ಈ ಅದೃಷ್ಟ (Luck) ಅನ್ನೋದು ಮನುಷ್ಯನಿಗೆ ಹೇಗೆ? ಯಾವಾಗ? ಯಾವ ರೀತಿಯಲ್ಲಿ ಒಲಿದು ಬರುತ್ತದೆ ಅಂತ ಯಾರಿಂದಲೂ ಊಹೆ ಮಾಡೋದಕ್ಕೆ ಆಗುವುದಿಲ್ಲ. ಇವತ್ತು ಒಂದು ರೂಪಾಯಿಗೂ ಪರದಾಡುವ ವ್ಯಕ್ತಿ (Person) ನಾಳೆ ದೊಡ್ಡ ಶ್ರೀಮಂತನಾಗಬಹುದು. ಮನುಷ್ಯನ ಪರಿಸ್ಥಿತಿ ಹೇಗೆ ಬೇಕಾದರೂ ಬದಲಾಗಬಹುದು. ಇದೆಲ್ಲಾ ಈಗೇಕೆ ಹೇಳುತ್ತಿದ್ದೇವೆ ಅಂತ ನಿಮಗೆ ಆಶ್ಚರ್ಯವಾಗಬಹುದು, ಇದಕ್ಕೆ ಕಾರಣವಿದೆ. ಕೆಲವು ದಿನಗಳ ಹಿಂದೆ ಅಮೆರಿಕದ (America) ಮೇರಿಲ್ಯಾಂಡ್ ನ ಒಬ್ಬ ವ್ಯಕ್ತಿಯು ತಪ್ಪಾಗಿ ಒಂದೇ ಲಾಟರಿಯ (Lottery) ಮೂರು ಟಿಕೆಟ್ ಗಳನ್ನು ಖರೀದಿಸಿದ್ದರು. ಹಾಗೆ ತಪ್ಪಾಗಿ ಒಂದೇ ಲಾಟರಿಯ ಮೂರು ಟಿಕೆಟ್ ಗಳನ್ನು ಖರೀದಿಸಿದ್ದೇನೆ ಅಂತ ಸ್ವಲ್ಪ ಬೇಸರ ಮಾಡಿಕೊಂಡಿದ್ದರು.
ಆದರೆ ಆ ವ್ಯಕ್ತಿಗೆ ಒಲಿದು ಬಂದ ಅದೃಷ್ಟ ನೋಡಿ ಎಂತದ್ದು ಅಂತ. ಅವರು ಖರೀದಿಸಿದ ಆ ಮೂರು ಟಿಕೆಟ್ ಗಳನ್ನು ಅವರು ಗೆದ್ದಿದ್ದಾರೆ.
ಖರೀದಿಸಿದ ಮೂರು ಲಾಟರಿ ಟಿಕೆಟ್ ಗೆದ್ದಿರುವ ವ್ಯಕ್ತಿ
ಮಿರರ್ ಯುಕೆ ಪ್ರಕಾರ, 67 ವರ್ಷದ ನಿವಾಸಿಯೊಬ್ಬರು ಒಂದು ಪ್ರಮುಖವಾದ ಶಸ್ತ್ರಚಿಕಿತ್ಸೆ ಮಾಡಿಸುವುದಕ್ಕಾಗಿ ತಯಾರಿ ನಡೆಸುತ್ತಿದ್ದರು. ಆಗ ಅವರು ಹಾಗೆಯೇ ಅದೃಷ್ಟ ಪರೀಕ್ಷೆ ಮಾಡಿದರಾಯ್ತು ಅಂತ ಹೇಳಿ ಲಾಟರಿ ಟಿಕೆಟ್ ಗಳನ್ನು ಖರೀದಿಸಿದ್ದರು. ಆದರೆ ಅದೃಷ್ಟ ಅವರ ಕಡೆಗೆ ಇದ್ದಂತಿದೆ ನೋಡಿ, ಅವರು ಖರೀದಿಸಿದ ಲಾಟರಿಯ ಆ ಮೂರು ಟಿಕೆಟ್ ಗಳನ್ನು ಸಹ ಗೆದ್ದಿದ್ದಾರೆ.
ಒಂದು ವರದಿಯ ಪ್ರಕಾರ, ಖರೀದಿಯನ್ನು ತಪ್ಪಾಗಿ ಮಾಡಲಾಗಿದೆ ಮತ್ತು ಆ ಮೂರು ಟಿಕೆಟ್ ಗಳು ಕಳೆದ ವಾರ ಒಂದೇ ಸಮಯದಲ್ಲಿ ಡ್ರಾ ಆಗಿದ್ದು, ತನ್ನ ಹೆಸರನ್ನು ಹೇಳಲು ಇಚ್ಚಿಸದ ವ್ಯಕ್ತಿ ತಾನು ಮಧ್ಯಾಹ್ನ ಮತ್ತು ಸಂಜೆ ಪಿಕ್ 5 ಆಟಕ್ಕಾಗಿ ಒಂದೊಂದು ಟಿಕೆಟ್ ಗಳನ್ನು ಖರೀದಿಸಿದ್ದನ್ನು ಮರೆತಿದ್ದೇನೆ ಎಂದು ಬಹಿರಂಗಪಡಿಸಿದ್ದಾನೆ ಎಂದು ವರದಿಯಾಗಿದೆ.
ಎರಡು ಟಿಕೆಟ್ ಪತಿ ಖರೀದಿಸಿದರೆ, ಮೂರನೇ ಟಿಕೆಟ್ ಪತ್ನಿ ಖರೀದಿ ಮಾಡಿದ್ದಾರೆ..
ಏತನ್ಮಧ್ಯೆ, ಪತಿ ಈಗಾಗಲೇ ಒಂದೇ ಡ್ರಾಗೆ ಎರಡು ಬಾರಿ ಟಿಕೆಟ್ ಖರೀದಿಸಿದ್ದಾನೆ ಎಂದು ತಿಳಿಯದ ಅವನ ಹೆಂಡತಿ, ತನ್ನ ಗಂಡನಿಗೆ ನೆನಪಿಲ್ಲ ಎಂದು ಭಾವಿಸಿ ದಿನದ ನಂತರ ಮೂರನೇ ಟಿಕೆಟ್ ಸಹ ಖರೀದಿಸಿ ಮನೆಗೆ ತಂದಳು.
ಇದನ್ನೂ ಓದಿ: Viral Photo: ಗಾಳಿಯಲ್ಲಿ ತೇಲುವಾಸೆ ಅಂತ ಆಡ್ತಾ ಇದ್ದ ಹುಡುಗನಿಗೆ ಏನಾಯ್ತು ನೋಡಿ!
ಒಂದೇ ಡ್ರಾದಿಂದ ಮೂರು ಟಿಕೆಟ್ ಗಳನ್ನು ಹೊಂದಿರುವ ಬಗ್ಗೆ ಅವರು ತಿಳಿದ ನಂತರ, ವೃದ್ಧ ದಂಪತಿಗಳು ಹಣವನ್ನು ವ್ಯರ್ಥ ಮಾಡಿರುವ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡರು, ಆದರೆ ಅವರು ಮಾಡಿದ ಈ ತಪ್ಪು ಅವರಿಗೆ ಇಂತಹ ದೊಡ್ಡ ಜಾಕ್ಪಾಟ್ ಆನ್ನು ಗೆಲ್ಲಿಸುವಂತೆ ಮಾಡುತ್ತದೆ ಅಂತ ಅವರಿಗೆ ತಿಳಿದಿರಲಿಲ್ಲ.
ಇವರು ಗೆದ್ದಿರೋದು ಬರೋಬ್ಬರಿ 1.22 ಕೋಟಿ ರೂಪಾಯಿ
51359 ರ ಸಂಖ್ಯೆ ಇರುವಂತಹ ಎಲ್ಲಾ ಮೂರು ಟಿಕೆಟ್ ಗಳನ್ನು ಬಳಸಿಕೊಂಡು, 67 ವರ್ಷದ ವ್ಯಕ್ತಿ ಒಟ್ಟು 150,000 ಡಾಲರ್ ಎಂದರೆ ಸುಮಾರು 1,22,82,030 ರೂಪಾಯಿಯನ್ನು ಗೆದ್ದಿದ್ದಾರೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. "ನಾನು ಆಕಸ್ಮಿಕವಾಗಿ ಮೂರು ಟಿಕೆಟ್ ಗಳನ್ನು ಖರೀದಿಸಿದಾಗ, ಆ ಸಂಖ್ಯೆ ಮೂರು ಬಾರಿ ಗೆಲ್ಲುತ್ತದೆ ಅಂತ ಊಹಿಸಿರಲಿಲ್ಲ" ಎಂದು ಆ ವ್ಯಕ್ತಿ ಹೇಳಿದರು. ಆಶ್ಚರ್ಯಕರವಾಗಿ, ಮೇರಿಲ್ಯಾಂಡ್ ನ ಆ ವ್ಯಕ್ತಿ ಲಾಟರಿಯಲ್ಲಿ ದೊಡ್ಡ ಮೊತ್ತದ ಹಣವನ್ನು ಗೆದ್ದಿರುವುದು ಇದೇನು ಮೊದಲಲ್ಲ.
ವರದಿಗಳ ಪ್ರಕಾರ, ಅವರು ಕೆಲವು ವರ್ಷಗಳ ಹಿಂದೆ ನಾಲ್ಕು ಬಾಲ್ ಗಳ ಆಟದಲ್ಲಿ ದೊಡ್ಡ ಬಹುಮಾನವನ್ನು ಗೆದ್ದಿದ್ದರು. ವಿಶೇಷವೆಂದರೆ, ಆ ಹಿಂದಿನ ಗೆಲುವು ಕೂಡ ಒಂದು ತಪ್ಪಿನಿಂದಾಗಿ ಸಂಭವಿಸಿದ್ದು ಅಂತ ಹೇಳಲಾಗುತ್ತಿದೆ. ಡ್ರಾ ಸಮಯದಲ್ಲಿ, ಈ ವಯಸ್ಸಾದವರು ತಮ್ಮ ಮಗಳ ಜನನ ವರ್ಷದ ಸಂಖ್ಯೆಯಾದ 1979 ಅನ್ನು ಇಟ್ಟು ಆಡಲು ಬಯಸಿದ್ದರು. ಆದಾಗ್ಯೂ, ಅಂಗಡಿಯ ಗುಮಾಸ್ತನು ತಪ್ಪಾಗಿ ಕೇಳಿಸಿಕೊಂಡನು ಮತ್ತು ಅವರಿಗೆ ತಪ್ಪು ಸಂಖ್ಯೆ 1997 ಅನ್ನು ನೀಡಿದನು. ಆ ದಿನದ ನಂತರ, ಅವರು ಜಾಕ್ಪಾಟ್ ಅನ್ನು ಎಷ್ಟು ನಾಲ್ಕು ಅಂಕಿಗಳು ಮಾಡಿವೆ ಎಂದು ನೋಡಿದಾಗ ಅದು 1997 ಆಗಿತ್ತು.
ಇದನ್ನೂ ಓದಿ: Old Monk: ವರ್ಷಕ್ಕೆ 80 ಲಕ್ಷ ಬಾಟಲಿ ಮಾರಾಟ! ಭಾರತೀಯ ಬ್ರಾಂಡ್ ಮದ್ಯ ವಿಶ್ವದಲ್ಲೇ ಅತ್ಯುತ್ತಮವಂತೆ
ಈ ಜಾಕ್ಪಾಟ್ ಹಣದಿಂದ ನೀವು ಏನು ಮಾಡಲು ಯೋಜಿಸುತ್ತೀರಿ ಎಂದು ಕೇಳಿದಾಗ, ಅವರು ಆ ಹಣದಲ್ಲಿ ಸ್ವಲ್ಪ ತನ್ನ ಮಗಳಿಗೆ ನೀಡಲು ಬಯಸುತ್ತೇನೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ