• Home
 • »
 • News
 • »
 • trend
 • »
 • ಏನ್​​ ಧೈರ್ಯ ಗುರು! ಶಾರ್ಕ್ ಬೆನ್ನ ಮೇಲೆಯೇ ಜಿಗಿದ; ಮುಂದೇನಾಯ್ತು ಗೊತ್ತಾ?

ಏನ್​​ ಧೈರ್ಯ ಗುರು! ಶಾರ್ಕ್ ಬೆನ್ನ ಮೇಲೆಯೇ ಜಿಗಿದ; ಮುಂದೇನಾಯ್ತು ಗೊತ್ತಾ?

ಶಾರ್ಕ್​

ಶಾರ್ಕ್​

ಈ ದೃಶ್ಯ ಕಂಡು ಬಂದಿರುವುದು ಸೌದಿ ಅರೇಬಿಯಾದ ಯಂಬು ನಗರದಲ್ಲಿ. ಝುಕಿ ಸಬಾಹಿ ಎಂಬ ವ್ಯಕ್ತಿ ಬೋಟ್​ ಮೇಲೆ ಹೋಗುತ್ತಿದ್ದ ವೇಳೆ 2-3 ಶಾರ್ಕ್​ಗಳು ಬೋಟ್​ ಸುತ್ತಾ ಸುತ್ತಾಡುತ್ತಿರುತ್ತವೆ. ಈ ವೇಳೆ ಝುಕಿ ಸಬಾಹಿ ಅದರ ಬೆನ್ನ ಮೇಲೆ ಜಿಗಿಯುತ್ತಾನೆ. ಅಷ್ಟು ಮಾತ್ರವಲ್ಲ. ಅದರ ಜೊತೆಗೆ ಸವಾರಿ ಮಾಡಿದ್ದಾನೆ.

ಮುಂದೆ ಓದಿ ...
 • Share this:

  ಶಾರ್ಕ್​ ದೊಡ್ಡ ಗಾತ್ರದ ಮೀನು. ಅದರಲ್ಲೂ ಅಪಾಯಕಾರಿ ಮೀನು. ಅದರ ಬಾಗಿಗೆ ಸಿಕ್ಕರಂತೂ ಸಿಗಿದೇ ಬಿಡುತ್ತೆ. ಹಾಗಾಗಿ ಅದರ ಜೊತೆಗೆ ಆಟವಾಡಲು ಯಾರು ಹೋಗುವುದಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ಶಾರ್ಕ್​ ಬೆನ್ನ ಮೇಲೆ ಹಾರಿದ್ದಾನೆ!

  ಈ ದೃಶ್ಯ ಕಂಡು ಬಂದಿರುವುದು ಸೌದಿ ಅರೇಬಿಯಾದ ಯಂಬು ನಗರದಲ್ಲಿ. ಝುಕಿ ಸಬಾಹಿ ಎಂಬ ವ್ಯಕ್ತಿ ಬೋಟ್​ ಮೇಲೆ ಹೋಗುತ್ತಿದ್ದ ವೇಳೆ 2-3 ಶಾರ್ಕ್​ಗಳು ಬೋಟ್​ ಸುತ್ತಾ ಸುತ್ತಾಡುತ್ತಿರುತ್ತವೆ. ಈ ವೇಳೆ ಝುಕಿ ಸಬಾಹಿ ಅದರ ಬೆನ್ನ ಮೇಲೆ ಜಿಗಿಯುತ್ತಾನೆ. ಅಷ್ಟು ಮಾತ್ರವಲ್ಲ. ಅದರ ಜೊತೆಗೆ ಸವಾರಿ ಮಾಡಿದ್ದಾನೆ.

  ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು, ಅನೇಕರು ಸಬಾಹಿ ಸಾಹಸಕ್ಕೆ ಅಚ್ಚರಿಗೊಂಡಿದ್ದಾರೆ. ಕೆಲವರು ಸಬಾಹಿಯನ್ನು ದೇವರೆ ಕಾಪಾಡಬೇಕು ಎಂದು ಕಾಮೆಂಟ್​​ ಬರೆದಿದ್ದಾರೆ.  (ವಿಡಿಯೋ ಕೃಪೆ: ಡೈಲಿ ಮೇಲ್​​​)

  ಅಪಾಯಕಾರಿ ದೈತ್ಯ ಶಾರ್ಕ್​ಗಳು ಯಾವಾಗ ಆಹಾರ ಸಿಗುತ್ತವೇ ಎಂದು ಕಾಯುತ್ತಿರುತ್ತವೆ. ಅದೃಷ್ಠ ಕೈಚೆಲ್ಲಿದರೆ ಜೀವ ಕಳೆದುಕೊಳ್ಳಬಹುದಾದ ಪರಿಸ್ಥಿತಿ ಬರಬಹುದು. ಇನ್ನು ವಿಡಿಯೋ ತೆಗೆದ ವ್ಯಕ್ತಿಯೊಬ್ಬ, ದೇವರನ್ನು ಕರೆಯುತ್ತಾ ತುಂಬಾ ಎಚ್ಚರ, ಅದು ನಿನ್ನನ್ನು ನುಂಗಬಹುದು ಎಂದು ಹೇಳಿದ್ದಾರೆ.

  Published by:Harshith AS
  First published: