Swiggy: ಆರ್ಡರ್​ ಲೇಟಾಯ್ತು ಅಂತ ಗುರ್​ ಅಂತಿದ್ದ ವ್ಯಕ್ತಿ; ಡೆಲಿವರಿ ಬಾಯ್ ಬಂದಾಗ ಮಾತ್ರ ಆಗಿದ್ದೇ ಬೇರೆ!

ಕೆಲವೊಮ್ಮೆ ಜೋಮ್ಯಾಟೊ ಅಥವಾ ಸ್ವಿಗ್ಗಿ ಆ್ಯಪ್ಗಳನ್ನು ತೆರೆದು ನಮಗೆ ಬೇಕಾದ ಹೊಟೇಲ್ ನಿಂದ ಇಷ್ಟವಾಗಿರುವ ಆಹಾರವನ್ನು ಆರ್ಡರ್ ಮಾಡಿಯೇ ಬಿಡುತ್ತೇವೆ. ಆದರೆ ಕೆಲವು ಬಾರಿ ಸರಿಯಾದ ಸಮಯಕ್ಕೆ, ಇನ್ನೂ ಕೆಲವು ಸಮಯಗಳಲ್ಲಿ ಸಮಯಕ್ಕಿಂತಲೂ ಮುಂಚೆಯೇ ಬಂದು ಆಹಾರ ಮನೆಯ ಬಾಗಿಲಿಗೆ ಬಂದು ತಲುಪಿಸಿ ಹೋಗುವ ಈ ಫುಡ್ ಅಗ್ರಿಗೆಟರ್ ಗಳ ಡೆಲಿವರಿ ಬಾಯ್ಸ್ ಕೆಲವೊಂದು ಕಾರಣಗಳಿಂದಾಗಿ ತಡವಾಗಿ ಬರುವುದುಂಟು. ಹೀಗೆಯೇ ಇಲ್ಲೊಂದು ಹೃದಯಸ್ಪರ್ಶಿ ಕಥೆ ಇದೆ ನೋಡಿ

ಸ್ವಿಗ್ಗಿ ಡೆಲಿವರಿ ಬಾಯ್ ಕೃಷ್ಣಪ್ಪ

ಸ್ವಿಗ್ಗಿ ಡೆಲಿವರಿ ಬಾಯ್ ಕೃಷ್ಣಪ್ಪ

  • Share this:
ಕೆಲವೊಮ್ಮೆ ನಮಗೆ ತುಂಬಾನೇ ಹಸಿವಾಗಿರುತ್ತದೆ ಮತ್ತು ತಕ್ಷಣವೇ ನಾವು ನಮ್ಮ ಕೈಗೆ ಮೊಬೈಲ್ (Mobile) ಎತ್ತಿಕೊಂಡು ಈ ಫುಡ್ ಪಾರ್ಸೆಲ್ (Food Parcel) ಮನೆಗೆ ತಂದು ಕೊಡುವ ಫುಡ್ ಅಗ್ರಿಗೆಟರ್ ಗಳಾದ ಜೋಮ್ಯಾಟೊ (Zomato) ಅಥವಾ (Swiggy) ಸ್ವಿಗ್ಗಿ  ಆ್ಯಪ್ಗಳನ್ನು ತೆರೆದು ನಮಗೆ ಬೇಕಾದ ಹೊಟೇಲ್ ನಿಂದ ಇಷ್ಟವಾಗಿರುವ ಆಹಾರವನ್ನು ಆರ್ಡರ್ (Order) ಮಾಡಿಯೇ ಬಿಡುತ್ತೇವೆ. ಆದರೆ ಕೆಲವೊಮ್ಮೆ ಸರಿಯಾದ ಸಮಯಕ್ಕೆ, ಇನ್ನೂ ಕೆಲವು ಸಮಯಗಳಲ್ಲಿ ಸಮಯಕ್ಕಿಂತಲೂ ಮುಂಚೆಯೇ ಬಂದು ಆಹಾರ ಮನೆಯ ಬಾಗಿಲಿಗೆ ಬಂದು ತಲುಪಿಸಿ ಹೋಗುವ ಈ ಫುಡ್ ಅಗ್ರಿಗೆಟರ್ ಗಳ ಡೆಲಿವರಿ ಬಾಯ್ಸ್ (Delivery Boy) ಕೆಲವೊಂದು ಕಾರಣಗಳಿಂದಾಗಿ ತಡವಾಗಿ ಬರುವುದುಂಟು.

ಹಾಗೆ ತಡವಾಗಿ ಆಹಾರವನ್ನು ತಲುಪಿಸಲು ಬಂದ ಡೆಲಿವರಿ ಬಾಯ್ಸ್ ಮೇಲೆ ಕೆಲವೊಮ್ಮೆ ಕೋಪದಿಂದ ರೇಗಾಡಿರುತ್ತೇವೆ. ಆದರೆ ಅವರು ಏಕೆ ತಡವಾಗಿ ಬಂದರು, ಅವರಿಗೆನಾದರೂ ತೊಂದರೆ ಆಗಿದೆಯಾ ಅಂತ ತುಂಬಾ ಕೆಲವು ಜನರು ಮಾತ್ರ ಆಲೋಚಿಸುತ್ತಾರೆ ಮತ್ತು ಅವರನ್ನು ತಡವಾಗಿ ಬಂದ ಹಿಂದಿನ ಕಾರಣವನ್ನು ವಿಚಾರಿಸುತ್ತಾರೆ.

ಸ್ವಿಗ್ಗಿಯಲ್ಲಿ ಫುಡ್ ಆರ್ಡರ್ ಮಾಡಿದ ವ್ಯಕ್ತಿಗೆ ಆಹಾರ ತಡವಾಗಿ ಬಂದಿದ್ದೇಕೆ?  
ಹೀಗೆ ತನ್ನ ಮೊಬೈಲ್ ನಲ್ಲಿರುವ ಆ್ಯಪ್ನಿಂದ ಆಹಾರವನ್ನು ಆರ್ಡರ್ ಮಾಡಿದ ಬೆಂಗಳೂರಿನ ವ್ಯಕ್ತಿಗೆ ತನ್ನ ಊಟ ಮನೆ ಸೇರುವುದು ತುಂಬಾನೇ ತಡವಾಗುತ್ತಿದೆ ಅಂತ ಕೆಟ್ಟ ಕೋಪ ಬಂದಿತ್ತಂತೆ. ಕೊಟ್ಟ ಆರ್ಡರ್ ತುಂಬಾನೇ ತಡವಾಗುತ್ತಿದೆ ಅಂತ ತಾಳ್ಮೆ ಕಳೆದುಕೊಳ್ಳುತ್ತಿದ್ದ ಬೆಂಗಳೂರಿನ ನಿವಾಸಿಯೊಬ್ಬರು ಅವರ ಮನೆಯ ಡೋರ್ ಬೆಲ್ ಬಾರಿಸಿದಾಗ ಬಾಗಿಲು ತೆರೆದು ಡೆಲಿವರಿ ಬಾಯ್ ನನ್ನು ನೋಡಿ ತುಂಬಾನೇ ಆಶ್ಚರ್ಯಚಕಿತರಾದರು ಎಂದು ಹೇಳಬಹುದು. ಕೋಪ ಮಾಡಿಕೊಂಡ ವ್ಯಕ್ತಿ ಅವರ ಮನೆಯ ಬಾಗಿಲನ್ನು ತೆರೆದು, ಇನ್ನೇನು ಆ ಊಟ ತಂದು ಕೊಟ್ಟವರನ್ನು ಹಿಗ್ಗಾಮುಗ್ಗಾ ಬೈಯಬೇಕು ಅನ್ನುವಷ್ಟರಲ್ಲಿ ಒಬ್ಬ ಅಂಗವೈಕಲ್ಯ ಹೊಂದಿರುವ ಸ್ವಿಗ್ಗಿ ಡೆಲಿವರಿ ವ್ಯಕ್ತಿ ತನ್ನ ಆಹಾರವನ್ನು ಕೈಯಲ್ಲಿ ಹಿಡಿದಿಕೊಂಡು ನಿಂತಿರುವುದನ್ನು ನೋಡಿ ತುಂಬಾನೇ ಆಶ್ಚರ್ಯಚಕಿತರಾದರು.

ಡೆಲಿವರಿ ಬಾಯ್ ಅನ್ನು ನೋಡಿ ರೋಹಿತ್ ಏನು ಹೇಳಿದ್ದಾರೆ 
ರೋಹಿತ್ ಕುಮಾರ್ ಸಿಂಗ್ ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ಆದ ಕೃಷ್ಣಪ್ಪ ರಾಥೋಡ್ ಅವರ ಕಥೆಯನ್ನು ಲಿಂಕ್ಡ್ಇನ್ ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು "ನಾನು ಆರ್ಡರ್ ಮಾಡಿದ ಆಹಾರ ವಿಳಂಬವಾಗುತ್ತಿತ್ತು, ತನ್ನ ಆಹಾರವನ್ನು ಸುಮಾರು 30 ನಿಮಿಷಗಳಲ್ಲಿ ತಲುಪಿಸಲಾಗುತ್ತದೆ ಎಂದು ಅಂದಾಜಿಸಲಾಗಿತ್ತು ಎಂದು ರೋಹಿತ್ ವಿವರಿಸಿದರು. ಆದರೆ ಅದು ಆ ಸಮಯದಲ್ಲಿ ಬರದೇ ಇದ್ದಾಗ ಆ ಡೆಲಿವರಿ ಬಾಯ್ ಗೆ ಕರೆ ಮಾಡಲು ನಿರ್ಧರಿಸಿದರು. ಡೆಲಿವರಿ ಬಾಯ್ ಕರೆಯನ್ನು ಎತ್ತಿಕೊಂಡು ತುಂಬಾನೇ ಸಮಾಧಾನಕರವಾದ ಧ್ವನಿಯಲ್ಲಿ "ನಾನು ಸ್ವಲ್ಪ ಸಮಯದಲ್ಲಿ ಅಲ್ಲಿರುತ್ತೇನೆ, ಸರ್" ಎಂದು ಹೇಳಿದರಂತೆ.

ಇದನ್ನೂ ಓದಿ: Viral Photo: ಮಗಳು ಡಾಕ್ಟರೇಟ್ ಪದವಿ ಪಡೆದ ಖುಷಿಗೆ ಈ ತಾಯಿ ಏನು ಮಾಡಿದ್ದಾಳೆ ಗೊತ್ತಾ? ಇಲ್ಲಿದೆ ನೋಡಿ

ಇನ್ನೂ ಕೆಲವು ನಿಮಿಷಗಳ ನಂತರವೂ ಆಹಾರವು ಬರದಿದ್ದಾಗ, ಅವರು ಮತ್ತೆ ಡೆಲಿವರಿ ಬಾಯ್ ಗೆ ಕರೆ ಮಾಡಿ, "ಅಣ್ಣಾ.. ದಯವಿಟ್ಟು ಬೇಗ ಬನ್ನಿ, ನನಗೆ ತುಂಬಾನೇ ಹಸಿವಾಗ್ತಾ ಇದೆ" ಎಂದು ಹೇಳಿದರಂತೆ. ಅವರು ಮತ್ತೆ ಅಷ್ಟೇ ಸಮಾಧಾನಕರವಾದ ಧ್ವನಿಯಲ್ಲಿ ಪ್ರತಿಕ್ರಿಯಿಸಿದರು ಮತ್ತು ನನಗೆ ಕೇವಲ 5 ನಿಮಿಷಗಳು ಮಾತ್ರ ಕೊಡಿ ಅಲ್ಲಿರುತ್ತೇನೆ" ಎಂದು ರೋಹಿತ್ ಹೇಳಿದರು. "ಮುಂದಿನ 5 ರಿಂದ 10 ನಿಮಿಷಗಳಲ್ಲಿ, ಮನೆಯ ಬಾಗಿಲ ಗಂಟೆ ಶಬ್ದ ಕೇಳಿಸಿತು, ತಾಳ್ಮೆಯಿಲ್ಲದ ನಾನು ಬೇಗನೆ ಬಾಗಿಲು ತೆರೆಯಲು ಹೋದೆ ಮತ್ತು ಡೆಲಿವರಿಯಲ್ಲಿನ ವಿಳಂಬದ ಬಗ್ಗೆ ನನ್ನ ನಿರಾಶೆಯನ್ನು ವ್ಯಕ್ತಪಡಿಸಬಹುದು ಎಂದು ಕೊಂಡಿದ್ದೆ" ಎಂದು ಅವರು ಬರೆದಿದ್ದಾರೆ.

ಕೃಷ್ಣಪ್ಪರಿಗೆ ಕ್ಷಮೆಯಾಚಿಸಿದ ರೋಹಿತ್ 
ರೋಹಿತ್ ಬಾಗಿಲು ತೆರೆದಾಗ, ಕೃಷ್ಣಪ್ಪ ತನ್ನ ಕೈಯಲ್ಲಿದ್ದ ಆರ್ಡರ್ ಹಿಡಿದುಕೊಂಡು ಮುಖದಲ್ಲಿ ಒಂದು ಸಣ್ಣ ನಗು ಇತ್ತು. “ಸುಮಾರು 40 ರ ಆಸುಪಾಸಿನ ವಯಸ್ಸಿನ ವ್ಯಕ್ತಿ ಅವರಾಗಿದ್ದು, ಬೂದು ಕೂದಲು, ಊರುಗೋಲುಗಳೊಂದಿಗೆ ಸರಿಯಾಗಿ ತಮ್ಮನ್ನು ತಾವು ಬ್ಯಾಲೆನ್ಸ್ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು.

ಅವರನ್ನು ನೋಡಿದ ನಾನು ಒಂದು ಕ್ಷಣ ಮರಗಟ್ಟಿದೆ ಮತ್ತು ನನ್ನ ತಲೆಯಲ್ಲಿ ಆಗ ಈ ಆರ್ಡರ್ ಅನ್ನು ನನಗೆ ತಲುಪಿಸಲು ಅವರು ಎಷ್ಟು ಕಷ್ಟ ಪಟ್ಟಿರಬಹುದು ಅಂತ ನನಗೆ ಅರಿವಾಯಿತು. ನಾನು ತಕ್ಷಣವೇ ಅವರ ಬಳಿ ಕ್ಷಮೆಯಾಚಿಸಿದೆ ಮತ್ತು ಅವರೊಡನೆ ಮಾತನಾಡಲು ಶುರು ಮಾಡಿದೆ" ಎಂದು ರೋಹಿತ್ ಹೇಳಿದರು.

ಇದನ್ನೂ ಓದಿ:  ದಿನ ಬೆಳಗಾಗ್ತಿದ್ದಂತೆ ಸ್ಟಾರ್​​ ಆದ ಡೆಲಿವರಿ ಬಾಯ್, ಭೇಟಿಯಾಗುವಂತೆ ಕರೆ ಮಾಡಿದ Dubai ರಾಜಕುಮಾರ!

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಅವರು ಕೆಫೆಯಲ್ಲಿ ಕೆಲಸ ಕಳೆದುಕೊಂಡರು ಮತ್ತು ಆಹಾರವನ್ನು ತಲುಪಿಸುವ ಕೆಲಸವನ್ನು ತೆಗೆದುಕೊಳ್ಳಬೇಕಾಯಿತು ಎಂದು ಕೃಷ್ಣಪ್ಪ ಅವರಿಗೆ ಹೇಳಿದರು. ಎರಡರಿಂದ ಮೂರು ನಿಮಿಷಗಳ ಕಾಲ ಮಾತನಾಡಿದ ನಂತರ ಕೃಷ್ಣಪ್ಪ ರೋಹಿತ್ ಗೆ "ಸರ್, ನಾನು ನನ್ನ ಮುಂದಿನ ಡೆಲಿವರಿ ನೀಡಲು ತಡವಾಗುತ್ತಿದೆ, ಹೋಗುತ್ತೇನೆ" ಎಂದು ಹೇಳಿ ಹೊರಟು ಹೋದರು.

ಈ ಹೃದಯಸ್ಪರ್ಶಿ ಕಥೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಸಹ ಇದನ್ನು ನೋಡಿ ಈ ವ್ಯಕ್ತಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
Published by:Ashwini Prabhu
First published: