ಇತ್ತೀಚಿಗಿನ ಕಾಲದಲ್ಲಿ ಫುಡ್ (Food) ತಯಾರಿಸಲು ಬೋರ್ ಆದರೆ ಅಥವಾ ತುಂಬಾ ಹಸಿವಾದರೆ ನಗರ ಪ್ರದೇಶದಲ್ಲಿ ಇರುವವರು ಆನ್ಲೈನ್ ಫುಡ್ ಡೆಲಿವರಿ ಮಾಡಿಕೊಳ್ಳುತ್ತಾರೆ. ಅದುವೇ ಹಳ್ಳಿಮನೆ ಕಡೆ ಇರುವವರು ಏನಾದರೂ ನಾನಾ ರೀತಿಯ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಇದೀಗ ಆನ್ಲೈನ್ ಫುಡ್ ಡೆಲಿವರಿ ಎಂಬುವುದು ಅನೇಕರ ಹೊಟ್ಟೆಯ ಪಾಡಾಗಿದೆ ಅಂತಾನೆ ಹೇಳಬಹುದು. ತರಕಾರಿ, ಮನೆಯ ದಿನಸಿ ಅಂಗಡಿ ಹಾಗೆ ರೆಡಿಮೇಡ್ ಫುಡ್ ಎಲ್ಲವೂ ಈ ಪ್ಲ್ಯಾಟ್ ಫಾರ್ಮ್ (Platform) ನಲ್ಲಿ ದೊರೆಯುತ್ತೆ. ಒಟ್ಟಿನಲ್ಲಿ ಮಾರುಕಟ್ಟೆಗೆ ಬರ್ತಾ ಇರುವಂತಹ ಟೆಕ್ನಾಲಜಿಯ ಮೂಲಕ ಜನರ ಮನಸ್ಸನ್ನು ಗೆಲ್ತಾ ಇರುವುದಂತೂ ನಿಜ. ಇದಕ್ಕೆ ಸಂಬಂಧಪಟ್ಟಂತೆ ಒಂದು ವಿಷಯ ಎಲ್ಲೆಡೆ ವೈರಲ್ (Viral) ಆಗ್ತಾ ಇದೆ. ಕೇಳಿದ್ರೆ ಪಕ್ಕ ಶಾಕ್ (Shock) ಆಗ್ತೀರಾ?
ನೀವು ಅತಿಯಾಗಿ ಫುಡ್ಗಳನ್ನು ಹೋಮ್ ಡೆಲಿವರಿ ಮಾಡಿಸಿಕೊಳ್ತೀರ? ಹಾಗಾದ್ರೆ ಈ ಸುದ್ದಿ ನಿಮಗೋಸ್ಕರನೇ ನೋಡಿ. ಸ್ವಿಗ್ಗಿ, ಝೋಮ್ಯಾಟೋ ಹೀಗೆ ನಾನಾ ರೀತಿಯ ಪ್ಲ್ಯಾಟ್ ಫಾರ್ಮ್ಗಳು ನಾ ಮುಂದು ತಾ ಮುಂದು ಎಂದು ಜನರಿಗೆ ಹೆಲ್ಪ್ ಮಾಡುತ್ತೆ. ಆದಷ್ಟು ಗ್ರಾಹಕರ ಇಚ್ಛಾಶಕ್ತಿ ಮತ್ತು ಬೇಡಿಕೆಯನ್ನ ಪೂರೈಸಲು ಪ್ರಯತ್ನ ಪಡುತ್ತದೆ.
ಆದರೆ ಇಲ್ಲೊಂದು ಖಾಸಗಿ ಫುಡ್ ಡೆಲಿವರಿ ಏನು ಮಾಡಿದ ಗೊತ್ತಾ? ಬ್ಲಿಂಕಿಟ್ ಎಂಬ ಆ್ಯಪ್ನಲ್ಲಿ ಬ್ರೆಡ್ನ್ನು ನಿತಿನ್ ಅರೋರಾ ಎಂಬುವವರು ಫೆಬ್ರವರಿ ಒಂದನೆಯ ತಾರೀಖು ಆರ್ಡರ್ ಮಾಡಿದ್ದರು. ಪಾಪ ಹಸಿವಲ್ಲಿ ಆರ್ಡರ್ ಮಾಡಿದ್ದಾರೆ. ಆದರೆ ಕಂಪನಿಯವರ ನಿರ್ಲಕ್ಷ್ಯ ಅಂತಾನೆ ಹೇಳಬಹುದು, ಯಾಕಂದ್ರೆ ಇವರು ಆರ್ಡರ್ ಮಾಡಿದ ಬ್ರೆಡ್ ನೊಂದಿಗೆ ಒಂದು ಜೀವಂತ ಇಲಿ ಕೂಡ ಪಾರ್ಸೆಲ್ ಆಗಿ ಬಂದಿದ್ಯಂತೆ.
ಇದನ್ನೂ ಓದಿ: ಆಗಿನ ಕಾಲದ ಮಾಂಸದ ಅಂಗಡಿಗಳು ಹೇಗಿತ್ತು ಗೊತ್ತಾ? ನಂಬಲಾಗದ ವಿಚಿತ್ರ ವಿಷಯಗಳಿವು
ಹಾಗಾದ್ರೆ ಇದಕ್ಕೆ ಏನನ್ನಬೇಕು? ಜನರು ಫುಡ್ ಗಳನ್ನು ಮತ್ತು ದಿನಸಿಗಳನ್ನು ಆರ್ಡರ್ ಮಾಡುವಾಗ ಹೆಚ್ಚಾಗಿ ಶುಚಿ ರುಚಿ ಇರಬೇಕು ಅಂತ ಖಾಸಗಿ ಆ್ಯಪ್ ಗಳಲ್ಲಿ ಆರ್ಡರ್ ಮಾಡುತ್ತಾರೆ. ಆದರೆ ಬೇಲಿಯೇ ಎದ್ದು ಹೊಲ ಮೇಯುವ ಹಾಗೆ ಇವರೇ ತಪ್ಪು ಮಾಡಿದ್ದಾರೆ. ಬ್ರೆಡ್ ಅನ್ನ ಯಾವ ರೀತಿಯಾಗಿ ಪ್ಯಾಕ್ ಮಾಡಿದ್ದಾರೆ ನೋಡಿ.
ಇಂತಹುಗಳನ್ನು ನೋಡಿದಾಗ ಯಾವ ಗ್ರಾಹಕರಾದರೂ ಸುಮ್ಮನೆ ಇರುವ ಮಾತಿಲ್ಲ. ಯಾಕಂದ್ರೆ ಟೆಕ್ನಾಲಜಿ ಬೆಳೆದಿರುವುದೇ ಮಾನವನಿಗೆ ಕೆಲಸ ಒಂದು ಮಟ್ಟಕ್ಕೆ ಕಡಿಮೆ ಆಗಲಿ ಅಂತ. ಆದರೆ ಕೆಲಸವು ಮತ್ತಷ್ಟು ಹೆಚ್ಚು ಮಾಡುತ್ತೆ ಮತ್ತು ಅದು ನಮಗೆ ಸಂಕಷ್ಟವನ್ನು ಯಾಕೆ ಸುಮ್ಮನೆ ಇರಬೇಕು ಎಂದು ತಕ್ಷಣವೇ ನಿತಿನ್ ರವರು ವಿಡಿಯೋ ವನ್ನು ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಈಗಾಗಲೇ ತಿಳಿಸಿದ ಹಾಗೆ ಪ್ಯಾಕೆಟ್ ನಲ್ಲಿ ಇಲಿಯನ್ನ ಪ್ಯಾಕ್ ಮಾಡಿರುವುದು ಈ ವಿಡಿಯೋದಲ್ಲಿ ಕಾಣಿಸುತ್ತೆ. ಜೊತೆಗೆ ಆ ಇಲಿ ಕೂಡ ವಿಲವಿಲನೆ ಒದ್ದಾಡುತ್ತಿರುವುದು ಕೂಡ ನೀವು ಕಾಣಬಹುದು. ಈ ಬ್ಲಿಂಕ್ ಇಟ್ ಆ್ಯಪ್ನಲ್ಲಿ ಇಷ್ಟು ನಿರ್ಲ್ಯಕ್ಷ ಎಂಬುದಾಗಿ ಕೂಡ ಅವರು ಪ್ರಶ್ನೆಯನ್ನು ಹಾಕಿಕೊಂಡಿದ್ದಾರೆ.
ಇದಕ್ಕೆ ತಕ್ಷಣವೇ ಕಂಪನಿಯವರು ಕ್ಷಮಿಸಿ ನಿತಿನ್ ನಮಗೆ ಇದು ತಿಳಿದಿರಲಿಲ್ಲ, ನೀವು ಫುಡ್ ಆರ್ಡರ್ ಮಾಡಿದ ಮೆಸೇಜ್ ಅನ್ನು ನಮಗೆ ಈಗಲೇ ಕಳುಹಿಸಿ ಎಂದೆಲ್ಲಾ ಒಂದಷ್ಟು ಮೆಸೇಜ್ ಗಳನ್ನ ಹಾಕಿದ್ದಾರೆ. ಈ ಎಲ್ಲಾ ವಿಡಿಯೋ ಮತ್ತು ಸ್ಕ್ರೀನ್ ಶಾಟ್ಸ್ ಗಳನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಯಾಕೆ ಹಂಚಿಕೊಂಡಿರುತ್ತಾರೆ ಅಂದ್ರೆ ಈ ರೀತಿಯಾಗಿ ಜನರು ಮೋಸ ಹೋಗಬಾರದು ಎಂಬುವ ಕಾರಣಕ್ಕಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಅರಿವು ಮೂಡಿಸಿದ್ದಾರೆ.
Most unpleasant experience with @letsblinkit , where alive rat was delivered inside the bread packet ordered on 1.2.23. This is alarming for all of us. If 10 minutes delivery has such baggage, @blinkitcares I would rather wait for a few hours than take such items.#blinkit #zomato pic.twitter.com/RHNOj6tswA
— Nitin Arora (@NitinA14261863) February 3, 2023
@letsblinkit @blinkitcares pic.twitter.com/CDCvlWbEor
— Namita Chugh (@ChughNamita) February 3, 2023
Hi Nitin, this is not the experience we wanted you to have. Please share your registered contact number or Order ID via DM for us to look into it. https://t.co/cmvbhHSmuW
— Blinkitcares (@blinkitcares) February 3, 2023
ನಮಗೆ ಹಸಿವಾಯ್ತು ಅಂದ್ರೆ ಆನ್ಲೈನ್ಗಳಲ್ಲಿ ಫುಡ್ ಆರ್ಡರ್ ಮಾಡ್ತೀವಿ. ಆದ್ರೆ ಇನ್ನು ಮುಂದೆ ಆರ್ಡರ್ ಮಾಡುವಾಗ ಬಹುಶಃ ನೂರು ಬಾರಿ ಯೋಚನೆ ಮಾಡಬೇಕು ಅಂತ ಅನಿಸುತ್ತೆ. ಯಾಕಂದ್ರೆ ಈ ಘಟನೆ ಹಾಗೆಯೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ