• Home
  • »
  • News
  • »
  • trend
  • »
  • Viral Video: ಪ್ರಪೋಸ್​ ಮಾಡೋಕೆ ಬಂದವ ಸಮುದ್ರಕ್ಕೆ ಹಾರಿದ್ದೇಕೆ? ವಿಡಿಯೋ ನೋಡಿ ಸಖತ್ ಫನ್ನಿ ಇದೆ!

Viral Video: ಪ್ರಪೋಸ್​ ಮಾಡೋಕೆ ಬಂದವ ಸಮುದ್ರಕ್ಕೆ ಹಾರಿದ್ದೇಕೆ? ವಿಡಿಯೋ ನೋಡಿ ಸಖತ್ ಫನ್ನಿ ಇದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತನ್ನ ಪ್ರಿಯತಮೆ (Lover) ಮುಂದೆ ಮೊಣಕಾಲು ನೆಲಕ್ಕೆ ಊರಿ ಆಕೆಗೆ ಪ್ರಪೋಸ್ (Propose) ಮಾಡಲು ಬಂದ ಪ್ರಿಯಕರ ಹಠಾತ್ತನೆ ಸಮುದ್ರಕ್ಕೆ ಹಾರಿದ್ದಾನೆ ನೋಡಿ.

  • Share this:

ಕೆಲವೊಮ್ಮೆ ನಾವು ಊಹಿಸಿದ ಸುಂದರ ಕ್ಷಣಗಳು ಕೆಲವು ಎಡವಟ್ಟುಗಳಿಂದ ತುಂಬಾನೇ ಕಷ್ಟದ ಕ್ಷಣವಾಗಿ ಬದಲಾಗುತ್ತವೆ. ಇಲ್ಲಿಯೂ ಸಹ ಇದೇ ರೀತಿಯ ಒಂದು ಘಟನೆ ನಡೆದಿದೆ ನೋಡಿ.. ತನ್ನ ಪ್ರಿಯತಮೆ (Lover) ಮುಂದೆ ಮೊಣಕಾಲು ನೆಲಕ್ಕೆ ಊರಿ ಆಕೆಗೆ ಪ್ರಪೋಸ್ (Propose) ಮಾಡಲು ಬಂದ ಪ್ರಿಯಕರ ಹಠಾತ್ತನೆ ಸಮುದ್ರಕ್ಕೆ ಹಾರಿದ್ದಾನೆ ನೋಡಿ. ಅದೇಕೆ ಅಂತ ನಿಮಗೆ ಆಶ್ಚರ್ಯ (Surprise) ವಾಗಬಹುದು, ವಿಷಯ ಏನೆಂದರೆ ಆ ಪ್ರಿಯಕರ ತನ್ನ ಪ್ರಿಯತಮೆಗೆ ಪ್ರಪೋಸ್ ಮಾಡುವುದಕ್ಕೆ ತನ್ನ ಜೇಬಿ (Problem) ನಲ್ಲಿದ್ದಂತಹ ಉಂಗುರ (Ring) ವನ್ನು ತೆಗೆಯಲು ಹೋದಾಗ, ಆ ಉಂಗುರ ಕೈ ಜಾರಿ ಸಮುದ್ರ (Sea) ದೊಳಗೆ ಬಿದ್ದಿದೆ. ಆಗ ಫ್ಲೋರಿಡಾದ ವ್ಯಕ್ತಿ ಒಂದು ಕ್ಷಣವು ತಡ ಮಾಡದೆ ನಿಶ್ಚಿತಾರ್ಥದ ಉಂಗುರ ಬಿದ್ದ ಜಾಗಕ್ಕೆ ನೇರವಾಗಿ ಧುಮುಕಿದರು.


ಸ್ಕಾಟ್ ಕ್ಲೈನ್ ಫೇಸ್‌ಬುಕ್ ನಲ್ಲಿ ಹಂಚಿಕೊಂಡ ವೀಡಿಯೋದಲ್ಲಿ, ಅವರು ತಮ್ಮ ಗೆಳತಿ ಸುಜಿ ಟಕ್ಕರ್ ಅವರೊಂದಿಗೆ ದೋಣಿಯಲ್ಲಿ ನಿಂತುಕೊಂಡು ಸುಂದರವಾದ ಸೂರ್ಯಾಸ್ತದ ದೃಶ್ಯವನ್ನು ಆನಂದಿಸುತ್ತಿರುವುದನ್ನು ಆರಂಭದಲ್ಲಿ ನೋಡಬಹುದು.


ಪ್ರಪೋಸ್​ ಮಾಡುವ ವೇಳೆ ಎಡವಟ್ಟು!


ಸೂರ್ಯಾಸ್ತವು ಬೆರಗುಗೊಳಿಸುವ ಹಿನ್ನೆಲೆಯಾಗಿ ಕಾಣಿಸಿಕೊಂಡಂತೆ ಈ ಇಬ್ಬರು ಪ್ರೇಮಿಗಳು ರೊಮ್ಯಾಂಟಿಕ್ ಆಗಿ ಒಳ್ಳೆ ಟೈಟಾನಿಕ್ ಚಿತ್ರದಲ್ಲಿ ನಾಯಕ ನಟ ಮತ್ತು ನಟಿ ನಿಂತಿರುವಂತೆ ತಮ್ಮ ತೋಳುಗಳನ್ನು ಚಾಚಿಕೊಂಡು ನಿಂತಿರುವುದನ್ನು ನಾವು ನೋಡಬಹುದು. ಇದೇ ಒಳ್ಳೆಯ ಸಮಯ ಅಂತ ತಿಳಿದು ಕ್ಲೈನ್ ತನ್ನ ಜೇಬಿನಿಂದ ಒಂದು ಉಂಗುರವಿರುವ ಚಿಕ್ಕ ಬಾಕ್ಸ್ ಅನ್ನು ಹೊರ ತೆಗೆದನು.


ರಿಂಗ್​ ಕಳೆದುಕೊಂಡ ಯುವಕ ಮುಖ ನೋಡಿ!


ಅವನು ಪ್ರಪೋಸ್ ಮಾಡಲು ಒಂದು ಮೊಣಕಾಲಿನ ಮೇಲೆ ನಿಲ್ಲಲು ಸಿದ್ದವಾಗುತ್ತಿರುವಾಗ ಆ ಉಂಗುರವಿರುವ ಚಿಕ್ಕ ಬಾಕ್ಸ್ ಅವನ ಕೈಯಿಂದ ಜಾರಿ ನೇರವಾಗಿ ಸಮುದ್ರದಲ್ಲಿ ಬಿದ್ದಿತು. ಅದನ್ನು ನೋಡಿ ಒಂದು ಕ್ಷಣವೂ ವ್ಯರ್ಥ ಮಾಡದೆ, ಅವನು ಸಹ ಸಮುದ್ರಕ್ಕೆ ಧುಮುಕಿದನು ಮತ್ತು ಕೆಲವೇ ಕ್ಷಣಗಳ ನಂತರ, ಅವನು ಆ ಉಂಗುರದ ಬಾಕ್ಸ್ ಅನ್ನು ಕೈಯಲ್ಲಿ ಹಿಡಿದುಕೊಂಡು ಮತ್ತೆ ಆ ಹಡಗನ್ನು ಹತ್ತಿದನು.


ಇದನ್ನೂ ಓದಿ: ಮದುವೆ ಮನೆಯಲ್ಲಿ 'ಕೋಳಿ' ಜಗಳ! ಸ್ನೇಹಿತರಿಗೆ ಚಿಕನ್ ಬಡಿಸಿಲ್ಲ ಅಂತ ತಾಳಿ ಕಟ್ಟಲ್ಲ ಎಂದ ವರ!


"ಇದು 100% ನಿಜ, 100% ನನ್ನ ಅದೃಷ್ಟ, 100% ಎಂದಿಗೂ ಮರೆಯುವುದಿಲ್ಲ...." ಎಂದು ಕ್ಲೈನ್ ತನ್ನ ಫೇಸ್‌ಬುಕ್ ಪೋಸ್ಟ್ ಗೆ ಶೀರ್ಷಿಕೆಯನ್ನು ಬರೆದುಕೊಂಡಿದ್ದಾನೆ. ಇಡೀ ಘಟನೆಯನ್ನು ಸೆರೆಹಿಡಿದ ಸ್ನೇಹಿತರೊಬ್ಬರು, ಕ್ಲೈನ್ ಅವರಿಂದ ಉಂಗುರವನ್ನು ಕಸಿದುಕೊಂಡು ಅದನ್ನು ಸುರಕ್ಷಿತವಾಗಿ ಒಂದು ಚಿಕ್ಕ ಪಾತ್ರೆಗೆ ಹಾಕುವ ಮೂಲಕ ಸಹಾಯ ಮಾಡಿದರು.


ಇದೆಲ್ಲಾ ಸ್ವಲ್ಪ ಮಟ್ಟಿಗೆ ಶಾಂತವಾದ ನಂತರ, ಕ್ಲೈನ್ ಮತ್ತೆ ತನ್ನ ಮೊಣಕಾಲನ್ನು ನೆಲಕ್ಕೆ ಊರಿ ತನ್ನ ಪ್ರಿಯತಮೆಗೆ ಪ್ರಪೋಸ್ ಮಾಡಿದರು. ಇದನ್ನೆಲ್ಲಾ ನೋಡಿದ ಅವನ ಗೆಳತಿ ಒಂದು ಕ್ಷಣ ನಕ್ಕು ಅವನನ್ನು ಚುಂಬಿಸುತ್ತಿದ್ದಂತೆ ಹೌದು ಎಂದು ತನ್ನ ಒಪ್ಪಿಗೆಯನ್ನು ಸೂಚಿಸಿದಳು.


ಈ ಇಡೀ ಘಟನೆಯ ಬಗ್ಗೆ ಕ್ಲೈನ್ ಹೇಳಿದ್ದೇನು?


"ನನ್ನ ಬರ್ಮುಡಾ ಹಿಂದಿನ ಜೇಬಿನಲ್ಲಿ ಉಂಗುರವಿತ್ತು ಮತ್ತು ನಾನು ಅದನ್ನು ಹೊರಕ್ಕೆ ತೆಗೆಯಲು ಹೋದಾಗ, ಉಂಗುರದ ಬಾಕ್ಸ್ ನ ಮೂಲೆಯು ನನ್ನ ಜೇಬಿನ ಮೇಲ್ಭಾಗದಲ್ಲಿ ಸಿಕ್ಕಿಹಾಕಿಕೊಂಡಿತು ಮತ್ತು ನನ್ನ ಕೈಗಳಿಂದ ಜಾರಿಹೋಯಿತು. ಆ ಕ್ಷಣಕ್ಕೆ ಏನು ಮಾಡಬೇಕು ಅಂತ ಅರ್ಥವಾಗದೆ ಎಲ್ಲವೂ ಮಸುಕಾಗಿತ್ತು.


ಇದನ್ನೂ ಓದಿ: ಬುಲೆಟ್‌ ಫ್ರೂಪ್ ವಾಹನಕ್ಕೆ ಬೈ ಬೈ, ಆಟೋಗೆ ಜೈ ಜೈ! ದೆಹಲಿಯಲ್ಲಿ ಯುಎಸ್‌ ಮಹಿಳಾ ರಾಯಭಾರಿಗಳ ಸಿಂಪಲ್ ಲೈಫ್


ಅದಕ್ಕೆ ನಾನು ಯೋಚಿಸುವ ಮೊದಲೇ ನೀರಿಗೆ ಹಾರಿದೆ. ನಾನು ಸಮುದ್ರಕ್ಕೆ ಜಿಗಿಯಲು ಹಿಂಜರಿಯಲಿಲ್ಲ, ಏಕೆಂದರೆ ಉಂಗುರದ ಬಾಕ್ಸ್ ಬೇಗನೆ ನೀರಿನಲ್ಲಿ ಮುಳುಗುತ್ತದೆ ಎಂದು ನಾನು ಊಹಿಸಿದೆ ಮತ್ತು ನಾನು ಯಾವುದೇ ಅವಕಾಶವನ್ನು ಬಿಡಲಿಲ್ಲ" ಎಂದು ಕ್ಲೈನ್ ನ್ಯೂ ಯಾರ್ಕ್ ಪೋಸ್ಟ್ ಗೆ ತಿಳಿಸಿದರು.

Published by:ವಾಸುದೇವ್ ಎಂ
First published: