news18-kannada Updated:January 6, 2021, 9:58 PM IST
Twitter images
ವ್ಯಕ್ತಿಯೊಬ್ಬ ಕುರುವೊಂದಕ್ಕೆ ಹೊಡೆದು, ಇಟ್ಟಿಗೆಯಿಂದ ಥಳಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿಯಲ್ಲಿ ಈ ಘಟನೆ ಬೆಳಕೆಗೆ ಬಂದಿದ್ದು, ಮೂಕ ಪ್ರಾಣಿಗೆ ಹಿಂಸಿಸಿದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಮಂಗಳವಾರದಂದು ಪೂರ್ವದೆಹಲಿಯ ವಿನೋದನಗರದ ಹಾದಿಯಲ್ಲಿ ಕಮಾಲ್ ಎಂಬಾತ ನಡೆದುಕೊಂಡು ಹೋಗುತ್ತಿದ್ದ. ಆತ ಹಾದು ಹೋದುವ ವೇಳೆ ಅಲ್ಲಿದ್ದ ಪುಟ್ಟ ಕರುವೊಂದು ಆತನ ಹಿಂಭಾಕ್ಕೆ ಬಂದು ಗುದ್ದಿತ್ತು. ಕರು ಗುದ್ದಿದ ರಭಸಕ್ಕೆ ಆತನ ಕೈಯಲ್ಲಿದ್ದ ವಸ್ತು ನೆಲಕ್ಕೆ ಬಿದ್ದಿದೆ. ಇದರಿಂದ ಸಿಟ್ಟುಗೊಂಡ ಆತ ಕರುವಿಗೆ ಸರಿಯಾಗಿ ಹೊಡೆದಿದ್ದಾನೆ. ಮಾತ್ರವಲ್ಲದೆ, ಬೂಟು ಕಾಲಿನಿಂದ ಮನಬಂದಂತೆ ಒದೆಯುತ್ತಾನೆ.
ನಂತರ ಪಕ್ಕದಲ್ಲಿದ್ದ ಇಟ್ಟಿಗೆ ತುಂಡನ್ನು ತೆಗೆದುಕೊಂಡು ಕರುವಿನ ಬೆನ್ನಿಗೆ ತಲೆಯ ಭಾಗಕ್ಕೆ ಸರಿಯಾಗಿ ಗುದ್ದಿದ್ದಾನೆ. ಅಷ್ಟರಲ್ಲಾಗಲೇ ಕರು ಸುಸ್ತಾಗಿ ಕೆಳಗೆ ಬಿದ್ದಿದೆ.
ಇನ್ನು ಆತನ ಹೊಡೆಯುವದನ್ನು ದಾರಿ ಹೋಕರು ನೋಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕರುವಿಗೆ ಮನಬಂದಂತೆ ಹೊಡೆದ ಕಮಾಲ್ನನ್ನು ಪ್ರಾಣಿ ರಕ್ಷಣಾ ಕಾಯ್ದೆಯಡಿ ಮಂಡಾವಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕರುವನ್ನು ಸಂಜಯ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸದ್ಯ ಅನೇಕರು ಸಾಮಾಜಿಕ ಜಾಲತಾಣದಲ್ಲಿ ದೃಶ್ಯವನ್ನು ಶೇರ್ ಮಾಡುತ್ತಿದ್ದಾರೆ. ಇದನ್ನು ಕಂಡು ನೆಟ್ಟೆಗರು ಕರುವನ್ನು ಹಿಂಸಿಸಿದವನಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದು ಕಾಮೆಂಡ್ ಬರೆದಿದ್ದಾರೆ.
First published:
January 6, 2021, 9:55 PM IST