Viral Video: ನೀರಿಗೆ ಹಾರಿ ಮೊಸಳೆ ಬಾಯಿಯಿಂದ ನಾಯಿಮರಿ ರಕ್ಷಿಸಿದ ಮಾಲೀಕ!

ಫ್ಲೊರೀಡಾದಲ್ಲಿ ಈ ಘಟನೆ ನಡೆದಿದೆ. ರಿಚರ್ಡ್​ ವಿಲ್​ಬ್ಯಾಂಕ್ಸ್​ ಎಂಬವರು ತಮ್ಮ ನಾಯಿಯನ್ನು ಮೊಸಳೆ ಕಚ್ಚಿಕೊಂಡು ನೀರಿಗೆ ಎಳೆದೊಯ್ಯುವುದನ್ನು ಕಂಡಿದ್ದಾರೆ.

ರಿಚರ್ಡ್​ ವಿಲ್​ಬ್ಯಾಂಕ್ಸ್

ರಿಚರ್ಡ್​ ವಿಲ್​ಬ್ಯಾಂಕ್ಸ್

 • Share this:
  ಸಾಕಷ್ಟು ಜನರು ಮನೆಯಲ್ಲಿ ಮುದ್ದಾದ ನಾಯಿಯನ್ನು ಸಾಕಿಕೊಂಡಿರುತ್ತಾರೆ. ಮನುಷ್ಯರಷ್ಟೇ ನಾಯಿಯನ್ನು ಅವರು ಪ್ರೀತಿಸುತ್ತಾರೆ, ಮುದ್ದಿಸುತ್ತಾರೆ. ಅದರಂತೆ ಇಲ್ಲೊಬ್ಬ ಮಾಲೀಕನ ಶ್ವಾನ ಪ್ರೀತಿ ಹೇಗಿದೆ ಎಂದರೆ ಸಾವಿನ ದವಡೆಯಲ್ಲಿದ್ದ ನಾಯಿಮರಿಯನ್ನು ರಕ್ಷಿಸಿದ್ದಾರೆ. ತನ್ನ ಪ್ರಾಣವನ್ನು ಲೆಕ್ಕಿಸದೆ ಮೊಸಳೆ ಬಾಯಿಯಲ್ಲಿದ್ದ ನಾಯಿಮರಿಯ ಪ್ರಾಣವನ್ನು ಮಾಲೀಕ ಉಳಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

  ಫ್ಲೊರೀಡಾದಲ್ಲಿ ಈ ಘಟನೆ ನಡೆದಿದೆ. ರಿಚರ್ಡ್​ ವಿಲ್​ಬ್ಯಾಂಕ್ಸ್​ ಎಂಬವರು ತಮ್ಮ ನಾಯಿಯನ್ನು ಮೊಸಳೆ ಕಚ್ಚಿಕೊಂಡು ನೀರಿಗೆ ಎಳೆದೊಯ್ಯುವುದನ್ನು ಕಂಡಿದ್ದಾರೆ. ಮುದ್ದಾದ ನಾಯಿಮರಿಯನ್ನು ಯಾವುದೇ ಕಾರಣಕ್ಕೂ ಮೊಸಳೆಗೆ ಆಹಾರವಾಗಿಸಬಾರದೆಂದು ನೀರಿಗೆ ಹಾರಿದ ರಿಚರ್ಡ್​ ಮೊಳೆಯ ಬಾಯಿಯಿಂದ ನಾಯಿಮರಿಯನ್ನು ರಕ್ಷಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಿಚರ್ಡ್​ ನಾಯಿಮರಿಯ ಪ್ರಾಣ ಉಳಿಸಿರುವ ದೃಶ್ಯ ವೈರಲ್​ ಆಗಿದೆ.  KHOU 11 ಎಂಬ ಯ್ಯೂಟೂಬ್​ ಖಾತೆ ಈ ವಿಡಿಯೋವನ್ನು ಹಂಚಿಕೊಂಡಿದೆ. ಅನೇಕರು ಈ ವಿಡಿಯೋವನ್ನು ಕಂಡು ಅಚ್ಚರಿಗೊಂಡಿದ್ದಾರೆ. ಕೆಲವರು ಮಾಲೀಕನ ಶ್ವಾನ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ನೀರಿಗೆ ಹಾರಿ ಭಯಾನಕ ಮೊಸಳೆಯ ಬಾಯಿಯಿಂದ ರಕ್ಷಿಸಿದ್ದನ್ನು ನೋಡಿ ಗ್ರೇಟ್​ ಎಂದಿದ್ದಾರೆ.
  Published by:Harshith AS
  First published: