• Home
  • »
  • News
  • »
  • trend
  • »
  • Guinness World Records: ಒಂದೇ ಬೆರಳಿನಲ್ಲಿ 129 ಕೆಜಿ ಭಾರ ಎತ್ತಿ ಗಿನ್ನೆಸ್ ದಾಖಲೆ ಬರೆದ ವ್ಯಕ್ತಿ!

Guinness World Records: ಒಂದೇ ಬೆರಳಿನಲ್ಲಿ 129 ಕೆಜಿ ಭಾರ ಎತ್ತಿ ಗಿನ್ನೆಸ್ ದಾಖಲೆ ಬರೆದ ವ್ಯಕ್ತಿ!

ಒಂದೇ ಬೆರಳಿನಲ್ಲಿ 129 ಕೆಜಿ ಭಾರ ಎತ್ತಿದ ವ್ಯಕ್ತಿ

ಒಂದೇ ಬೆರಳಿನಲ್ಲಿ 129 ಕೆಜಿ ಭಾರ ಎತ್ತಿದ ವ್ಯಕ್ತಿ

ತೂಕವನ್ನು ಕೇವಲ ಒಂದು ಬೆರಳಿನಲ್ಲಿ ಎತ್ತುವುದು ಎಂದರೆ ನಮಗೆ ನಿಮಗೆ ಊಹೆ ಮಾಡಿಕೊಳ್ಳುವುದು ಕಷ್ಟ. ಆದರೆ ಅಸಾಧ್ಯವಾದ ಕೆಲಸವನ್ನು ಯುಕೆ ಮೂಲದ ಸ್ಟೀವ್ ಕೀಲರ್ ಎಂಬಾತ ಸಾಧಿಸಿ ತೋರಿಸಿದ್ದಾರೆ. 129.50 ಕೆಜಿ ತೂಕವನ್ನು ಎಂಟು ಸೆಕೆಂಡುಗಳ ಕಾಲ ಎತ್ತಿ ಹಿಡಿಯುವ ಮೂಲಕ ಕೀಲರ್ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಒಂದೇ ಬೆರಳಿನಿಂದ 129.50 ಕೆಜಿ ಭಾರವಾದ ತೂಕವನ್ನು (Weight) ಎತ್ತಿ ಹಿಡಿಯುವ ಮೂಲಕ ಇಂಗ್ಲೆಂಡ್ (England) ಮೂಲದ ವ್ಯಕ್ತಿಯೊಬ್ಬರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ (Guinness World Records) ಮಾಡಿದ್ದಾರೆ. ಮೂವತ್ತು, ನಲವತ್ತು ಕೆಜಿ ಎತ್ತುವುದಕ್ಕೆ ಸಾಮಾನ್ಯರಾದ ನಾವು ಹೆಣಗಾಡುತ್ತೇವೆ. ಅಂಥದ್ದರಲ್ಲಿ 129.50 ಕೆಜಿ ತೂಕವನ್ನು, ಅದು ಕೇವಲ ಒಂದೇ ಬೆರಳಿನಲ್ಲಿ (Finger) ಎತ್ತುವುದು ಅಂದರೆ ಸಾಮಾನ್ಯವಾದ ಮಾತಲ್ಲ ಬಿಡಿ. ಇಷ್ಟೇಲ್ಲಾ ತೂಕವನ್ನು ಕೇವಲ ಒಂದು ಬೆರಳಿನಲ್ಲಿ ಎತ್ತುವುದು ಎಂದರೆ ನಮಗೆ ನಿಮಗೆ ಊಹೆ ಮಾಡಿಕೊಳ್ಳುವುದು ಕಷ್ಟ. ಆದರೆ ಅಸಾಧ್ಯವಾದ ಕೆಲಸವನ್ನು ಯುಕೆ ಮೂಲದ ಸ್ಟೀವ್ ಕೀಲರ್ (Steve Keeler) ಎಂಬಾತ ಸಾಧಿಸಿ ತೋರಿಸಿದ್ದಾರೆ. 129.50 ಕೆಜಿ ತೂಕವನ್ನು ಎಂಟು ಸೆಕೆಂಡುಗಳ ಕಾಲ ಎತ್ತಿ ಹಿಡಿಯುವ ಮೂಲಕ ಕೀಲರ್ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.


ಒಂದು ಬೆರಳಿನಿಂದ ಅತಿ ಹೆಚ್ಚು ಡೆಡ್ಲಿಫ್ಟ್ ಮಾಡಿದ ವ್ಯಕ್ತಿ
ಜೂನ್ 10 ರಂದು ಹೊರ ಬಿದ್ದ ಮಾಹಿತಿಯ ಪ್ರಕಾರ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಕೀಲರ್ ತನ್ನ ಮಧ್ಯದ ಬೆರಳಿನಲ್ಲಿ 6 ಕಬ್ಬಿಣದ ಡಿಸ್ಕ್ ಗಳನ್ನು ಒಳಗೊಂಡ ಒಟ್ಟು 129.50 ಕೆಜಿಯನ್ನು ಎಂಟು ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳುವ ಮೂಲಕ "ಒಂದು ಬೆರಳಿನಿಂದ ಅತಿ ಹೆಚ್ಚು ಡೆಡ್ಲಿಫ್ಟ್" ಮಾಡಿದ ವ್ಯಕ್ತಿಯಾಗಿ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರು ಸೇರಿಸಿಕೊಂಡಿದ್ದಾರೆ. ಈ ಮೂಲಕ ಅರ್ಮೇನಿಯಾದ ಬೆನಿಕ್ ಇಸ್ರೇಲಿಯಾನ್ ಅವರ ದಶಕದ ಹಳೆಯ ದಾಖಲೆಯನ್ನು ಮುರಿದಿದ್ದಾರೆ.


ಇದನ್ನೂ ಓದಿ:  Travel: ವಿಶ್ವದ 7 ನಗ್ನ ಹೋಟೆಲ್​ಗಳಿವು! ಇಲ್ಲಿ ಬರೋದಾದ್ರೆ ಬಟ್ಟೆ ಬೇಕಾಗಿಲ್ಲ!


ಕೀಲರ್ ಒಬ್ಬ ಪರಿಣಿತ ಮಾರ್ಷಲ್ ಆರ್ಟಿಸ್ಟ್ ಆಗಿದ್ದು, ಅವರು 18 ವರ್ಷ ವಯಸ್ಸಿನಿಂದಲೂ ಕರಾಟೆ ಅಭ್ಯಾಸ ಮಾಡುತ್ತಿದ್ದಾರೆ. 48 ವರ್ಷ ವಯಸ್ಸಿನ ರೆಕಾರ್ಡ್ ಹೋಲ್ಡರ್ ಸ್ಟೀವ್ ಕೀಲರ್ ಸುಯೊಯ್-ರ್‍ಯು (Tsuyoi-Ryu) ಕರಾಟೆಯಲ್ಲಿ ಐದನೇ ಡಾನ್ ಬ್ಲ್ಯಾಕ್ ಬೆಲ್ಟ್ ಮತ್ತು ಜೂಡೋದಲ್ಲಿ ಮೊದಲ ಡಾನ್ ಬ್ಲ್ಯಾಕ್ ಬೆಲ್ಟ್ ಅನ್ನು ಹೊಂದಿದ್ದಾರೆ.


ಹಳೇ ದಾಖಲೆ ಬ್ರೇಕ್ ಮಾಡಿದ ಕೀಲರ್
ಕರಾಟೆ, ಮಾರ್ಷಲ್ ವಿದ್ಯೆಯನ್ನು ಕರಗತ ಮಾಡಿಕೊಂಡಿರುವ ಕೀಲರ್ ಗೆ ಭಾರ ಎತ್ತುವ ಸಾಮರ್ಥ್ಯಗಳು ಮೊದಲಿನಿಂದಲೇ ಮೈಗೂಡಿಕೊಂಡಿವೆ. ಹೀಗೆ ಒಂದು ದಿನ ಅಚಾನಕ್ ಆಗಿ ನಡೆದ ಘಟನೆಯಲ್ಲಿ ಕೀಲರ್ ತನ್ನ ಮಧ್ಯದ ಬೆರಳಿನಿಂದ ಭಾರವಾದ ತೂಕವನ್ನು ಎತ್ತಿದರು. ನಂತರ ಅವರು ಒಂದು ಬೆರಳಿನಿಂದ ಅತಿ ಹೆಚ್ಚು ತೂಕವನ್ನು ಹಿಡಿದಿಟ್ಟುಕೊಂಡು ಅಸ್ತಿತ್ವದಲ್ಲಿರುವ ಗಿನ್ನೆಸ್ ವಿಶ್ವ ದಾಖಲೆಗಳನ್ನು ಪರಿಶೀಲಿಸಿದರು.


ಈ ವೇಳೆ ಕೀಲರ್ ಗೆ ಅವರು ದಾಖಲೆಗಿಂತ ಕೇವಲ 50 ಕೆಜಿ ಮಾತ್ರ ಹಿಂದೆ ಇದ್ದಾರೆ ಎಂದು ತಿಳಿದು ಬಂದಿತು. ನನ್ನ ಹತ್ತಿರವೂ ಭಾರ ಎತ್ತುವ ಸಾಮರ್ಥ್ಯ ಇದೆ ಎಂದು ಅರಿತುಕೊಂಡ ಕೀಲರ್ ಹಳೆ ದಾಖಲೆಯನ್ನು ಮುರಿಯುವ ಪ್ರಯತ್ನದತ್ತ ಮುನ್ನಡೆದರು.


ಹೊಸ ದಾಖಲೆ ವರ್ಲ್ಡ್ ಬುಕ್ಕಿಗೆ ಸೇರ್ಪಡೆ
ಕೀಲರ್ 2011ರಲ್ಲಿ ಬೆನಿಕ್ ಇಸ್ರೇಲಿಯಾನ್ ಎತ್ತಿದ 121.7 ಕೆಜಿ ವಿಶ್ವ ದಾಖಲೆಯನ್ನು ಮುರಿಯುವ ಗುರಿಯನ್ನು ಬೆನ್ನಟ್ಟಿದರು. ನಂತರ ಫೆಬ್ರವರಿ 2022ರಲ್ಲಿ ಸ್ಟೀವ್ ಕೀಲರ್ ತನ್ನ ಮಧ್ಯದ ಬೆರಳಿನಿಂದ 129.50 ಕೆ.ಜಿ ತೂಕವನ್ನು ಯಶಸ್ವಿಯಾಗಿ ಎತ್ತಿದರು. ಈ ಮೂಲಕ ಪ್ರಸ್ತುತವಿದ್ದ ಬೆನಿಕ್ ಅವರ ದಾಖಲೆಯನ್ನು ಹಿಂದಿಕ್ಕಿದ ಕೀಲರ್ 129.5 ಕೆಜಿ ತೂಕವನ್ನು ಒಂದೇ ಬೇರಳಿನಲ್ಲಿ ಎತ್ತುವ ಮೂಲಕ ಹೊಸ ದಾಖಲೆಯನ್ನು ವರ್ಲ್ಡ್ ಬುಕ್ಕಿಗೆ ಸೇರ್ಪಡೆ ಮಾಡಿದ್ದಾರೆ.


ಇದನ್ನೂ ಓದಿ:  Mystery Machine Van: ನಿಮಗೂ ಸ್ಕೂಬಿ -ಡೂ ಮಿಸ್ಟರಿ ವ್ಯಾನ್‍ನಲ್ಲಿ ಉಳಿಯಬೇಕೆ? ಇಲ್ಲಿದೆ ಅವಕಾಶ


ಗಿನ್ನೆಸ್ ವಿಶ್ವ ದಾಖಲೆ ಬಗ್ಗೆ ಕೀಲರ್ ಹೇಳಿದ್ದು ಹೀಗೆ
ಗಿನ್ನೆಸ್ ವಿಶ್ವ ದಾಖಲೆ ಬಗ್ಗೆ ಮಾತನಾಡಿದ ಕೀಲರ್ “ನನ್ನ ಬೆರಳುಗಳು ಬಲವಾಗಿವೆ ಮತ್ತು ನನ್ನ ಲಿಫ್ಟ್ ಬಗ್ಗೆ ನಾನು ಹೆಮ್ಮೆಪಡುತ್ತೇನೆ" ಎಂದು ಹೇಳಿದರು. “ನನ್ನ ಈ ಸಾಧನೆಯನ್ನು ತನ್ನ ತಂದೆಗೆ ಅರ್ಪಿಸುವೆ, ಅವರು ನನ್ನ ಗಿನ್ನೆಸ್ ಪ್ರಯಾಣದ ತರಬೇತಿಯಲ್ಲಿ ನನ್ನ ಜೊತೆ ಬೆಂಬಲವಾಗಿ ನಿಂತಿದ್ದರು ಮತ್ತು ಈ ದಾಖಲೆಯು ಅವರು ನನಗೆ ಕಲಿಸಿದ ಎಲ್ಲದರ ಗೌರವಾರ್ಥವಾಗಿದೆ" ಎಂದು ಹೇಳಿದರು

Published by:Ashwini Prabhu
First published: