Viral Video: ನೀರಿನಾಳದಲ್ಲಿ ಮೂನ್ ವಾಕ್ ಮಾಡ್ತಾನೆ ಈತ! ಎಷ್ಟು ಚಂದ ಇದೆ ನೋಡಿ

ಇಲ್ಲೊಬ್ಬ ವ್ಯಕ್ತಿ ಸರಾಗವಾಗಿ ನೀರಿನಾಳದಲ್ಲಿ ನಡೆದುಕೊಂಡು ಹೋಗುವುದಲ್ಲದೆ ಒಂದು ಹಾಡಿಗೆ ಡ್ಯಾನ್ಸ್ ಸಹ ಮಾಡಿದ್ದಾನೆ. ಈ ವ್ಯಕ್ತಿ ನಾವು ಹೇಗೆ ಹೊರಗೆ ವಾಕ್ ಮಾಡುತ್ತೇವೆಯೋ, ಹಾಗೆಯೇ ನೀರಿನಾಳದಲ್ಲಿ ನಡೆದುಕೊಂಡು ಹೋಗುವುದಲ್ಲದೆ ಒಮ್ಮೆ ತಲೆ ಕೆಳಗೆ ಮಾಡಿ ನೀರಿನಲ್ಲಿ ನಡೆದುಕೊಂಡು ಹೋಗಿದ್ದಾನೆ.

ನೀರಿನಾಳದಲ್ಲಿ ಮೂನ್ ವಾಕ್ ಮಾಡಿದ ವ್ಯಕ್ತಿ

ನೀರಿನಾಳದಲ್ಲಿ ಮೂನ್ ವಾಕ್ ಮಾಡಿದ ವ್ಯಕ್ತಿ

  • Share this:
ಸಾಮಾನ್ಯವಾಗಿ ನಾವು ಆರು ಅಡಿ ಇರುವಂತಹ ಈಜುಕೊಳದಲ್ಲಿ (Swimming Pool) ಈಜಾಡುತ್ತಿರುವಾಗ ಆಯಾಸ ಆಯ್ತು ಅಂತ ಈಜುವುದನ್ನೇ ನಿಲ್ಲಿಸಿ ಅದೇ ನೀರಿನಲ್ಲಿ ನಡೆದುಕೊಂಡು ಹೋಗಲು ಪ್ರಯತ್ನಿಸುತ್ತೇವೆ.  ಆದರೆ, ಇಲ್ಲೊಬ್ಬ ವ್ಯಕ್ತಿ ಸರಾಗವಾಗಿ ನೀರಿನಾಳದಲ್ಲಿ ನಡೆದುಕೊಂಡು (Walking) ಹೋಗುವುದಲ್ಲದೆ ಒಂದು ಹಾಡಿಗೆ ಡ್ಯಾನ್ಸ್ (Dance) ಸಹ ಮಾಡಿದ್ದಾನೆ. ಈ ವ್ಯಕ್ತಿ ನಾವು ಹೇಗೆ ಹೊರಗೆ ವಾಕ್ ಮಾಡುತ್ತೇವೆಯೋ, ಹಾಗೆಯೇ ನೀರಿನಾಳದಲ್ಲಿ ನಡೆದುಕೊಂಡು ಹೋಗುವುದಲ್ಲದೆ ಒಮ್ಮೆ ತಲೆ ಕೆಳಗೆ ಮಾಡಿ ನೀರಿನಲ್ಲಿ ನಡೆದುಕೊಂಡು ಹೋಗಿದ್ದಾನೆ. ಇದನ್ನು ನೀವು ತಕ್ಷಣಕ್ಕೆ ನಂಬಲಿಕ್ಕಿಲ್ಲ, ಆದರೆ ಸ್ವಲ್ಪ ಸಮಯದ ನಂತರ ನೀವು ಆಮ್ಲಜನಕದ ಸಿಲಿಂಡರ್ ಸಹಾಯದಿಂದ ಅಥವಾ ಇನ್ನ್ಯಾವುದೋ ಒಂದು ರೀತಿಯಿಂದ ನಡೆದುಕೊಂಡು ಹೋಗಿರಬಹುದು ಅಂತ ಊಹೆ  ಮಾಡುತ್ತೀರಿ ಆದರೆ ನಿಮ್ಮ ಈ ಊಹೆ ತಪ್ಪು.  

ಜಯದೀಪ್ ನೀರಿನಾಳದಲ್ಲಿ ವಾಕ್ ಮಾಡೋದಷ್ಟೆ ಅಲ್ಲ, ಡ್ಯಾನ್ಸ್ ಸಹ ಮಾಡ್ತಾರೆ
ನೀವು ಊಹೆ ಮಾಡಿದಂತೆ ಇಲ್ಲಿ ಆ ವ್ಯಕ್ತಿ ಯಾವುದೇ ಸಹಾಯವನ್ನು ಬಳಸಿಕೊಂಡಿಲ್ಲ, ಹಾಗೆಯೇ ಆರಾಮಾಗಿ ನಡೆದುಕೊಂಡು ಹೋಗಿ, ನಂತರ ಡ್ಯಾನ್ಸ್ ಮಾಡಿದ್ದಾನೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಈ ವಿಡಿಯೋದಲ್ಲಿ ಮೈಕೆಲ್ ಜಾಕ್ಸನ್ ಅವರ 'ಸ್ಮೂತ್ ಕ್ರಿಮಿನಲ್' ಬೀಟ್ಸ್ ಗೆ ಈ ವ್ಯಕ್ತಿ ಗ್ರೂವ್ ಮಾಡುವುದನ್ನು ಇಲ್ಲಿ ನೋಡಬಹುದು. ಜಯದೀಪ್ ಗೋಹಿಲ್ ಎಂಬಾತ ನೀರಿನಾಳದ ಡ್ಯಾನ್ಸ್ ಸ್ಟೆಪ್ಸ್ ಗಳೊಂದಿಗೆ ಇಡೀ ಅಂತರ್ಜಾಲದಲ್ಲಿಯೇ ದೊಡ್ಡ ಅಚ್ಚರಿ ಮೂಡಿಸಿದ್ದಾನೆ.

ಈ ವ್ಯಕ್ತಿ "ಹೈಡ್ರೋಮ್ಯಾನ್ ಆಫ್ ಇಂಡಿಯಾ" ಅಂತೆ!
ಸಾಮಾಜಿಕ ಮಾಧ್ಯಮದ ಬಳಕೆದಾರರು "ಹೈಡ್ರೋಮ್ಯಾನ್ ಆಫ್ ಇಂಡಿಯಾ" ಎಂದು ಹೆಸರಿಸಿರುವ ಈ ವ್ಯಕ್ತಿ ಈ ಹಿಂದೆಯೂ ಜನಪ್ರಿಯ ಹಾಡುಗಳಿಗೆ ಹೀಗೆ ಡ್ಯಾನ್ಸ್ ಮಾಡುವ ಮೂಲಕ ಅಂತರ್ಜಾಲದಲ್ಲಿ ನೆಟ್ಟಿಗರ ಹೃದಯವನ್ನು ಗೆದ್ದಿದ್ದರು.

ಇದನ್ನೂ ಓದಿ: Accident: 'ಸಿಡಿಲೇ ಬರಲಿ ಏನೇ ಬರಲಿ ನಾನು ಜಗ್ಗೋಲ್ಲ' ಅಂತಾನೇ ಈ ಭೂಪ!

ವಿಡಿಯೋದೊಂದಿಗೆ, ಗೋಹಿಲ್ "ನನ್ನ ಈ ಆವೃತ್ತಿಯನ್ನು ನೋಡಲು ಬಯಸಿದ ನನ್ನ ಪ್ರೇಕ್ಷಕರಿಗೆ" ಎಂದು ಶೀರ್ಷಿಕೆಯನ್ನು ಬರೆದಿದ್ದಾರೆ. ಅವನು ಬಿಲಿಯರ್ಡ್ ಮೇಜಿನ ಮೇಲೆ ಮೂನ್ ವಾಕ್ ಮಾಡುವುದನ್ನು ಮತ್ತು ನಂತರ ಅದೇ ರೀತಿ ಮಾಡಲು ತಲೆಕೆಳಗಾಗಿ ಫ್ಲಿಪ್ ಮಾಡುವುದನ್ನು ಕಾಣಬಹುದು. ಅವರು ಯಾವುದೇ ಆಮ್ಲಜನಕ ಸಿಲಿಂಡರ್ ಇಲ್ಲದೆ ಈ ಡ್ಯಾನ್ಸ್ ಮಾಡಿರುವುದನ್ನು ನಾವು ಇಲ್ಲಿ ನೋಡಬಹುದು.

8 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ ಈ ವಿಡಿಯೋ
ಸೆಪ್ಟೆಂಬರ್ 8 ರಂದು ಪೋಸ್ಟ್ ಮಾಡಲಾದ ಈ ವಿಡಿಯೋವು 8 ಮಿಲಿಯನ್ ವೀಕ್ಷಣೆಗಳು, 9 ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಗಳು ಮತ್ತು ಹಲವಾರು ಕಾಮೆಂಟ್ ಗಳನ್ನು ಗಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಪ್ರತಿಭೆಯನ್ನು ಶ್ಲಾಘಿಸುತ್ತಿದ್ದಾರೆ ಮತ್ತು ಪಾಪ್ ಕಿಂಗ್ ಮೈಕೆಲ್ ಜಾಕ್ಸನ್ ಇದನ್ನು ನೋಡಬೇಕಾಗಿತ್ತು, ಅವರು ಇವರ ಮೂನ್ ವಾಕಿಂಗ್ ಕೌಶಲ್ಯಗಳಿಂದ ಪ್ರಭಾವಿತರಾಗುತ್ತಿದ್ದರು ಎಂದು ಅನೇಕರು ಹೇಳಿದರು. "ನಾನು ನೋಡಿದ ಅತ್ಯಂತ ರೋಚಕವಾದ ಮೂನ್ ವಾಕ್ ಇದು" ಅಂತ ಬಳಕೆದಾರರೊಬ್ಬರು ಬರೆದು ಕೊಂಡಿದ್ದಾರೆ.


View this post on Instagram


A post shared by Hydroman (@hydroman_333)
ಈ ವಿಡಿಯೋಗೆ ನೆಟ್ಟಿಗರು ಏನ್ ಹೇಳಿದ್ದಾರೆ ಗೊತ್ತೇ?
ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ "ಉತ್ತಮ ವಿಷಯವೆಂದರೆ ಇಲ್ಲಿ ಈ ವ್ಯಕ್ತಿ ತಲೆಕೆಳಗಾಗಿ ನಡೆಯುವುದನ್ನು ಸಹ ನಾವು ನೋಡಬಹುದು.. ಯಾರಾದರೂ ವಿಭಿನ್ನವಾಗಿ ಏನೋ ಒಂದನ್ನು ಮಾಡುತ್ತಿರುವುದನ್ನು ನೋಡುವುದೇ ಒಂದು ಮಜಾ" ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  Viral Video: ಬ್ರಹ್ಮಾಸ್ತ್ರ ಸಿನೆಮಾದಲ್ಲಿ ಅಲಿಯಾ ಪಾತ್ರವನ್ನು ಮಿಮಿಕ್ರಿ ಮಾಡಿದ ಮಹಿಳೆ, ಇಲ್ಲಿದೆ ವೈರಲ್ ವಿಡಿಯೋ

ಗೋಹಿಲ್ ನೀರೊಳಗೆ ಈ ರೀತಿ ಮಾಡುತ್ತಿರುವುದು ಇದೇನು ಮೊದಲಲ್ಲ. ಮತ್ತೊಂದು ವೀಡಿಯೋದಲ್ಲಿ ಸಹ ಇವರು ಜೇಮ್ಸ್ ಯಂಗ್ ಅವರ ಇನ್ಫಿನಿಟಿ ಹಾಡಿಗೆ ಅಂಡರ್ ವಾಟರ್ ಪ್ರದರ್ಶನ ನೀಡಿದ್ದಾರೆ.
Published by:Ashwini Prabhu
First published: