ಮಹಿಳೆ ಮಗುವನ್ನು ಹೆರಬೇಕು ಎನ್ನುವುದು ಪ್ರಕೃತಿ ನಿಯಮ. ಆದರೆ, ಒಮ್ಮೊಮ್ಮೆ ಪ್ರಕೃತಿ ನಿಯಮವೇ ಬದಲಾಗಿ ಬಿಡುತ್ತದೆ. ಶ್ರೀಲಂಕಾದಲ್ಲೂ ಹೀಗೆಯೇ ಆಗಿದೆ! ಗಂಡಸೊಬ್ಬನು ಗಂಡು ಮಗುವಿಗೆ ಜನ್ಮ ನೀಡಿದ್ದಾನೆ! ಈ ವಿಚಾರ ಭಾರಿ ವೈರಲ್ ಆಗಿದೆ.
ದಕ್ಷಿಣ ಶ್ರೀಲಂಕಾದ ಮತಾರಾ ಎಂಬಲ್ಲಿ ವ್ಯಕ್ತಿಯೊಬ್ಬ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಆತ ಆಸ್ಪತ್ರೆಗೆ ಹೋಗಿದ್ದ. ಹೊಟ್ಟೆ ನೋವು ತೀವ್ರಾವಾಗಿದ್ದ ಕಾರಣ ಡಾಕ್ಟರ್ ಚೆಕಪ್ ಮಾಡಿದ್ದರು. ಈ ವೇಳೆ ವೈದ್ಯರು ಶಾಕ್ ಆಗಿದ್ದರು! ಹಿಂದೆಂದೂ ಕೇಳಿರದ ಪ್ರಕರಣ ಅದಾಗಿತ್ತು. ಏಕೆಂದರೆ, ಆತ ಗರ್ಭ ಧರಿಸಿದ್ದ! ನಂತರ ವೈದ್ಯರು ನಿನಗೆ ಕಾಣಿಸಿಕೊಂಡಿದ್ದು ಹೊಟ್ಟೆನೋವಲ್ಲ, ಹೆರಿಗೆ ನೋವು ಎಂದಿದ್ದಾರೆ.
ಹೊಟ್ಟೆ ನೋವು ತೀವ್ರಗೊಂಡಿದ್ದರಿಂದ ವೈದ್ಯರು ಆತನನ್ನು ಹೆರಿಗೆ ವಾರ್ಡ್ಗೆ ಶಿಫ್ಟ್ ಮಾಡಿದ್ದಾರೆ. ಅಲ್ಲಿ ಆತ ಗಂಡು ಮಗುವಿಗೆ ಜನ್ಮ ನೀಡಿದ್ದಾನೆ. ಪೇಷೆಂಟ್ ಆಗಿ ಆಸ್ಪತ್ರೆಗೆ ಬಂದವನು ಗರ್ಭಧರಿಸಿದ್ದನ್ನು ನೋಡಿ ಆಸ್ಪತ್ರೆಯ ಸಿಬ್ಬಂದಿ ಅಚ್ಚರಿಗೊಂಡಿದ್ದಾರೆ.
ಮಗು ಹೆತ್ತ ನಂತರ ಸ್ತನಗಳಲ್ಲಿ ಹಾಲು ಉತ್ಪಾದನೆ ಆಗುತ್ತದೆ. ಆದರೆ, ಈತನ ಸ್ಥನಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹೀಗಾಗಿ, ಸದ್ಯ ಮಗುವಿಗೆ ಆಕಳ ಹಾಲನ್ನೇ ಕುಡಿಸಲಾಗುತ್ತಿದೆ. ಮಗುವಿಗೆ ತಾಯಿ ಹಾಲು ಲಭ್ಯವಾಗದ ಕಾರಣ ವೈದ್ಯರು ವಿಶೇಷ ನಿಗಾ ವಹಿಸಿದ್ದಾರೆ.
ಇದು ಅವಳು ಅವನಾದ ಕಥೆ!
ಅಷ್ಟಕ್ಕೂ ಪುರುಷ ಮಗುವಿಗೆ ಜನ್ಮ ನೀಡಿದ್ದು ಹೇಗೆ ಎನ್ನುವ ಗೊಂದಲ ನಿಮ್ಮನ್ನು ಕಾಡುತ್ತಿರಬಹುದುಲ್ಲವೇ? ಅದಕ್ಕೂ ಉತ್ತರವಿದೆ. ಈತ ಹುಟ್ಟುವಾಗ ಹೆಣ್ಣಾಗಿದ್ದ. ದೇಹದಲ್ಲಿನ ಹಾರ್ಮೋನ್ಗಳ ಬದಲಾವಣೆಯಿಂದಾಗಿ ಅವಳು ಅವನಾಗಿ ಬೆಳೆದಿದ್ದ. ಆನಂತರ ಸರ್ಜರಿ ಮೂಲಕ ಸ್ತನಗಳನ್ನು ತೆಗೆಸಿದ್ದ. ಮಾತ್ರವಲ್ಲದೆ, ಪುರುಷರಂತೆ ಬದುಕುತಿದ್ದ.
ಇದನ್ನೂ ಓದಿ: ಕಿರುತೆರೆ ನಟಿ ಸೆಜೆಲ್ ಅತ್ಯಹತ್ಯೆಗೆ ಪ್ರೀತಿಯೇ ಕಾರಣವಾಯ್ತಾ..?
ಇದನ್ನೂ ಓದಿ: Roberrt: ಐಎಂಡಿಬಿನಲ್ಲಿ ‘ರಾಬರ್ಟ್’ದೇ ಹವಾ; ದಾಸನ ಸಿನಿಮಾಗೆ ಸಿಕ್ತು ಮತ್ತೊಂದು ಗರಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ