5 ವರ್ಷಗಳ ಕಾಲ 'ಏನೂ ಕೆಲಸ ಮಾಡದ' ವ್ಯಕ್ತಿಗೆ ಉದ್ಯೋಗದಲ್ಲಿ ಬಡ್ತಿ & ವೇತನದಲ್ಲಿ ಏರಿಕೆ..!

ಆ ಕೋಡ್ ಮಾಡಿದ್ದ ತಂತ್ರಾಂಶವು ತನ್ನಷ್ಟಕ್ಕೆ ತಾನೇ ಇಮೇಲ್ ಪರಿಶೀಲಿಸಿ ಅದರಿಂದ ಡೇಟಾ ಸಂಗ್ರಹಿಸಿ ದಾಖಲು ಮಾಡುತ್ತಿತ್ತು. ಈಗ ಈ ಉದ್ಯೋಗಿಗೆ ಕೆಲಸವೇ ಇರಲಿಲ್ಲ, ಏಕೆಂದರೆ ಇವನ ಕೆಲಸವನ್ನು ಆ ಕೋಡ್ ತಾನೇ ಮಾಡುತ್ತಿತ್ತು.

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
ಹೇಳಲಿಕ್ಕೆ ಮಾತ್ರ ಉದ್ಯೋಗದಲ್ಲಿದ್ದೇವೆ ಎನ್ನುವಂತಿದ್ದು ಕೆಲಸ ಮಾತ್ರ ಏನೂ ಮಾಡುವಂತೆಯೇ ಇಲ್ಲ. ಆದರೂ ಬಡ್ತಿ (Promotion) ಬೇಕು ಹಾಗೂ ವೇತನದಲ್ಲಿ(Wages) ಏರಿಕೆ ಇರಬೇಕು. ಇದಕ್ಕಲ್ಲವೇ ರಾಯಲ್ ಇನ್ಕಮ್ (Royal Income) ಎಂದು ಹೇಳಬಹುದು. ಅದೆಷ್ಟೊ ಉದ್ಯೋಗಿಗಳು (Employee) ಈ ರೀತಿಯ ಕೆಲಸಕ್ಕಾಗಿ ಹಲಬುವರೋ...ಅಂತಹ ಒಂದು ಘಟನೆ ಈಗ ಒಬ್ಬ ಉದ್ಯೋಗಿಯಿಂದಲೇ ಬೆಳಕಿಗೆ ಬಂದಿದೆ.ಆ ಉದ್ಯೋಗಿ ರೆಡ್ಡಿಟ್‌ ವೆಬ್ (Reddit website) ತಾಣದಲ್ಲಿ ತಾನು ಯಾವ ರೀತಿಯಾಗಿ ಶ್ರಮಪಡುವ ಕೆಲಸವನ್ನು ಚುರುಕುತನದ ಬುದ್ಧಿ ಉಪಯೋಗಿಸಿ ಅತ್ಯಂತ ಸರಳವಾಗುವಂತೆ ಮಾಡಿಕೊಂಡು ಬಡ್ತಿ ಹಾಗೂ ವೇತನ ಏರಿಕೆ ಪಡೆದೆ ಎಂಬುದನ್ನು ವಿವರಿಸಿದ್ದಾನೆ. ಈ ಪೋಸ್ಟ್ ಈಗ ಹಲವರ ಗಮನಸೆಳೆದಿದ್ದು(Impressed) ಸಾಕಷ್ಟು ಜನರು ಅವನ ಜಾಣ್ಮೆಯನ್ನು ಕೊಂಡಾಡಿದ್ದಾರೆ.

ಡೇಟಾ ಎಂಟ್ರಿ ಆಪರೇಟರ್
ಈ ವ್ಯಕ್ತಿ ಡೇಟಾ ಎಂಟ್ರಿ ಆಪರೇಟರ್ ಆಗಿ ಉದ್ಯೋಗ ಪಡೆದುಕೊಂಡಿದ್ದ. ಆತನ ಕೆಲಸವೆಂದರೆ ಬರುವ ಇಮೇಲ್‌ಗಳಿಂದ ಅವಶ್ಯಕವಾದ ಮಾಹಿತಿಗಳನ್ನು ಸ್ಥಳೀಯವಾಗಿ ಕಂಪನಿಯ ಡೇಟಾ ಬೇಸ್‌ನಲ್ಲಿ ಹಾಕಿ ಸಂಗ್ರಹಿಸಿಡುವುದಾಗಿತ್ತು. ಈ ಪ್ರಕ್ರಿಯೆ ಸಾಕಷ್ಟು ಕಿರಿಕಿರಿ ಉಂಟು ಮಾಡಬಹುದು. ಏಕೆಂದರೆ ಪ್ರತಿ ಇಮೇಲ್‌ಗಳನ್ನು ಗಮನಿಸುತ್ತಲೇ ಇರಬೇಕು. ಮಾಹಿತಿ ಕಲೆ ಹಾಕಿ ಇನ್ನೊಂದೆಡೆ ತುಂಬುತ್ತಲೇ ಇರಬೇಕು. ದಿನಪೂರ್ತಿ ಅಥವಾ ರಾತ್ರಿಪೂರ್ತಿ ಇದೇ ಕೆಲಸ ಮಾಡುತ್ತಲೇ ಇರಬೇಕು. ಅಲ್ಲದೆ ಇದರಲ್ಲಿ ಇಂತಿಷ್ಟೇ ಸಂಖ್ಯೆಯಲ್ಲಿ ಮಾಹಿತಿ ಸಂಗ್ರಹಿಸಬೇಕೆನ್ನುವ ಗುರಿಗಳನ್ನೂ ಕೊಡುತ್ತಿರುತ್ತಾರೆ.

ಇದನ್ನೂ ಓದಿ: Accenture: ಆಕ್ಸೆಂಚರ್‌ನಲ್ಲಿ ಉದ್ಯೋಗಿಗಳಿಗೆ ಬಂಪರ್‌ ಅವಕಾಶ, ಇದ್ದಪ್ಪಾ ಅದೃಷ್ಟ ಅಂದ್ರೆ

ಈಗ ಈ ವ್ಯಕ್ತಿಯ ಕಥೆಗೆ ಬರೋಣ. ಈತನಿಗೆ ಈ ಉದ್ಯೋಗ ದೊರೆತ ನಂತರ ಅವನ ಮಾಡಬೇಕಾಗಿರುವ ಕೆಲಸದ ಬಗ್ಗೆ ತರಬೇತಿ ನೀಡಲಾಯಿತು. ತರಬೇತಿಯ ನಂತರ ಅವನು ಕಂಡುಕೊಂಡಿದ್ದ ವಿಷಯ ಏನೆಂದರೆ ಪ್ರೋಗ್ರಾಮಿಂಗ್‌ ಲ್ಯಾಂಗ್ವೇಜ್ ಬಳಸಿ ಕೋಡಿಂಗ್ ಮಾಡುವ ಮೂಲಕ ಈ ಒಟ್ಟಾರೆ ಪ್ರಕ್ರಿಯೆಯನ್ನು ಸ್ವಯಂಚಾಲಿತವನ್ನಾಗಿ ಮಾಡಬಹುದೆಂದು.

ನಿಪುಣ ಕೋಡಿಂಗ್
ಈತನಿಗೆ ನೈಟ್ ಶಿಫ್ಟ್ ಕೊಡಲಾಗಿತ್ತಾದರೂ ಪ್ರಯಾಣ ವ್ಯವಸ್ಥೆ ಕೊಟ್ಟಿರಲಿಲ್ಲ. ಹಾಗಾಗಿ ಆತ ಮನೆಯಿಂದಲೇ ಕೆಲಸ ನಿರ್ವಹಿಸುವ ಅವಕಾಶ ಪಡೆದಿದ್ದ. ಮೇಲಿನ ಕೋಡಿಂಗ್ ವಿಚಾರ ತಿಳಿಯುತ್ತಿದ್ದಂತೆಯೇ ಆ ವ್ಯಕ್ತಿ ಒಬ್ಬ ನಿಪುಣ ಕೋಡಿಂಗ್ ಮಾಡುವವನನ್ನು ತನ್ನ ಕೆಲಸ ಸುಗಮ ಮಾಡಿಕೊಳ್ಳಬೇಕೆಂಬ ದೃಷ್ಟಿಯಿಂದ ಬಾಡಿಗೆಗೆ ಪಡೆದು ಅವನಿಗೆ ತನ್ನ ಕೆಲಸದ ಬಗ್ಗೆ ವಿವರಣೆ ನೀಡಿ ತಾನು ಕೆಲ ಪ್ರಾಥಮಿಕ ಅಂಶಗಳನ್ನು ಅಂದರೆ ಇಷ್ಟು ಸಂಖ್ಯೆಗಳಷ್ಟು ಎಂಟ್ರಿ ಮಾಡು ಎಂಬ ಕೆಲ ಆದೇಶಗಳನ್ನಷ್ಟೆ ಕೊಟ್ಟರೆ ಸಾಕು ಆ ಪ್ರೋಗ್ರಾಮ್‌ ತನ್ನಷ್ಟಕ್ಕೆ ತಾನೆ ಕೆಲಸ ಮಾಡಿಕೊಂಡು ಹೋಗುವಂತೆ ಕೋಡ್ ಮಾಡಿಕೊಡಲು ಸೂಚಿಸಿದ.

ತನ್ನಷ್ಟಕ್ಕೆ ತಾನೇ ಇಮೇಲ್ ಪರಿಶೀಲನೆ
ಅದರಂತೆ ಆ ವ್ಯಕ್ತಿ ಅವನಿಗೆ ಕೋಡ್ ಮಾಡಿಕೊಟ್ಟ. ಅದಕ್ಕಾಗಿ ಈತ ತನ್ನ 2 ತಿಂಗಳುಗಳ ವೇತನ ನೀಡಬೇಕಾಯಿತು. ಆದರೆ, ತದನಂತರ ಆಗಿದ್ದೇ ಒಂದು ಮ್ಯಾಜಿಕ್. ನಿತ್ಯ ರಾತ್ರಿ ಈ ಡೇಟಾ ಎಂಟ್ರಿ ಉದ್ಯೋಗಿ ತಾನು ಸಿದ್ಧಪಡಿಸಿಕೊಂಡಿದ್ದ ಕೋಡ್ ಸಕ್ರಿಯ ಮಾಡುತ್ತಿದ್ದ. ಆಗ ಆ ಕೋಡ್ ಮಾಡಿದ್ದ ತಂತ್ರಾಂಶವು ತನ್ನಷ್ಟಕ್ಕೆ ತಾನೇ ಇಮೇಲ್ ಪರಿಶೀಲಿಸಿ ಅದರಿಂದ ಡೇಟಾ ಸಂಗ್ರಹಿಸಿ ದಾಖಲು ಮಾಡುತ್ತಿತ್ತು. ಈಗ ಈ ಉದ್ಯೋಗಿಗೆ ಕೆಲಸವೇ ಇರಲಿಲ್ಲ, ಏಕೆಂದರೆ ಇವನ ಕೆಲಸವನ್ನು ಆ ಕೋಡ್ ತಾನೇ ಮಾಡುತ್ತಿತ್ತು. ಹೀಗೆ ಈ ಉದ್ಯೋಗಿ ರಾತ್ರಿಯೆಲ್ಲ ಕೆಲಸ ಮಾಡದೆಯೇ ಕಳೆಯುತ್ತಿದ್ದ. ಮಲಗುತ್ತಿದ್ದ, ಚಲನ ಚಿತ್ರಗಳನ್ನು ವೀಕ್ಷಿಸುತ್ತಿದ್ದ, ಒಮ್ಮೊಮ್ಮೆ ಹೊರಗಡೆಯೂ ಹೋಗುತ್ತಿದ್ದ. ಇಷ್ಟಾಗಿಯೂ ತನ್ನ ಸಂಸ್ಥೆಯ ಉದ್ಯೋಗಿಗಳ ನಡುವೆ ಈತನದ್ದೇ ಪ್ರದರ್ಶನ ಅದ್ಭುತವಾಗಿರುತ್ತಿತ್ತು. ಅದಕ್ಕಾಗಿ ಅವನಿಗೆ ಬಡ್ತಿಯಲ್ಲದೆ 2 ಬಾರಿ ವೇತನ ಏರಿಕೆಯೂ ಆಗಿತ್ತು.

ಸತ್ಯ ಬಿಚ್ಚಿಟ್ಟ ವ್ಯಕ್ತಿ
ಈ ನಡುವೆ ಅವನ ಸಹೋದ್ಯೋಗಿಗಳು ಈ ವ್ಯಕ್ತಿಗಿಂತಲೂ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದಾಗ, ಈತ ಕೇವಲ ತನ್ನ ಕೋಡ್‌ನಲ್ಲಿ ಕೆಲ ಸಂಖ್ಯೆಗಳನ್ನು ಹೆಚ್ಚಿಸುತ್ತಿದ್ದ ಮತ್ತು ಅವನೇ ಮೊದಲಿಗನಾಗಿ ಉದ್ಯೋಗದಾತರ ಗಮನಸೆಳೆಯುತ್ತಿದ್ದ. ಹೀಗೆ ಬರೋಬ್ಬರಿ 5 ವರ್ಷಗಳ ಕಾಲ ಈ ವ್ಯಕ್ತಿ ಈ ರೀತಿಯಾಗಿ ತನ್ನ ಕೆಲಸ ಮಾಡಿದ್ದ. ಕೊನೆಗೆ ಈಗ ಅವನಿಗೆ ಬೇರೆ ಹುದ್ದೆ ದೊರೆತಿದ್ದು ಇನ್ನೂ ಈ ಬಗ್ಗೆ ತನ್ನ ರಹಸ್ಯ ಹೇಳುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಈ ಸತ್ಯವ ಬಿಚ್ಚಿಟ್ಟಿದ್ದಾನೆ.

ಇದನ್ನೂ ಓದಿ: CISF Recruitment 2022: ದ್ವಿತೀಯ ಪಿಯುಸಿ ಪಾಸಾದವರಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಅವಕಾಶ - 249 ಹುದ್ದೆಗಳಿಗೆ ಅರ್ಜಿ ಆಹ್ವಾನ

ಈತನ ಜಾಣ್ಮೆಗೆ ಸಾಕಷ್ಟು ಜನ ರೆಡ್ಡಿಟ್‌ ಬಳಕೆದಾರರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬಹು ಜನರ ಅಭಿಪ್ರಾಯದಂತೆ ಈ ಉದ್ಯೋಗಿ ತನಗೆ ನೀಡಲಾಗಿದ್ದ ಕೆಲಸವನ್ನೇ ಮಾಡಿದ್ದಾನೆ, ಹಾಗಾಗಿ ಈತನ ಜಾಣ್ಮೆಯನ್ನು ಮೆಚ್ಚಲೇಬೇಕೆಂದು ಹೇಳಿರುವುದನ್ನು ಗಮನಿಸಬಹುದಾಗಿದೆ.
Published by:vanithasanjevani vanithasanjevani
First published: