Viral Video: ಯಾರನ್ನಾದ್ರೂ ತುಂಬಾ ಮಿಸ್ ಮಾಡಿಕೊಳ್ತಿದ್ದೀರಾ? ಹೀಗೆ ಮಾಡಿದ್ರೆ ಸ್ವಲ್ಪ ಖುಷಿಯಾಗ್ಬಹುದು ನೋಡಿ

ನಮಗೆ ಸಿಗದ ಆ ಪ್ರೀತಿ ಮತ್ತು ಆನಂದವನ್ನು ನಾವು ಬೇರೊಬ್ಬರಿಗೆ ನೀಡುವುದರ ಮೂಲಕ ಅವರ ಬಾಳಿನಲ್ಲಿ ಸಂತೋಷ ತಂದುಕೊಡುವ ಕೆಲಸಕ್ಕಿಂತ ಯಾವುದು ಕೆಲಸ ದೊಡ್ಡದಲ್ಲ ಬಿಡಿ. ಇಲ್ಲೊಬ್ಬ ವ್ಯಕ್ತಿ ಇದೇ ಕೆಲಸವನ್ನು ಮಾಡಿದ್ದಾನೆ ನೋಡಿ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಮೊನ್ನೆ ಎಂದರೆ ಮೇ 8ನೇ ತಾರೀಖು ‘ತಾಯಂದಿರ ದಿನ’ ವನ್ನು (Mothers day) ಎಲ್ಲೆಡೆ ತುಂಬಾನೇ ಸಂತೋಷದಿಂದ ತಮ್ಮ ತಾಯಂದಿರಿಗೆ (Mother) ಮಕ್ಕಳು (Children) ಶುಭಾಶಯ ಹೇಳುವುದರೊಂದಿಗೆ ಉಡುಗೊರೆಯನ್ನು (Gifts) ನೀಡಿ ಮತ್ತು ಅವರದ್ದೇ ಆದ ವಿಭಿನ್ನವಾದ ರೀತಿಯಲ್ಲಿ ಆಚರಿಸಿದ್ದಾರೆ (Celebration). ಕೆಲವರು ತಮ್ಮ ತಾಯಂದಿರ ಜೊತೆಯಲ್ಲಿ ಇದ್ದು ಇಡೀ ದಿನವನ್ನು ತುಂಬಾನೇ ವಿಶೇಷವಾಗಿ ಆಚರಿಸಿದ್ದಾರೆ.ಆದರೆ ಇನ್ನೂ ಕೆಲವರಿಗೆ ಆ ಭಾಗ್ಯ ಸಿಕ್ಕಿರುವುದಿಲ್ಲ, ಏಕೆಂದರೆ ತಮ್ಮ ತಾಯಿ ಯಾವುದೋ ಬೇರೆ ಊರಿನಲ್ಲಿ ವಾಸವಾಗಿದ್ದು ಅಥವಾ ಮಕ್ಕಳು ಬೇರೆ ದೇಶದಲ್ಲಿ ನೆಲೆಸಿದ್ದು, ತಾಯಂದಿರ ದಿನದಂದು ಅವರೊಟ್ಟಿಗೆ ಕಳೆಯಲು ಸಾಧ್ಯವಾಗಿರುವುದಿಲ್ಲ.

ನಮಗೆ ಸಿಗದ ಆ ಪ್ರೀತಿ ಮತ್ತು ಆನಂದವನ್ನು ನಾವು ಬೇರೊಬ್ಬರಿಗೆ ನೀಡುವುದರ ಮೂಲಕ ಅವರ ಬಾಳಿನಲ್ಲಿ ಸಂತೋಷ ತಂದುಕೊಡುವ ಕೆಲಸಕ್ಕಿಂತ ಯಾವುದು ಕೆಲಸ ದೊಡ್ಡದಲ್ಲ ಬಿಡಿ. ಇಲ್ಲೊಬ್ಬ ವ್ಯಕ್ತಿ ಇದೇ ಕೆಲಸವನ್ನು ಮಾಡಿದ್ದಾನೆ ನೋಡಿ.

ಹೂ ಮತ್ತು ಪ್ರೀತಿಯ ಅಪ್ಪುಗೆ
ತಾಯಂದಿರ ದಿನದಂದು ಇಡೀ ಸಾಮಾಜಿಕ ಮಾಧ್ಯಮಗಳು ತಾಯಂದಿರಿಗೆ ಮೆಚ್ಚುಗೆಯ ಪೋಸ್ಟ್ ಗಳಿಂದ ತುಂಬಿತ್ತು. ಅಂತಹ ದಿನಗಳಲ್ಲಿ, ನಿಮ್ಮ ತಾಯಿ ಅಥವಾ ಮಕ್ಕಳು ದೂರವಿದ್ದರೆ ಅಥವಾ ನೀವು ನಿಮ್ಮ ಪ್ರೀತಿ ಪಾತ್ರರನ್ನು ಕಳೆದು ಕೊಂಡಿರುತ್ತೀರಿ ಎಂದಾದಾಗ ತುಂಬಾನೇ ಬೇಸರ ಮಾಡಿಕೊಂಡಿರುತ್ತಿರಿ. ತಾಯಂದಿರ ದಿನದಂದು ಯಾರನ್ನಾದರೂ ಮಿಸ್ ಮಾಡಿಕೊಳ್ಳುತ್ತಿದ್ದರೇ ರಸ್ತೆಯಲ್ಲಿ ಈ ಅಪರಿಚಿತ ವ್ಯಕ್ತಿ ನಿಮ್ಮ ಕಣ್ಣಿಗೆ ಬಿದ್ದರೆ ಕೂಡಲೇ ನಿಮ್ಮ ಬಳಿ ಬಂದು ನಿಮಗೆ ಹೂ ಮತ್ತು ಪ್ರೀತಿಯ ಅಪ್ಪುಗೆಯನ್ನು ನೀಡಿ ಹೋಗುತ್ತಾನೆ.

ಇದನ್ನೂ ಓದಿ:  Burger Man: 32,340 ಬರ್ಗರ್ ತಿಂದವನು ಈತ! ಹುಟ್ಟಿದಾಗಿನಿಂದ ತಿಂದಿದ್ದು ಬರೀ ಬರ್ಗರ್

ರಸ್ತೆಯಲ್ಲಿ ಓಡಾಡುವ ಜನರೊಂದಿಗೆ ಒಂದು ನಿಮಿಷ ಮಾತನಾಡಿ ಅವರು ತಾಯಂದಿರ ದಿನದಂದು ಯಾರನ್ನು ಹೆಚ್ಚಾಗಿ ಮಿಸ್ಮಾಡಿಕೊಳ್ಳುತ್ತಿದ್ದೀರಿಎಂದು ಕೇಳಿ, ಅವರಿಂದ ತಿಳಿದುಕೊಂಡು ಅವರನ್ನು ಅಪ್ಪಿಕೊಂಡು ಅವರಿಗೆ ಹೂವನ್ನು ನೀಡಿ ಆ ಮಿಸ್ ಆದ ತಾಯಂದಿರ ದಿನದ ಆಚರಣೆಯನ್ನು ಪೂರ್ತಿ ಮಾಡಿ ಅವರ ಮುಖದಲ್ಲಿ ಸಂತೋಷವನ್ನು ಮೂಡಿಸುವುದನ್ನು ಈ ವೀಡಿಯೋದಲ್ಲಿ ನೋಡಬಹುದು.

ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್
ಈ ವೀಡಿಯೋವನ್ನು ಒಂದು ದಿನದ ಹಿಂದೆ ಜಚೆರಿ ಡೆರೆನಿಯೋವ್ಸ್ಕಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಇದು ಇಲ್ಲಿಯವರೆಗೆ 5.65 ಲಕ್ಷ ವೀಕ್ಷಣೆಗಳನ್ನು ಪಡೆದಿದೆ. ವೀಡಿಯೋದಲ್ಲಿ, ಆ ವ್ಯಕ್ತಿಯು "ಈ ತಾಯಂದಿರ ದಿನದಂದು ನೀವು ಯಾರನ್ನಾದರೂ ಮಿಸ್ ಮಾಡಿಕೊಂಡಿದ್ದರೆನನ್ನಿಂದ ಅಪ್ಪುಗೆ ಮತ್ತು ಹೂವನ್ನು ತೆಗೆದುಕೊಳ್ಳಿ" ಎಂಬ ಬ್ಯಾನರ್ ಅನ್ನು ಹಿಡಿದಿದ್ದಾನೆ. ಒಬ್ಬ ವಯಸ್ಸಾದ ಮಹಿಳೆ ಬಂದು ಆ ವ್ಯಕ್ತಿಯನ್ನು ತಬ್ಬಿಕೊಂಡಳು. ನೀವು ಯಾರನ್ನಾದರೂ ಮಿಸ್ ಮಾಡಿಕೊಂಡಿರುವಿರಾ ಎಂದು ಕೇಳಿದಾಗ, ಅವಳು ಆಕೆಯ ಮಗನನ್ನು ತುಂಬಾನೇ ಮಿಸ್ ಮಾಡಿಕೊಂಡೇ ಎಂದು ಹೇಳುವುದನ್ನು ವೀಡಿಯೋದಲ್ಲಿ ನಾವು ನೋಡಬಹುದಾಗಿದೆ.




ಆ ವ್ಯಕ್ತಿ ಆ ಮಹಿಳೆಗೆ ನೀವು ನಿಮ್ಮ ಮಗನಿಗೆ ಏನನ್ನಾದರೂ ಹೇಳಲು ಬಯಸುವಿರಾ ಎಂದು ಕೇಳಿದಾಗ, ಆ ಮಹಿಳೆ "ನಾನು ನಿನ್ನನ್ನು ತುಂಬಾನೇ ಪ್ರೀತಿಸುತ್ತಿರುವುದರಿಂದ ನೀನು ಮನೆಗೆ ಬರಬೇಕು ಮಗನೇ" ಎಂದು ಹೇಳಿದ್ದನ್ನು ಈ ವೀಡಿಯೋದಲ್ಲಿ ನೋಡಬಹುದು.

ಆಪ್ತರನ್ನು ಮಿಸ್ ಮಾಡಿಕೊಳ್ಳುವವರಿಗಾಗಿ ವಿಡಿಯೋ ಮಾಡಿದ ಯುವಕ
ರಾಜ್ ಎಂಬ ಹೆಸರಿನ ಒಬ್ಬ ವ್ಯಕ್ತಿಯು ಆ ಅಪರಿಚಿತ ವ್ಯಕ್ತಿಯನ್ನು ತಬ್ಬಿಕೊಂಡು, ಭಾರತದಲ್ಲಿ ಮನೆಗೆ ಮರಳಿರುವ ತನ್ನ ತಾಯಿಯನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾನೆ. ಕೊನೆಯಲ್ಲಿ, ಹುಡುಗಿಯೊಬ್ಬಳು ಬಂದು ತನ್ನ ಅಜ್ಜನನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮತ್ತು ಇಂದು ಅವರ ಜನ್ಮದಿನವಾಗಿದೆ ಎಂದು ಹೇಳುತ್ತಾಳೆ. ಸಾಮಾನ್ಯವಾಗಿ ಅವಳನ್ನು ಐಸ್ ಕ್ರೀಮ್ ಗಾಗಿ ಹೊರಗೆ ಕರೆದೊಯ್ಯುವ ತನ್ನ ಅಜ್ಜನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾಳೆ ಎಂದು ಅವಳು ಹೇಳುತ್ತಾಳೆ.

"ಈ ತಾಯಂದಿರ ದಿನದಂದು ನೀವು ಯಾರನ್ನಾದರೂ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದರೆ, ನನ್ನಿಂದ ಹೂವನ್ನು ತೆಗೆದುಕೊಂಡು ನನ್ನನ್ನು ಪ್ರೀತಿಯಿಂದ ತಬ್ಬಿಕೊಳ್ಳಿ" ಎಂದು ವೀಡಿಯೋದ ಶೀರ್ಷಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:  Love Story: ಪುಟಿನ್‌ ಪುತ್ರಿಯ‌ ಲವ್‌ ಸ್ಟೋರಿ! ಲವರ್​ ನೋಡಲು 50 ಬಾರಿ ಮನೆಯಿಂದ ಓಡಿ ಹೋಗಿದ್ದಾಳೆ ಈಕೆ

ಈ ವೀಡಿಯೋ ನೋಡಿದ ನೆಟ್ಟಿಗರು "ತಮ್ಮ ತಾಯಿಯನ್ನು ಮತ್ತು ಮಕ್ಕಳನ್ನು ಮಿಸ್ ಮಾಡಿಕೊಂಡಿರುವ ಎಲ್ಲರಿಗೂ ನನ್ನ ವರ್ಚುವಲ್ ಅಪ್ಪುಗೆಗಳು. ನಾವು ನಿಮ್ಮನ್ನು ಮರೆಯುತ್ತಿಲ್ಲ. ನಮ್ಮೊಂದಿಗೆ ನೀವು ಸದಾ ಇದ್ದದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಆಶೀರ್ವಾದಕ್ಕೆ ಧನ್ಯವಾದಗಳು... ತಾಯಂದಿರ ದಿನದ ಶುಭಾಶಯಗಳು" ಎಂದು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: