Golden Book: ಇಳಿವಯಸ್ಸಲ್ಲೂ ಈಜುಗಾರನ ಕಠಿಣ ಸಾಧನೆ-ಗೋಲ್ಡನ್​​ ಬುಕ್ ಆಫ್ ರೆಕಾರ್ಡ್ ‌ನಲ್ಲಿ ಗಂಗಾಧರ್ ಹೆಸರು ಶಾಶ್ವತ

Guinness Book: ಈಜುಗಾರ ಗಂಗಾಧರ  60 ನೇ ವಯಸ್ಸಿನಲ್ಲಿ ಸಮುದ್ರದ ಈಜು ಕರಗತ ಮಾಡಿದ್ದಾರೆ. ಐದೇ ವರ್ಷಕ್ಕೆ ಎರಡು ರಾಷ್ಟ್ರೀಯ ಅಂತರಾಷ್ಟ್ರೀಯ ದಾಖಲೆ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಜನಕ್ಕೆ ಈಗಾಗಲೇ ಈಜು ತರಬೇತಿಯನ್ನು ನೀಡಿದ್ದಾರೆ. ಸಾಧನೆಗೆ ವಯಸ್ಸಿಲ್ಲ ಎಂಬುದಕ್ಕೆ ಉಡುಪಿಯ ಗಂಗಾಧರ್ ನೈಜ ಉದಾಹರಣೆ.

ದಾಖಲೆ ಬರೆದ ಗಂಗಾಧರ್

ದಾಖಲೆ ಬರೆದ ಗಂಗಾಧರ್

  • Share this:
ಉಡುಪಿ:  ಪ್ರಕ್ಷ್ಯುಬ್ದ ಸಾಗರದ ಅಲೆಗೆ ಎದೆಯೊಡ್ಡಿ ಈಜುವುದು (Swimming) ಸಾಮಾನ್ಯ ಈಜುಗಾರರ ಸಾಧ್ಯ ಇಲ್ಲ. ಉಡುಪಿಯ (Udupi) ಕಡೆಕಾರು ನಿವಾಸಿಯೊಬ್ಬರು ಕೈಗೆ ಕೋಳ ಕಾಲಿಗೆ ಸರಪಳಿ ಬಿಗಿದು ಸಮುದ್ರದಲ್ಲಿ 5 ವರೆ ಗಂಟೆ ಈಜಿದ್ದಾರೆ. 3550 ಮೀಟರಿಗೆ ಗೋಲ್ಡ​ನ್​ (Golden Book Of record) ) ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಅಚ್ಚಾಗುವಂತೆ ಮಾಡಿದ್ದಾರೆ. ವಿಪರೀತ ಗಾಳಿ, ರಭಸವಾದ ಅಲೆಯ ನಡುವೆ ಈ ಸಾಧನೆ ಸುಲಭದ್ದಲ್ಲ.

ಕ್ಷಣ ಕ್ಷಣಕ್ಕೂ ಬದಲಾಗುವ ಸಮುದ್ರ ವಿಚಿತ್ರ ಮತ್ತು ವಿಸ್ಮಯ. ಕಣ್ಣಿಗೆ ಶಾಂತವಾಗಿ ಕಂಡರೂ ಇಳಿದಮೇಲೆ ಭಯಾನಕ. ಯಾವ ದಿಕ್ಕಿನಿಂದ ಗಾಳಿ ಬೀಸುತ್ತದೆ ಎಷ್ಟು ಎತ್ತರದಲ್ಲಿ ಗಳು ಎದ್ದು ಬರುತ್ತದೆ ಎಂದು ಯಾರಿಂದಲೂ ಲೆಕ್ಕಹಾಕಲು ಆಗುದಿಲ್ಲ. ಇಂತಹ ಅರಬ್ಬಿ ಸಮುದ್ರದಲ್ಲಿ ಉಡುಪಿಯ ಕಡೆಕಾರು ನಿವಾಸಿ ಗಂಗಾಧರ್ ಅವರು ನಿರಂತರ 5:30 ಗಂಟೆಗಳ ಕಾಲ ಈಜಿ ಗೋಲ್ಡನ್​​ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರು ದಾಖಲು ಮಾಡಿದ್ದಾರೆ.

ಬೆಳಗ್ಗೆ 7.50_ಕ್ಕೆ ಸಮುದ್ರಕ್ಕೆ ಜಿಗಿದ ಗಂಗಾಧರ್
ಸಾಗರಕ್ಕೆ ಧುಮ್ಮಿಕ್ಕಿದ ಗಂಗಾಧರ ಎದುರಾಗಿತ್ತು ಕಠಿಣ ಸವಾಲು

ಉಡುಪಿಯ ಪಡುಕೆರೆ ಸಾಗರ ತೀರದಿಂದ ಗಂಗಾಧರ್ ಕಡೆಕಾರು ಕಾಲೇಜು ಆರಂಭ ಮಾಡಿದ್ದಾರೆ. ಕೈಯನ್ನು ಹಿಂದಕ್ಕೆ ಕಟ್ಟಿ ಧರಿಸಿ ಕಾಲುಗಳನ್ನು ಸರಪಳಿಯಿಂದ ಬಿಗಿದು ಕೊಂಡು ನೀರಿಗೆ ಧುಮುಕಿದ್ದಾರೆ. ಸಮುದ್ರದಲ್ಲಿ ಮೂರುವರೆ ಕಿಲೋಮೀಟರುಗಳ ಕಾಲ ಈಜಿ ದಾಖಲೆ ಮಾಡುವುದು ಗಂಗಾಧರ್ ಮುಂದಿದ್ದ ಗುರಿ. ಕಡಲು ಯಾವತ್ತೂ ಒಂದೇ ರೀತಿ ಇರುವುದಿಲ್ಲ. ಒಮ್ಮೆ ಅಬ್ಬರ ಒಮ್ಮೆ ಇಳಿತ. ಒಮ್ಮೆ ಗಾಳಿ ಒಮ್ಮೆ ಅಲೆಯ ಅಬ್ಬರ. ಭಾನುವಾರ ಶಾಂತವಾಗಿದ್ದ ಸಮುದ್ರ ಸೋಮವಾರ ಬಿರುಸುಗೊಂಡಿದೆ.

ಈಜಿ ಈಜಿ ಗಂಗಾಧರ್ ದಡ ತಲುಪಿದ್ದು ಮಧ್ಯಾಹ್ನ ಸುಡು ಬಿಸಿಲಯ 1.20 ಕ್ಕೆ. ಬರೋಬ್ಬರಿ ಐದೂವರೆ ಗಂಟೆಗಳ ಕಾಲ ಈಜಿ ಗಂಗಾಧರ್ ದಾಖಲೆ ಮಾಡುವ ಮೂಲಕ ಪಡುಕೆರೆ ಗ್ರಾಮದವರಿಗೆ ಮತ್ತು ಅಪಾರ ಶಿಷ್ಯವರ್ಗದವರಿಗೆ ಉತ್ತೇಜನ ನೀಡಿದ್ದಾರೆ.ಇನ್ನು 65ನೇ ಇಳಿವಯಸ್ಸಲ್ಲೂ ಈ ಸಾಧನೆ ಮಾಡಿದ ಗಂಗಾಧರ್  ಈ ಬಾರಿ ಸಮುದ್ರದಲ್ಲಿ ಕಠಿಣ ಸವಾಲು ಎದುರಾಗಿತ್ತು.

ಇದನ್ನೂ ಓದಿ: ಚಿನ್ನದ ತಟ್ಟೆಯಲ್ಲಿ ಆಹಾರ ಸೇವನೆ, ಮಲಗಲು ಬೆಳ್ಳಿಯ ಹಾಸಿಗೆ.. ಭಾರತದ ಈ ಐಷಾರಾಮಿ ಹೋಟೆಲ್ ಬಗ್ಗೆ ಕೇಳಿದ್ದೀರಾ?

ಕಾಲಿನ  ಮಾಂಸ ಖಂಡಗಳು ಲಾಕ್ ಆಗುವ ಭಯ ಒಂದೆಡೆಯಾದರೆ ಸಮುದ್ರ ಪ್ರಕ್ಷ್ಯುಬ್ದವಾಗಿರೋದು ಮತ್ತೊಂದು ಸವಾಲು. ಹೀಗೆ ಸವಾಲಿನ ಮೇಲೆ ಸವಾಲನ್ನು ಎದುರಿಸಿ ಈಜಿ ರೆಕಾರ್ಡ್ ಮಾಡಿದ ಗಂಗಾಧರ್ ಅವರು ಸಂತಸ ಹಂಚಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ ದಾಖಲೆ ಮಾಡಲು ಆಗುತ್ತದಾ ಎಂಬ ಸಂಶಯ ಇತ್ತು. ಆದರೆ ಈಗಿನ ಸಂದರ್ಭ ಯಾವುದೇ ಸಮಸ್ಯೆಗಳು ಆಗಿಲ್ಲ.

ಹೋದವರ್ಷ ಪದ್ಮಾಸನ ಬಂಗಿಯಲ್ಲಿ ನಾನು ಈಜಿ ದಾಖಲೆ ಮಾಡಿದ್ದೆ.  ಸತತ ಪರಿಶ್ರಮದಿಂದ ಕಾಲಿಗೆ ಸರಪಳಿ ಕಟ್ಟಿಕೊಂಡು ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಲ್ಲರಿಗೂ ಧನ್ಯವಾದ. 60 ವರ್ಷ ದಾಟಿದ ಮೇಲೆ ಸಮುದ್ರದಲ್ಲಿ ಈಜನ್ನು ಇನ್ನಷ್ಟು ಕರಗತಮಾಡಿಕೊಂಡೆ. ನಾನು ನನ್ನ ಕೆಲಸದಲ್ಲಿ ನಿವೃತ್ತನಾದ ಮೇಲೆ ಮಕ್ಕಳಿಗೆ ಉಚಿತವಾಗಿ ಈಜು ಕಲಿಸುತ್ತಿದ್ದೇನೆ. ಜೀವನದಲ್ಲಿ ನಾವು ಏನಾದ್ರೂ ಸಾಧನೆ ಮಾಡಬೇಕು ಎಂದು ನಂಬಿದವನು. ಕಡಲಿನಲ್ಲಿ ಸಿಕ್ಕಾಪಟ್ಟೆ ಗಾಳಿಸು ಅಬ್ಬರ ಜಾಸ್ತಿ ಇತ್ತು ನಾನು ಅಂದುಕೊಂಡಂತೆ ಸಮುದ್ರ ಇರಲಿಲ್ಲ ಹಾಗಾಗಿ ಸ್ವಲ್ಪ ಕಷ್ಟ ಆದರೆ ನಾನು ಛಲ ಬಿಡಲಿಲ್ಲ ಎಂದು ಪ್ರತಿಕ್ರಿಯಿಸಿದ್ರು.

ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಮುಖ್ಯಸ್ಥರು ಸಮುದ್ರದಲ್ಲೇ ನಿಗಾ ಇಟ್ಟಿದ್ದರು. ಇಂತದ್ದೊಂದು ದಾಖಲೆ ಬಗ್ಗೆ ಗಿನ್ನಿಸ್ ಬುಕ್ ಅಧಿಕಾರಿಗಳು  ಥ್ರಿಲ್ ಆಗಿದ್ದಾರೆ. ಸ್ಥಳದಲ್ಲೇ ಪ್ರಾವಿಜನ್ ಸರ್ಟಿಫಿಕೇಟ್ ವಿತರಣೆ ಮಾಡಿದ್ದಾರೆ. ಅಲ್ಲದೆ ಗಂಗಾಧರ್ ಅವರನ್ನ ಶ್ಲಾಘಿಸಿದ ಮನೀಷ್ ವಿಷ್ಣೋಯ್, ಗಂಗಾಧರ್ ಅವ್ರು ಇವತ್ತು ಉಡುಪಿಯಲ್ಲಿ ಮಹತ್ವಪೂರ್ಣವಾದ ಒಂದು ದಾಖಲೆಯನ್ನು ಮಾಡಿದ್ದಾರೆ.

ಗೋಲ್ಡನ್ ಬುಕ್ ಅಫ್ ವರ್ಲ್ಡ್ ರೆಕಾರ್ಡ್ಸ್ ಇತಿಹಾಸದಲ್ಲಿ ಇದೊಂದು ನೆನಪಾಗಿ ಉಳಿಯಲಿದೆ. ಕಾಲು ಮತ್ತು ಕೈಗೆ ಸರಪಳಿಗಳನ್ನು ಕಟ್ಟಿಕೊಂಡು ಈಜುವುದು ಸುಲಭದ ಮಾತಲ್ಲ. ಬಹಳ ಕಾಲದವರೆಗೆ ಈ ದಿನ ನನಗೆ ನೆನಪಿನಲ್ಲಿ ಉಳಿಯುತ್ತದೆ. ಈ ವಯಸ್ಸು ನಿವೃತ್ತಿಯಾಗಿ ಮನೆಯಲ್ಲಿ ಕುಳಿತುಕೊಳ್ಳುವ ವಯಸ್ಸು ಆದರೆ 65ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ ಎಂದರೆ ನಿಜಕ್ಕೂ ಗ್ರೇಟ್ ಅಂತ ಪ್ರಶಂಸಿದ್ರು.

ಇದನ್ನೂ ಓದಿ: ಬೆಂಕಿಗೆ ಆಹುತಿಯಾದ ಗ್ರಂಥಾಲಯಕ್ಕೆ ಮರುಜೀವ ಕೊಟ್ಟ ಸಯ್ಯದ್ ಭಾಯ್!

ಈಜುಗಾರ ಗಂಗಾಧರ  60 ನೇ ವಯಸ್ಸಿನಲ್ಲಿ ಸಮುದ್ರದ ಈಜು ಕರಗತ ಮಾಡಿದ್ದಾರೆ. ಐದೇ ವರ್ಷಕ್ಕೆ ಎರಡು ರಾಷ್ಟ್ರೀಯ ಅಂತರಾಷ್ಟ್ರೀಯ ದಾಖಲೆ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಜನಕ್ಕೆ ಈಗಾಗಲೇ ಈಜು ತರಬೇತಿಯನ್ನು ನೀಡಿದ್ದಾರೆ. ಸಾಧನೆಗೆ ವಯಸ್ಸಿಲ್ಲ ಎಂಬುದಕ್ಕೆ ಉಡುಪಿಯ ಗಂಗಾಧರ್ ನೈಜ ಉದಾಹರಣೆ.
ವರದಿ- ಪರೀಕ್ಷಿತ್ ಶೇಟ್
Published by:Sandhya M
First published: