ಸೋಶಿಯಲ್ ಮೀಡಿಯಾ ಅಥವಾ ಸಾಮಾಜಿಕ ಜಾಲತಾಣ ಅಂದ್ರೆ ಪಟ್ ಅಂತ ನೆನಪಾಗೋದು ಏನು ಹೇಳಿ ನೋಡೋಣ ? ಅದುವೇ ವಿಡಿಯೋ. ಇನ್ನು ವಿಡಿಯೋ ಬಗ್ಗೆ ಹೇಳುವುದಾದರೆ, ಕೆಲವೊಂದು ವೈರಲ್ ವಿಡಿಯೋಗಳು (Viral Video) ನಮ್ಮನ್ನು ನಗಿಸಿದ್ರೆ, ಕೆಲವೊಂದು ವಿಡಿಯೋ ಭಾವನೆಯನ್ನು ಹೇಳುತ್ತದೆ. ಅದೇ ಕೆಲವೊಂದು ವೈರಲ್ ವಿಡಿಯೋ ಶಾಕ್ ಕೂಡುತ್ತದೆ. ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಾನೆ ಇರುತ್ತದೆ. ಅದರಲ್ಲೂ ಹಾವಿನ ವಿಡಿಯೋಗಳು ಅಂದರೆ ನೋಡುಗರನ್ನು ಬಹುಬೇಗ ಸೆಳೆದುಬಿಡುತ್ತವೆ. ಕ್ಷಣಾರ್ಧದಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಳ್ಳುತ್ತವೆ. ಇದೀಗ ಅಂಥದ್ದೇ ವಿಡಿಯೋವೊಂದು ವೈರಲ್ ಆಗಿದೆ. ಹಾವು (Snake) ಎಂದಾಕ್ಷಣ ಮಾರುದ್ದ ಓಡುತ್ತೇವೆ. ಈ ಪದ ಕೇಳಿದರೆ ಸಾಕು ಎಲ್ಲಿಲ್ಲದ ಭಯ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಅದೆಂಥ ಬಂಡ ಧೈರ್ಯ ಗೊತ್ತಿಲ್ಲ ಹಾವಿಗೆ ಸ್ನಾನ ಮಾಡಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಅದ್ರಲ್ಲೂ ನಾಗರಹಾವಿಗೆ (cobra ) ಸ್ನಾನ ಮಾಡಿಸೋದು ಅಂದ್ರೆ ಸುಮ್ನೇನಾ? ಇದನ್ನು ನಂಬೋಕೆ ಸಾಧ್ಯಾನಾ? ಎಂಬ ಪ್ರಶ್ನೆಗಳು ನಿಮ್ಮಲ್ಲಿ ತಲೆಯಲ್ಲಿ ಮೂಡಬಹುದು. ಆದರೆ, ಈ ವಿಡಿಯೋ ನೋಡಿದರೆ ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ...
ನಾಗರಹಾವಿಗೆ ಸೋಪು ಹಾಕಿ ಸ್ನಾನ ಮಾಡಿಸಿದ ಭೂಪ!
ವೈರಲ್ ಆಗಿರುವ ವಿಡಿಯೋದಲ್ಲಿ ಇರುವಂತೆ ವ್ಯಕ್ತಿಯೊಬ್ಬ ಸ್ನಾನದ ಕೋಣೆಯಲ್ಲಿ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾದ ನಾಗರಹಾವಿಗೆ ಸ್ನಾನ ಮಾಡಿಸಿದ್ದಾನೆ. ಬರಿ ಸ್ನಾನ ಅಲ್ಲ, ಬಕೆಟ್ ನಲ್ಲಿ ನೀರು ಇಟ್ಟು. ಹಾವಿಗೆ ಸೋಪ್ ಹಾಕಿ. ಜಗ್ ತೆಗೆದುಕೊಂಡು ಮನುಷ್ಯರಿಗೆ ಸ್ನಾನ ಮಾಡಿಸುವ ರೀತಿ ಸಾಕಷ್ಟು ಬಾರಿ ಹಾವಿನ ಮೇಲೆ ನೀರು ಸುರಿಯುತ್ತಾನೆ. ಆದರೆ ನಾಗರಹಾವು ಒಂದು ಬಾರಿ ಜಗ್ ಅನ್ನೇ ಬಾಯಿಯಿಂದ ಕಚ್ಚಿಕೊಳ್ಳುತ್ತದೆ. ಬಳಿಕ ಹಾವಿನಿಂದ ಜಗ್ ಬಿಡಿಸಿಕೊಳ್ಳುವ ವ್ಯಕ್ತಿ ಮತ್ತೆ ನೀರು ಹಾಕಿ ಸ್ನಾನ ಮಾಡಿಸುತ್ತಾನೆ. ಆದರೆ ಸ್ನಾನ ಮಾಡಿಸುವ ವ್ಯಕ್ತಿಯ ಮೇಲೆ ನಾಗರ ಹಾವು ದಾಳಿ ಮಾಡುವುದೇ ಇಲ್ಲ.
ಇನ್ನು ಈ ವಿಡಿಯೋವನ್ನು ಜಿಂದಗಿ ಗುಲ್ಜಾರ್ ಹೈ ಎಂಬುವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 22 ಸೆಕೆಂಡುಗಳ ಕ್ಲಿಪ್ ನಲ್ಲಿ, ಒಬ್ಬ ವ್ಯಕ್ತಿ ನಾಗರಹಾವಿಗೆ ಸ್ನಾನ ಮಾಡುವುದನ್ನು ನೋಡಬಹುದು. ವಿಷಕಾರಿ ಹಾವಾದ ನಾಗರಹಾವನ್ನು ಸ್ನಾನಗೃಹದೊಳಗೆ ಇಟ್ಟು ವ್ಯಕ್ತಿಯು ಬಕೆಟ್ನಿಂದ ನೀರು ತೆಗೆದುಕೊಂಡು ಮಗ್ ಮೂಲಕ ಹಾವಿಗೆ ನೀರು ಸುರಿಯುತ್ತಾನೆ. ಒಮ್ಮೆ ಮಗ್ ಅನ್ನು ಹಾವು ಕಚ್ಚಿದರೂ ವ್ಯಕ್ತಿ ತಲೆಕೆಡಿಸಿಕೊಳ್ಳದೆ ಮತ್ತೆ ಮತ್ತೆ ಹಾವಿಗೆ ನೀರು ಸುರಿಯುತ್ತಾನೆ. ಆದರೆ ನಾಗರಹಾವು ಈ ವ್ಯಕ್ತಿಗೆ ಯಾವುದೇ ತೊಂದರೆ ಕೊಡುವುದಿಲ್ಲ. "ಈ ಚಳಿಯಲ್ಲಿ ಬಡ ಹಾವಿಗೆ ನೀರಿನಿಂದ ಸ್ನಾನ ಮಾಡಿಸಿದ್ದಾರೆ" ಎಂದು ಈ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.
ಇದನ್ನೂ ಓದಿ: Mosquito Bite: ಸೊಳ್ಳೆ ಕಚ್ಚಿದ್ರೆ ನಿರ್ಲಕ್ಷ್ಯ ಮಾಡ್ಬೇಡಿ, ಈ ವ್ಯಕ್ತಿ ಕೋಮಾಗೆ ಹೋಗಿದ್ರಂತೆ!
इतने ठंड में बेचारे सांप को पानी से नहला रहा है 🥲🐍🙏 pic.twitter.com/DtkrL4xiW3
— ज़िन्दगी गुलज़ार है ! (@Gulzar_sahab) December 2, 2022
ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದ್ದಲ್ಲದೆ ವಿವಿಧ ರೀತಿಯಲ್ಲಿ ನೆಟ್ಟಿಗರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. "ಈ ಮನುಷ್ಯನು ತನ್ನ ಜೀವನದ ಬಗ್ಗೆ ಕಾಳಜಿ ವಹಿಸುವುದಿಲ್ಲ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral News: ಈ ಕಪ್ಪೆಗಳ ಸಂಪರ್ಕಕ್ಕೆ ಹೋದ್ರೆ ಜೀವಕ್ಕೇ ಕುತ್ತಂತೆ! ಇದರ ಕಣ್ಣಿನ ಹಿಂದಿರುತ್ತಂತೆ ವಿಷ
ಪ್ರತಿಯೊಬ್ಬರಿಗೆ ಹಾವು ಅಂದ್ರೆ ಮನಸ್ಸಲ್ಲಿ ಒಂದು ಸಣ್ಣ ಭಯ ಇದ್ದೆ ಇರುತ್ತೆ. ಅದರಲ್ಲೂ ನಾಗರಹಾವು ಅಂದ್ರೆ ಕೇಳ್ಬೇಕಾ ಹೇಳಿ. ಹಾವುಗಳಲ್ಲಿ ಅತ್ಯಂತ ವಿಷಕಾರಿ ಹಾವು ಅಂದ್ರೆ ನಾಗರಹಾವು. ಆದ್ರೆ ಈ ವ್ಯಕ್ತಿ ಏನು ಭಯವಿಲ್ಲದೆ ಸಾಮಾನ್ಯ ಹಾವಿಗೆ ಸ್ನಾನ ಮಾಡಿಸಿದ ರೀತಿ ಸೋಪು ಹಾಕಿ ತೊಳೆದಿದ್ದಾನೆ. ಈ ವಿಡಿಯೋ ನೋಡಿ ನೆಟ್ಟಿಗರಂತೂ ಇದನ್ನು ನಂಬೋಕೆ ಅಸಾಧ್ಯ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ