ಸಾಮಾನ್ಯವಾಗಿ ನಾವು ಒಂದು ಸ್ಟೋರ್ ಗೆ (Store) ಖರೀದಿಗೆ ಅಂತ ಹೋದಾಗ ಅಲ್ಲಿ ನಮಗೆ ತುಂಬಾನೇ ಇಷ್ಟವಾಗುವ ಆಹಾರ ಪದಾರ್ಥ, ಪಾನೀಯ ಮತ್ತು ಇತರೆ ತಿಂಡಿಗಳನ್ನು ನೋಡಿದರೆ ತಕ್ಷಣವೇ ಅದರ ಫೋಟೋ ಕ್ಲಿಕ್ಕಿಸಿ ಅದನ್ನು ನಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಸ್ನೇಹಿತರು ಮತ್ತು ನಮ್ಮ ಬಂಧುಗಳು ನೋಡಲಿ ಅಂತ ಅಪ್ಲೋಡ್ ಮಾಡುತ್ತಿರುತ್ತೇವೆ. ಹೀಗೆ ವ್ಯಕ್ತಿಯೊಬ್ಬ ಒಂದು ಬಿಯರ್ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಎಂತಹ ಅವಾಂತರವನ್ನೆ ಸೃಷ್ಟಿಸಿ ಕೊಂಡಿದ್ದಾರೆ ನೋಡಿ. ಥೈಲ್ಯಾಂಡ್ನಲ್ಲಿ (Thailand) ವ್ಯಕ್ತಿಯೊಬ್ಬ ಕ್ರಾಫ್ಟ್ ಬಿಯರ್ ನ ಫೋಟೋವನ್ನು ತನ್ನ ಫೇಸ್‌ಬುಕ್ (Face Book) ನಲ್ಲಿ ಅಪ್ಲೋಡ್ ಮಾಡಿದ್ದಾರೆ. ನಂತರ ಆ ವ್ಯಕ್ತಿಗೆ ಥೈಲ್ಯಾಂಡ್ನ ನ್ಯಾಯಾಲಯವು 1,50,000 ಬಾತ್ ಎಂದರೆ ಭಾರತೀಯ ಮೌಲ್ಯದಲ್ಲಿ ಸುಮಾರು 3.5 ಲಕ್ಷ ರೂಪಾಯಿ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಕ್ರಾಫ್ಟ್ ಬಿಯರ್ ಉತ್ಸಾಹಿ ಆರ್ಟಿಡ್ ಶಿವಾಂಸಪನ್ ಅವರು ಆಲ್ಕೊಹಾಲ್ ಜಾಹೀರಾತಿನ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ. 2008 ರ ಆಲ್ಕೊಹಾಲ್ ಪಾನೀಯ ನಿಯಂತ್ರಣ ಕಾಯ್ದೆಯು "ಯಾವುದೇ ಆಲ್ಕೊಹಾಲ್ನ ಹೆಸರು ಅಥವಾ ಟ್ರೇಡ್ ಮಾರ್ಕ್ ಅನ್ನು ನೇರವಾಗಿ ಅಥವಾ ಪರೋಕ್ಷವಾಗಿ ಜಾಹೀರಾತು ಅಥವಾ ಪ್ರದರ್ಶಿಸುವುದನ್ನು" ನಿಷೇಧಿಸುತ್ತದೆ. ಇದು ಗರಿಷ್ಠ ಒಂದು ವರ್ಷದ ಜೈಲು ಶಿಕ್ಷೆ ಮತ್ತು 500,000 ಬಾತ್ ಎಂದರೆ 11 ಲಕ್ಷ ರೂಪಾಯಿ ದಂಡವನ್ನು ಒಳಗೊಂಡಿದೆ.
2020 ರಲ್ಲಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಬ್ಯಾಂಕಾಕ್ನ ಉತ್ತರ ಭಾಗದಲ್ಲಿರುವ ನೊಂತಬುರಿಯ ನ್ಯಾಯಾಲಯವು ಆರ್ಟಿಡ್ಗೆ ಶುಕ್ರವಾರ ಶಿಕ್ಷೆ ವಿಧಿಸಿದೆ.
ಆರಂಭಿಕ ದಂಡದ ಎಂಟು ತಿಂಗಳ ಜೈಲು ಶಿಕ್ಷೆ ಮತ್ತು 200,000 ಬಾತ್ ಎಂದರೆ 4.7 ಲಕ್ಷ ರೂಪಾಯಿ ದಂಡವನ್ನು ಆರು ತಿಂಗಳ ಅಮಾನತು ಶಿಕ್ಷೆ ಮತ್ತು 150,000 ಬಾತ್ ಎಂದರೆ 3.5 ಲಕ್ಷ ರೂಪಾಯಿ ದಂಡಕ್ಕೆ ಇಳಿಸಲಾಗಿದೆ ಎಂದು ಅವರು ಅಸೋಸಿಯೇಟೆಡ್ ಪ್ರೆಸ್ಗೆ ತಿಳಿಸಿದರು.
ಶಿಕ್ಷೆಯ ವಿವರಗಳನ್ನು ದೃಢಪಡಿಸಿದ ಬಿಯರ್ ಪೀಪಲ್ ನ ಸಂಯೋಜಕ
ಬಿಯರ್ ಉತ್ಪಾದನೆ ಮತ್ತು ಮಾರಾಟದ ಉದಾರೀಕರಣವನ್ನು ಉತ್ತೇಜಿಸುವ ಬೀರ್ ಪೀಪಲ್ನ ಸಂಯೋಜಕ ಸುಪಾಕ್ ಕೋ-ಇಟ್ ನ್ಯಾಯಾಲಯದ ಅಧಿವೇಶನದಲ್ಲಿ ಭಾಗವಹಿಸಿ ಶಿಕ್ಷೆಯ ವಿವರಗಳನ್ನು ದೃಢಪಡಿಸಿದರು.
"ನ್ಯಾಯಾಲಯಕ್ಕೆ ಈ ವಿಷಯ ಅರ್ಥವಾದಂತೆ ಕಾಣುತ್ತಿಲ್ಲ, ಆರ್ಟಿಡ್ ಈ ಪೋಸ್ಟ್ ಅನ್ನು ಬಿಯರ್ ಅನ್ನು ಪರಿಶೀಲಿಸುವ ಕಾರಣದಿಂದ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ, ಅದನ್ನು ಯಾರೂ ಮಾರಾಟ ಮಾಡುತ್ತಿಲ್ಲ. ಆದರೆ ನ್ಯಾಯಾಲಯವು ಆ ವಿಷಯವನ್ನು ಕೇಳಿಸಿಕೊಳ್ಳುವಲ್ಲಿ ಆಸಕ್ತಿ ಹೊಂದಿಲ್ಲ" ಎಂದು ಅವರು ಹೇಳಿದರು.
ಇದನ್ನೂ ಓದಿ: ಸತ್ತ ಮೇಲೆ ಕಣ್ಣುಗಳು ಏಕೆ ತೆರೆದುಕೊಂಡಿರುತ್ತೆ? ನಿಮಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ!
ಥೈಲ್ಯಾಂಡ್ ಆಲ್ಕೊಹಾಲ್ ಪಾನೀಯಗಳ ಉತ್ಪಾದನೆ, ಮಾರಾಟ ಮತ್ತು ಜಾಹೀರಾತನ್ನು ನಿಯಂತ್ರಿಸುತ್ತದೆ, ಮಾರಾಟದ ಸಮಯವನ್ನು ಸೀಮಿತಗೊಳಿಸುತ್ತದೆ ಮತ್ತು ಎಲ್ಲಾ ಪ್ಲಾಟ್ಫಾರ್ಮ್ ಗಳಲ್ಲಿ ಆಲ್ಕೊಹಾಲ್ ಪಾನೀಯಗಳ ಜಾಹೀರಾತು ಅಥವಾ ಇತರ ಯಾವುದೇ ಫೋಟೋವನ್ನು ಹೆಚ್ಚಾಗಿ ನಿಷೇಧಿಸಲಾಗಿದೆ. ದೂರದರ್ಶನದಲ್ಲಿ, ಆಲ್ಕೊಹಾಲ್ ಪಾನೀಯಗಳ ಫೋಟೋಗಳನ್ನು ಸಾಮಾನ್ಯವಾಗಿ ಬ್ಲರ್ ಮಾಡಿರುತ್ತಾರೆ.
ಈ ಪ್ರಕರಣದ ಬಗ್ಗೆ ಆರ್ಟಿಡ್ ಏನ್ ಹೇಳ್ತಾರೆ ನೋಡಿ
ಆರ್ಟಿಡ್ ಅವರು ಒಬ್ಬ ಫ್ರೀಲಾನ್ಸರ್ ಭಾಷಾಂತರಕಾರರಾಗಿದ್ದಾರೆ ಮತ್ತು ಈ ರೀತಿಯ ಪಾನೀಯಗಳಲ್ಲಿ ಯಾವುದೇ ವ್ಯವಹಾರ ಆಸಕ್ತಿಯನ್ನು ಹೊಂದಿಲ್ಲ, ಆದರೆ ಕ್ರಾಫ್ಟ್ ಬಿಯರ್ ಬಗ್ಗೆ ಒಲವು ಹೊಂದಿದ್ದಾರೆ ಎಂದು ಹೇಳಿದರು.
ಸುಮಾರು 10 ವರ್ಷಗಳಿಂದ ಥಾಯ್ ಮತ್ತು ವಿದೇಶಿ ಬಿಯರ್ ಗಳ ಬಗ್ಗೆ ಬರೆದಿರುವ ಅವರ ಫೇಸ್‌ಬುಕ್ ಪುಟವು 70,000 ಕ್ಕೂ ಹೆಚ್ಚು ಫಾಲೋವರ್ ಗಳನ್ನು ಹೊಂದಿದೆ.
ಇದನ್ನೂ ಓದಿ: ಮಳೆಗಾಗಿ ನಡೆಯಿತು ಕಪ್ಪೆಗಳ ಮದುವೆ! ಮಂಡೂಕ ದಂಪತಿಗೆ ಆಶೀರ್ವದಿಸುತ್ತಾನಾ ವರುಣ ದೇವ?
"ನಾನು ಅದನ್ನು ಜಾಹೀರಾತು ಮಾಡಲಿಲ್ಲ, ನಾನು ಅದನ್ನು ಕುಡಿಯಲು ಜನರನ್ನು ಪ್ರೋತ್ಸಾಹಿಸಲಿಲ್ಲ, ಕುಡಿದು ವಾಹನ ಚಲಾಯಿಸುವುದನ್ನು ನಾನು ಸಮರ್ಥಿಸಲಿಲ್ಲ. ನನಗೆ ಆ ಬಿಯರ್ ನ ವಿನ್ಯಾಸ ಇಷ್ಟವಾಯಿತು" ಎಂದು ಅವರು ಹೇಳಿದರು.
"ನಾನು ನನ್ನ ಜಾಮೀನು ಅನುಮೋದನೆಗಾಗಿ ಕಾಯುತ್ತಿದ್ದ ದಿನ, ಕುಡಿದು ವಾಹನ ಚಲಾಯಿಸಿದ ಆರೋಪದ ಮೇಲೆ ಶಿಕ್ಷೆಗೊಳಗಾದ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದರು.
ಅವನಿಗೆ 60,000 ಬಾತ್ ಎಂದರೆ 1.4 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು. ನಾನು ಮನೆಯಲ್ಲಿ ಕೂತು ವಿಷಯಗಳನ್ನು ಬರೆಯುತ್ತೇನೆ ಮತ್ತು ನನಗೆ 150,000 ಬಾತ್ ಎಂದರೆ 3.5 ಲಕ್ಷ ರೂಪಾಯಿ ದಂಡ ಹಾಕಿದ್ದಾರೆ" ಎಂದು ಆರ್ಟಿಡ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ