ಚಾಲಕನಾದನಿಗೆ ವಾಹನವನ್ನು ಡಿಕ್ಲಚ್ ಮಾಡಲು, ಟ್ರಾಫಿಕ್ ಮಧ್ಯೆ ಜೋಪಾನವಾಗಿ ತೆಗೆದುಕೊಂಡು ಹೋಗಲು, ರಿವರ್ಸ್ ಪಾರ್ಕಿಂಗ್ ಮಾಡಲು ಮತ್ತು ಪಾರ್ಕಿಂಗ್ನಿಂದ ಹೊರ ತೆಗೆಯಲು ಸರಿಯಾಗಿ ಗೊತ್ತಿರಬೇಕು. ಎಷ್ಟೇ ಕಷ್ಟದ ಪರಿಸ್ಥಿತಿಯಿದ್ದರು, ಬೇರೆ ವಾಹನಕ್ಕೆ ಹಾನಿಯಾಗದಂತೆ ಚಲಾಯಿಸುವುದು ಚಾಲಕನ ಚಾಣಕ್ಯತನ. ಅದರಂತೆ ಇಲ್ಲೊಬ್ಬ ವ್ಯಕ್ತಿ ತನ್ನ ಕಾರನ್ನು ಪಾರ್ಕಿಂಗ್ ಜಾಗದಿಂದ ಹೊರ ತೆಗೆಯಲಾಗದೆ ಏನು ಮಾಡಿದ್ದಾನೆ ಗೊತ್ತಾ?
ತನ್ನ ಕಾರಿನ ಎದುರು ಭಾಗದಲ್ಲಿ ಲಾರಿಯೊಂದು ನಿಂತಿದೆ. ಆದರೂ ಕಾರನ್ನು ಪಾರ್ಕಿಂಗ್ನಿಂದ ತೆಗೆಯುವಷ್ಟು ಜಾಗವು ದೃಶ್ಯದಲ್ಲಿ ಕಾಣಿಸುತ್ತಿದೆ. ಆದರೆ ಚಾಲಕ ತನ್ನ ಕಾರನ್ನು ಪಾರ್ಕಿಂಗ್ನಿಂದ ತೆಗೆಯಲು ಬಾರದೆ ಕೊನೆಗೆ ಕಾರನ್ನು ಎತ್ತಿ ಬದಿಗಿಟ್ಟಿದ್ದಾನೆ.
ಚೀನಾದಲ್ಲಿ ಈ ದೃಶ್ಯ ಕಂಡುಬಂದಿದ್ದು, ಪೀಪಲ್ಸ್ ಡೈಲಿ ಎಂಬ ಟ್ವಿಟ್ಟರ್ ಖಾತೆ ವಿಡಿಯೋವನ್ನು ಶೇರ್ ಮಾಡಿದೆ. ದೃಶ್ಯದಲ್ಲಿ ವ್ಯಕ್ತಿ ಕಾರನ್ನು ಪಾರ್ಕಿಂಗ್ನಿಂದ ಹೊರ ತೆಗೆಯಲು ಹರಸಾಹಸ ಪಡುತ್ತಾನೆ. ಕೊನೆಗೆ ಕಾರನ್ನು ಎತ್ತಿಕೊಂಡು ಬದಿಗೆ ಸರಿಸಿ ನಂತರ ಚಾಲನೆ ಮಾಡುತ್ತಾ ಹೋಗುತ್ತಾನೆ.
Strong Chinese man goes viral for lifting and moving a car! Video shows the driver failed to drive away his car as it was blocked by a truck, got out, and took the matter into his own hands! pic.twitter.com/R4zrKU040D
— People's Daily, China (@PDChina) August 27, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ