Tamil Nadu: ಪ್ರೀತಿಯ ಶ್ವಾನದ ನೆನಪಿಗಾಗಿ ಮಂದಿರ ಕಟ್ಟಿದ ಮಾಲೀಕ! ಇದು ಪ್ರಾಣಿ ಪ್ರೀತಿ ಅಂದ್ರೆ

Dog: ತಮಿಳುನಾಡಿನ ಶಿವಗಂಗಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಸಾಕಿದ ನಾಯಿ ಸಾವನ್ನಪ್ಪಿದ ಬಳಿಕ ಅದರ ನೆನಪಿಗಾಗಿ ಮುಂದಿರವನ್ನು ಕಟ್ಟಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸಾಕುಪ್ರಾಣಿಗಳ (Pets) ಮಾಲೀಕರು ಮತ್ತು ಪ್ರಾಣಿಗಳ ನಡುವಿನ ಪ್ರೀತಿಯ ಕಥೆಗಳನ್ನು ಕೇಳಿರುತ್ತೀರಿ. ಕೆಲವರು ಸಾಕು ಪ್ರಾಣಿಗಳನ್ನು ತಮ್ಮ ಒಡನಾಡಿಗಳಂತೆ ಸಾಕುತ್ತಾರೆ. ಅದಕ್ಕೆ ಬೇಕಾಗಿರುವ ವಸ್ತುಗಳನೆಲ್ಲಾ ಕೊಡಿಸುತ್ತಾರೆ. ಅಷ್ಟರ ಮಟ್ಟಿಗೆ ಪ್ರಾಣಿ ಪ್ರೀತಿ (Animal love) ಬೆಳೆಸಿದವರೂ ಇದ್ದಾರೆ. ಆದರೆ ಕೆಲಮೊಮ್ಮೆ ಪ್ರೀತಿಯಿಂದ ಸಾಕಿದ ಸಾಕು ಪ್ರಾಣಿ ಸಾವಿಗೀಡಾದರೆ ಅದನ್ನು ಕಂಡು ದುಃಖ (Grieve) ಹೊರಹಾಕುವ ಮಾಲೀಕರನ್ನು ನೋಡುವುದೇ ಕಷ್ಟ. ಏಕೆಂದರೆ ತನ್ನವರನ್ನೇ ಕಳೆದುಕೊಂಡ ಭಾವ ಅವರಿಗಾಗುತ್ತದೆ. ಅದರಂತೆ ಮಾಲೀಕನೋರ್ವ ತನ್ನ ಮುದ್ದಿನ ಸಾಕು ನಾಯಿ (Pet Dog) ಸಾವನ್ನಪ್ಪಿರುವ ಬೇಸರದಿಂದ ಅದರ ನೆನಪಿಗಾಗಿ ಮಂದಿರವೊಂದನ್ನೇ ಕಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

  ತಮಿಳುನಾಡಿ(Tamil nadu)ನ ಶಿವಗಂಗಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಸಾಕಿದ ನಾಯಿ ಸಾವನ್ನಪ್ಪಿದ ಬಳಿಕ ಅದರ ನೆನಪಿಗಾಗಿ ಮುಂದಿರವನ್ನು ಕಟ್ಟಿದ್ದಾನೆ.

  82 ವರ್ಷದ ನಿವೃತ್ತ ಸರ್ಕಾರಿ ನೌಕರ ಮುತ್ತು ಎಂಬವರು ತಮ್ಮ ನಾಯಿಯನ್ನು ಅತ್ಯಂತ ಪ್ರೀತಿಯಿಂದ ಸಾಕುತ್ತಿದ್ದರು. ಅವರ ನಿಷ್ಠಾವಂತ  ಶ್ವಾನ ತೀರಿಕೊಂಡಿತು. ಮುದ್ದಿನ ನಾಯಿ ತೀರಿ ಹೋಗಿ ಅದರ ನೆನಪಿಗಾಗಿ ಒಂದು ವಿಚಿತ್ರ ರೀತಿಯಲ್ಲಿ ಗೌರವ ಸಲ್ಲಿಸಿದರು, ಮುತ್ತು ಅವರ ಶ್ವಾನದ  ನೆನಪಿಗಾಗಿ ಮಂದಿರವನ್ನು ನಿರ್ಮಿಸಿದ್ದಾರೆ. ಅದರಲ್ಲಿ ಶ್ವಾನದ ಪ್ರತಿಮೆಯನ್ನು ಸಹ ಸ್ಥಾಪಿಸಲಾಗಿದೆ.

  11 ವರ್ಷಗಳ ಒಡನಾಟ

  ಮುತ್ತು ಅವರ ಸೋದರಳಿಯ ಮನೋಜ್ ಕುಮಾರ್ ಮಾತನಾಡಿದ್ದು, ಟಾಮ್ ಎಂಬ ಶ್ವಾನವನ್ನು ನನ್ನ ಸಹೋದರನು 11 ವರ್ಷಗಳ ಹಿಂದೆ ಖರೀದಿಸಿದನು. ಅದನ್ನು ತನ್ನ ಬಳಿ ಇಟ್ಟುಕೊಳ್ಳಲು ಆಗದೇ ಇದ್ದಾಗ 6 ತಿಂಗಳ ನಂತರ ಚಿಕ್ಕಪ್ಪನ ಕೈಗೆ ಕೊಟ್ಟ. ಅಂದಿನಿಂದ ಟಾಮ್ ಯಾವಾಗಲೂ ಮುತ್ತು ಜೊತೆಗೆ ಇದ್ದ. ಮುತ್ತು ಈ ಶ್ವಾನವನ್ನು ತುಂಬಾ ಪ್ರೀತಿಯಿಂದ ಸಾಕಿದ್ದತರು. ಆದರೀಗ ಮುದ್ದಿನ ನಾಯಿ ಸಾವನ್ನಪ್ಪಿದೆ. ಟಾಮ್ ಸ್ವಲ್ಪ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿತ್ತು ಮತ್ತು ಅದರ ಚಿಕಿತ್ಸೆಯು ದೀರ್ಘಕಾಲದವರೆಗೆ ನಡೆಯುತ್ತಿತ್ತು. ಅಂತಿಮವಾಗಿ ಜನವರಿಯಲ್ಲಿ, ಟಾಮ್ ಕಾಯಿಲೆಯಿಂದ ತನ್ನ ಪ್ರಾಣವನ್ನು ಕಳೆದುಕೊಂಡಿತು.

  ಇದನ್ನೂ ಓದಿ-  Smart shoes: ಇದು ಅಂತಿಂಥಾ ಶೂ ಅಲ್ಲ! ಸೆಲ್ಫಿ, ಟ್ರ್ಯಾಕಿಂಗ್​, ಫೋನ್​ ಚಾರ್ಚ್​ ಎಲ್ಲವೂ ಮಾಡಬಹುದು!

  ಶ್ವಾನದ ನೆನಪಿಗಾಗಿ ನಿರ್ಮಿಸಲಾದ ಮಂದಿರ

  ಮುತ್ತು ಅವರು ತಮ್ಮ ನಾಯಿಯ ನೆನಪಿಗಾಗಿ ಒಟ್ಟು 80 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದರು, ಅವರ ಕಪ್ಪು ಅಮೃತಶಿಲೆಯ ಪ್ರತಿಮೆ ನಿರ್ಮಿಸಿದ್ದಾರೆ. ಮಾನಮದುರೈ ಬಳಿಯ ಬ್ರಹ್ಮಕುರಿಚಿಯ ತಮ್ಮ ಜಮೀನಿನಲ್ಲಿ ಟಾಮ್‌ನ ವಿಗ್ರಹವನ್ನು ನಿರ್ಮಿಸಿ ಪ್ರತಿಷ್ಠಾಪಿಸಿದರು. ಪ್ರತಿದಿನ ಆ ಪ್ರತಿಮೆಗೆ ಪ್ರಸಾದವನ್ನು ಅರ್ಪಿಸಲಾಗುತ್ತದೆ ಮತ್ತು ವಿಶೇಷ ದಿನಗಳಲ್ಲಿ ಅದರ ಮೇಲೆ ಹೂಮಾಲೆಗಳನ್ನು ಸಹ ಹಾಕಲಾಗುತ್ತದೆ ಮತ್ತು ಟಾಮ್‌ನ ನೆಚ್ಚಿನ ಆಹಾರವನ್ನು ಸಹ ತಯಾರಿಸಲಾಗುತ್ತದೆ.

  ಇದನ್ನೂ ಓದಿ- Biscuit: ಎಲ್ಲಾ ಓಕೆ, ಆದ್ರೆ ಬಿಸ್ಕೆಟ್​ನಲ್ಲಿ ರಂಧ್ರ ಕೊಟ್ಟಿರೋದ್ಯಾಕೆ? ನಿಮಗೆ ಗೊತ್ತಾ?

  ಟಾಮ್‌ನ ಮರಣದ ಒಂದು ವರ್ಷದ ನಂತರ ನಿರ್ಮಿಸಲಾದ ದೇವಾಲಯದಲ್ಲಿ ಜನರು ಪ್ರಾರ್ಥನೆ ಮಾಡಲು ಬರುತ್ತಾರೆ. ಕುತೂಹಲಕಾರಿ ಸಂಗತಿಯೆಂದರೆ ಈ ಟಾಮ್ ವಿಗ್ರಹದ ಮೇಲೆ ದಕ್ಷಿಣ ಭಾರತೀಯರ ಸಾಂಪ್ರದಾಯಿಕ ಉಡುಗೆ ಮತ್ತು ಶ್ರೀಗಂಧದ ಮರವನ್ನು ಬಳಸಲಾಗಿದೆ.
  Published by:Harshith AS
  First published: