಎಂದು ಹೇಳಲಾಗುತ್ತಿದೆ.

ಹಣಕ್ಕಾಗಿ ಹತಾಶ
ಒಮ್ಮೆ ಅವನು ಅವಳ ಅಲಿಪೇ ಖಾತೆಗೆ ಪ್ರವೇಶ ಪಡೆದ ನಂತರ, ಆರೋಪಿಯು ಅವಳ ಖಾತೆಯ ಪಾಸ್‌ವರ್ಡ್ ಬದಲಾಯಿಸಿದನು ಮತ್ತು ಅವಳ ಖಾತೆಗಳಿಂದ 150,000 ಯುವಾನ್‌ಗೂ ಹೆಚ್ಚು ಹಣ ವರ್ಗಾಯಿಸಿಕೊಂಡನು. ಆ ವ್ಯಕ್ತಿಯು ವ್ಯಾಪಕವಾದ ಜೂಜಾಟದ ಸಾಲಗಳನ್ನು ಹೊಂದಿದ್ದರಿಂದ ಹಣಕ್ಕಾಗಿ ಹತಾಶನಾಗಿದ್ದನು ಎಂದು ವರದಿಯಾಗಿದೆ. ಮೂಲ ಕಾರಣ ಏನೇ ಇರಲಿ, ಈ ಘಟನೆಯು ಇಂದು ನಮ್ಮ ಸಾಧನಗಳಲ್ಲಿ ಭದ್ರತಾ ವೈಶಿಷ್ಟ್ಯಗಳು ಹೊಂದಿರುವ ನ್ಯೂನತೆಗಳ ಕಠಿಣ ವಾಸ್ತವತೆಯನ್ನು ಬಹಿರಂಗಪಡಿಸುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: PUBG: ಪಬ್ ಜೀ ಹುಚ್ಚಿನಿಂದಾಗಿ 3 ಲಕ್ಷ ಹಣ ಕಳೆದುಕೊಂಡ ಬಾಲಕ

ಈ ಮುಖ ಗುರುತಿಸುವಿಕೆ ಸಾಫ್ಟ್‌ವೇರ್ ಆಗಾಗ್ಗೆ ಒಬ್ಬ ವ್ಯಕ್ತಿಯು ಮಲಗಿದ್ದಾನೆಯೇ ಎಂದು ಪತ್ತೆ ಹಚ್ಚುತ್ತದೆ ಮತ್ತು ಅಂತಹ ಸಂದರ್ಭಗಳಲ್ಲಿ ಫೋನ್‌ಗೆ ಪ್ರವೇಶ ತಿರಸ್ಕರಿಸುತ್ತದೆ. ಈ ಸಂದರ್ಭದಲ್ಲಿ, ಅವನಿಗೆ ಹೇಗೆ ಪ್ರವೇಶ ಪಡೆಯಲು ಅನುಮತಿ ಸಿಕ್ಕಿತು ಎಂಬುದು ಇನ್ನೂ ಅನೇಕರಿಗೆ ದೊಡ್ಢ ಪ್ರಶ್ನೆಯಾಗಿದೆ.
Published by:vanithasanjevani vanithasanjevani
First published: