ಕೋವಿಡ್ - 19 ಸುಮಾರು ಒಂದೂವರೆ ವರ್ಷಗಳಿಂದ ಇಡೀ ಜಗತ್ತನ್ನೇ ಕಾಡುತ್ತಿದ್ದು, ಮಿಲಿಯನ್ಗಟ್ಟಲೆ ಜನರನ್ನು ಬಲಿ ಪಡೆದಿದೆ. ನಂತರ ಕೋವಿಡ್ - 19 ಸಾಂಕ್ರಾಮಿಕದ ವಿರುದ್ಧ ಲಸಿಕೆಗಳನ್ನು ಪ್ರಾರಂಭಿಸಿದಾಗ ಪ್ರಪಂಚದಾದ್ಯಂತ ಜನರು ನಿರಾಳರಾದರು. ಏಕೆಂದರೆ ಕೊರೊನಾವೈರಸ್ ವಿರುದ್ದ ಈ ಲಸಿಕೆ ಪಡೆದ ಫಲಾನುಭವಿಗಳು ರಕ್ಷಣೆ ಪಡೆಯುತ್ತಾರೆ ಎಂಬ ಭರವಸೆಯನ್ನು ಎಲ್ಲೆಡೆ ನೀಡಿದ್ದಾರೆ. ಆದರೆ ವ್ಯಾಕ್ಸಿನೇಷನ್ ಪಡೆದ ನಂತರ ನೀವು ಕೋವಿಡ್ ಲಸಿಕೆ ಹಾಕಿಸಿಕೊಂಡ ಬಗ್ಗೆ ದೃಢೀಕರಣ ನೀಡುವ ಪ್ರಮಾಣ ಪತ್ರ ನೀಡಬೇಕಾಗಿ ಬಂತು. ಸಾರ್ವಜನಿಕ ಸುರಕ್ಷತೆ ಮತ್ತು ಕೋವಿಡ್ -19 ಪ್ರೋಟೋಕಾಲ್ಗಳ ಕಾರಣ, ಶಾಪಿಂಗ್ ಮಾಲ್, ಚಲನಚಿತ್ರ ಮಂದಿರಗಳು, ಕಿರಾಣಿ ಅಂಗಡಿಗಳೂ ಸಹ ಲಸಿಕೆ ಪ್ರಮಾಣಪತ್ರಗಳನ್ನು ತೋರಿಸುವಂತೆ ಕೇಳುತ್ತವೆ. ಈ ಹಿನ್ನೆಲೆ ವ್ಯಕ್ತಿಯು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಪ್ರಮಾಣಪತ್ರವನ್ನು ತೋರಿಸಬೇಕಾಗಿದೆ. ಇದು ಕೆಲವೊಮ್ಮೆ ಕಿರಿಕಾರಿಯಾಗುತ್ತದೆ. ಆದ್ದರಿಂದ ಇಂತಹ ಕಿರಿಕಿರಿ ಸಂದರ್ಭಗಳನ್ನು ತಪ್ಪಿಸಲು ವ್ಯಕ್ತಿಯೊಬ್ಬ ಅದ್ಭುತ ಪ್ಲ್ಯಾನ್ ಮಾಡಿದ್ದಾರೆ. ಅದು ಏನಂತೀರಾ..? ತನ್ನ ಲಸಿಕೆ ಪ್ರಮಾಣಪತ್ರದ ಕ್ಯೂಆರ್ ಕೋಡ್ ಅನ್ನು ತನ್ನ ತೋಳಿನ ಮೇಲೆ ಹಚ್ಚೆ (ಟ್ಯಾಟೂ) ಹಾಕಿಸಿಕೊಂಡಿದ್ದಾರೆ.
ಇಟಲಿಯಲ್ಲಿ 22 ವರ್ಷದ ವಿದ್ಯಾರ್ಥಿ ತನ್ನ ಕೋವಿಡ್ ಪ್ರಮಾಣಪತ್ರದ ಬಾರ್ಕೋಡ್ ಅನ್ನು ತನ್ನ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡ ನಂತರ ಅನಿರೀಕ್ಷಿತ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ತಮ್ಮ ಇತ್ತೀಚಿನ ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಈ ಬಗ್ಗೆ ಹೆಚ್ಚು ಯೋಚಿಸಿರಲಿಲ್ಲ. ಆದರೆ ಟ್ಯಾಟೂ ಕಲಾವಿದ ಗೇಬ್ರಿಯೆಲ್ ಪೆಲ್ಲರೋನ್ ಜೊತೆ ಮಾತನಾಡಿದ ನಂತರ ಸಮಯೋಚಿತ ಹಾಗೂ ಪ್ರಾಯೋಗಿಕ ಆಯ್ಕೆ ನಿರ್ಧರಿಸಿದ್ದಾಗಿ ಆ್ಯಂಡ್ರಿಯಾ ಕೊಲೊನೆಟ್ಟಾ ಹೇಳಿದ್ದಾರೆ.
ಈ ಪಾಸ್ ಕೊರೊನಾವೈರಸ್ ಸ್ಥಿತಿಯ ಪುರಾವೆ ನೀಡುತ್ತದೆ - ನೀವು ಲಸಿಕೆ ಹಾಕಿಸಿಕೊಂಡಿದ್ದೀರಿ, ವೈರಸ್ನಿಂದ ಚೇತರಿಸಿಕೊಂಡಿದ್ದೀರಿ ಅಥವಾ ಕಳೆದ 48 ಗಂಟೆಗಳಲ್ಲಿ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂಬುದರ ಮಾಹಿತಿ ನೀಡುತ್ತದೆ.
View this post on Instagram
ಇಟಲಿಯಲ್ಲಿ ಆಗಸ್ಟ್ 6 ರಿಂದ ಚಿತ್ರಮಂದಿರ, ವಸ್ತುಸಂಗ್ರಹಾಲಯ ಮತ್ತು ಒಳಾಂಗಣ ಕ್ರೀಡಾ ಸ್ಥಳಗಳಿಗೆ ಹೋಗಲು ಅಥವಾ ರೆಸ್ಟೋರೆಂಟ್ಗಳಲ್ಲಿ ಒಳಾಂಗಣದಲ್ಲಿ ತಿನ್ನಲು ಇದು ಅಗತ್ಯವಾಗಿದ್ದು, ಇದು ಇಯು ಡಿಜಿಟಲ್ ಕೋವಿಡ್ ಪ್ರಮಾಣಪತ್ರದ ವಿಸ್ತರಣೆಯಾಗಿದೆ ಎಂದು ತಿಳಿದುಬಂದಿದೆ.
ಕೊರೊನಾವೈರಸ್ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದಿದ್ದೇನೆ ಎಂದು ಹೇಳಿದ ಕೊಲೊನೆಟ್, ಇನ್ಸ್ಟಾಗ್ರಾಮ್ ಮತ್ತು ಟಿಕ್ಟಾಕ್ನಲ್ಲಿ ಸಾಕಷ್ಟು ಗಮನ ಸೆಳೆದಿದ್ದು, ಆದರೆ ತಮ್ಮ ಪೋಷಕರು ಈ ಬಗ್ಗೆ ಸ್ವಲ್ಪ ಗೊಂದಲಕ್ಕೊಳಗಾಗಿದ್ದಾರೆ ಎಂದು ಹೇಳಿದರು.
ಆದರೆ ಅವರ ಹೊಸ ಬಾರ್ಕೋಡ್ ಕಾರ್ಯನಿರ್ವಹಿಸುತ್ತದೆ ಎಂದು ವಿದ್ಯಾರ್ಥಿ ಹೇಳಿದರು. ಪೆಲ್ಲರೋನ್ ಟಿಕ್ಟಾಕ್ನಲ್ಲಿ ಪೋಸ್ಟ್ ಮಾಡಿದ ವೀಡಿಯೋದಲ್ಲಿ ಮಾಸ್ಕ್ ಧರಿಸಿದ ಕೊಲೊನೆಟ್ಟಾ ಮೆಕ್ಡೊನಾಲ್ಡ್ಸ್ಗೆ ಪ್ರವೇಶಿಸಿ ತೋಳನ್ನು ಮೇಲಕ್ಕೆತ್ತಿ ತನ್ನ ಟ್ಯಾಟೂದ ಫೋಟೋ ತೆಗಿಸಿಕೊಳ್ಳುತ್ತಾರೆ. ನಂತರ ಪ್ರವೇಶದ್ವಾರದಲ್ಲಿ ಒಬ್ಬ ಭದ್ರತಾ ಸಿಬ್ಬಂದಿಯು ಕೊಲೊನೆಟ್ಟಾ ಫೋಟೋವನ್ನು ಸ್ಕ್ಯಾನ್ ಮಾಡುತ್ತಿರುವುದು ವಿಡಿಯೋದ ಅಂತ್ಯದಲ್ಲಿ ಕಂಡುಬರುತ್ತದೆ. ಆದರೆ, ಕೊಲೊನೆಟ್ ಅಂತಿಮವಾಗಿ ಮೆಕ್ಡೊನಾಲ್ಡ್ಸ್ನೊಳಗೆ ಪ್ರವೇಶ ಪಡೆದರೋ ಇಲ್ಲವೋ ಎಂಬುದು ಗೊತ್ತಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ