ಅತ್ಯಾಚಾರ ಕಡಿಮೆ ಮಾಡಲು ಸಿದ್ಧವಾಯ್ತು ಸ್ಮಾರ್ಟ್​ ಬಳೆ; ಹೈದರಬಾದ್​ ಯುವಕನಿಂದ ಹೊಸ ಅನ್ವೇಷಣೆ

ಹೈದರಾಬಾದ್​ನ 23 ವರ್ಷದ ಗಡಿ ಹರೀಶ್​ ಎಂಬವರು ತನ್ನ ಸ್ನೇಹಿತ ಸಾಯಿ ತೇಜಾ ಎಂಬವವರೊಂದಿಗೆ ಸೇರಿ ಮಹಿಳೆಯ ಸುರಕ್ಷತೆಗಾಗಿ ಸ್ಮಾರ್ಟ್​ ಬಳೆಯನ್ನು ಕಂಡುಹಿಡಿದಿದ್ದಾರೆ. ಯಾರಾದರು ಮಹಿಳೆಯ ಮೇಲೆ ದಾಳಿ ಮಾಡಲು ಆಕೆಯ ಕೈಯನ್ನು ಹಿಡಿದರೆ ಶಾಕ್​ ನೀಡುತ್ತದೆ.

news18
Updated:August 9, 2019, 11:15 AM IST
ಅತ್ಯಾಚಾರ ಕಡಿಮೆ ಮಾಡಲು ಸಿದ್ಧವಾಯ್ತು ಸ್ಮಾರ್ಟ್​ ಬಳೆ; ಹೈದರಬಾದ್​ ಯುವಕನಿಂದ ಹೊಸ ಅನ್ವೇಷಣೆ
ಸಾಂದರ್ಭಿಕ ಚಿತ್ರ
  • News18
  • Last Updated: August 9, 2019, 11:15 AM IST
  • Share this:
ಇತ್ತೀಚಿನ ದಿನಗಳಲ್ಲಿ ಮಹಿಳೆಯ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಿಂದ ಮಹಿಳೆಯರು ಷೋಷಣೆಗೆ ಒಳಗಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೈದರಾಬಾದ್​​ ಯುವಕನೋರ್ವ ಮಹಿಳೆಯರ ಸುರಕ್ಷತೆಗಾಗಿ ಸ್ಮಾರ್ಟ್​ ಬಳೆಯೊಂದನ್ನು ಕಂಡು ಹಿಡಿದಿದ್ದಾನೆ.

ಹೈದರಾಬಾದ್​ನ 23 ವರ್ಷದ ಗಡಿ ಹರೀಶ್​ ಎಂಬವರು ತನ್ನ ಸ್ನೇಹಿತ ಸಾಯಿ ತೇಜಾ ಎಂಬವವರೊಂದಿಗೆ ಸೇರಿ ಮಹಿಳೆಯ ಸುರಕ್ಷತೆಗಾಗಿ ಸ್ಮಾರ್ಟ್​ ಬಳೆಯನ್ನು ಕಂಡುಹಿಡಿದಿದ್ದಾರೆ. ಯಾರಾದರು ಮಹಿಳೆಯ ಮೇಲೆ ದಾಳಿ ಮಾಡಲು ಆಕೆಯ ಕೈಯನ್ನು ಹಿಡಿದರೆ ಶಾಕ್​ ನೀಡುತ್ತದೆ. ಜೊತೆಗೆ ಘಟನಾ ಸ್ಥಳದಿಂದ ಹತ್ತಿರದ ಪೋಲಿಸ್​ ಠಾಣೆಗೆ ಲೈವ್​ ಲೊಕೇಷನ್​ ನೀಡುವ ತಂತ್ರಜ್ನಾನವನ್ನು ಇದರಲ್ಲಿ ಅಳವಡಿಸಲಾಗಿದೆ.

ಇದನ್ನೂ ಓದಿ: Varamahalakshmi Festival: ರಾಜ್ಯದಲ್ಲಿಂದು ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ; ಪ್ರವಾಹ ಸಂತ್ರಸ್ತರಿಗಾಗಿ ವಿಶೇಷ ಪೂಜೆ

 

Loading...ಮಹಿಳೆಯರಿಗಾಗಿ ಸ್ವಯಂ-ಭದ್ರತಾ ಬಳೆ ಎಂಬ ಯೋಜನೆಯಡಿ ಈ ಸ್ಮಾರ್ಟ್​ ಬಳೆಯನ್ನು ತಯಾರಿಸಲಾಗಿದೆ.   ಈ ಸಾಧನವು ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಧನಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಸ್ನೇಹಿತ ಸಾಯಿ ತೇಜ ಅವರ ಸಹಾಯದಿಂದ ಸ್ಮಾರ್ಟ್​ ಬಳೆಯನ್ನು ಅಭಿವೃದ್ಧಿ ಪಡಿಸಿದ್ದೇನೆ ಎಂದು ಹರೀಶ್​ ತಿಳಿಸಿದ್ದಾರೆ.

ಇನ್ನು ಮಹಿಳೆಯರ ರಕ್ಷಣೆಗಾಗಿ ತಯಾರಿಸಲಾದ ಈ ಸ್ಮಾರ್ಟ್​ ಬಳೆಯ ಬೆಲೆ 2 ಸಾವಿರ ರೂಪಾಯಿಯಾಗಿದೆ. ಈ ಯೋಜನೆ ಪೂರ್ಣಗೊಳಿಸಲು ಆರ್ಥಿಕ ನೆರವಿನ ಅವಶ್ಯಕತೆಯಿದೆ. ಮಹಿಳೆಯರ ಸುರಕ್ಷತೆಗಾಗಿ ಸಿದ್ಧ ಪಡಿಸಿದ ಈ ಸ್ಮಾರ್ಟ್​ ಬಳೆಗೆ ಸರ್ಕಾರ  ಸಹಕಾರ ನೀಡಬೇಕು ಎಂದು ಹರೀಶ್​ ಮನವಿ ಮಾಡಿದ್ದಾರೆ.
First published:August 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...