Viral Video: ನಾಗರಹಾವಿಗೆ ಮುತ್ತು ಕೊಟ್ಟ ಭೂಪ! ಅಬ್ಬಬ್ಬಾ, ಎಂಥಾ ಧೈರ್ಯ ಗುರು ಇವ್ನಿಗೆ?

ಹಾವಿಗೆ ಕಿಸ್​ ಕೊಟ್ಟ ವ್ಯಕ್ತಿ

ಹಾವಿಗೆ ಕಿಸ್​ ಕೊಟ್ಟ ವ್ಯಕ್ತಿ

ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸ್ವಲ್ಪ ಜೋರಾಗಿಯೇ ಹರಿದಾಡುತ್ತಿದೆ ನೋಡಿ. ಈ ವಿಡಿಯೋ ನೋಡಿದರೆ ನಿಮ್ಮ ಮೈ ಜುಂ ಅನ್ನುವುದು ಗ್ಯಾರೆಂಟಿ.

  • Share this:

ಹಾವು (Snake) ಅನ್ನೋ ಎರಡು ಅಕ್ಷರಗಳ ಈ ಒಂದು ಪದವನ್ನು ಕೇಳಿದರೆ ಸಾಕು, ಎಂತವರಿಗಾದರೂ ಕ್ಷಣ ಮಾತ್ರದಲ್ಲಿ ಭಯದಿಂದಾಗಿ ಬೆವರು ಬರುತ್ತದೆ. ಅದರಲ್ಲೂ ನಮ್ಮ ಮನೆಯ ಅಕ್ಕ-ಪಕ್ಕದಲ್ಲಿ ಅಥವಾ ನೆರೆಹೊರೆಯ ರಸ್ತೆಗಳಲ್ಲಿ (Road) ಎಲ್ಲಾದರೂ ಹಾವು ಬಂದಿದೆ ಅಂತ ಕೇಳಿದರೆ ಸಾಕು, ನಮಗೆ ಅದನ್ನು ಹಾವು ಹಿಡಿಯುವವರು ಬಂದು ಹಿಡಿದುಕೊಂಡು ಹೋಗುವವರೆಗೂ ಮನಸ್ಸಿಗೆ ಸಮಾಧಾನ ಇರುವುದಿಲ್ಲ. ಹೌದು, ಹಾವು ಕಡಿತಕ್ಕೆ (Drinking) ಔಷಧಿ ಸಿಗುವುದು ಸ್ವಲ್ಪ ಕಷ್ಟವೇ ಆದ್ದರಿಂದ ಆ ಹಾವಿನ ವಿಷ ಕಡಿಸಿಕೊಂಡವರ ಮೈಯೆಲ್ಲಾ ಅವರಿಸಿಕೊಂಡು ಸಾವನ್ನಪ್ಪುವ ಅವಕಾಶಗಳು ತುಂಬಾನೇ ಇರುವುದರಿಂದ ಸಾಮಾನ್ಯವಾಗಿಯೇ ಯಾರಿಗಾದರೂ ಪ್ರಾಣದ ಬಗ್ಗೆ ಭಯ (Fear) ಇದ್ದೇ ಇರುತ್ತದೆ.


ಅದರಲ್ಲೂ ಹಾವಿನ ಆ ಭಯಾನಕ ರೂಪ ನೋಡಿದರೆ ಯಾರಿಗಾದರೂ ಬಂದು ಎಲ್ಲಿ ತಮ್ಮನ್ನು ಕಚ್ಚಿ ಬಿಡುತ್ತೋ ಅನ್ನೋ ಭಯ ಮತ್ತು ಆತಂಕ ಇದ್ದೇ ಇರುತ್ತದೆ. ಆದರೆ ಎಷ್ಟೋ ಜನರು ಇಂತಹ ಭಯಾನಕ ಅಂತ ಅನ್ನಿಸುವ ನಾಗರಹಾವುಗಳನ್ನು ಒಳ್ಳೆ ಆಟವಾಡುತ್ತಾ ಕೈಯಲ್ಲಿ ಹಿಡಿದುಕೊಂಡು ಬಿಡುತ್ತಾರೆ. ಅಷ್ಟೇ ಅಲ್ಲದೆ ಅದನ್ನು ತಮ್ಮ ಕೊರಳಿಗೆ ಸಹ ಹಾಕಿಕೊಳ್ಳುತ್ತಾರೆ.


ಇಲ್ಲಿಯೂ ಸಹ ಇಂತಹದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸ್ವಲ್ಪ ಜೋರಾಗಿಯೇ ಹರಿದಾಡುತ್ತಿದೆ ನೋಡಿ. ಈ ವಿಡಿಯೋ ನೋಡಿದರೆ ನಿಮ್ಮ ಮೈ ಜುಂ ಅನ್ನುವುದು ಗ್ಯಾರೆಂಟಿ.


ಈ ಭಯಾನಕ ಅಂತ ಅನ್ನಿಸುವ ವಿಡಿಯೋ ದಲ್ಲಿ ಏನಿದೆ?


ಈ ಭಯಾನಕ ಅಂತ ಅನ್ನಿಸುವ ವಿಡಿಯೋದಲ್ಲಿಒಂದು ದೊಡ್ಡ ನಾಗರಹಾವನ್ನು ಒಬ್ಬ ವ್ಯಕ್ತಿ ಹಿಂದೆಯಿಂದ ಅದನ್ನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ನಾವು ನೋಡಬಹುದು.


ಇದನ್ನೂ ಓದಿ: ಈ ರೋಡ್​ನಲ್ಲಿ ಯೂ ಟರ್ನ್​ ತಗೊಂಡ್ರೆ ಗಾಡಿನೇ ಮಾಯವಾಗುತ್ತೆ, ಹಾಗಾದ್ರೆ ಎಲ್ಲಿಗೆ ಹೋಗುತ್ತೆ ಈ ವೆಹಿಕಲ್​ಗಳು?


ನಿಕ್ ಎಂಬ ವ್ಯಕ್ತಿಯು ಈ ಬೃಹತ್ ನಾಗರಹಾವನ್ನು ಹಿಡಿದುಕೊಂಡು ತಮ್ಮ ಹತ್ತಿರಕ್ಕೆ ಅದನ್ನು ಮೆಲ್ಲಗೆ ತೆಗೆದುಕೊಂಡು ಬಂದು ಅದರ ಹೆಡೆಯ ಹಿಂಭಾಗದಲ್ಲಿ ಚುಂಬಿಸಿದ್ದಾರೆ ನೋಡಿ. ಇದನ್ನು ಕೇಳಿಯೇ ನಿಮ್ಮ ಮೈಯೆಲ್ಲಾ ಜುಮ್ ಅಂತ ಅನ್ನಿಸಿರುತ್ತದೆ. ಈ ಭಯಾನಕ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.


"ನೀವು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಚುಂಬಿಸುತ್ತೀರಾ?" ಬಿಷಪ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಿದ ವಿಡಿಯೋದ ವಿವರಣೆಯಲ್ಲಿ ಕೇಳಿದ್ದಾರೆ.


ನಿಕ್ ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು!


ಅತ್ಯಂತ ಅಪಾಯಕಾರಿ ಹಾವನ್ನು ತುಂಬಾನೇ ಧೈರ್ಯದಿಂದ ಕೈಯಲ್ಲಿ ಹಿಡಿದಿಡುವ ನಿಕ್ ಅವರ ಸಾಮರ್ಥ್ಯವು ಅಂತರ್ಜಾಲದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಯಿತು.
ನಿಕ್ ಬಿಷಪ್ ಸ್ವಯಂ ಘೋಷಿತ ಪ್ರಾಣಿ ನಿರ್ವಹಣೆಗಾರ ಮತ್ತು ಹಾವನ್ನು ಸಹ ಹಿಡಿತಾರೆ ಮತ್ತು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಅಪಾಯಕಾರಿ ಜೀವಿಯನ್ನು ನಿರ್ವಹಿಸುವ ಹಲವಾರು ಭಯಾನಕ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.


ಇದಲ್ಲದೆ, ಹಾವುಗಳು ಮತ್ತು ಇತರ ಸರೀಸೃಪಗಳೊಂದಿಗಿನ ಅವರ ಸಂವಹನದ ಬಗ್ಗೆ ಅವರು ಪೋಸ್ಟ್ ಮಾಡುವ ವಿಡಿಯೋ ಗಳಿಂದಾಗಿ ಅವರು ಗಣನೀಯ ಸಾಮಾಜಿಕ ಮಾಧ್ಯಮ ಫಾಲೋವರ್ ಗಳನ್ನು ಹೊಂದಿದ್ದಾರೆ.


ನಾಗರಹಾವು ಎಷ್ಟು ಡೆಂಜರಸ್ ನೀವೇ ನೋಡಿ


ಸ್ಯಾನ್ ಡಿಯಾಗೋ ಮೃಗಾಲಯದ ವನ್ಯಜೀವಿ ಒಕ್ಕೂಟದ ಪ್ರಕಾರ, ನಾಗರಹಾವುಗಳು ಈ ಪೈಥಾನ್ ಗಳು ಮತ್ತು ಮಾಂಬಾಗಳಿಗೆ ಹೋಲಿಸಿದರೆ ತುಂಬಾನೇ ವಿಷಕಾರಿ ಹಾವುಗಳಾಗಿವೆ, ಇವೆಲ್ಲವೂ ಎಲಾಪಿಡೆ ಪ್ರಭೇದಕ್ಕೆ ಸೇರಿದವು ಆಗಿವೆ.


ಇದನ್ನೂ ಓದಿ: Uber Auto ಬರಲು 71 ನಿಮಿಷ ಬೇಕಂತೆ ಗುರು! ಇದು ಬೆಂಗಳೂರಿನ ಕಥೆ ವ್ಯಥೆ!


ಈ ಜಾತಿಯ ಹಾವುಗಳು ವೈಪರ್ ಗಳಂತೆ ತಮ್ಮ ಕೊಕ್ಕೆಗಳನ್ನು ಕೆಳಗೆ ಮಡಚಲು ಸಾಧ್ಯವಿಲ್ಲ, ಆದ್ದರಿಂದ ಕೊಕ್ಕೆಗಳು ಸಾಮಾನ್ಯವಾಗಿ ಚಿಕ್ಕದಾಗಿರುತ್ತವೆ. ಅವು ತಮ್ಮ ಹಲ್ಲುಗಳ ಮೂಲಕ ವಿಷವನ್ನು ಹೊರಸೂಸಿ ತಮ್ಮ ಬೇಟೆಯನ್ನು ಕೊಲ್ಲುತ್ತವೆ.
ಈ ವಿಷವು ನ್ಯೂರೋಟಾಕ್ಸಿನ್ ಆಗಿದ್ದು, ಉಸಿರಾಟ ಮತ್ತು ಹೃದಯ ಬಡಿತವನ್ನು ಕೂಡಲೇ ನಿಲ್ಲಿಸುತ್ತದೆ. ನಾಗರಹಾವು ತನಗೆ ಬೆದರಿಕೆ ಎಂದು ಭಾವಿಸಿದರೆ ಮಾತ್ರ ಮನುಷ್ಯನ ಮೇಲೆ ದಾಳಿ ಮಾಡುತ್ತದೆ. ಯಾವುದೇ ವಿಷಕಾರಿ ಹಾವಿನಂತೆ, ನಾಗರಹಾವಿನ ಕಡಿತಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಮಾರಣಾಂತಿಕವಾಗಬಹುದು.

top videos
    First published: