PHOTO: 10 ವರ್ಷಗಳ ಬಳಿಕ ಮರಳಿ ಸಿಕ್ಕ ತನ್ನ ನಾಯಿಯನ್ನು ನೋಡಿ ಕಣ್ಣೀರಿಟ್ಟ ಮಾಲೀಕ

ಇಲ್ಲಿ ಒಬ್ಬ ವ್ಯಕ್ತಿಗೆ ತಾನು ಸಾಕಿಕೊಂಡಂತಹ ಹಿರಿಯ ನಾಯಿಯೊಂದು ಕಾಣೆಯಾದ ಹತ್ತು ವರ್ಷಗಳ ನಂತರ ಮತ್ತೆ ಇವರಿಗೆ ಸಿಕ್ಕಿದ್ದು ಅವರನ್ನು ಭಾವುಕರನ್ನಾಗಿ ಮಾಡಿದಂತಹ ಸುಮಧುರ ಘಟನೆಯೊಂದು ಸ್ಯಾನ್ ಅಂಟೋನಿಯೋ ದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

Photo: City of San Antonio Animal Care Services

Photo: City of San Antonio Animal Care Services

  • Share this:
ಮನುಷ್ಯ ಎಷ್ಟೇ ತನ್ನ ದಿನನಿತ್ಯದ ಕೆಲಸಗಳಲ್ಲಿ ಬ್ಯುಸಿ ಆಗಿದ್ದರೂ ಸಹ ತಾನು ಸಾಕಿಕೊಂಡ ಪ್ರಾಣಿಗಳ ಜೊತೆಗೆ ಒಂದು ಅವಿನಾಭಾವ ಸಂಬಂಧ ಹೊಂದಿರುವುದಂತೂ ನೂರಕ್ಕೆ ನೂರರಷ್ಟು ಸತ್ಯ. ಈ ಸುದ್ದಿ ಓದಿದರೆ ನಿಮಗೆ ಅರ್ಥವಾಗುತ್ತದೆ ಮನುಷ್ಯನನ್ನು ಏಕೆ ಭಾವುಕ ಜೀವಿ ಎನ್ನುತ್ತಾರೆ ಎಂದು.


ಹೌದು.. ಇಲ್ಲಿ ಒಬ್ಬ ವ್ಯಕ್ತಿಗೆ ತಾನು ಸಾಕಿಕೊಂಡಂತಹ ಹಿರಿಯ ನಾಯಿಯೊಂದು ಕಾಣೆಯಾದ ಹತ್ತು ವರ್ಷಗಳ ನಂತರ ಮತ್ತೆ ಇವರಿಗೆ ಸಿಕ್ಕಿದ್ದು ಅವರನ್ನು ಭಾವುಕರನ್ನಾಗಿ ಮಾಡಿದಂತಹ ಸುಮಧುರ ಘಟನೆಯೊಂದು ಸ್ಯಾನ್ ಅಂಟೋನಿಯೋ ದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.


ಈ ಹೃದಯಕ್ಕೆ ಮುದ ನೀಡುವಂತಹ ನೈಜ ಕಥೆಯನ್ನು ಸ್ಯಾನ್ ಅಂಟೋನಿಯೋ ಎನಿಮಲ್ ಕೇರ್ ಸರ್ವಿಸಸ್ ತನ್ನ ಫೇಸ್​​ಬುಕ್​ನಲ್ಲಿ ಪೋಸ್ಟ್ ಶೇರ್ ಮಾಡಿದ್ದು, ಇದಕ್ಕೆ 4700 ಶೇರ್ ಗಳು ಬಂದಿದ್ದು ಸುಮಾರು 8000 ಲೈಕ್ ಗಳು ಸಹ ಬಂದಿದೆ. ಆ ಫೇಸ್​ಬುಕ್ ಪೋಸ್ಟ್ ನಲ್ಲಿ ಸ್ಯಾಮ್ಸನ್ ಎಂಬ ಸಾಕುನಾಯಿಯು ಹತ್ತು ವರ್ಷಗಳಿಂದ ಕಾಣೆಯಾಗಿದ್ದು, ಅದನ್ನು ಸಾಕಿಕೊಂಡಂತಹ ಮಿಸ್ಟರ್ ಸಿ ತನ್ನ ಕುಟುಂಬದವರು ಸಾಕುನಾಯಿಯನ್ನು ಹುಡುಕಲು ಆಗಿಲ್ಲ ಎಂದು ತುಂಬಾ ನೋವು ಪಡುತ್ತಿದ್ದರು.


ಆದರೆ ಅದೃಷ್ಟವಶಾತ್ ಟೆಕ್ಸಾಸ್ ಮೂಲದ ಎನಿಮಲ್ ಶೆಲ್ಟರ್ ಅವರಿಗೆ ಸ್ಯಾಮ್ಸನ್ ದೊರಕಿದ್ದು ಅದು ತುಂಬಾ ಕೆಟ್ಟ ಅವಸ್ಥೆಯಲ್ಲಿದ್ದು ಅದಕ್ಕೆ ಸರಿಯಾದಂತಹ ಚಿಕಿತ್ಸೆ ಮತ್ತು ಆರೈಕೆ ಎರಡರ ಅವಶ್ಯಕತೆ ತುಂಬಾ ಇದೆ. ಸಾಕುನಾಯಿಯ ಮೈಕ್ರೋಚಿಪ್ ಅನ್ನು ಸ್ಕ್ಯಾನ್ ಮಾಡಿದಾಗಲೇ ಇದರ ಮಾಲೀಕರ ಹೆಸರು ಅವರಿಗೆ ತಿಳಿಯಿತು. ಆನಂತರ ಸ್ಯಾಮ್ಸನ್ ಅವರ ಮಾಲೀಕರಿಗೆ ಕರೆ ಮಾಡಿ ತಿಳಿಸಲಾಯಿತು. ಎನಿಮಲ್ ಶೆಲ್ಟರ್ ಅವರು ಮಿಸ್ಟರ್ ಸಿ ಗೆ ಕರೆ ಮಾಡಿ ನಿಮ್ಮ ಕಾಣೆಯಾಗಿರುವಂತಹ ಸಾಕುನಾಯಿ ಸಿಕ್ಕಿದೆ ಎಂದಾಗ ಮಿಸ್ಟರ್ ಸಿ ಗೆ ಒಮ್ಮೆ ಸುದ್ದಿ ಕೇಳಿ ತುಂಬಾ ಖುಷಿ ಪಟ್ಟರು.


ಫೇಸ್​ಬುಕ್ ಪೋಸ್ಟ್ ನಲ್ಲಿ "ಸ್ಯಾಮ್ಸನ್ ಅನ್ನು ಹತ್ತು ವರ್ಷಗಳಿಂದ ಮಿಸ್ ಮಾಡಿಕೊಂಡ ಮಿಸ್ಟರ್ ಸಿ ಯು ತನ್ನ ನಾಯಿಯ ಮುಂದೆ ಬಂದು ಕುಳಿತು ನಿಧಾನವಾಗಿ ಕೆಳ ಧ್ವನಿಯಲ್ಲಿ ಸ್ಯಾಮ್ಸನ್ ನಾನು ಬಂದಿದ್ದೇನೆ, ನಾನು ಯಾರು ಅಂತಾ ನಿನಗೆ ನೆನಪಿದೆಯೇ ಎಂದು ಕೇಳಿದರು. ನಂತರ ಸ್ಯಾಮ್ಸನ್ ಮೆಲ್ಲಗೆ ಅತ್ತಿತ್ತ ನೋಡುತ್ತಾ ಬಂದು ತನ್ನ ಮಾಲೀಕನ ಕೈ ಹಿಡಿಯಿತು. ಇದನ್ನು ನೋಡಿದ ಮಿಸ್ಟರ್ ಸಿ ಗೆ ಕಣ್ಣೀರು ತಡೆಯಲು ಆಗಲೇ ಇಲ್ಲ. ನಮ್ಮಿಂದ ಈ ಘಟನೆಯು ಸುಮಧುರ ಹತ್ತು ವರ್ಷಗಳನ್ನು ಕಿತ್ತುಕೊಂಡಿದೆ ಎಂದು ಮಿಸ್ಟರ್ ಸಿ ಹೇಳಿದರು" ಎಂದು ಬರೆದಿತ್ತು.


ಎನಿಮಲ್ ಶೆಲ್ಟರ್ ಅವರಿಗೆ ಸ್ಯಾಮ್ಸನ್ ಹೇಗೆ ಹತ್ತು ವರ್ಷದಿಂದ ಕಾಣೆಯಾಗಿದ್ದು ಯಾರಿಗೂ ಸಿಕ್ಕಿರಲಿಲ್ಲ ಎಂಬುದರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೇಗೆ ಮೈಕ್ರೋಚಿಪ್ ಇದ್ದರೂ ಸಹ ಹತ್ತು ವರ್ಷಗಳಲ್ಲಿ ಯಾರು ಇದನ್ನು ಸ್ಕ್ಯಾನ್ ಮಾಡದೇ ಇರುವ ವಿಷಯ ತುಂಬಾ ಆಶ್ಚರ್ಯವಾಗಿದೆ ಎಂದು ಫೇಸ್ಬುಕ್ ಬಳಕೆದಾರರೊಬ್ಬರು ತಮ್ಮ ಪೋಸ್ಟ್ ನಲ್ಲಿ ಬರೆದು ಕೊಂಡಿದ್ದಾರೆ.





ಈ ಹತ್ತು ವರ್ಷಗಳಲ್ಲಿ ಸ್ಯಾಮ್ಸನ್ ಸ್ಥಿತಿ ಹೇಗಿತ್ತು ಎಂದು ಯಾರಿಗೂ ಗೊತ್ತಿಲ್ಲ, ಕೊನೆಗೂ ಸ್ಯಾಮ್ಸನ್ ತನ್ನ ಮಾಲೀಕರ ಮಡಿಲು ಸೇರಿದ್ದು ತುಂಬಾ ಸಂತೋಷದ ವಿಷಯ. ಸಾಕುಪ್ರಾಣಿಗಳಿಗೆ ಹೀಗೆ ಮೈಕ್ರೋಚಿಪ್ ಅಳವಡಿಸುವುದು ಸ್ಯಾನ್ ಅಂಟೋನಿಯೋ ದಲ್ಲಿ ಒಂದು ಕಾನೂನು ಆಗಿದ್ದು ಮೈಕ್ರೋಚಿಪ್ ಮಹತ್ವವನ್ನು ಮತ್ತೊಮ್ಮೆ ಜನರಲ್ಲಿ ಅರಿವನ್ನು ಮೂಡಿಸಿದೆ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.


ಫೇಸ್​ಬುಕ್ ಬಳಕೆದಾರರು ಸ್ಯಾಮ್ಸನ್ ಮತ್ತು ಮಿಸ್ಟರ್ ಸಿ ಗೆ ಅಭಿನಂದನೆಗಳನ್ನು ತಿಳಿಸಿ "ನೀವು ತುಂಬಾ ಅದೃಷ್ಟವಂತರು ನಿಮಗೆ ಕಳೆದು ಹೋದ ನಿಮ್ಮ ಸಾಕುನಾಯಿ ಮರಳಿ ಸಿಕ್ಕಿದೆ " ಎಂದು ಬರೆದಿದ್ದಾರೆ.


"ಇಷ್ಟು ವರ್ಷಗಳ ಕಾಲ ಸಾಕುನಾಯಿಯನ್ನು ಮಿಸ್ ಮಾಡಿಕೊಂಡ ಬಗ್ಗೆ ಬೇಸರ ಪಡಬೇಕೋ ಅಥವಾ ಮರಳಿ ಒಂದಾಗಿದ್ದೇವೆ ಎಂದು ಸಂತೋಷ ಪಡಬೇಕೋ ಒಂದು ಅರ್ಥವಾಗುತ್ತಿಲ್ಲ" ಇನ್ನೊಬ್ಬ ಫೇಸ್ಬುಕ್ ಬಳಕೆದಾರ ಬರೆದುಕೊಂಡಿದ್ದಾರೆ.

First published: