• Home
  • »
  • News
  • »
  • trend
  • »
  • ಮ್ಯಾಕ್‌ ಡೊನಾಲ್ಡ್‌ ಸಿಬ್ಬಂದಿ ಚಿಕನ್‌ ಬರ್ಗರ್‌ನಿಂದ ಐಸ್‌ ಕ್ರೀಂ ತಯಾರಿಸಿದ ವಿಡಿಯೋ ನೋಡಿ ನೆಟ್ಟಿಗರಿಂದ ಕ್ಲಾಸ್‌!

ಮ್ಯಾಕ್‌ ಡೊನಾಲ್ಡ್‌ ಸಿಬ್ಬಂದಿ ಚಿಕನ್‌ ಬರ್ಗರ್‌ನಿಂದ ಐಸ್‌ ಕ್ರೀಂ ತಯಾರಿಸಿದ ವಿಡಿಯೋ ನೋಡಿ ನೆಟ್ಟಿಗರಿಂದ ಕ್ಲಾಸ್‌!

ಚಿಕನ್​ ಬರ್ಗರ್​ನಿಂದ ಐಸ್​ಕ್ರೀಂ ತಯಾರಿಸುತ್ತಿರುವುದು.

ಚಿಕನ್​ ಬರ್ಗರ್​ನಿಂದ ಐಸ್​ಕ್ರೀಂ ತಯಾರಿಸುತ್ತಿರುವುದು.

ಚಿಕನ್‌ ಬರ್ಗರ್‌ನಲ್ಲಿ ಐಸ್‌ಕ್ರೀಮ್‌ ತಯಾರಿಸಿದ ವಿಡಿಯೋವನ್ನು ನೋಡಿದ ನೆಟ್ಟಿಗರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಒಬ್ಬ ಬಳಕೆದಾರ ಈ ವಿಡಿಯೋ ವೀಕ್ಷಿಸಿ, ಯಾರು ಇದನ್ನು ತಯಾರಿಸಿದ್ದಾರೆ ಎಂಬುದು ನನಗೆ ತಿಳಿಯಬೇಕು. ಅವರು ತಯಾರಿಸಿದ ಐಸ್‌ಕ್ರೀಮ್‌ ಅನ್ನು ಆತನ ಮುಖಕ್ಕೆ ಮೆತ್ತಬೇಕು ಎಂದಿದ್ದಾರೆ.

ಮುಂದೆ ಓದಿ ...
  • Share this:

    ಗ್ರಾಹಕರನ್ನು ಸೆಳೆಯಲು ಹೋಟೆಲ್‌ ಸೇರಿದಂತೆ ಆನ್‌ಲೈನ್ ಆಧಾರಿತ ಆಹಾರ ಪೂರೈಕೆದಾರ ಸಂಸ್ಥೆಗಳು ಕೂಡ ಆಕರ್ಷಕ ಆಫರ್‌ಗಳನ್ನು ನೀಡುತ್ತವೆ. ಒಂದು ಚಿಕನ್‌ ಬಿರಿಯಾನಿ ತೆಗೆದುಕೊಂಡರೆ ಲೆಗ್‌ ಪೀಸ್‌ ಉಚಿತ. ಒಂದು ಪಿಜ್ಜಾ ತೆಗೆದುಕೊಂಡರೇ ಐಸ್‌ಕ್ರೀಂ ಉಚಿತ ಎಂದು ಗ್ರಾಹಕರನ್ನು ಸೆಳೆಯುತ್ತವೆ. ಆದರೆ, ‘ಕಾಂಬೊ’ ಆಫರ್‌ನ ಆಹಾರ ತಯಾರಿಸುತ್ತಿರುವ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ವಿಡಿಯೋ ನೋಡಿದ ಆಹಾರಪ್ರಿಯರು ಹೌಹಾರಿದ್ದಾರೆ.


    ಹೌದು, ಆಹಾರಕ್ಕೆ ಸಂಬಂಧಿಸಿದ್ದಂತೆ ಅನೇಕ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಕಳೆದ ಕೆಲವು ವರ್ಷಗಳಿಂದ ಕಾಂಬೊ ಆಫರ್‌ನೊಂದಿಗೆ ಗ್ರಾಹಕರನ್ನು ಸೆಳೆಯುವುದು ಒಂದು ಪ್ರವೃತ್ತಿಯಾಗಿದೆ. ಕಾಂಬೊ ಆಫರ್‌ ವಿಚಾರಕ್ಕಾಗಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ವೈರಲ್ ಆಗಿದ್ದಾರೆ. ಇನ್ನು, ಗ್ರಾಹಕರನ್ನು ಸೆಳೆಯಲು ಕಾಂಬೊ ಆಫರ್‌ನಲ್ಲಿ ಎರಡು ಖಾದ್ಯಗಳು ಕೂಡ ಒಂದರಿಂದ ಒಂದಕ್ಕೆ ಸಂಬಂಧ ಇರುವಂತೆ ಇರುತ್ತದೆ.


    ಇನ್ನು, ದೈತ್ಯ ಪಿಜ್ಜಾ ಕಂಪನಿ ಆಗಿರುವ ಮ್ಯಾಕ್‌ ಡೊನಾಲ್ಡ್‌ ಚಿಕನ್‌ ಬರ್ಗರ್‌ನೊಂದಿಗೆ ವ್ಯಕ್ತಿಯೊಬ್ಬರು ಐಸ್‌ ಕ್ರೀಮ್‌ ತಯಾರಿಸುವ ದೃಶ್ಯವನ್ನು ತೋರಿಸಲಾಗುತ್ತದೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ವಿಡಿಯೋದಲ್ಲಿ ಏನಿದೆ?



    ಚಿಕನ್‌ ಬರ್ಗರ್‌ನಲ್ಲಿ ಐಸ್‌ಕ್ರೀಮ್‌ ತಯಾರಿಸಿದ ವಿಡಿಯೋ ಆರಂಭದಲ್ಲಿ ತಿನ್ನಲು ಯೋಗ್ಯವಿರುವ ಚಿಕನ್‌ ಬರ್ಗರ್‌ ಅನ್ನು ತೆಗೆದುಕೊಂಡ ವ್ಯಕ್ತಿಯೊಬ್ಬರು ಮೊದಲಿಗೆ ಚಿಕನ್‌ ಬರ್ಗರ್‌ ಅನ್ನು ಚಿಕ್ಕದಾಗಿ ಎಲ್ಲವೂ ಕತ್ತರಿಸಿಕೊಂಡು ಸಣ್ಣಗೆ ಆಗುವಂತೆ ಹಿಸುಕುತ್ತಾನೆ. ಬಳಿಕ ಅದಕ್ಕೆ ಹಾಲಿನ ಕೆನೆ ಸೇರಿಸಿ ಮೃದುವಾಗಿ ಕಲಕುತ್ತಾನೆ. ಅದು ಮೆತ್ತಗೆ ಐಸ್‌ಕ್ರೀಮ್‌ ರೀತಿಯಲ್ಲಿ ಕ್ರೀಮ್‌ ಆದ ನಂತರ ಅದನ್ನು ಸಣ್ಣ ಕಪ್‌ನಲ್ಲಿ ಬಡಿಸುತ್ತಾನೆ.


    ಇದನ್ನೂ ಓದಿ: ED Probe - ವಿದೇಶೀ ವಿನಿಯಮ ನಿಯಮಗಳ ಉಲ್ಲಂಘನೆ ಆರೋಪ: ಅಮೇಜಾನ್ ವಿರುದ್ಧ ಇಡಿ ತನಿಖೆ


    ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ದರ್ಶನ್‌ ಪಾಠಕ್‌ ಎಂಬುವರು ಹಂಚಿಕೊಂಡಿದ್ದು, ಈ ವಿಡಿಯೋವನ್ನು 2.43 ಲಕ್ಷ ವೀಕ್ಷಿಸಿದ್ದು, ನೂರಕ್ಕೂ ಹೆಚ್ಚು ಜನರು ಕಾಮೆಂಟ್ಸ್‌ ಮಾಡಿದ್ದಾರೆ.


    ಇನ್ನು, ಚಿಕನ್‌ ಬರ್ಗರ್‌ನಲ್ಲಿ ಐಸ್‌ಕ್ರೀಮ್‌ ತಯಾರಿಸಿದ ವಿಡಿಯೋವನ್ನು ನೋಡಿದ ನೆಟ್ಟಿಗರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಒಬ್ಬ ಬಳಕೆದಾರ ಈ ವಿಡಿಯೋ ವೀಕ್ಷಿಸಿ, ಯಾರು ಇದನ್ನು ತಯಾರಿಸಿದ್ದಾರೆ ಎಂಬುದು ನನಗೆ ತಿಳಿಯಬೇಕು. ಅವರು ತಯಾರಿಸಿದ ಐಸ್‌ಕ್ರೀಮ್‌ ಅನ್ನು ಆತನ ಮುಖಕ್ಕೆ ಮೆತ್ತಬೇಕು ಎಂದಿದ್ದಾರೆ. ವಿಡಿಯೋ ನೋಡಿದ ನೆಟಿಜನ್ಸ್‌, ಐಸ್‌ಕ್ರೀಮ್‌ ತಯಾರಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

    Published by:MAshok Kumar
    First published: