Shocking News: ಬಳಸಿದ ಸಿರಿಂಜ್ ಹಾಗೂ ಪಾಪಸು ಕಳ್ಳಿಯಿಂದ ರೆಡಿ ಆಯ್ತು ಲಿಪ್​ಸ್ಟಿಕ್! ಸಖತ್ ಕಲರ್

ವ್ಯಕ್ತಿಯೊಬ್ಬ ಬಳಸಿದ ಸಿರಿಂಜ್, ಪಾಪಸ್ ಕಳ್ಳಿ ಮತ್ತು ಎಣ್ಣೆಯಿಂದ ಲಿಪ್ಸ್ಟಿಕ್ ತಯಾರಿಸುತ್ತಿರುವ ವೀಡೀಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಲಿಪ್ಸ್ಟಿಕ್ ಮಾಡುವ ಈ ವಿಶಿಷ್ಟ ವಿಧಾನವನ್ನು ನೋಡಿ ಬಳಕೆದಾರರು ಅಚ್ಚರಿಗೊಂಡಿದ್ದಾರೆ.

ವ್ಯಕ್ತಿ ಬಳಸಿದ ಸಿರಿಂಜ್ ಮತ್ತು ಪಾಪಸು ಕಳ್ಳಿಯಿಂದ ಲಿಪ್ ಸ್ಟಿಕ್ ತಯಾರಿಸುವ ದೃಶ್ಯ

ವ್ಯಕ್ತಿ ಬಳಸಿದ ಸಿರಿಂಜ್ ಮತ್ತು ಪಾಪಸು ಕಳ್ಳಿಯಿಂದ ಲಿಪ್ ಸ್ಟಿಕ್ ತಯಾರಿಸುವ ದೃಶ್ಯ

  • Share this:
ಈ ಜಗತ್ತಿನಲ್ಲಿ ಪ್ರತಿನಿತ್ಯ ಏನಾದರೂ ಹೊಸ ಹೊಸ ಆವಿಷ್ಕಾರಗಳು (Innovation)  ನಡೆಯುತ್ತಲೇ ಇರುತ್ತದೆ. ಮಾನವನ ಸೃಜನಾತ್ಮಕ ಆಲೋಚನೆಗಳು ಹೊಸ ಹೊಸ ವಸ್ತುಗಳ ಸೃಷ್ಟಿಗೆ ಕಾರಣವಾಗುತ್ತದೆ. ಆದರೆ ಎಲ್ಲಾ ಆವಿಷ್ಕಾರಗಳು ಉಪಯುಕ್ತವಾಗಬೇಕೆಂದಿಲ್ಲ. ಆದರೂ ಅವುಗಳು ವೈರಲ್ ಆಗುವುದಂತು ಸತ್ಯ. ಸೌಂದರ್ಯವರ್ಧಕಗಳಿಗೆ (Cosmetic Items) ಸಂಬಂಧಿಸಿದಂತೆ ದಿನ ದಿನ ಹೊಸ ಹೊಸ ಐಟಂಗಳು ಕಂಡು ಹಿಡಿಯುತ್ತಾರೆ. ಇದೀಗ ವ್ಯಕ್ತಿಯೊಬ್ಬ ಸಿರಿಂಜ್ (Syringe)  ಮತ್ತು ಪಾಪಸ್ ಕಳ್ಳಿಯನ್ನು (Papas Cactus) ಬಳಸಿ ಲಿಪ್ ಸ್ಟಿಕ್ (Lipstick) ತಯಾರಿಸಿದ್ದಾನೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗಿದೆ ಮತ್ತು ಲಿಪ್ ಸ್ಟಿಕ್ ಬಳಕೆದಾರರನ್ನು ಬೆರಗುಗೊಳಿಸಿದೆ.

ಬಳಕೆಯಾದ ಸಿರಿಂಜ್ ಬಳಕೆ
ವೀಡಿಯೊದಲ್ಲಿ ವ್ಯಕ್ತಿ ಲಿಪ್ ಸ್ಟಿಕ್ ತಯಾರಿಸಲು ಮೊದಲು ಬಳಕೆ ಮಾಡಿದ ಸಿರಿಂಜ್ ಬಳಸುವುದನ್ನು ಗಮನಿಸಬಹುದು. ಬಳಕೆ ಮಾಡಿದ್ದ ಸಿರಿಂಜನ್ನು ಬಿಸಿ ನೀರಿನಲ್ಲಿ ಕುದಿಸುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಈ ವ್ಯಕ್ತಿ ಈ ಹಿಂದೆ ಲಿಪ್ ಸ್ಟಿಕ್ ತಯಾರಿಸಲು ಬಳಸುತ್ತಿದ್ದ ಸಿರಿಂಜ್ ಗಳನ್ನು ಕ್ರಿಮಿನಾಶಕ ಮಾಡಿ ಸೂಜಿಗಳನ್ನು ಕತ್ತರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.





ಪಾಪಸು ಕಳ್ಳಿಯಿಂದ ಕೆಂಪು ಬಣ್ಣದ ತಯಾರಿಕೆ
ಪಾಪಸುಕಳ್ಳಿ, ಎಣ್ಣೆಯನ್ನು ಬಳಸಿ ಈ ವ್ಯಕ್ತಿ ಲಿಪ್‌ಸ್ಟಿಕ್ ತಯಾರಿಸುತ್ತಾರೆ. ದೊಡ್ಡ ಕಳ್ಳಿ ಬಳಸಿ ಮಾಡಿದ ಕೆಂಪು ಬಣ್ಣದ ವಸ್ತುಗಳನ್ನು ಸ್ವಲ್ಪ ಎಣ್ಣೆ ಮತ್ತು ನೀರಿನಿಂದ ಕುದಿಸಲಾಗುತ್ತದೆ. ಈ ಎಲ್ಲಾ ಕಾರ್ಯವಿಧಾನಗಳ ನಂತರ, ಈ ಮನುಷ್ಯನು ಸಿದ್ಧಪಡಿಸಿದ ದ್ರಾವಣವನ್ನು ಸೀರಿಂಗ್ಗೆ ತುಂಬುತ್ತಾನೆ.

ಇದನ್ನೂ ಓದಿ: Guinness World Record: ಕೇರಳದ ಆಭರಣ ವ್ಯಾಪಾರಿಯಿಂದ ವಿಶ್ವದಾಖಲೆ! 24,679 ವಜ್ರಗಳನ್ನು ಹೊಂದಿರುವ ಉಂಗುರ ವಿನ್ಯಾಸ

ಲಿಪ್ ಸ್ಟಿಕ್ ಅನ್ನು ತುಟಿಗೆ ಹಚ್ಚಿ ತೋರಿಸಿದ ವ್ಯಕ್ತಿ
ಫ್ರೀಜ್ ಮಾಡಿದ ನಂತರ ಲಿಪ್ ಸ್ಟಿಕ್ ಅನ್ನು ವ್ಯಕ್ತಿ ಸ್ವಯಂ ತನ್ನ ತುಟಿಗಳಿಗೆ ಹಚ್ಚುವ ದೃಶ್ಯವನ್ನು ವೀಡಿಯೋದಲ್ಲಿ ತೋರಿಸುತ್ತಾನೆ. ಈ ಎಲ್ಲಾ ಪ್ರಕ್ರಿಯೆಯನ್ನು ಸೋಶಿಯಲ್ ಮೀಡೀಯಾದಲ್ಲಿ ನೋಡಿದ ಬಳಕೆದಾರರು ಆಶ್ಚರ್ಯ ಪಟ್ಟಿದ್ದಾರೆ.

6 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು
'ಸ್ಕ್ರೀಮರ್ ಜಿಮ್' ಎನ್ನುವ ಟ್ವಿಟ್ಟರ್ ಖಾತೆ ಈ ವಿಡಿಯೋವನ್ನು ಶೇರ್ ಮಾಡಿದೆ. "100 ವರ್ಷಗಳಲ್ಲಿ ಇದು ಎಲ್ಲಿಗೆ ಹೋಗುತ್ತದೆ" ಎಂದು ನೀವು ಊಹಿಸಲು ಸಾಧ್ಯವಿಲ್ಲ ಎಂದು ವೀಡಿಯೊ ಶೀರ್ಷಿಕೆಯನ್ನು ಸಹ ನೀಡಲಾಗಿದೆ. ವೈರಲ್ ವೀಡಿಯೊವನ್ನು 8.6 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ ಮತ್ತು 313K ಬಳಕೆದಾರರು ವೀಡಿಯೊವನ್ನು ಇಷ್ಟಪಟ್ಟಿದ್ದಾರೆ.

ಆರಂಭದಲ್ಲಿ ಟಿಕ್‌ಟಾಕ್‌ನಲ್ಲಿ ಅಪ್ಲೋಡ್ ಆಗಿದ್ದ ಈ ವಿಡಿಯೋ ಇದೀಗ ವಿವಿಧ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿದೆ. ಎಲ್ಲರೂ ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಹೀಗಾಗಿ, ಈ ವಿಡಿಯೋ ಸಾಕಷ್ಟು ಮಿಲಿಯನ್ ವೀಕ್ಷಣೆಯನ್ನೂ ಗಳಿಸುವಲ್ಲಿ ಯಶಸ್ವಿಯಾಗಿದೆ.

ಕಮೆಂಟ್ನಲ್ಲಿ ತಮ್ಮ ಗೊಂದಲಗಳನ್ನು ಹಂಚಿಕೊಂಡ ಬಳಕೆದಾರರು
ವೀಡೀಯೋದಲ್ಲಿ ವ್ಯಕ್ತಿ ಲಿಪ್ ಸ್ಟಿಕ್ ತಯಾರಿಸುವಾಗ ಬಳಸಿದ ಕೆಲವೊಂದು ಅಂಶಗಳ ಬಗ್ಗೆ ಜನರು ಗೊಂದಲಗೊಂಡಿದ್ದಾರೆ. ಅವನು ಕಳ್ಳಿ ಎಲೆಗಳ ಮೇಲೆ ಬೆಂಕಿಕಡ್ಡಿಗಳಲ್ಲಿ ಹಾಕಿದ ಆ ಪುಡಿ ಯಾವುದು?? ಮತ್ತು ಅದು ಅಲ್ಲಿಗೆ ಹೇಗೆ ಬಂದಿತು?" ಎಂಬುದು ಹೆಚ್ಚಿನ ಬಳಕೆದಾರರ ಪ್ರಶ್ನೆಯಾಗಿದೆ.

ಇದನ್ನೂ ಓದಿ: Kareena In Traffic Light: ಟ್ರಾಫಿಕ್ ಲೈಟ್​ನಲ್ಲಿ ಕರೀನಾ! ಬಾಲಿವುಡ್ ಚೆಲುವೆಗೆ ವಾಹನ ಸವಾರರು ಫಿದಾ

ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದ್ದು, ಈ ವೀಡೀಯೋದಲ್ಲಿನ  ಲಿಪ್ಸ್ಟಿಕ್ ತಯಾರಿಕೆಯ ಸಂಪೂರ್ಣ ಪ್ರಕ್ರಿಯೆಯು ಸೋಶಿಯಲ್ ಮೀಡಿಯಾ ಬಳಕೆದಾರರನ್ನು ಬೆರಗುಗೊಳಿಸಿದೆ.
Published by:Nalini Suvarna
First published: